ಈ ದಿನ ಈ ಕ್ಷಣ: ದೇಶ, ವಿದೇಶಗಳಲ್ಲಿನ ಚುಟುಕು ಸುದ್ದಿ ಅಪ್ಡೇಟ್ಸ್
ಬೆಂಗಳೂರು, ನ. 25: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
10:30: ಫುಟ್ಬಾಲ್ ದಿಗ್ಗಜ ,ಅರ್ಜೆಂಟೀನಾದ ಡಿಯಾಗೋ ಮರಡೋನಾ ನಿಧನ. ವಿಶ್ವದೆಲ್ಲೆಡೆಯಿಂದ ಅಭಿಮಾನಿಗಳಿಂದ ಕಂಬನಿ.
6:10: ನಿವಾರ್ ಚಂಡಮಾರುತದ ಪರಿಣಾಮ: ಚೆನ್ನೈ ನಗರದಲ್ಲಿ ಭಾರಿಮಳೆಯಾಗಿದ್ದು, ಆಳ್ವಾರ್ ಪೇಟ್, ಸೈದಾಪೇಟ್, ಮೀನಬಾಕ್ಕಂ, ಕೋಡಬಾಕ್ಕಂ, ಮರೀನಾ ಬೀಚ್ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿವೆ.
6:00: ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳು ಕೊವಿಡ್ 19 ಕಂಟೈನ್ಮೆಂಟ್ ಜೋನ್ ವಲಯದಿಂದ ಹೊರಗೆ ಲಾಕ್ಡೌನ್ ವಿಧಿಸಬೇಕಾದರೆ, ಕೇಂದ್ರ ಗೃಹ ಸಚಿವಾಲಯದಿಂದ ಅನುಮತಿ ಪಡೆದುಕೊಳ್ಳಬೇಕು.
5:30: ಭಾರತೀಯ ಕರಾವಳಿ ಕಾವಲು ಪಡೆಯು 100 ಕೆ.ಜಿ ತೂಕದ ಹೆರಾಯಿನ್ ಸೇರಿದಂತೆ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ಶ್ರೀಲಂಕಾದ ದೋಣಿಯೊಂದರಿಂದ ವಶಪಡಿಸಿಕೊಂಡಿದೆ.
5:15: ಕರ್ನಾಟಕ: ನವೆಂಬರ್ 26 ರಂದು ಆಟೋ ಮತ್ತು ಟ್ಯಾಕ್ಸಿ ಚಾಲಕರು ಮುಷ್ಕರಕ್ಕೆ ಕರೆ ನೀಡಿವೆ.
5:00: ತಮಿಳುನಾಡು ಮೂಲದ ಖಾಸಗಿ ವಲಯದ ಲಕ್ಷ್ಮಿ ವಿಲಾಸ್ ಬ್ಯಾಂಕನ್ನು, ಸಿಂಗಾಪುರ ಮೂಲದ ಡಿಬಿಎಸ್ ಇಂಡಿಯಾದೊಂದಿಗೆ ವಿಲೀನಗೊಳಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
4:30: ಐಎಂಎ ಹಗರಣ: ಮಾಜಿ ಸಚಿವ ರೋಷನ್ ಬೇಗ್ರನ್ನು ಸಿಬಿಐ ವಶಕ್ಕೆ ನೀಡಿ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ರೋಷನ್ ಬೇಗ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಲಾಗಿದೆ
4:15: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮರ 'ಎ ಪ್ರಾಮಿಸ್ಡ್ ಲ್ಯಾಂಡ್' ಕೃತಿ ಬಿಡುಗಡೆಯಾದ ಒಂದು ವಾರದಲ್ಲೇ 17 ಲಕ್ಷ ಪ್ರತಿ ಮಾರಾಟವಾಗಿದೆ.
4-00: ಯುಎಸ್ ಡಾಲರ್ ಎದುರು ರುಪಾಯಿ ಮೌಲ್ಯ 10 ಪೈಸೆ ಏರಿಕೆ ಕಂಡು 73.91ರಂತೆ ವಹಿವಾಟು ನಡೆಸಿದೆ.
3:30: ಬಿಜೆಪಿ ಎಂದಿಗೂ ಸ್ಥಳೀಯ ಸಮಸ್ಯೆ ಬಗ್ಗೆ ಮಾತನಾಡುವುದಿಲ್ಲ, ಅಕ್ಬರ್, ಬಾಬರ್ ಹಾಗೂ ಬಿನ್ ಲಾಡೆನ್ ಎಂದು ಹೇಳಿ ಜನರನ್ನು ಗೊಂದಲಕ್ಕೀಡುವುದರಲ್ಲಿ ಬಿಜೆಪಿ ಎತ್ತಿದ ಕೈ, ಸಮುದಾಯಗಳ ನಡುವೆ ದ್ವೇಷ ಬೀಜ ಬಿತ್ತುವ ಕೆಲಸ ನಡೆದಿದೆ ಎಂದು ತೆಲಂಗಾಣ ಸಚಿವ ಕೆಟಿ ರಾಮರಾವ್ ಆರೋಪ.
3:00 ಶ್ರೀಗುರು ನಾನಕ್ ದೇವ್ ಜೀ ಕುರಿತಂತೆ ಕೃಪಾಲ್ ಸಿಂಗ್ ಅವರು ಬರೆದಿರುವ ಕೃತಿಯನ್ನು ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ.
2:45: ಮಲಯಾಳಂ ಚಿತ್ರ ಜಲ್ಲಿಕಟ್ಟು ಈ ಬಾರಿ ಭಾರತದಿಂದ ಆಸ್ಕರ್ ಪ್ರಶಸ್ತಿಗೆ ಸ್ಪರ್ಧೆಗೆ ಆಯ್ಕೆ. ಅಂತಾರಾಷ್ಟ್ರೀಯ ಫೀಚರ್ ಫಿಲಂ ಕೆಟಗರಿಯಲ್ಲಿ ಸ್ಪರ್ಧೆ: ಫಿಲಂ ಫೆಡರೇಷನ್ ಆಫ್ ಇಂಡಿಯಾ.
2:30: ಲಕ್ಷ್ಮಿ ವಿಲಾಸ್ ಬ್ಯಾಂಕ್ ಪರಿಸ್ಥಿತಿ ಸುಧಾರಣೆಗಾಗಿ 2,500 ಕೋಟಿ ಒಳಹರಿವು ನೀಡಲು ಕೇಂದ್ರ ಸಚಿವ ಸಂಪುಟದಿಂದ ನಿರ್ಧಾರ.
2:00: ಭಾರಿ ಮಳೆ ಹಿನ್ನೆಲೆಯಲ್ಲಿ ಮತ್ತೆ 11 ರೈಲುಗಳನ್ನು ರದ್ದುಗೊಳಿಸಿದ ದಕ್ಷಿಣ ರೈಲ್ವೆ. 25 ಕ್ಕೂ ಅಧಿಕ ರೈಲು ಸಂಚಾರವನ್ನು ಈಗಾಗಲೇ ರದ್ದುಪಡಿಸಲಾಗಿದೆ.
13:30-ಯುರೋಪಿನಲ್ಲಿ ಲಾಕ್ಡೌನ್ ತೆರವು, ಶನಿವಾರದಿಂದ ಅಂಗಡಿ, ಮಳಿಗೆಗಳನ್ನು ತೆರೆಯಲು ಫ್ರೆಂಚ್ ಅಧ್ಯಕ್ಷ ಇಮ್ಯಾನುಯಲ್ ಮಾಕ್ರೊನ್ ಆದೇಶ. ಮನೆಯಲ್ಲೇ ನೆಲೆಸುವಂತೆ ನೀಡಿದ್ದ ಆದೇಶವನ್ನು ಡಿಸೆಂಬರ್ 15ರಿಂದ ಹಿಂಪಡೆಯಲು ನಿರ್ಧಾರ. ಕ್ರಿಸ್ಮಸ್ ಹಬ್ಬಕ್ಕಾಗಿ ಯುರೋಪಿನ ಬಹುತೇಕ ದೇಶಗಳು ಲಾಕ್ಡೌನ್ ತೆರವುಗೊಳಿಸತೊಡಗಿವೆ.
13: 00: ಭಾರತೀಯ ಜನತಾ ಪಕ್ಷದ ಶಾಸಕ ವಿಜಯ್ ಸಿನ್ಹಾ ಅವರು ಬಿಹಾರದ ನೂತನ ವಿಧಾನಸಭಾ ಸ್ಪೀಕರ್ ಆಗಿ ನೇಮಕ
12: 45: ಲೆಫ್ಟಿನೆಂಟ್ ಜನರಲ್ ಹರ್ಪಾಲ್ ಸಿಂಗ್ ಅವರನ್ನು ಭಾರತೀಯ ಸೇನೆಯ ಇಂಜಿನಿಯರ್ ಇನ್ ಛೀಫ್ ಆಗಿ ನೇಮಿಸಲಾಗಿದೆ. ಮೇಜರ್ ಜನರಲ್ ರಾಜೀವ್ ಚೌಧರಿ ಅವರನ್ನು ಬಾರ್ಡರ್ ರೋಡ್ ಅರ್ಗನೈಷನ್ಸ್(BRO) ಡಿಜಿಯಾಗಿ ನೇಮಕ.
12: 30: ಎರಡನೇ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಒಡಿಶಾ ಸರ್ಕಾರ. ಮುಖ್ಯ ಕಾರ್ಯದರ್ಶಿ ಆಸಿತ್ ತ್ರಿಪಾಠಿ ಅವರು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರಿಗೆ ಪತ್ರ ಬರೆದು ಸುಂದರ್ ಘರ್ ನಲ್ಲಿ ಏಮ್ಸ್ ಸ್ಥಾಪನೆಗೆ ಮನವಿ ಮಾಡಿದ್ದಾರೆ.
12: 15: ಬಿಹಾರ ವಿಧಾನಸಭೆ ಮೊದಲ ದಿನದ ಕಲಾಪದಲ್ಲಿ ಗದ್ದಲ ಎಬ್ಬಿಸಿದ ಆರ್ ಜೆಡಿ ಶಾಸಕರು. ಸ್ಪೀಕರ್ ಆಯ್ಕೆಗೆ ಧ್ವನಿಮತ ಬೇಡ ಎಂದು ಆಗ್ರಹಿಸಿ, ಸದನದಲ್ಲಿ ಭಾರಿ ಗದ್ದಲ ಉಂಟು ಮಾಡಿದ ತೇಜಸ್ವಿ ಯಾದವ್. ಜಿತಿನ್ ರಾಂ ಮಾಂಝಿ ಹಂಗಾಮಿ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
12:00: ಎಚ್.ಎ.ಎಲ್. ಕಾರ್ಮಿಕ ಸಂಘ, ಬಿ.ಇ.ಎಲ್ ವರ್ಕರ್ ಫೋರಂ, ಬಿ.ಇ.ಎಲ್ ವರ್ಕರ್ಸ್ ಯೂನಿಯನ್, ಬಿ.ಇ.ಎಮ್.ಎಲ್ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯು ದೇಶಾದ್ಯಂತ ಎಲ್ಲಾ ಕಾರ್ಮಿಕ ಸಂಘಟನೆಗಳ ಜೊತೆಗೂಡಿ ನ.26ರಂದು ಅಖಿಲ ಭಾರತ ಮಟ್ಟದ ಮುಷ್ಕರವನ್ನು ನಡೆಸಲಿವೆ ಹೆಚ್ಚಿನ ವಿವರಗಳಿಗೆ ಓದಿ
11:45: ಚೆನ್ನೈನಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಚೆನ್ನೈನಿಂದ ಹೊರಡಬೇಕಿದ್ದ 24 ವಿಮಾನಗಳನ್ನು ರದ್ದುಗೊಳಿಸಿದ ಇಂಡಿಗೋ ಏರ್ ಲೈನ್ಸ್.
11:30:ಕೇರಳದ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಪಿಣರಾಯಿ ವಿಜಯನ್ ಅವರ ಹೆಚ್ಚುವರಿ ಕಾರ್ಯದರ್ಶಿ ರವೀಂದ್ರನ್ ಅವರಿಗೆ ನೋಟಿಸ್ ಜಾರಿ ಮಾಡಿದ ಜಾರಿ ನಿರ್ದೇಶನಾಲಯ. ನ.27ರಂದು ವಿಚಾರಣೆಗೆ ಹಾಜರಾಗಲು ಸೂಚನೆ.
11:15: ಡಿಸೆಂಬರ್ ತಿಂಗಳಲ್ಲಿ ಹೊಸ ಸಂಸತ್ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ. ತ್ರಿಕೋನ ಆಕೃತಿಯ ಹೊಸ ಕಟ್ಟಡ, ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ತನಕದ 3 ಕಿ.ಮೀ ರಾಜಪಥ ವಿನ್ಯಾಸ ಬದಲಾಯಿಸಲಾಗುತ್ತಿದೆ.
11: 00: ಚೆನ್ನೈ ಸೇರಿದಂತೆ ತಮಿಳುನಾಡಿನಲ್ಲಿ ಮಳೆ, ಚಂಡಮಾರುತ ಸಂತ್ರಸ್ತರಿಗಾಗಿ ಸಹಾಯವಾಣಿಯನ್ನು ಸರ್ಕಾರ ಪ್ರಕಟಿಸಿದೆ. ಸಂಪೂರ್ಣ ಪಟ್ಟಿ ಇಲ್ಲಿದೆ ಕ್ಲಿಕ್ ಮಾಡಿ
10: 45: ಕೊವಿಡ್ 19 ಈ ಸಮಯಕ್ಕೆ 44,376 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ, 92,22,217 ಒಟ್ಟಾರೆ ಕೇಸ್ ಗಳಿವೆ, ಒಟ್ಟಾರೆ 1,34,699 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ.
10: 30: ಎ ಸ್ಯೂಟಬಲ್ ಬಾಯ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಇಬರು ನೆಟ್ ಫ್ಲಿಕ್ಸ್ ಇಂಡಿಯಾ ಅಧಿಕಾರಿಗಳ ವಿರುದ್ಧ ಬಿಜೆಪಿ ಯೂಥ್ ವಿಂಗ್ ರಾಷ್ಟ್ರೀಯ ಕಾರ್ಯದರ್ಶಿಗಳಿಂದ ದೂರು. ಮಧ್ಯಪ್ರದೇಶದಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು.
10:15: ನವೆಂಬರ್ 25ರಂದು ಕೇಂದ್ರ ಸಚಿವ ಸಂಪುಟ ಸಭೆಯನ್ನು ಬೆಳಗ್ಗೆ 10;30ರ ನಂತರ ನಡೆಸಲಾಗುತ್ತಿದ್ದು, ಸಂಪೂರ್ಣ ವಿಡಿಯೋ ಕಾನ್ಫರೆನ್ಸ್ ಸಭೆ ಇದಾಗಲಿದೆ.
10:00: ಚೆನ್ನೈನಲ್ಲಿ ನಿವಾರ್ ಚಂಡಮಾರುತದ ಬಗ್ಗೆ ಎಚ್ಚರಿಕೆ, ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
9.40: ಚೆಂಬರಂಬಾಕ್ಕಂ ಜಲಾಶಯದಿಂದ ಇಂದು ಮಧ್ಯಾಹ್ನ 12 ಗಂಟೆ ನಂತರ 1000 ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ. ಅದ್ಯಾರ್ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ.
9:30: ಟೆಸ್ಲಾ ಕಂಪನಿ ಷೇರು ಮಾರುಕಟ್ಟೆ ಮೌಲ್ಯ 500 ಬಿಲಿಯನ್ ಡಾಲರ್ ದಾಟಿದೆ. ಸಂಸ್ಥೆ ಸ್ಥಾಪಕ ಇಲಾನ್ ಮಾಸ್ಕ್ ಅವರು ಸಂಸ್ಥೆಯಲ್ಲಿ 18% ಪಾಲು ಹೊಂದಿದ್ದಾರೆ. ಈ ವರ್ಷದಲ್ಲಿ ಸುಮಾರು 100 ಬಿಲಿಯನ್ ಡಾಲರ್ ಗಳಿಸಿದ್ದಾರೆ.
9:10: ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ. 71 ವರ್ಷದ ಅಹ್ಮದ್ ಪಟೇಲ್ ಕೊವಿಡ್ 19 ಚಿಕಿತ್ಸೆ ಫಲಕಾರಿಯಾಗದೆ ಗುರುಗ್ರಾಮದ ಆಸ್ಪತ್ರೆಯಲ್ಲಿ ಇಂದು ನಿಧನರಾದರು.
9:00-ನಿವಾರ್ ಚಂಡಮಾರುತ ಎದುರಿಸಲು ತಮಿಳುನಾಡು ಸರ್ಕಾರ ಸಜ್ಜಾಗಿದೆ ಎಂದ ಸಿಎಂ ಎಡಪ್ಪಾಡಿ ಪಳನಿಸ್ವಾಮಿ. ನ.25ರಂದು ತಮಿಳುನಾಡು, ಪುದುಚೇರಿ ನಡುವಿನ ಮಾಮಲ್ಲಪುರಂ, ಕಾರೈಕಲ್ ಕರಾವಳಿಗೆ ಸಂಜೆ ನಂತರ ಚಂಡಮಾರುತ ಅಪ್ಪಳಿಸಲಿದೆ.
7.08: ಕೊರೊನಾವೈರಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರು ಗುರುಗ್ರಾಮ್ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ವೇಳೆಗೆ ಮೃತಪಟ್ಟಿದ್ದಾರೆ.