• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ದಿನ ಈ ಕ್ಷಣ: ದೇಶ, ವಿದೇಶಗಳ ಚುಟುಕು ಸುದ್ದಿ ರೌಂಡಪ್

|

ಬೆಂಗಳೂರು, ನ. 20: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

10-00: ಅಂತಾರಾಷ್ಟ್ರೀಯ ಗಡಿ ದಾಟಿದ ಪಾಕಿಸ್ತಾನ ಡ್ರೋನ್: ವರದಿ, ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್ ಬಳಿ ಕಾಣಿಸಿಕೊಂಡ ಡ್ರೋನ್ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ ಯೋಧರು.

9:30: ಐಎಂಎ ಕಂಪನಿ ವಂಚನೆ ಪ್ರಕರಣ ಆರೋಪಿ ಮನ್ಸೂರ್ ಖಾನ್ ನನ್ನು ಕಸ್ಟಡಿಗೆ ಪಡೆದ ಸಿಬಿಐ; ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ ಮನ್ಸೂರ್,ಹೆಚ್ಚಿನ ವಿಚಾರಣೆಗಾಗಿ ಮೂರು ದಿನ ಕಸ್ಟಡಿಗೆ ಪಡೆದ ಸಿಬಿಐ ಅಧಿಕಾರಿಗಳು.

8: 15: ಆನ್ ಲೈನ್ ಗೇಮ್, ಬೆಟ್ಟಿಂಗ್ ನಿಷೇಧಿಸುವ ವಿಧೇಯಕಕ್ಕೆ ತಮಿಳನಾಡಿನ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರಿಂದ ಅಂಕಿತ. ಕಾನೂನು ಶೀಘ್ರವೇ ಜಾರಿಗೆ.

8:00: ಪಿಎಫ್ಐ ಹಾಗೂ ಭೀಮ್ ಆರ್ಮಿ ವಾಣಿಜ್ಯ ವ್ಯವಹಾರಗಳ ಬಗ್ಗೆ ಜಾರಿ ನಿರ್ದೇಶನಾಲಯದಿಂದ ತನಿಖೆ.

7:15: ಕೊವಿಡ್ 19 ಔಷಧಗಳ ಪಟ್ಟಿಯಿಂದ ರೆಮಿಡಿಸಿವಿರ್ ತೆಗೆದು ಹಾಕಿದ ವಿಶ್ವ ಆರೋಗ್ಯ ಸಂಸ್ಥೆ.

7:00: ಬೆಂಗಳೂರು ಟೆಕ್ ಸಮ್ಮಿಟ್ 2020- ಯುಕೆ, ಯುಎಸ್ ನಿಂದ ಭಾರಿ ಬಂಡವಾಳ ಹೂಡಿಕೆ ನಿರೀಕ್ಷೆಯಿದೆ ಎಂದ ಐಟಿ ಬಿಟಿ ಸಚಿವ ಡಾ. ಅಶ್ವಥ ನಾರಾಯಣ.

6:30: ಮಧ್ಯಪ್ರದೇಶದಲ್ಲಿ ನವೆಂಬರ್ 21ರಿಂದ ಇಂದೋರ್, ಭೋಪಾಲ್, ಗ್ವಾಲಿಯಾರ್, ವಿದಿಶಾ ರತ್ಲಾಂ ಜಿಲ್ಲೆಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 6 ರ ತನಕ ರಾತ್ರಿಕರ್ಫ್ಯೂ ಜಾರಿ.

6:00: ಕರ್ನಾಟಕದಲ್ಲಿ ಇಂದು 1781 ಹೊಸ ಕೋವಿಡ್ ಪ್ರಕರಣ ದಾಖಲು, ಒಟ್ಟು ಸೋಂಕಿತರ ಸಂಖ್ಯೆ 8,69,561, ಸಕ್ರಿಯ ಪ್ರಕರಣಗಳು 24,752; ಇದುವರೆಗೂ 8,33,169 ಜನರು ಗುಣಮುಖ, ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 11,621

5:30: ಪೆರೋಲ್ ಮೇಲೆ ತೆರಳಿದ್ದ 2314 ಕೊವಿಡ್ 19 ಬಾಧಿತ ಜೈಲುವಾಸಿಗಳಿಗೆ ಇನ್ನು ಮೂರು ದಿನಗಳಲ್ಲಿ ಜೈಲಿಗೆ ಮರಳಲು ಯುಪಿ ಸರ್ಕಾರದಿಂದ ಸೂಚನೆ.

5:10: ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 4 ಕೆ.ಜಿ ಚಿನ್ನ(2.06 ಕೋಟಿ ಮೌಲ್ಯ) ವಶಪಡಿಸಿಕೊಂಡಿದ್ದಾರೆ. ದುಬೈನಿಂದ ಬಂದ 6 ಮಂದಿ ವಿಚಾರಣೆಗೊಳಪಡಿಸಿ ಇಬ್ಬರನ್ನು ಬಂಧಿಸಿದ್ದಾರೆ.

4:45: ಲಂಕಾ ಪ್ರೀಮಿಯರ್ ಲೀಗ್ ಪ್ರಸಾರ ಹಕ್ಕು ಪಡೆದ ಸೋನಿ ಪಿಕ್ಚರ್ಸ್, ಸ್ಕೈ ಸ್ಪೋರ್ಟ್ಸ್

4.30: ಕೇರಳದ ಚಿನ್ನದ ಸ್ಮಗಲಿಂಗ್ ಕೇಸ್: ಕೋಳಿಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಎನ್ಐಎ ತಂಡದಿಂದ ಪರಿಶೋಧನೆ.

4: 00: ಕಾಂಗ್ರೆಸ್ ಸಮಿತಿಗೆ ಮರಳಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್. ಪರಿಸರ ವ್ಯವಹಾರ, ವಿದೇಶಾಂಗ ವ್ಯವಹಾರ, ರಾಷ್ರೀಯ ಭದ್ರತೆ ಬಗ್ಗೆ ಚರ್ಚಿಸಲಿರುವ ಕಾಂಗ್ರೆಸ್ಸಿನ ಹೊಸ ಸಮಿತಿ.

3:50: ದೆಹಲಿ-ಮುಂಬೈ ನಡುವೆ ರೈಲು ಸಂಚಾರ ಸ್ಥಗಿತಗೊಳಿಸಿಲ್ಲ ಎಂದು ರೈಲ್ವೆ ಇಲಾಖೆಯ ವಕ್ತಾರದಿಂದ ಸ್ಪಷ್ಟನೆ.

3:30: ದೆಹಲಿ ಮಾದರಿಯಲ್ಲೇ ಹರ್ಯಾಣದಲ್ಲಿ ಕೊವಿಡ್ 19 ನಿಯಂತ್ರಣಕ್ಕೆ ಕ್ರಮ. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಪ್ರಾಥಮಿಕ ಶಾಲೆಗಳು ನವೆಂಬರ್ 30ರ ತನಕ ಬಂದ್ ಆಗಲಿವೆ.

3:15: ಮಲಬಾರ್ 2ನೇ ಸಮರಾಭ್ಯಾಸ: ಭಾರತೀಯ ನೌಕಾದಳದ ಮಿಗ್ 29ಕೆ ಹಾಗೂ ಅಮೆರಿಕದ ಎಫ್ 18 ಅಭ್ಯಾಸ ನಿರತ ಚಿತ್ರಗಳು2.50: ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ದೆಹಲಿ- ಮುಂಬೈ ನಡುವಿನ ವಿಮಾನಯಾನ ತಾತ್ಕಾಲಿಕವಾಗಿ ರದ್ದು.

2.15: 26/11 ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಮತ್ತೆ ದಾಳಿ ನಡೆಸಲು ಉಗ್ರ ಸಂಘಟನೆಗಳ ಸಂಚು ಎಂಬ ಸುದ್ದಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರಿಂದ ಗೃಹ ಇಲಾಖೆ, ಎನ್ ಎಸ್ಎ ಜೊತೆ ಮಹತ್ವದ ಮಾತುಕತೆ.

2:00: ನ.24 ರ ತನಕ ಮಾಜಿ ಮೇಯರ್ ಸಂಪತ್ ರಾಜ್ ನ್ಯಾಯಾಂಗ ಬಂಧನಕ್ಕೆ; ಶಾಸಕ ಅಖಂಡ ಶ್ರೀನಿವಾಸ ಮನೆಗೆ ಬೆಂಕಿಯಿಟ್ಟ ಪ್ರಕರಣ ; ಬೆಂಗಳೂರಿನ ಸಿಟಿ ಕೋರ್ಟಿನಿಂದ ಆದೇಶ.

1:10: ಹತ್ರಾಸ್ ಪ್ರದೇಶಕ್ಕೆ ತೆರಳುತ್ತಿದ್ದ ಕೇರಳ ಪತ್ರಕರ್ತ ಮೂಲತಃ PFI ಕಾರ್ಯಕರ್ತ ಎಂದು ಕೋರ್ಟಿನಲ್ಲಿ ಯುಪಿ ಸರ್ಕಾರದ ಹೇಳಿಕೆ.

12-30: ಚೀನಾಕ್ಕೆ ಹೆಚ್ಚು ತೈಲ ಪೂರೈಕೆ ಮಾಡಿದ ರಾಷ್ಟ್ರಗಳ ರೇಸಿನಲ್ಲಿ ಸೌದಿ ಅರೇಬಿಯಾ ಹಾಗೂ ರಷ್ಯಾ ಮುಂದಿವೆ. 2020ರಲ್ಲಿ 1.7 ಮಿಲಿಯನ್ ಬ್ಯಾರೆಲ್ ಪ್ರತಿದಿನದಂತೆ ಚೀನಾ ಆಮದು ಮಾಡಿಕೊಂಡಿದೆ.

12: 15: ಎರಡು ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ ಎರಡರದ ದರದಲ್ಲೂ ಅಲ್ಪಪ್ರಮಾಣದಲ್ಲಿ ಏರಿಕೆ ಮಾಡಿ ಸರ್ಕಾರಿ ಸ್ವಾಮ್ಯ ತೈಲ ಸಂಸ್ಥೆಗಳು.

12-00: BTS 2020: ಬೆಂಗಳೂರು ಟೆಕ್ ಸಮಿಟ್ ನಲ್ಲಿ ಕರ್ನಾಟಕ ಬಯೊ ಎಕಾನಮಿ ವರದಿಯನ್ನು ಶುಕ್ರವಾರ ಬಿಡುಗಡೆ ಮಾಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ಐಟಿ‌ ನಿರ್ದೇಶಕಿ ಮೀನಾ ನಾಗರಾಜ, ನಾರಾಯಣನ್ ಸುರೇಶ, ನೂರ್ ಜಹರ್ ಖಾನುಮ್ ಇದ್ದರು.

11: 45: ಚಂಡೀಗಢದಲ್ಲಿ ಮೊಟ್ಟ ಮೊದಲ ಡಿಜಿಟಲ್ ಸಾಹಿತ್ಯ ಹಬ್ಬ ಆರಂಭ

11: 30: ಭೂತನ್ ದೇಶದಲ್ಲಿ ಎರಡನೇ ಹಂತದ ರುಪೇ ಕಾರ್ಡ್ ಜಾರಿಗೆ ತರಲಾಗಿದೆ.

   ICC World Test Championship : ದಿಢೀರ್ ಎರಡನೇ ಸ್ಥಾನಕ್ಕೆ ಕುಸಿದ ಭಾರತ ತಂಡ !! | Oneindia Kannada

   11: 20: ಲವ್ ಜಿಹಾದ್ ವಿರುದ್ಧ ಶೀಘ್ರದಲ್ಲೇ ಕಠಿಣ ಕಾನೂನು ಜಾರಿಗೆ ತರಲಾಗುವುದು ಉತ್ತರಪ್ರದೇಶ ಗೃಹ ಸಚಿವಾಲಯದ ಹೇಳಿಕೆ

   11-15: ದೆಹಲಿ ಈ ನವೆಂಬರ್ ಅತ್ಯಂತ ಚಳಿ ಅನುಭವಿಸಿದೆ. ಕನಿಷ್ಠ ತಾಪಮಾನ 7.5 ಡಿಗ್ರಿ ಸೆಲ್ಸಿಯಸ್ ತಲುಪಿದೆ.

   11-00: ಬೆಳ್ಳಂಬೆಳಿಗ್ಗೆ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ ಸಚಿವ ಸ್ಥಾನದ ಆಕಾಂಕ್ಷಿ ಉಮೇಶ್ ಕತ್ತಿ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮತ್ತು ಸಚಿವ ಸೋಮಣ್ಣ ಸಿಎಂ ಭೇಟಿ ನಂತರ ಕತ್ತಿ ಅವರು ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ್ದಾರೆ

   10-50: ಸಹಾರಾ ಸಮೂಹ ಸಂಸ್ಥೆಯ ಮುಖ್ಯಸ್ಥ ಸುಬ್ರತಾ ರಾಯ್ ಅವರಿಗೆ ತಕ್ಷಣವೇ 62,600 ಕೋಟಿ ರು ಪಾವತಿಸುವಂತೆ ಸೂಚಿಸಿದ ಸೆಬಿ.

   10-15: ಗೃಹ ಬಳಕೆ ಅಡುಗೆ ಎಣ್ಣೆ ಬೆಳೆ ಶೇ 30ರಷ್ಟು ಏರಿಕೆ, ನೆಲಗಡಲೆ, ಸಾಸಿವೆ, ವನಸ್ಪತಿ,ಸೊಯಾಬೀನ್, ಸೂರ್ಯಕಾಂತಿ, ತಾಳೆ ಎಣ್ಣೆಗಳ ಸರಾಸರಿ ಬೆಲೆಯಲ್ಲಿ ಶೇ 20 ರಿಂದ 30ರಷ್ಟು ಏರಿಕೆಯಾಗಿದೆ.

   10:05: 12 ವರ್ಷಗಳಿಗೊಮ್ಮೆ ನಡೆಯುವ ಪುಷ್ಕರ ಸ್ಥಾನಕ್ಕೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ತುಂಗಭದ್ರಾ ನದಿ ತೀರಗಳು ಸಿದ್ಧವಾಗಿವೆ. ಮಂತ್ರಾಲಯದಲ್ಲೂ 12 ದಿನ ಕಾಲ ಪುಷ್ಕರ ಸ್ನಾನ ನಡೆಯಲಿದೆ.

   9:50: ಇಂಡಿಯನ್ ಸೂಪರ್ ಲೀಗ್ (ಫುಟ್ಬಾಲ್) 2020 ನ.20ರಿಂದ ಆರಂಭ, ಉದ್ಘಾಟನಾ ಪಂದ್ಯದಲ್ಲಿ ಎಟಿಕೆ ಬಾಗನ್ ವಿರುದ್ಧ ಕೇರಳ ಬ್ಲಾಸ್ಟರ್ಸ್ ಸೆಣಸು.

   9:40: ಸ್ಕಾಟ್ಲೆಂಡ್ ದೇಶದ ಲೇಖಕ ಡಗ್ಲಾಸ್ ಸ್ಟುವರ್ಟ್ ಅವರ ಶುಗ್ಗಿ ಬೇನ್ ಕೃತಿ 2020ನೇ ಸಾಲಿನ ಬೂಕರ್ ಪ್ರಶಸ್ತಿ ಲಭಿಸಿದೆ.

   9:35: ಭಾರತದಲ್ಲಿ 90,04,366 ಕೊವಿಡ್ 19 ಪ್ರಕರಣಗಳಿದ್ದು, 45,882 ಹೊಸ ಪ್ರಕರಣಗಳಾಗಿವೆ. ಮೃತಪಟ್ಟವರ ಸಂಖ್ಯೆ 1,32,162. ಗುಣಮುಖರಾದವರ ಸಂಖ್ಯೆ 84,28,409.

   9:15: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಂಚಪಲ್ಲಿ ಗ್ರಾಮದ ಬಾವಿಗೆ ಬಿದ್ದಿದ್ದ ಹೆಣ್ಣು ಆನೆಯನ್ನು ಸುಮಾರು 16 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ.

   9:00: ಉತ್ತರಪ್ರದೇಶದ ಪ್ರಯಾಗ್ ರಾಜ್- ಲಕ್ನೋ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಮಾನಿಕ್ ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟ್ರಕ್ ಹಾಗೂ ಪ್ರಯಾಣಿಕರಿದ್ದ ವಾಹನದ ನಡುವೆ ಡಿಕ್ಕಿಯಾಗಿದೆ. 6 ಮಕ್ಕಳು ಸೇರಿ 14 ಮಂದಿ ಅಸುನೀಗಿದ್ದಾರೆ.


   8:45: ಭಾರತದ ರಾಜಧಾನಿ ದೆಹಲಿಯ ಮಾಲಿನ್ಯ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮುಂಜಾನೆ ಹೊಂಜು(ಹೊಗೆ+ಮಂಜು) ಆವರಿಸಿದ್ದು, Air Quality Index ಅಂಕಿ ಅಂಶದಂತೆ ಶ್ರೀ ಅರಬಿಂದೋ ಮಾರ್ಗ್ (291), ಸಿರಿಫೋರ್ಟ್ 287 ದಾಖಲಿಸಿದೆ ಎಂದು ಮಾಲಿನ್ಯ ನಿಯಂತ್ರಣ ಇಲಾಖೆ ಹೇಳಿದೆ.

   8:20: ಜಾರ್ಜಿಯಾದಲ್ಲಿ ಮತ ಪತ್ರ ಎಣಿಕೆಯಲ್ಲಿ ಜಯ ದಾಖಲಿಸಿದ ಡೆಮೊಕ್ರಾಟಿಕ್ ಅಭ್ಯರ್ಥಿ ಜೋ ಬೈಡನ್, ಟ್ರಂಪ್ ಬಗ್ಗೆ ಮಾತನಾಡಿ, ಟ್ರಂಪ್ ಅವರು ಚುನಾವಣೆಯಲ್ಲಿನ ಸೋಲೊಪ್ಪಿಕೊಳ್ಳದೆ ಇಡೀ ವಿಶ್ವಕ್ಕೆ ಕೆಟ್ಟ ಸಂದೇಶ ನೀಡುತ್ತಿದ್ದಾರೆ ಎಂದಿದ್ದಾರೆ.

   8:00: ಕೊವಿಡ್19 ಸೋಂಕಿಗೆ ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟ ದಾಖಲೆ ಬರೆದ ದೇಶಗಳ ಸಾಲಿಗೆ ಮೆಕ್ಸಿಕೋ ಸೇರ್ಪಡೆ. 100,000 ಕೊವಿಡ್19 ಸಾವು ದಾಖಲಿಸಿದ 4ನೇ ರಾಷ್ಟ್ರ ಎನಿಸಿದ ಮೆಕ್ಸಿಕೋ.

   English summary
   Daily Roundup 20 November: We are covering the top news and updates about political, national, international, cinema, sports, business and covid-19.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X