ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರಾಷ್ಟ್ರೀಯ ಬ್ರಾಂಡ್ ಹೆಸರು; ದಾದಾಜಿಸ್ ನಿಕ್ಕರ್ ಬೆಲೆ ಕೇಳಿದ್ರಾ!

|
Google Oneindia Kannada News

ಕೆಲ ದಿನಗಳ ಹಿಂದೆ ಮನೆಯ ಮೂಲೆಯಲ್ಲಿ ಎಸೆಯುವ ಗೋಣಿಚೀಲಗಳನ್ನು ಮಾರ್ಪಾಡು ಮಾಡಿ ವಿದೇಶದಲ್ಲಿ 1000-1500 ರೂ. ಗೆ ಮಾರಾಟ ಮಾಡಲಾಗುತ್ತಿದೆ ಎಂದು ವರದಿಯಾಗಿತ್ತು. ಆದರೆ ಇದೀಗ ಅದಕ್ಕಿಂತ ಕುತೂಹಲಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಭಾರತದ ಹಳ್ಳಿಗಳಲ್ಲಿ ಹಿರಿಯರು ಧರಿಸುವ ಬರ್ಮುಡಾ ಚೆಡ್ಡಿಗಳು ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿವೆ. ಇವುಗಳ ಬೆಲೆ ನೂರಾರು ಪಟ್ಟು ಹೆಚ್ಚಾಗಿದೆ. ಇದರ ಬೆಲೆ ಕೇಳಿ ಜನ ಶಾಕ್ ಆಗಿದ್ದಾರೆ.

ಅರ್ಷದ್ ವಹೀಡೊ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಎರಡು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಚೆಡ್ಡಿಗಳು ಹಳ್ಳಿಗಳಲ್ಲಿ ಹಿರಿಯರು ಧರಿಸುವಂತೆಯೇ ಇರುತ್ತವೆ. ಸಾಮಾನ್ಯವಾಗಿ ಇದು 70-100 ರೂಗಳ ನಡುವೆ ಸಿದ್ಧವಾಗಿರುತ್ತದೆ.

ಅವಹೇಳನಕಾರಿ ಹೇಳಿಕೆ: ಸಿದ್ದರಾಮಯ್ಯಗೆ ಚೆಡ್ಡಿ ರವಾನೆಅವಹೇಳನಕಾರಿ ಹೇಳಿಕೆ: ಸಿದ್ದರಾಮಯ್ಯಗೆ ಚೆಡ್ಡಿ ರವಾನೆ

ಆದರೆ ಇದರ ಆನ್‌ಲೈನ್ ಬೆಲೆ ಕೇಳಿದ ನಂತರ ನೀವು ಬೆಚ್ಚಿ ಬೀಳುತ್ತೀರಿ. ಸ್ಕ್ರೀನ್ ಶಾಟ್ ಪ್ರಕಾರ ಕೋಬ್ ಕಂಪನಿಯ ಈ ಶಾರ್ಟ್ಸ್ ಬೆಲೆ 15,000 ರೂ. ಈಗಿನ ಕಾಲದ ಮಾಡರ್ನ್‌ ಶಾರ್ಟ್ಸ್‌ ಕೂಡ ಇಷ್ಟೊಂದು ದುಬಾರಿಯಾಗಿರಲಿಕ್ಕಿಲ್ಲವೆನೋ? ಎಂದು ಜನ ಹೇಳುತ್ತಿದ್ದಾರೆ.

ಆನ್‌ಲೈನ್ ಬೆಲೆ ವೈರಲ್

ಆನ್‌ಲೈನ್ ಬೆಲೆ ವೈರಲ್

ಇದಲ್ಲದೇ ಮತ್ತೊಂದು ಚಿತ್ರದ ಬೆಲೆಯನ್ನು ಬಳಕೆದಾರರು ಹಂಚಿಕೊಂಡಿದ್ದಾರೆ. ಅದರಲ್ಲಿ ಮಾಡೆಲ್ ಶಾರ್ಟ್ಸ್ ನೊಂದಿಗೆ ಸಿಂಪಲ್ ಶರ್ಟ್ ಧರಿಸಿದ್ದಾರೆ. ಇದೂ ಕೂಡ ಕೋಬ್ ಕಂಪನಿಯದ್ದು ಮತ್ತು ಇದರ ಆನ್‌ಲೈನ್ ಬೆಲೆ 11,450 ರೂ. ಮಾರಾಟವಾಗುತ್ತಿರುವ ವೆಬ್‌ಸೈಟ್‌ನ ಹೆಸರನ್ನು ಅವರು ನೀಡದಿದ್ದರೂ, ಜನರು ಅದನ್ನು ವೇಗವಾಗಿ ಹಂಚಿಕೊಳ್ಳುತ್ತಿದ್ದಾರೆ.

ಪಟ್ಟಪಟ್ಟಿಯ ಮೌಲ್ಯ

ಪಟ್ಟಪಟ್ಟಿಯ ಮೌಲ್ಯ

ದಾದಾ ಜಿ ಅವರ ಚಡ್ಡಿ ಶ್ರೇಷ್ಠತೆಯನ್ನು ನೋಡಿದ ಒಬ್ಬ ಬಳಕೆದಾರರು ಬರೆದಿದ್ದಾರೆ, 'ನಮ್ಮಲ್ಲಿ ಅನೇಕ ಅಮೂಲ್ಯ ವಸ್ತುಗಳು ಇವೆ. ಆದರೆ ಅದರ ಮೌಲ್ಯ ನಮಗೆ ಅರ್ಥವಾಗುತ್ತಿಲ್ಲ' ಎಂದು ಬರೆದಿದ್ದಾರೆ. ಈಗ ದೊಡ್ಡ ನಗರಗಳು ಮತ್ತು ವಿದೇಶಗಳಲ್ಲಿನ ಕಂಪನಿಗಳು ಅದರ ಮೌಲ್ಯವನ್ನು ಅರ್ಥಮಾಡಿಕೊಳ್ಳುತ್ತಿವೆ. ಅದಕ್ಕಾಗಿಯೇ ಇವೆಲ್ಲವನ್ನೂ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಗೋಣಿಚೀಲಕ್ಕೂ ಬೆಲೆ ಅಧಿಕ

ಕೆಲ ಸಮಯದ ಹಿಂದೆ ನೂರಾಹಾನ್ ಎಂಬ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದರು. ರಾಯಲ್ ಬಾಸ್ಮತಿ ಅಕ್ಕಿಯ ಖಾಲಿ ಚೀಲವನ್ನು $ 15 ಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಆ ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಭಾರತದ ಪ್ರಕಾರ, ಇದು 1100 ರೂಪಾಯಿಗಳಿಗಿಂತ ಹೆಚ್ಚು ಇರುತ್ತದೆ. ಈ ಗೋಣಿಚೀಲವನ್ನು ಇಷ್ಟು ದುಬಾರಿಯಾಗಿ ಮಾರಾಟ ಮಾಡಲಾಗುತ್ತಿದೆ ಎಂದು ನಾನು ನಂಬಲು ಸಾಧ್ಯವಿಲ್ಲ ಎಂದು ನೊರಹಾನ್ ಬರೆದಿದ್ದಾರೆ.

1100 ರೂಪಾಯಿಗೆ ಗೋಣಿಚೀಲ

1100 ರೂಪಾಯಿಗೆ ಗೋಣಿಚೀಲ

ಬಾಸ್ಮತಿ ಅಕ್ಕಿ ಚೀಲಗಳು ಭಾರತದಲ್ಲಿ ಸಾಮಾನ್ಯ ದೃಶ್ಯವಾಗಿದ್ದರೂ, ವಿದೇಶದಲ್ಲಿ ಇದು ಹೆಚ್ಚು ಮೌಲ್ಯಯುತವಾಗಿದೆ. "ಇದು ನಿಜವೆಂದು ನನಗೆ ನಂಬಲಾಗುತ್ತಿಲ್ಲ" ಎಂದು @naahrun ಎಂಬ ಬಳಕೆದಾರರು ಬರೆದಿದ್ದಾರೆ. ಮರುರೂಪಿಸಲಾದ ಚೀಲದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈಗ ಹಲವಾರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿರುವ ಚಿತ್ರವು, ಕೆಂಪು ಝಿಪ್ಪರ್ ಮತ್ತು ನೂಲಿನ ವಿವರಗಳಿಂದ ಅಲಂಕರಿಸಲ್ಪಟ್ಟ ಕಂದು ಅಕ್ಕಿ ಚೀಲವನ್ನು ತೋರಿಸುತ್ತದೆ. ಕುತೂಹಲಕಾರಿಯಾಗಿ, ಚೀಲವು ಮಾರಾಟವಾಗಲು ಕೇವಲ ಒಂದು ದಿನವನ್ನು ತೆಗೆದುಕೊಂಡಿದೆ.

Recommended Video

West Indies ವಿರುದ್ಧದ 2ನೇ ಟಿ20 ಪಂದ್ಯ ತಡವಾಗಿ ಆರಂಭವಾಗಲು ಇದೇ ಕಾರಣ | Sports | OneIndia Kannada

English summary
Bermuda chaddis worn by elders in Indian villages are selling online for Rs 15000. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X