ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಆಸ್ತಿ: ಮಾಜಿ ಸಿಜೆಐ ಬಾಲಕೃಷ್ಣನ್ ಗೆ ಕ್ಲೀನ್ ಚಿಟ್

By Mahesh
|
Google Oneindia Kannada News

ನವದೆಹಲಿ, ನ.18: ಅಕ್ರಮ ಆಸ್ತಿ ಗಳಿಕೆ ಆರೋಪ ಹೊತ್ತಿರುವ ಮಾಜಿ ಮುಖ್ಯ ನ್ಯಾಯಾಧೀಶ ಕೆ.ಜಿ. ಬಾಲಕೃಷ್ಣನ್ ಅವರಿಗೆ ಕೇಂದ್ರ ಸರ್ಕಾರ ಕ್ಲೀನ್ ಚಿಟ್ ನೀಡಿದೆ.

ಕೆಜಿ ಬಾಲಕೃಷ್ಣನ್ ಹಾಗೂ ಅವರ ಕುಟುಂಬ ಸದಸ್ಯರು ಬೇನಾಮಿ ಆಸ್ತಿಗಳನ್ನು ಹೊಂದಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ ಎಂದು ಕೇಂದ್ರವು ಮಂಗಳವಾರ ಸುಪ್ರೀಂಕೋರ್ಟಿಗೆ ತಿಳಿಸಿದೆ.

DA case: Clean chit to ex-CJI Balakrishnan

ಆದಾಯ ತೆರಿಗೆ ಇಲಾಖೆಯು ಪ್ರಕರಣದ ತನಿಖೆಯನ್ನು ನಡೆಸಿದ್ದು, ಅದು ಬಾಲಕೃಷ್ಣನ್ ಮತ್ತು ಅವರ ಕುಟುಂಬ ಸದಸ್ಯರಿಗೆ ಕ್ಲೀನ್ ಚಿಟ್ ನೀಡಿದೆ ಎಂದು ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪೀಠಕ್ಕೆ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರು ತಿಳಿಸಿದರು. ಸರಕಾರವು ಈ ಬಗ್ಗೆ ಸ್ಥಿತಿಗತಿ ವರದಿಯೊಂದನ್ನು ಮುಂದಿನ ವಿಚಾರಣೆಯ ದಿನದಂದು ಸಲ್ಲಿಸಲಿದೆ ಎಂದು ಹೇಳಿದರು.

ಇಂತಹ ಆಧಾರರಹಿತ ಆರೋಪಗಳು ಅರ್ಜಿಗಳು ವ್ಯಕ್ತಿಯ ಪ್ರತಿಷ್ಠೆಗೆ ಹಾನಿಯನ್ನುಂಟು ಮಾಡುವುದರಿಂದ ಅವುಗಳನ್ನು ವಿಚಾರಣೆಗೆ ಅಂಗೀಕರಿಸಬಾರದು ಎಂದು ಅವರು ನ್ಯಾಯಾಲಯವನ್ನು ಕೋರಿಕೊಂಡರು.

English summary
The Centre gave a clean chit to former Chief Justice of India (CJI) KG Balakrishnan in a case of alleged disproportionate assets (DA) owned by his family members and sought dismissal of a PIL even as the Supreme Court said it would not “shy away” from going into such cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X