ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಘಾಲಯ ಚಂಡಮಾರುತ: 1000ಕ್ಕೂ ಅಧಿಕ ಮನೆಗೆ ಹಾನಿ

|
Google Oneindia Kannada News

ಶಿಲ್ಲಾಂಗ್, ಏಪ್ರಿಲ್ 15: ಮೇಘಾಲಯದ ರಿ-ಭೋಯ್ ಜಿಲ್ಲೆಯಲ್ಲಿ ಗುರುವಾರ ಚಂಡಮಾರುತವು ಭಾರೀ ಹಾನಿಯನ್ನು ಉಂಟು ಮಾಡಿದೆ. ಚಂಡ ಮಾರುತದ ಕಾರಣದಿಂದಾಗಿ ಜಿಲ್ಲೆಯಲ್ಲಿ 1000 ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ.

ಜಿಲ್ಲೆಯಲ್ಲಿ ಸಾವಿರಾರು ಮನೆಗಳಿಗೆ ಹಾನಿ ಉಂಟಾಗಿದೆ. ಆದರೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಲ್ಲೆಯ 47 ಗ್ರಾಮಗಳು ಚಂಡಮಾರುತದಿಂದ ಹಾನಿಗೊಳಗಾಗಿದೆ. ಅಲ್ಲಿನ ಮನೆಗಳಿಗೆ ಹಾನಿ ಉಂಟಾಗಿದೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

Cyclone Asani: 2022ರ ಮೊದಲ ಚಂಡಮಾರುತಕ್ಕೆ 'ಅಸನಿ' ಎಂದು ಹೆಸರು ಬಂದಿದ್ದು ಹೇಗೆ?Cyclone Asani: 2022ರ ಮೊದಲ ಚಂಡಮಾರುತಕ್ಕೆ 'ಅಸನಿ' ಎಂದು ಹೆಸರು ಬಂದಿದ್ದು ಹೇಗೆ?

ಬಿಡಿಒ ಕಚೇರಿ, ಶಾಲೆ, ಲೋಕೋಪಯೋಗಿ ಇಲಾಖೆ ಕಚೇರಿ, ಪಶುವೈದ್ಯಕೀಯ ಕಚೇರಿಗಳು ಸೇರಿದಂತೆ ಸರ್ಕಾರಿ ಆಸ್ತಿಗಳು ಚಂಡಮಾರುತದಲ್ಲಿ ನಾಶವಾಗಿದೆ ಎಂದು ಕೂಡಾ ಅಧಿಕಾರಿ ಮಾಹಿತಿ ನೀಡಿದ್ದಾರೆ.

Cyclonic Storm In Meghalaya: Over 1000 Houses Damaged

ಹಾನಿಗೊಳಗಾದ ಗ್ರಾಮಗಳಲ್ಲಿ ಜನರ ತೆರವು ಕಾರ್ಯ ಹಾಗೂ ಜನರನ್ನು ಬೇರೆಡೆ ವರ್ಗಾವಣೆ ಮಾಡಿ ವಸತಿ ವ್ಯವಸ್ಥೆ ಮಾಡುವ ಕಾರ್ಯವು ನಡೆಯುತ್ತಿದೆ. ಇದಕ್ಕಾಗಿ ಇಲಾಖೆಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಸುಮಾರು 29 ಹಳ್ಳಿಗಳು ಮತ್ತು 612 ಮನೆಗಳಿಗೆ ಹಾನಿ

ಚಂಡಮಾರುತದಿಂದಾಗಿ ಮೇಘಾಲಯದ ರಿ ಭೋಯ್ ಜಿಲ್ಲೆಯ ಭೋರಿಂಬೊಂಗ್ ಬ್ಲಾಕ್ ಅಡಿಯಲ್ಲಿ ಸುಮಾರು 29 ಹಳ್ಳಿಗಳು ಮತ್ತು 612 ಮನೆಗಳು ಹಾನಿಗೊಳಗಾಗಿವೆ. ಟೈರ್ಸೊ ಮತ್ತು ಮಾವ್ಲಾಸ್ನಾಯ್ ಪ್ರದೇಶದಲ್ಲಿ ಸುಮಾರು 400 ಮನೆಗಳು ಸಹ ಹಾನಿಗೆ ಒಳಗಾಗಿದೆ ಎಂದು ರಿ ಭೋಯಿ ಉಪ ಆಯುಕ್ತ (ಡಿಸಿ) ಅರ್ಪಿತ್ ಉಪಾಧ್ಯಾಯ ಹೇಳಿದ್ದಾರೆ.

Cyclone Asani; ಕರ್ನಾಟಕ ವಿವಿಧ ಜಿಲ್ಲೆಯಲ್ಲಿ 3 ದಿನ ಮಳೆCyclone Asani; ಕರ್ನಾಟಕ ವಿವಿಧ ಜಿಲ್ಲೆಯಲ್ಲಿ 3 ದಿನ ಮಳೆ

"271 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಮತ್ತು 86 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ, ಆದರೆ ಉಮೇತ್ ಗ್ರಾಮದಲ್ಲಿ ಮೂರು ಮಂದಿಗೆ ಸಣ್ಣ ಪುಟ್ಟ ಗಾಯಗಳು ಆಗಿದೆ," ಎಂದು ಕೂಡಾ ಮಾಹಿತಿ ನೀಡಿದ್ದಾರೆ.

ಚಂಡಮಾರುತದಿಂದಾಗಿ ಉಮ್ರೋಯಿ ನೊಂಗ್ರಾಹ್‌ನಲ್ಲಿರುವ ಶಾಲೆ ಮತ್ತು ಲುಮ್‌ಡಿಯೆಂಗ್‌ಗನ್‌ನಲ್ಲಿನ ಒಂದು ಚರ್ಚ್ ಹಾನಿಗೀಡಾಗಿದ್ದು, ಬಿಡಿಒ ಕಚೇರಿ, ಇಇ ಕಚೇರಿ, ಕ್ವಾರ್ಟರ್ಸ್, ಹ್ಯಾಚರಿ ಕಮ್ ಪೌಲ್ಟ್ರಿ ಫಾರ್ಮ್ ಮತ್ತು ಮೀನುಗಾರಿಕೆ ಸೇರಿದಂತೆ ಲೋಕೋಪಯೋಗಿ ಇಲಾಖೆ ಸೇರಿದಂತೆ ಸರ್ಕಾರಿ ಆಸ್ತಿಗಳು ಹಾನಿಗೊಳಗಾಗಿವೆ. ಉಮ್ಸ್ನಿಂಗ್ ಸಿ&ಆರ್‌ಡಿ ಬ್ಲಾಕ್‌ನಲ್ಲಿ, ಸುಮಾರು 47 ಹಳ್ಳಿಗಳು ಹಾನಿಗೊಳಗಾಗಿವೆ ಮತ್ತು ಹಲವಾರು ಮನೆಗಳಿಗೆ ಹಾನಿಯಾಗಿದೆ ಎಂದು ವರದಿ ಉಲ್ಲೇಖ ಮಾಡಿದೆ.

ಚಂಡಮಾರುತದಿಂದಾಗಿ ಮನೆ ಕಳೆದುಕೊಂಡವರಿಗಾಗಿ ಸೈಧೆ ಗ್ರಾಮದಲ್ಲಿ ಒಂದು ತಾತ್ಕಾಲಿಕ ಆಶ್ರಯವನ್ನು ಸ್ಥಾಪಿಸಲಾಗಿದೆ ಎಂದು ಡಿಸಿ ಅರ್ಪಿತ್ ಉಪಾಧ್ಯಾಯ ಹೇಳಿದರು. ಈ ನಡುವೆ ಪೊಲೀಸ್, ಅರಣ್ಯ ಮತ್ತು ಪಿಡಬ್ಲ್ಯೂ ತೆರವು ಮತ್ತು ಮರುಸ್ಥಾಪನೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ತಕ್ಷಣವೇ ಸೂಚನೆ ನೀಡಲಾಗಿದೆ.

ಮೇಘಾಲಯ ಎನರ್ಜಿ ಕಾರ್ಪೊರೇಷನ್ ಲಿಮಿಟೆಡ್ ತಕ್ಷಣವೇ ತನ್ನ ತಂಡವನ್ನು ಪೀಡಿತ ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲು ಕಳುಹಿಸಿದೆ. ಈ ಬಗ್ಗೆ ಅಧಿಕ ಮಾಹಿತಿ ನೀಡಿದ ಡಿಸಿ "ಉಮ್ಸ್ನಿಂಗ್ ಬ್ಲಾಕ್‌ನಲ್ಲಿ ಸಂಚಾರವನ್ನು ತಕ್ಷಣವೇ ಮತ್ತೆ ಸ್ಥಾಪಿಸಲಾಯಿತು ಮತ್ತು ಅಗತ್ಯ ಕ್ರಮಕ್ಕಾಗಿ ಎಲ್ಲಾ ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಆನ್‌ಲೈನ್ ತುರ್ತು ಸಭೆ ನಡೆಸಲಾಯಿತು.

English summary
Over 1000 Houses Damaged In A Cyclonic Storm In Meghalaya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X