ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾಸ್ ಚಂಡಮಾರುತ: ಒಡಿಶಾದ 3 ಜಿಲ್ಲೆಗೆ ಹೆಚ್ಚು ಅಪಾಯ ಎಂದ ಹವಾಮಾನ ಇಲಾಖೆ

|
Google Oneindia Kannada News

ನವದೆಹಲಿ, ಮೇ 23: ಯಾಸ್ ಚಂಡಮಾರುತದ ಆತಂಕ ಈಗ ಹೆಚ್ಚಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಮತ್ತೊಂದು ಪ್ರಮುಖ ಎಚ್ಚರಿಕೆಯನ್ನು ನೀಡಿದೆ. ಒಡಿಶಾದ ಮೂರು ಜಿಲ್ಲೆಗಳಾದ ಮಯೂರ್‌ಭಂಜ್, ಭದ್ರಕ್ ಹಾಗೂ ಬಾಲಸೋರ್ ಜಿಲ್ಲೆಗಳು ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.

ಮೇ 26ರಂದು ಯಾಸ್ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕರಾವಳಿ ಭಾಗಕ್ಕೆ ಅಪ್ಪಳಿಸುವ ನಿರೀಕ್ಷೆಯಿದೆ. "ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ಗುರುತಿಸಲ್ಪಟ್ಟಿರುವ ಕಡಿಮೆ-ಒತ್ತಡದ ಪ್ರದೇಶದ ಮೂಲಕ ಒತ್ತಡವನ್ನು ಕೇಂದ್ರೀಕರಿಸುತ್ತದೆ. ನಾಳೆ (ಮೇ 24) ವೇಳೆಗೆ ಇದು ಚಂಡಮಾರುತ ಗಾಳಿಯ ಸ್ವರೂಪವನ್ನು ಪಡೆಯಲಿದೆ. ವಾಯುವ್ಯ ದಿಕ್ಕಿನಲ್ಲಿ ಸಾಗಿ ಮೇ 26 ರಂದು ಇದು ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಕರಾವಳಿಯನ್ನು ತಲುಪುತ್ತದೆ" ಎಂದು ಭಾರತೀಯ ಹವಾಮಾನ ಇಲಾಖೆಯ ಉಪ ನಿರ್ದೇಶಕ ಉಮಾಶಂಕರ್ ಮಾಹಿತಿ ನೀಡಿದ್ದಾರೆ.

ಈ ಯಾಸ್ ಚಂಡಮಾರುತಕ್ಕೆ ಉತ್ತರ ಒಡಿಶಾದ ಜಿಲ್ಲೆಗಳು ವಿಶೇಷವಾಗಿ ಮಯೂರ್‌ಭಂಜ್, ಭದ್ರಾಕ್ ಮತ್ತು ಬಾಲಸೋರ್ ಜಿಲ್ಲೆಗಳು ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಂಭವವಿದೆ ಎಂದು ಉಮಾಶಂಕರ್ ಎಎನ್‌ಐಗೆ ನೀಡಿದ ಪ್ರತಿಕ್ರಿಯೆಯಲ್ಲಿ ಮಾಹಿತಿ ನೀಡಿದ್ದಾರೆ.

Cyclone Yaas: 3 districts of Odisha likely to be worst hit, says IMD

Recommended Video

Yas ಚಂಡಮಾರುತದಿಂದ ರಾಜ್ಯದಲ್ಲಿ 5 ದಿನ ಮಳೆ | Oneindia Kannada

ಮೇ 25 ರಂದು ಒಡಿಶಾದ ಕೆಲ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯ ಬಗ್ಗೆ ಭಾರತೀಯ ಹವಾಮಾನ ಇಲಾಖೆಯ ಉಪನಿರ್ದೇಶಕ ಭುವನೇಶ್ವರ್ ಮಾಹಿತಿ ನೀಡಿದ್ದಾರೆ. ಭದ್ರಾಕ್, ಬಾಲಸೋರ್, ಜಜ್ಪುರ್, ಕೇಂದ್ರಪಾರ, ಜಗತ್ಸಿಂಗ್‌ಪುರ, ಕಟಕ್, ಖೋರ್ಧಾ ಮತ್ತು ಪುರಿ ಭಾಗದಲ್ಲಿ ಭಾರೀ ಮಳೆಯಾಗಲಿದೆ ಎಂದಿದ್ದಾರೆ.

English summary
Cyclone Yaas: 3 districts of Odisha Mayurbhanj, Bhadrak, Balasore likely to be worst hit, says India Meteorological Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X