ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೌಕ್ತೆ ಚಂಡಮಾರುತ: ಗುಜರಾತ್ ಮತ್ತು ಕರಾವಳಿಯಲ್ಲಿ ಹೇಗಿರಲಿದೆ ವಾತಾವರಣ?

|
Google Oneindia Kannada News

ಅಹ್ಮದಾಬಾದ್, ಮೇ 16: ಭಾರತದ ಪಶ್ಚಿಮ ಕರಾವಳಿಯಲ್ಲಿ ಹಗುರ ಗಾಳಿಯಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸೌರಾಷ್ಟ್ರ ಮತ್ತು ಕಚ್ ಒಳನಾಡು ಪ್ರದೇಶದ ಹಲವೆಡೆ ಅಧಿಕದಿಂದ ಕೂಡಿದ ಭಾರಿ ಮಳೆಯಾಗಲಿದೆ.
ಮೇ 17ರಂದು ಒಳನಾಡು ಪ್ರದೇಶಗಳಲ್ಲಿ ಜುನಾಗಢ್ ಮತ್ತು ಗಿರ್ ಸೋಮನಾಥ ಜಿಲ್ಲೆಗಳಲ್ಲಿ ಅಧಿಕ ಮಳೆ ಬೀಳುವ ಸಾಧ್ಯತೆಯಿದೆ. ಮೇ 18ರಂದು ಸೌರಾಷ್ಟ್ರ ಮತ್ತು ಕಚ್ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಒಳನಾಡು ಪ್ರದೇಶಗಳಾದ ಪೋರಬಂದರ್, ದೇವಭೂಮಿ ದ್ವಾರಕ, ಜಾಮ್ ನಗರ್ ಮತ್ತು ಕಚ್ ಜಿಲ್ಲೆಗಳು 20 ಸೆ.ಮೀಟರ್ ಗೂ ಅಧಿಕ ಮಳೆ ಬೀಳುವ ನಿರೀಕ್ಷೆಯಿದೆ.

ಚಂಡಮಾರುತದ ಆರ್ಭಟಕ್ಕೆ ಕೇರಳದಲ್ಲಿ 2, ಕರ್ನಾಟಕದಲ್ಲಿ 4 ಮಂದಿ ಬಲಿಚಂಡಮಾರುತದ ಆರ್ಭಟಕ್ಕೆ ಕೇರಳದಲ್ಲಿ 2, ಕರ್ನಾಟಕದಲ್ಲಿ 4 ಮಂದಿ ಬಲಿ

ಮುಂದಿನ 6 ಗಂಟೆಗಳಲ್ಲಿ ಮಾಲ್ಡವೀಸ್ ಪ್ರದೇಶ ಮತ್ತು ಹಿಂದೂ ಮಹಾಸಾಗರದ ಸಮಭಾಜಕ ಪ್ರದೇಶದಲ್ಲಿ ತಂಪನೆಯ ವಾತಾವರಣ ಇರಲಿದ್ದು, ಬಿರುಗಾಳಿ ಪ್ರತಿ ಗಂಟೆಗೆ 45-55 ಕಿ.ಮೀ.ನಿಂದ 65 ಕಿ.ಮೀ. ವೇಗದಲ್ಲಿ ಸಾಗಲಿದೆ. ಲಕ್ಷದ್ವೀಪ ಪ್ರದೇಶ ಮತ್ತು ಅರಬ್ಬೀ ಸಮುದ್ರದ ವಾಯವ್ಯಕ್ಕೆ ಹೊಂದಿಕೊಂಡಿರುವ ಮತ್ತು ಅರಬ್ಬೀ ಸಮುದ್ರದ ಪಶ್ಚಿಮ ಕೇಂದ್ರದ ಪ್ರದೇಶದಲ್ಲಿ ಚಂಡಮಾರುತ ಪ್ರತಿ ಗಂಟೆಗೆ 75-85 ಕಿ.ಮೀ. ವೇಗದಿಂದ 95 ಕಿ.ಮೀ. ವೇಗದಲ್ಲಿ ಹಾದು ಹೋಗಲಿದೆ.

Cyclone Tauktae Affected West Coastal Of Gujrat In Next 48 Hours

ಗುಜರಾತಿನಲ್ಲಿ ಚಂಡಮಾರುತದ ಭೀತಿ ಜೊತೆ ಮಳೆ

ಗುಜರಾತಿನಲ್ಲಿ ಚಂಡಮಾರುತದ ಭೀತಿ ಜೊತೆ ಮಳೆ

ಅರಬ್ಬೀ ಸಮುದ್ರದ ಈಶಾನ್ಯ ಭಾಗದಲ್ಲಿ ಮತ್ತು ದಕ್ಷಿಣ ಗುಜರಾತ್ ಹಾಗೂ ದಾಮನ್ ದಿಯು ಕರಾವಳಿ ಉದ್ದಕ್ಕೂ ಮೇ 17ರಂದು ಬೆಳಗ್ಗೆ ಚಂಡಮಾರುತ ಪ್ರತಿ ಗಂಟೆಗೆ 40-50 ಕಿ.ಮೀ. ವೇಗದಿಂದ 60 ಕಿ.ಮೀ. ವೇಗದಲ್ಲಿ ಸಾಗುವ ಸಾಧ್ಯತೆಯಿದೆ. ಕ್ರಮೇಣ ಬಿರುಗಾಳಿಯಾಗಿ ಪರಿವರ್ತನೆಗೊಂಡು ಮೇ 18ರಂದು ಬೆಳಗ್ಗೆ ಅರಬ್ಬೀ ಸಮುದ್ರದ ಈಶಾನ್ಯ ಭಾಗದಲ್ಲಿ ಪ್ರತಿ ಗಂಟೆಗೆ 150 -160 ಕಿ.ಮೀ.ನಿಂದ 175 ಕಿ.ಮೀ. ವೇಗದಲ್ಲಿ ಸಾಗಲಿದೆ. ಮೇ 18ರಂದು ಮಧ್ಯಾಹ್ನ ಅಥವಾ ಸಂಜೆ ನಂತರ ಸೌರಾಷ್ಟ್ರ ಮತ್ತು ಕಚ್ ಕರಾವಳಿ ಉದ್ದಕ್ಕೂ(ದೇವಭೂಮಿ ದ್ವಾರಕ ಮತ್ತು ಪೋರಬಂದರ್) ಮತ್ತು ಗುಜರಾತ್ ನ ಕಚ್, ಪೋರಬಂದರ್, ಜುನಗಢ, ಜಾಮ್ ನಗರ್ ಜಿಲ್ಲೆಗಳಲ್ಲಿ ಚಂಡಮಾರುತ ಪ್ರತಿ ಗಂಟೆಗೆ 120-150 ಕಿ.ಮೀ. ವೇಗದಿಂದ 165 ಕಿ.ಮೀ. ವೇಗದಲ್ಲಿ ಸಾಗಲಿದೆ.

ಗೋವಾ, ಮಹಾರಾಷ್ಟ್ರದಲ್ಲಿ ಚಂಡಮಾರುತ

ಗೋವಾ, ಮಹಾರಾಷ್ಟ್ರದಲ್ಲಿ ಚಂಡಮಾರುತ

ಪಶ್ಚಿಮ ರಾಜಸ್ಥಾನ ಪ್ರದೇಶದಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಮೇ 18 ಮತ್ತು 19ರಂದು ಹಲವು ಒಳನಾಡು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆ ಮತ್ತು ಕೆಲ ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ. ಇದಕ್ಕೂ ಮೊದಲು ಮೇ 15ರಂದು ಬಿರುಗಾಳಿ ಕೇರಳದ ಕರಾವಳಿ ಉದ್ದಕ್ಕೂ ಪ್ರತಿ ಗಂಟೆಗೆ 50-60 ಕಿ.ಮೀ. ವೇಗದಿಂದ 70 ಕಿ.ಮೀ. ವೇಗದಲ್ಲಿ ಬೀಸಿದೆ. ಮೇ 15ರಂದು ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾ ಕರಾವಳಿ ಉದ್ದಕ್ಕೂ ಪ್ರತಿ ಗಂಟೆಗೆ 50-60 ಕಿ.ಮೀ. ವೇಗದಿಂದ 70 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿದೆ. ಇದಲ್ಲದೇ ಮೇ 16ರಂದು ಕೂಡಾ ಮಹಾರಾಷ್ಟ್ರ ಮತ್ತು ಗೋವಾ ಕರಾವಳಿ ಉದ್ದಕ್ಕೂ ಚಂಡಮಾರುತ ಪ್ರತಿ ಗಂಟೆಗೆ 60-70 ಕಿ.ಮೀ ನಿಂದ 80 ಕಿ.ಮೀ. ವೇಗದಲ್ಲಿ ಬೀಸಿದೆ.

ಸಮುದ್ರದ ಅಲೆಗಳಲ್ಲಿ ಹೇಗಿದೆ ಏರಿಳಿತದ ಪರಿಣಾಮ?

ಸಮುದ್ರದ ಅಲೆಗಳಲ್ಲಿ ಹೇಗಿದೆ ಏರಿಳಿತದ ಪರಿಣಾಮ?

* ಅರಬ್ಬೀ ಸಮುದ್ರದ ಆಗ್ನೇಯಕ್ಕೆ ಮತ್ತು ಹಿಂದೂ ಮಹಾಸಾಗರದ ಸಮಭಾಜಕ ಪ್ರದೇಶ ಹಾಗೂ ಲಕ್ಷದ್ವೀಪ - ಮಾಲ್ಡವೀಸ್ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸಮುದ್ರ ಸ್ಥಿತಿಗತಿ ಮುಂದಿನ ಆರು ಗಂಟೆಗಳ ಕಾಲ ತುಂಬಾ ಒರಟಾಗಿರಲಿದೆ.
* ಮೇ 15ರಂದು ಅರಬ್ಬೀ ಸಮುದ್ರದ ಪೂರ್ವ ಕೇಂದ್ರ ಭಾಗದಲ್ಲಿ ಸಮುದ್ರದ ಸ್ಥಿತಿಗತಿ ಗಂಭೀರವಾಗಿತ್ತು. ಮೇ 16ರಂದು ಸಾಧಾರಣವಾಗಿ ಕೂಡಿರಲಿದ್ದು, ಮೇ 17 ಮತ್ತು 18ರಂದು ಅರಬ್ಬೀ ಸಮುದ್ರದ ಈಶಾನ್ಯ ಭಾಗದಲ್ಲಿ ಪರಿಸ್ಥಿತಿ ಗಂಭೀರವಾಗಿರಲಿದೆ.
* ಮೇ 15ರಂದು ಕೇರಳದ ಕರಾವಳಿ ಉದ್ದಕ್ಕೂ ಮತ್ತು ಕೊಮೊರಿನ್ ಪ್ರದೇಶದಲ್ಲಿ ಸಮುದ್ರದ ಸ್ಥಿತಿಗತಿ ಒರಟಿನಿಂದ ತುಂಬಾ ಗಂಭೀರವಾಗಿರಲಿದೆ.
* ಕರ್ನಾಟಕದ ಕರಾವಳಿ ಉದ್ದಕ್ಕೂ ಹಾಗೂ ಅರಬ್ಬೀ ಸಮುದ್ರದ ಪೂರ್ವ ಕೇಂದ್ರ ಭಾಗದಲ್ಲಿ ಮೇ 15ರಂದು ಸಮುದ್ರದ ಸ್ಥಿತಿ ಒರಟಿನಿಂದ ಕೂಡಿತ್ತು.
* ಮಹಾರಾಷ್ಟ್ರ, ಗೋವಾ ಕರಾವಳಿ ಭಾಗದಲ್ಲೂ ಮೇ 15 ಮತ್ತು 16ರಂದು ಸಮುದ್ರದ ಸ್ಥಿತಿಗತಿ ಗಂಭೀರವಾಗಿತ್ತು. ಮೇ 17ರಂದು ಬೆಳಗ್ಗೆ ದಕ್ಷಿಣ ಗುಜರಾತ್ ನ ಕರಾವಳಿ ಮತ್ತು ಅರಬ್ಬೀ ಸಮುದ್ರದ ಈಶಾನ್ಯ ಭಾಗದಲ್ಲಿ ಸಮುದ್ರದ ಸ್ಥಿತಿ ತುಂಬಾ ಒರಟಿನಿಂದ ಕೂಡಿದಂತೆ ಗಂಭೀರವಾಗಿರಲಿದೆ. ಮೇ 18ರಂದು ಬೆಳಗ್ಗೆ ಗಂಭೀರದಿಂದ ಅಸಾಧಾರಣದಿಂದ ಕೂಡಿರಲಿದೆ.

ಕರಾವಳಿಯಲ್ಲಿ ಬಿರುಗಾಳಿ ಭೀತಿ

ಕರಾವಳಿಯಲ್ಲಿ ಬಿರುಗಾಳಿ ಭೀತಿ

ಮೊರ್ಬಿ, ಕಚ್, ದೇವಭೂಮಿ ದ್ವಾರಕ ಮತ್ತು ಜಾಮ್ ನಗರ ಜಿಲ್ಲೆಗಳ ಕರಾವಳಿ ಪ್ರದೇಶಗಳಲ್ಲಿ ಸಮುದ್ರದ ಅಲೆಗಳ ಎತ್ತರ 2 ರಿಂದ 3 ಮೀಟರ್ ಮೇಲೇರುವುದರಿಂದ ಮುಳುಗಡೆ ಭೀತಿ ಎದುರಾಗಿದೆ. ಪೋರಬಂದರ್, ಜುನಾಗಢ್, ಗಿರ್ ಸೋಮನಾಥ್, ಅಮ್ರೇಲಿ, ಭವನಗರ್ ಗಳಲ್ಲಿ ಅಲೆ 1-2 ಮೀಟರ್ ಹಾಗೂ ಗುಜರಾತಿನ ಉಳಿದ ಕರಾವಳಿ ಜಿಲ್ಲೆಗಳಲ್ಲಿ ಅಲೆಗಳು 0.5 ನಿಂದ 1 ಮೀಟರ್ ಎತ್ತರಕ್ಕೆ ಏರುವ ಅಪಾಯವಿದೆ.

ಮೀನುಗಾರರಿಗೆ ಎಚ್ಚರಿಕೆ ಸಂದೇಶ ರವಾನೆ

ಮೀನುಗಾರರಿಗೆ ಎಚ್ಚರಿಕೆ ಸಂದೇಶ ರವಾನೆ

*ಅರಬ್ಬೀ ಸಮುದ್ರದ ಆಗ್ನೇಯಕ್ಕೆ ಹೊಂದಿಕೊಂಡಿರುವ ಪೂರ್ವ ಪ್ರದೇಶಗಳು ಮತ್ತು ಕೇರಳ-ಕರ್ನಾಟಕ-ಗೋವಾ-ಮಹಾರಾಷ್ಟ್ರ ಕರಾವಳಿ ಉದ್ದಕ್ಕೂ ಮೀನುಗಾರಿಕೆಯನ್ನು ಸಂಪೂರ್ಣ ರದ್ದುಪಡಿಸಲಾಗಿದೆ.
* ಮೇ 17ರಿಂದ ಗುಜರಾತಿನ ಕರಾವಳಿ ಉದ್ದಕ್ಕೂ ಹಾಗೂ ಅರಬ್ಬೀ ಸಮುದ್ರದ ಈಶಾನ್ಯ ಭಾಗದಲ್ಲಿ ಮೀನುಗಾರಿಕೆ ಕಾರ್ಯಾಚರಣೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
* ಅರಬ್ಬೀ ಸಮುದ್ರದ ಆಗ್ನೇಯ, ಲಕ್ಷದ್ವೀಪ, ಮಾಲ್ಡೀವ್ಸ್ ಪ್ರದೇಶ, ಅರಬ್ಬೀ ಸಮುದ್ರದ ಪೂರ್ವ ಕೇಂದ್ರ ಪ್ರದೇಶ ಮತ್ತು ಕರ್ನಾಟಕದ ಕರಾವಳಿ ಉದ್ದಕ್ಕೂ ಅರಬ್ಬೀ ಸಮುದ್ರದ ಪೂರ್ವ ಕೇಂದ್ರ ಹಾಗೂ ಮಹಾರಾಷ್ಟ್ರ, ಗೋವಾ - ಕರಾವಳಿ ಉದ್ದಕ್ಕೂ ಹಾಗೂ ಅರಬ್ಬೀ ಸಮುದ್ರ ಹಾಗೂ ಗುಜರಾತಿನ ಕರಾವಳಿಯ ಈಶಾನ್ಯ ಭಾಗಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಮೇ 18ರ ವರೆಗೆ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ.
* ಅರಬ್ಬೀ ಸಮುದ್ರದ ಉತ್ತರದಲ್ಲಿ ಸಮುದ್ರಕ್ಕಿಳಿದು ಮೀನುಗಾರಿಕೆಯಲ್ಲಿ ತೊಡಗಿರುವವರಿಗೆ ಕಡಲ ತೀರಕ್ಕೆ ಮರಳುವಂತೆ ಸೂಚನೆ ನೀಡಲಾಗಿದೆ.

ಗುಜರಾತಿನಲ್ಲಿ ತೀವ್ರ ಹಾನಿ ಸಂಭವಿಸುವ ಮುನ್ಸೂಚನೆ

ಗುಜರಾತಿನಲ್ಲಿ ತೀವ್ರ ಹಾನಿ ಸಂಭವಿಸುವ ಮುನ್ಸೂಚನೆ

* ಚಂಡಮಾರುತದ ಪರಿಣಾಮ ಗುಜರಾತಿನ ದೇವಭೂಮಿ, ದ್ವಾರಕ, ಕಚ್, ಪೋರಬಂದರ್, ಜುನಾಗಢ, ಗಿರ್ ಸೋಮನಾಥ್ ಹಾಗೂ ಜಾಮ್ ನಗರ್ ಜಿಲ್ಲೆಗಳಲ್ಲಿ ಹಾನಿ ಉಂಟಾಗುವ ಭೀತಿ ಎದುರಾಗಿದೆ. ತಾತ್ಕಾಲಿಕ ಮನೆಗಳು ಸಂಪೂರ್ಣ ಹಾಳಾಗಲಿದ್ದು, ಶಾಶ್ವತ ಮನೆಗಳಿಗೆ ಭಾರೀ ಹಾನಿಯಾಗುವ ಅಪಾಯವಿದೆ.
* ವಿದ್ಯುತ್ ಮತ್ತು ಸಂವಹನ ಕಂಬಗಳು ಬಾಗುವುದು ಅಥವಾ ಬುಡಮೇಲಾಗಬಹುದು.
* ಕಚ್ಚಾ ಮತ್ತು ಪಕ್ಕಾ ರಸ್ತೆಗಳಿಗೆ ಹೆಚ್ಚು ಹಾನಿಯಾಗಲಿದೆ. ರೈಲ್ವೆ ಮಾರ್ಗ, ಮೇಲ್ಭಾಗದ ವಿದ್ಯುತ್ ತಂತಿಗಳು ಹಾಗೂ ಸಿಗ್ನಲಿಂಗ್ ವ್ಯವಸ್ಥೆಗೆ ಸ್ವಲ್ಪಮಟ್ಟಿಗೆ ಅಡಚಣೆಯಾಗುವ ಸಾಧ್ಯತೆಯಿದೆ.
* ಉಪ್ಪು ತಯಾರಿಕಾ ಕೇಂದ್ರಗಳು, ಬೆಳೆದು ನಿಂತಿರುವ ಬೆಳೆಗಳು ಮತ್ತು ಪೊದೆಯಾಕಾರದ ಮರಗಳಿಗೆ ವ್ಯಾಪಕ ಹಾನಿಯಾಗಲಿದೆ.
* ಸಣ್ಣ ದೋಣಿಗಳು, ನಾಡ ದೋಣಿಗಳಿಗೆ ಹಾನಿಯಾಗಬಹುದು.
ಗುಜರಾತಿನ ಅಮ್ರೇಲಿ, ರಾಜಕೋಟ್ ಮತ್ತು ಮೊರ್ಬಿ ಜಿಲ್ಲೆಗಳಲ್ಲಿ ಆಗಲಿರುವ ಹಾನಿ ಅಂದಾಜು:
* ತಾತ್ಕಾಲಿಕ ಮನೆಗಳು ಮತ್ತು ಗುಡಿಸಲುಗಳಿಗೆ ಸಂಪೂರ್ಣ ಹಾನಿಯಾಗಲಿದೆ. ಮೇಲ್ಛಾವಣಿಗಳು ಹಾರಿ ಹೋಗಬಹುದು, ಕಟ್ಟಿಲ್ಲದ ಲೋಹದ ಶೀಟ್ ಹಾರಿ ಹೋಗಬಹುದು.
* ವಿದ್ಯುತ್ ಹಾಗೂ ಸಂವಹನ ಕಂಬಗಳಿಗೆ ಅಲ್ಪ ಹಾನಿ
* ಕಚ್ಚಾ ರಸ್ತೆಗಳಿಗೆ ಹೆಚ್ಚು ಹಾನಿ, ಪಕ್ಕಾ ರಸ್ತೆಗಳಿಗೆ ಕಡಿಮೆ ಹಾನಿಯಾಗುತ್ತದೆ.
* ಮರಗಳು ಉರುಳಲಿದ್ದು, ಕೆಲವು ಮರ ಬುಡಮೇಲಾಗಲಿವೆ. ಬಾಳೆ ಮತ್ತು ಪಪ್ಪಾಯ ಗಿಡಗಳಿಗೆ ಸಾಧಾರಣ ಹಾನಿಯಾಗಲಿದೆ. ಕಡಲ ತೀರದ ಬೆಳೆಗಳಿಗೆ ಸಂಪೂರ್ಣ ಹಾನಿಯಾಗಲಿದೆ.
* ಉಪ್ಪು ತಯಾರಿಕಾ ಕೇಂದ್ರಗಳು/ಒಡ್ಡುಗಳಿಗೆ ಹಾನಿಯಾಗಲಿದೆ.

ಕರಾವಳಿ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮ

ಕರಾವಳಿ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮ

* ಮೀನುಗಾರಿಕಾ ಕಾರ್ಯಾಚರಣೆಗಳನ್ನು ಸಂಪೂರ್ಣ ಸ್ಥಗಿತ.
* ರೈಲು ಮತ್ತು ರಸ್ತೆ ಸಂಚಾರ ನ್ಯಾಯಯುತ ನಿರ್ಬಂಧ.
*ಬಾಧಿತ ಪ್ರದೇಶಗಳ ಜನರು ಮನೆಯೊಳಗೇ ಇರಬೇಕು.
* ಮೋಟಾರು ಬೋಟ್ ಹಾಗೂ ಸಣ್ಣ ಹಡಗುಗಳ ಸಂಚಾರ ಸುರಕ್ಷಿತವಲ್ಲ.

English summary
Cyclone Tauktae Affected West Coastal Of Gujrat In Next 48 Hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X