ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Cyclone Mandous : ಚಂಡಮಾರುತ: ಚೆನ್ನೈನಲ್ಲಿ ಸಹಾಯವಾಣಿ, ಪುನರ್ವಸತಿ ಕೇಂದ್ರಗಳ ಸ್ಥಾಪನೆ

|
Google Oneindia Kannada News

ಚೆನ್ನೈ, ಡಿ. 09: ಮಾಂಡೌಸ್ ಚಂಡಮಾರುತದ ಹಿನ್ನೆಲೆ ಚೆನ್ನೈನಲ್ಲಿ ಭಾರೀ ಮಳೆಯಾಗಲಿದ್ದು, ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಸಹಾಯವಾಣಿಗಳನ್ನು ತೆರೆಯಲಾಗಿದ್ದು, ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಜನರು ಚೆನ್ನೈನ ಬೀಚ್‌ಗಳ ಬಳಿ ಹೋಗದಂತೆ ಚೆನ್ನೈ ಕಾರ್ಪೊರೇಷನ್ ಮನವಿ ಮಾಡಿದೆ. ಮಾಂಡೌಸ್ ಚಂಡಮಾರುತದ ಕಾರಣ ಭಾರೀ ಮಳೆಯನ್ನು ಉಲ್ಲೇಖಿಸಿ ಎಲ್ಲಾ ಕಾರ್ಪೊರೇಷನ್ ಪಾರ್ಕ್‌ಗಳನ್ನು ಮುಚ್ಚಿದೆ. ಮುಂದಿನ ಘೋಷಣೆಯವರೆಗೂ ಚೆನ್ನೈನಾದ್ಯಂತ ಉದ್ಯಾನವನಗಳು ಮತ್ತು ಆಟದ ಮೈದಾನಗಳನ್ನು ಮುಚ್ಚಲಾಗುವುದು ಎಂದು ಕಾರ್ಪೊರೇಷನ್ ಘೋಷಿಸಿದೆ.

ಮಾಂಡೌಸ್ ಚಂಡಮಾರುತ: ತಮಿಳುನಾಡು, ಆಂಧ್ರ, ಪುದುಚೇರಿಗೆ IMD ಮಳೆ, ಗಾಳಿ ಎಚ್ಚರಿಕೆಮಾಂಡೌಸ್ ಚಂಡಮಾರುತ: ತಮಿಳುನಾಡು, ಆಂಧ್ರ, ಪುದುಚೇರಿಗೆ IMD ಮಳೆ, ಗಾಳಿ ಎಚ್ಚರಿಕೆ

ಮಾಂಡೌಸ್ ಚಂಡಮಾರುತದಿಂದ ಬಲವಾದ ಗಾಳಿ ಬೀಸುವುದರಿಂದ ಭೂಕುಸಿತ ಉಂಟಾಗುವ ಸಾಧ್ಯತೆಯಿರುವುದರಿಂದ, ಕುಸಿತವನ್ನು ತಪ್ಪಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ನಗರದಲ್ಲಿ ಅಳವಡಿಸಲಾದ ಎಲ್ಲಾ ಬ್ಯಾನರ್‌ಗಳನ್ನು ತೆಗೆದುಹಾಕಲು ನಿಗಮದ ಅಧಿಕಾರಿಗಳು ನಿರ್ದೇಶನಗಳನ್ನು ನೀಡಿದ್ದಾರೆ.

ತಗ್ಗು ಪ್ರದೇಶದಲ್ಲಿ ನೀರು ಎತ್ತಲು 805 ಮೋಟಾರ್‌ಗಳು

ತಗ್ಗು ಪ್ರದೇಶದಲ್ಲಿ ನೀರು ಎತ್ತಲು 805 ಮೋಟಾರ್‌ಗಳು

ತಗ್ಗು ಪ್ರದೇಶಗಳಲ್ಲಿ ನಿಲ್ಲುವ ನೀರನ್ನು ಪಂಪ್ ಮಾಡಲು ಜಿಸಿಸಿ 805 ಮೋಟಾರ್‌ಗಳನ್ನು ನಿಯೋಜಿಸಲಾಗಿದೆ. ನಗರದಾದ್ಯಂತ 169 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮರದ ದಿಮ್ಮಿಗಳನ್ನು ತೆಗೆಯಲು 45 ಜೆಸಿಬಿ ಟ್ರಕ್‌ಗಳು ಮತ್ತು 115 ಟಿಪ್ಪರ್ ಲಾರಿಗಳ ಜೊತೆಗೆ ಹೈಡ್ರಾಲಿಕ್ ಮತ್ತು ಎಲೆಕ್ಟ್ರಿಕ್ ಗರಗಸಗಳ ವ್ಯವಸ್ಥೆ ಮಾಡಲಾಗಿದೆ.

ಪ್ರಸ್ತುತ ನೈಋತ್ಯ ಬಂಗಾಳ ಕೊಲ್ಲಿಯ ಮೇಲಿರುವ ಮಾಂಡೌಸ್ ಚಂಡಮಾರುತವು ಕಳೆದ ಆರು ಗಂಟೆಗಳಲ್ಲಿ ಗಂಟೆಗೆ 13 ಕಿಮೀ ವೇಗದಲ್ಲಿ ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸಿದೆ.

ಡಿಸೆಂಬರ್ 9 ರಂದು ಬೆಳಗ್ಗೆ ಬಿಡುಗಡೆಯಾದ ಹೇಳಿಕೆಯ ಪ್ರಕಾರ, ಮಾಂಡೌಸ್ ಚಂಡಮಾರುತ ಉತ್ತರ ತಮಿಳುನಾಡು, ಪುದುಚೇರಿ ಮತ್ತು ಪಕ್ಕದ ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಕಡೆಗೆ ಸಾಗುತ್ತದೆ. ಡಿಸೆಂಬರ್ 9 ರ ಮಧ್ಯರಾತ್ರಿ ಮತ್ತು ಡಿಸೆಂಬರ್ 10 ರ ಮುಂಜಾನೆ 85 ಕಿಮೀ ಗಂಟೆಗೆ ಹೆಚ್ಚಾಗುವ ನಿರೀಕ್ಷೆಯಿದೆ.

ಚೆನ್ನೈ ಸಹಾಯವಾಣಿ ಸಂಖ್ಯೆಗಳು ಹೀಗಿವೆ

ಚೆನ್ನೈ ಸಹಾಯವಾಣಿ ಸಂಖ್ಯೆಗಳು ಹೀಗಿವೆ

ಇನ್ನು, ಮಾಂಡೌಸ್ ಚಂಡಮಾರುತದ ಹಿನ್ನೆಲೆ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ದೂರುಗಳನ್ನು ನೋಂದಾಯಿಸಲು ಮತ್ತು ಸಹಾಯ ಪಡೆಯಲು, ಜನರು ಸಹಾಯವಾಣಿ ಸಂಖ್ಯೆ 1913, 044-2561 9206. 044-2561 9207 ಮತ್ತು 044-2561 9208 ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಜನರು ಸಹಾಯ ಪಡೆಯಲು 9445477205 ಗೆ ವಾಟ್ಸಾಪ್ (WhatsApp) ಸಂದೇಶಗಳನ್ನು ಕಳುಹಿಸಬಹುದು.

ತಮಿಳುನಾಡಿನಲ್ಲಿ ಭಾರೀ ಮಳೆಯ ಎಚ್ಚರಿಕೆ

ತಮಿಳುನಾಡಿನಲ್ಲಿ ಭಾರೀ ಮಳೆಯ ಎಚ್ಚರಿಕೆ

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ಕಾಂಚೀಪುರಂ, ಚೆಂಗಲ್ಪಟ್ಟು ಮತ್ತು ವಿಲ್ಲುಪುರಂ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಚೆನ್ನೈ, ತಿರುವಳ್ಳೂರು, ರಾಣಿಪೇಟ್, ವೆಲ್ಲೂರು, ತಿರುಪತ್ತೂರ್, ತಿರುವಣ್ಣಾಮಲೈ, ಕಲ್ಲಕುರಿಚಿ ಮತ್ತು ಕಡಲೂರುಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ರಾಜ್ಯದ ಹಲವು ಡೆಲ್ಟಾ ಜಿಲ್ಲೆಗಳು ಹಾಗೂ ಪಶ್ಚಿಮ ಭಾಗದ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಧರ್ಮಪುರಿ, ಸೇಲಂ, ನಾಮಕ್ಕಲ್, ಕರೂರ್, ತಿರುಚಿರಾಪಳ್ಳಿ, ಪೆರಂಬಲೂರ್, ಅರಿಯಲೂರ್, ಮೈಲಾದುರೈ, ಕಾರೈಕಾಲ್, ನಾಗಪಟ್ಟಿಣಂ, ತಿರುವರೂರ್, ತಂಜಾವೂರು, ಪುದುಕೊಟ್ಟೈ, ಶಿವಗಂಗಾ, ಮಧುರೈ ಮತ್ತು ದಿಂಡಿಗಲ್ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.

ತಮಿಳುನಾಡಿನಲ್ಲಿ 12 ಎನ್‌ಡಿಆರ್‌ಎಫ್ ತಂಡ

ತಮಿಳುನಾಡಿನಲ್ಲಿ 12 ಎನ್‌ಡಿಆರ್‌ಎಫ್ ತಂಡ

ಕಾವೇರಿ ಡೆಲ್ಟಾ ಪ್ರದೇಶದ ನಾಗಪಟ್ಟಿಣಂ ಮತ್ತು ತಂಜಾವೂರು ಸೇರಿದಂತೆ 10 ಜಿಲ್ಲೆಗಳಲ್ಲಿ, ಚೆನ್ನೈ, ಅದರ ಮೂರು ನೆರೆಯ ಜಿಲ್ಲೆಗಳು ಮತ್ತು ಕಡಲೂರು ಪ್ರದೇಶಗಳಲ್ಲಿ ತಮಿಳುನಾಡು ಸರ್ಕಾರವು ರಾಜ್ಯದಲ್ಲಿ 12 ರಕ್ಷಣಾ ತಂಡಗಳನ್ನು ನಿಯೋಜಿಸಿದೆ. ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ಸುಮಾರು 400 ಸಿಬ್ಬಂದಿ ಈ ತಂಡದಲ್ಲಿರಲಿದ್ದಾರೆ.

ತಮಿಳುನಾಡಿನ 26 ಜಿಲ್ಲೆಗಳಲ್ಲಿ ಶುಕ್ರವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಚೆನ್ನೈ ವಿಮಾನ ನಿಲ್ದಾಣದಿಂದ ಏಳು ವಿಮಾನಗಳನ್ನು ರದ್ದುಗೊಳಿಸಲಾಗಿದೆ.

*ಬೆಂಗಳೂರಿನಲ್ಲೂ ಮಳೆ*

ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪ್ರಭಾವದಿಂದಾಗಿ ಡಿಸೆಂಬರ್ 9 ರಿಂದ ಡಿಸೆಂಬರ್ 13 ರವರೆಗೆ ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಡಿಸೆಂಬರ್ 9 ಶುಕ್ರವಾರದಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಡಿಸೆಂಬರ್ 13 ರವರೆಗೆ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಕೊಡಗು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಹಳದಿ ಎಚ್ಚರಿಕೆ ನೀಡಲಾಗಿದೆ.

English summary
Cyclone Mandous: Greater Chennai Corporation (GCC) asks Chennai people to don't go near beaches, and it closed parks and playgrounds. it issued helpline numbers. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X