ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜವಾದ್ ಚಂಡಮಾರುತ: ಪುರಿಯಲ್ಲಿ ಭೂಕುಸಿತ ಸಾಧ್ಯತೆ

|
Google Oneindia Kannada News

ಭುವನೇಶ್ವರ, ಡಿಸೆಂಬರ್ 6: ಜವಾದ್ ಚಂಡಮಾರುತ ಪೂರ್ವ ಕರಾವಳಿಯನ್ನು ತಲುಪುವ ಮೊದಲು ದುರ್ಬಲಗೊಂಡಿದ್ದರಿಂದ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಇದು ಭಾನುವಾರ ಮಧ್ಯಾಹ್ನ ಒಡಿಶಾದ ಪುರಿ ತಲುಪುವ ವೇಳೆಗೆ ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆಯಿದೆ. ಆದರೆ, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಪುರಿಯಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಮುದ್ರ ತೀರದಲ್ಲಿ ವಾಸಿಸುವ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 64 ತಂಡಗಳು ಘಟನೆಯನ್ನು ನಿಭಾಯಿಸಲು ಸಿದ್ಧವಾಗಿವೆ. ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ಚಂಡಮಾರುತ ಪೀಡಿತ ಹವಾಮಾನದ ಪರಿಣಾಮವಾಗಿ ಮರವೊಂದು ಉರುಳಿಬಿದ್ದು ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿರುವುದು ವರದಿಯಾಗಿದೆ.

ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಜವಾದ್ ಚಂಡಮಾರುತ ಕಳೆದ ಆರು ಗಂಟೆಗಳಲ್ಲಿ ಗಂಟೆಗೆ 9 ಕಿಮೀ ವೇಗದಲ್ಲಿ ಉತ್ತರದ ಕಡೆಗೆ ಚಲಿಸಿದೆ ಎಂದು IMD ಬುಲೆಟಿನ್ ತಿಳಿಸಿದೆ. ಪೂರ್ವ-ಆಗ್ನೇಯ ವಿಶಾಖಪಟ್ಟಣಂ (ಆಂಧ್ರಪ್ರದೇಶ)ನಲ್ಲಿ ಗಂಟೆಗೆ 180 ಕಿಮೀ ವೇಗದಲ್ಲಿ ಗಾಳಿ ಬೀಸಿದೆ. 260 ಕಿಮೀ ವೇಗದಲ್ಲಿ ದಕ್ಷಿಣಕ್ಕೆ ಗೋಪಾಲಪುರ (ಒಡಿಶಾ), 330 ಕಿಮೀ ವೇಗದಲ್ಲಿ ದಕ್ಷಿಣ-ನೈಋತ್ಯ ಪುರಿ (ಒಡಿಶಾ) ಮತ್ತು 420 ಕಿಮೀ ವೇಗದಲ್ಲಿ ದಕ್ಷಿಣ-ನೈಋತ್ಯ ಪಾರಾದೀಪ್ (ಒಡಿಶಾ)ದಲ್ಲಿ ಗಾಳಿ ಬೀಸಿದೆ. ಇದು ಶನಿವಾರ ಸಂಜೆ 5.30 ಕ್ಕೆ ಪಶ್ಚಿಮ-ಬಂಗಾಳ ಕೊಲ್ಲಿಯಲ್ಲಿ ಕೇಂದ್ರೀಕೃತವಾಗಿ ದುರ್ಬಲವಾಗಿದೆ. ಜವಾದ್ ಚಂಡಮಾರುತ ಉತ್ತರ-ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ. ಭಾನುವಾರ ಬೆಳಿಗ್ಗೆ ದುರ್ಬಲಗೊಳ್ಳಲ್ಲಿದ್ದು ಮಧ್ಯಾಹ್ನ ಪುರಿಯಲ್ಲಿ ಭೂಕುಸಿತವಾಗುವ ನಿರೀಕ್ಷೆ ಇದೆ.

"ಒಡಿಶಾದ ಒಳಭಾಗದ ಮೇಲೆ ಚಂಡಮಾರುತದ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ನಾವು ರೆಡ್ ಅಲರ್ಟ್‌ ನಿಂದ ಎಲ್ಲೋ ಅಲರ್ಟ್‌ಗೆ ಡೌನ್‌ಗ್ರೇಡ್ ಮಾಡಿದ್ದೇವೆ. ಆದರೆ ಕರಾವಳಿಯ ಕೆಲವು ಜಿಲ್ಲೆಗಳಾದ ಗಂಜಾಂ, ಗಜಪತಿ, ಜಗತ್‌ಸಿಂಗ್‌ಪುರ ಮತ್ತು ಪುರಿಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ" ಎಂದು ಭುವನೇಶ್ವರ ಮೂಲದ ಹವಾಮಾನ ವಿಜ್ಞಾನಿ ಉಮಾಶಂಕರ್ ದಾಶ್ ತಿಳಿಸಿದರು. ಭಾನುವಾರ ಬೆಳಗ್ಗೆ ಒಡಿಶಾದ ಪುರಿಯಲ್ಲಿ ನಿರಂತರ ತುಂತುರು ಮಳೆ ಮತ್ತು ಗಾಳಿಯ ವೇಗದಲ್ಲಿ ಹೆಚ್ಚಳ ಕಂಡಿದೆ. ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

Cyclone Javad: Possibility of landslides in Puri

ಉತ್ತರ ಮತ್ತು ದಕ್ಷಿಣದ, ಪುರ್ಬಾ ಮತ್ತು ಪಶ್ಚಿಮ ಮೇದಿನಿಪುರ್, ಝಾರ್ಗ್ರಾಮ್, ಹೌರಾ, ಹೂಗ್ಲಿ ಜಿಲ್ಲೆಗಳಲ್ಲಿ ಮತ್ತು ಪಶ್ಚಿಮ ಬಂಗಾಳದ ಹೌರಾ ನಗರದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. "ಗಂಗಾನದಿಯ ಪಶ್ಚಿಮ ಬಂಗಾಳದ ಉಳಿದ ಜಿಲ್ಲೆಗಳ ಹಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ" ಎಂದು ಹವಾಮಾನ ಇಲಾಖೆಯ ಬುಲೆಟಿನ್ ಕೋಲ್ಕತ್ತಾದಲ್ಲಿ ತಿಳಿಸಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಮೇಲೆ 'ಜವಾದ್' ಚಂಡಮಾರುತ ಪರಿಣಾಮ ಬೀರುವ ನಿರೀಕ್ಷೆಯಿಂದ 64 ತಂಡಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದೆ. ಒಂದು NDRF ತಂಡವು ಸುಮಾರು 30 ಸಿಬ್ಬಂದಿಗಳನ್ನು ಹೊಂದಿದ್ದು ಈ ತಂಡ ಕಟ್ಟರ್‌ಗಳು, ಬೇರುಸಹಿತ ಮರಗಳನ್ನು ಕತ್ತರಿಸಲು ವಿದ್ಯುತ್ ಗರಗಸಗಳು, ಗಾಳಿ ತುಂಬಬಹುದಾದ ದೋಣಿ ಮತ್ತು ಇತರ ಕೆಲವು ಪರಿಹಾರ ಮತ್ತು ರಕ್ಷಣಾ ಗ್ಯಾಜೆಟ್‌ಗಳನ್ನು ಹೊಂದಿದ್ದಾರೆ. ಜೊತೆಗೆ ಭಾರತೀಯ ಕೋಸ್ಟ್ ಗಾರ್ಡ್ ಮತ್ತು ನೌಕಾಪಡೆಯು ಪರಿಹಾರ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಹಡಗುಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ.

ಎನ್‌ಡಿಆರ್‌ಎಫ್ ಮಹಾನಿರ್ದೇಶಕ (ಡಿಜಿ) ಅತುಲ್ ಕರ್ವಾಲ್ ಮಾತನಾಡಿ, ದುರ್ಬಲ ರಾಜ್ಯಗಳಲ್ಲಿ 46 ತಂಡಗಳನ್ನು ನಿಯೋಜಿಸಲಾಗಿದೆ. 18 ತಂಡಗಳನ್ನು ಮೀಸಲು ಇರಿಸಲಾಗಿದೆ. ಪೀಡಿತ ರಾಜ್ಯಗಳು ಮತ್ತು ನಾಗರಿಕರಿಗೆ ಸಹಾಯ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪರಿಸ್ಥಿತಿಯನ್ನು ನಿಭಾಯಿಸುವ ವಿಶ್ವಾಸ ನಮಗಿದೆ ಎಂದು ಅವರು ಹೇಳಿದರು. ಚಂಡಮಾರುತದ ಎಚ್ಚರಿಕೆಯ ದೃಷ್ಟಿಯಿಂದ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್‌ಸಿಎಂಸಿ), ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿ ಮತ್ತು ಇತರ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ ಎಂದು ಎನ್‌ಡಿಆರ್‌ಎಫ್ ಮುಖ್ಯಸ್ಥರು ತಿಳಿಸಿದ್ದಾರೆ.

English summary
Odisha, West Bengal and Andhra Pradesh breathed a sigh of relief as cyclonic storm Jawad weakened into a deep depression before reaching the east coast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X