ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶಾಖಪಟ್ಟಣಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ

|
Google Oneindia Kannada News

ವಿಶಾಖಪಟ್ಟಣ, ಅ.13: ಹುಡ್ ಹುಡ್ ಹಾವಳಿಗೆ ತತ್ತರಿಸಿರುವ ಆಂಧ್ರಪ್ರದೇಶದ ಮತ್ತು ವಿಶಾಖಪಟ್ಟಣಕ್ಕೆ ಅಕ್ಟೋಬರ್ 14ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ವಿಶಾಖಪಟ್ಟಣ ಸಂಪೂರ್ಣ ನುಜ್ಜುಗುಜ್ಜಾಗಿದೆ. ಭಾನುವಾರ ಅಪ್ಪಳಿಸಿದ ಹುಡ್‌ಹುಡ್‌ ಹಾವಳಿಗೆ ಜನರ ಜೀವನ ಅಸ್ತವ್ಯಸ್ತವಾಗಿದ್ದು, ಅನೇಕ ಮರಗಳು ಧರೆಗುರುಳಿವೆ. ಸುಮುದ್ರ ತೀರದ ಮನೆಗಳು ಹಾನಿಗೊಳಗಾಗಿವೆ.

ನಿಗದಿತ ಸಮಯಕ್ಕೆ ಸರಿಯಾಗಿ ಆಂಧ್ರದ ಗಡಿ ದಾಟಿರುವ ಚಂಡಮಾರುತದ ವೇಗ ಒರಿಸ್ಸಾದಲ್ಲಿ ಕಡಿಮೆಯಾಗಲಿದೆಯಾದರೂ ಮಳೆ ಸುರಿಸುತ್ತಿದೆ. ಈ ನಡುವೆ ದಕ್ಷಿಣ ಒಳನಾಡಿನಲ್ಲಿ ಮಧ್ಯಮ ಪ್ರಮಾಣದ ಮಳೆಯಾಗಲಿದ್ದು, ಹೆಚ್ಚಿನ ಆತಂಕ ಪಡುವ ಅಗತ್ಯವಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.[ಹುಡ್ ಹುಡ್ ಅಬ್ಬರವಾಯ್ತು ಜೋರು ಮಳೆಗೆ ಸಜ್ಜಾಗಿ!]

ಮಳೆ ಮತ್ತು ಗಾಳಿಯ ಪ್ರಭಾವ ಕಡಿಮೆಯಾಗಿದೆ. ಇಲ್ಲಿಯವರೆಗೆ 10 ಸಾವಿರ ಕೋಟಿ ರೂ. ನಷ್ವಾಗಿದೆ ಎಂದು ಹೇಳಲಾಗಿದೆ.

ವಿಶಾಖಪಟ್ಟಣ ಮತ್ತು ಆಂಧ್ರಪ್ರದೇಶವನ್ನು ತತ್ತರಿಸುವಂತೆ ಮಾಡಿದ 'ಹುಡ್‌ಹುಡ್‌' ಚಂಡಮಾರುತದ ವಿಕೋಪದ ಚಿತ್ರಗಳು...

ಅಲ್ಲೋಲ ಕಲ್ಲೋಲ

ಅಲ್ಲೋಲ ಕಲ್ಲೋಲ

ಅಲೆಗಳ ಹೊಡೆತ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸೂಚನೆ ನೀಡಿತ್ತು.

ಮುನ್ನುಗ್ಗಿದ ನೀರು

ಮುನ್ನುಗ್ಗಿದ ನೀರು

ಸಮುದ್ರ ತೀರದಲ್ಲಿ ಮುನ್ನುಗ್ಗಿದ ನೀರು.

ಸುನಾಮಿಗೇನೂ ಕಡಿಮೆಯಿಲ್ಲ

ಸುನಾಮಿಗೇನೂ ಕಡಿಮೆಯಿಲ್ಲ

ಅಲೆಗಳ ಗಾತ್ರ ಸುಮಾರು ಆರು ಅಡಿಗಳಷ್ಟಿತ್ತು.

ಅಲೆಗಳ ಆರ್ಭಟ

ಅಲೆಗಳ ಆರ್ಭಟ

ಹುಡ್‌ ಹುಡ್‌ ಚಂಡಮಾರುತ ಅಪ್ಪಳಿಸುವ ಮುನ್ನ ಕಾಣಿಸಿಕೊಂಡ ಅಲೆಗಳು.

ದಾರಿ ಕಾಣದಾಗಿದೆ

ದಾರಿ ಕಾಣದಾಗಿದೆ

ಮಳೆಯ ರಭಸಕ್ಕೆ ಸಿಲುಕಿ ಮನೆಯ ದಾರಿ ಎತ್ತ ಎಂದು ಹುಡುಕುತ್ತಿರುವ ಮಹಿಳೆ.

ಉರುಳಿಬಿದ್ದ ಆಟೊ

ಉರುಳಿಬಿದ್ದ ಆಟೊ

ಮಳೆ ರಭಸಕ್ಕೆ ಸಿಲುಕಿ ರಸ್ತೆಯಲ್ಲೇ ಉರುಳಿಬಿದ್ದ ಆಟೊ.

ತಡೆಗೋಡೆ ಸಾಕಾಗಲ್ಲ

ತಡೆಗೋಡೆ ಸಾಕಾಗಲ್ಲ

ಸಮುದ್ರದ ತಡೆಗೋಡೆಯನ್ನು ಮೀರಿ ತೀರಕ್ಕೆ ಅಪ್ಪಳಿಸುತ್ತಿದ್ದ ಅಲೆಗಳು.

ಹಾರಿಹೋದ ಮೇಲ್ಛಾವಣಿ

ಹಾರಿಹೋದ ಮೇಲ್ಛಾವಣಿ

ಗಾಳಿ ಮಳೆ ಹೊಡೆತಕ್ಕೆ ಸಿಲುಕಿ ಮನೆಯ ಮೇಲ್ಛಾವಣಿ ಹಾರಿಹೋಗಿರುವುದು.

ಬಿರುಗಾಳಿ ಹೊಡೆತ

ಬಿರುಗಾಳಿ ಹೊಡೆತ

ಜೋರಾಗಿ ಬೀಸಿದ ಗಾಳಿ.

 ಕಾರು ಪುಡಿಪುಡಿ

ಕಾರು ಪುಡಿಪುಡಿ

ಕಾರಿನ ಮೇಲೆ ಉರುಳಿಬಿದ್ದ ಮರ.

ಪರಿಹಾರ ಕಾರ್ಯಕ್ಕೆ ಸೈನಿಕರ ಸಿದ್ಧತೆ

ಪರಿಹಾರ ಕಾರ್ಯಕ್ಕೆ ಸೈನಿಕರ ಸಿದ್ಧತೆ

ನಿರಾಶ್ರಿತರ ರಕ್ಷಣೆಗೆ ಸಿದ್ಧವಾಗಿರುವ ಸೈನ್ಯಪಡೆ.

ಸಮುದ್ರ ತೀರಕ್ಕೆ ಅಪ್ಪಳಿಸಿದ ಸೈಕ್ಲೋನ್‌

ಸಮುದ್ರ ತೀರಕ್ಕೆ ಅಪ್ಪಳಿಸಿದ ಸೈಕ್ಲೋನ್‌

ಸಮುದ್ರ ತೀರಕ್ಕೆ ಅಪ್ಪಳಿಸಿದ ಹುಡ್‌ ಹುಡ್‌ ಹೊಡೆತಕ್ಕೆ ನಲುಗಿರುವ ಮನೆ.

ಮೀನುಗಾರರ ಪರಿಸ್ಥಿತಿ ಚಿಂತಾಜನಕ

ಮೀನುಗಾರರ ಪರಿಸ್ಥಿತಿ ಚಿಂತಾಜನಕ

ಸಮುದ್ರ ತೀರಕ್ಕೆ ಅಪ್ಪಳಿಸಿದ ಸೈಕ್ಲೋನ್‌ ಮೀನುಗಾರರ ದೋಣಿ ಮತ್ತು ಬೋಟ್‌ಗಳನ್ನು ಬಲಿ ಪಡೆದಿದೆ.

ಧರೆಗುರುಳಿದ ಮರ

ಧರೆಗುರುಳಿದ ಮರ

ಗಾಳಿ ರಭಸಕ್ಕೆ ಸಿಲುಕಿ ವಿಶಾಖಪಟ್ಟಣ ಮುಖ್ಯ ರಸ್ತೆಯಲ್ಲಿ ಧರೆಗುರುಳಿದ ಮರ.

ಗಾಳಿಯ ವೇಗ ತಡೆಯುವರು ಯಾರು?

ಗಾಳಿಯ ವೇಗ ತಡೆಯುವರು ಯಾರು?

ಸುಮಾರು 60 ರಿಂದ 70 ಕಿಮೀ ವೇಗದಲ್ಲಿ ನಿರಂತರವಾಗಿ ಬೀಸುತ್ತಿರವ ಗಾಳಿ.

ಗಾಳಿಯ ರಭಸ ನೀವೇ ಊಹಿಸಿ

ಗಾಳಿಯ ರಭಸ ನೀವೇ ಊಹಿಸಿ

ಚಂಡಮಾರುತದ ಗಾಳಿಯ ವೇಗ ಎಷ್ಟಿತ್ತೆಂದರೆ ಬೃಹದಾಕಾರದ ಮರವೇ ಮುರಿದು ನಿಂತಿದೆ.

ದಡ ಸೇರಿದ ಬೋಟ್‌ಗಳು

ದಡ ಸೇರಿದ ಬೋಟ್‌ಗಳು

ಹವಾಮಾನ ಇಲಾಖೆ ಮೀನಿಗಾರರಿಗೆ ಸುಮದ್ರಕ್ಕೆ ಇಳಿಯದಂತೆ ಮೊದಲೆ ಮುನ್ನೆಚ್ಚರಿಕೆ ನೀಡಿತ್ತು.

ನಿರಾಶ್ರಿತರ ಶಿಬಿರ ಸ್ಥಾಪನೆ

ನಿರಾಶ್ರಿತರ ಶಿಬಿರ ಸ್ಥಾಪನೆ

ನಿರಾಶ್ರಿತರ ಪುನರ್ವಸತಿ ಮತ್ತು ಆಹಾರ ಪೂರೈಕೆಗೆ ಮುಂಜಾಗೃತಾ ಕ್ರಮ ತೆಗೆದುಕೊಂಡಿರುವ ಆಂಧ್ರಪ್ರದೇಶ ಸರ್ಕಾರ ಅಗತ್ಯವಿರುವೆಡೆ ನಿರಾಶ್ರಿತರ ಶಿಬಿರ ತೆರೆದಿದೆ.

ಅಧಿಕಾರಿಗಳು, ಜನಪ್ರತಿನಿಧಿಗಳ ಭೇಟಿ

ಅಧಿಕಾರಿಗಳು, ಜನಪ್ರತಿನಿಧಿಗಳ ಭೇಟಿ

ಚಂಡಮಾರುತದ ಪ್ರಭಾವಕ್ಕೆ ತತ್ತರಿಸಿರುವ ಪ್ರದೇಶಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಭೇಟಿ.

ಅಪ್ಪಳಿಸಿದ ಅಲೆಗಳು

ಅಪ್ಪಳಿಸಿದ ಅಲೆಗಳು

ಸಮುದ್ರ ತೀರಕ್ಕೆ ಅಪ್ಪಳಿಸಿದ ಬೃಹತ್ ಗಾತ್ರದ ಅಲೆಗಳು.

English summary
After ducking the devastating effects of the 2004 tsunami and the 1977 cyclone, the "City of Destiny" sadly had its date with disaster on Sunday when a very severe cyclonic storm Hudhud tore through the city, unleashing widespread destruction and bringing the otherwise bustling city of nearly 20 lakh people to a grinding halt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X