ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು 'ಹುಡ್‌ಹುಡ್‌' ಸೈಕ್ಲೋನ್? ಇದರ ತಾಕತ್ತೆಷ್ಟು?

|
Google Oneindia Kannada News

ನವದೆಹಲಿ, ಅ. 9 : ಬೆಂಗಳೂರಿಗರು ಪ್ರತಿದಿನ ಮಳೆಯ ಹುಚ್ಚಾಟಕ್ಕೆ ಸಿಲುಕಿ ಒದ್ದಾಡುತ್ತಿದ್ದರೆ ಅತ್ತ ಆಂಧ್ರ ಪ್ರದೇಶ ಮತ್ತು ಒಡಿಸ್ಸಾ ಕರಾವಳಿ ತೀರಕ್ಕೆ ಅಕ್ಟೋಬರ್‌ 12 ರಂದು ದೈತ್ಯನೊಬ್ಬ ಆಗಮಿಸುವ ಸೂಚನೆ ನೀಡಿದ್ದಾನೆ. ಆತನ ಹೊಡೆತಕ್ಕೆ ಸಿಲುಕಿ ಜನರು ಇನ್ಯಾವ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೋ ತಿಳಿಯದು.

ಹವಾಮಾನ ಇಲಾಖೆ ಹೇಳಿರುವಂತೆ ಅಕ್ಟೋಬರ್‌ 12 ರಂದು 'ಹುಡ್‌ಹುಡ್‌' ಚಂಡಮಾರುತ ಸಮುದ್ರ ತೀರಕ್ಕೆ ಅಪ್ಪಳಿಸಲಿದೆ. ಒರಿಸ್ಸಾ ಮತ್ತು ಆಂಧ್ರ ಕರಾವಳಿಯಲ್ಲಿ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 12.4 ರಿಂದ 24 ಸೆ.ಮೀ. ಮಳೆ ತರುವ ತಾಕತ್ತು ಈ 'ಹುಡ್‌ಹುಡ್‌'ಗಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.[ಬೆಂಗಳೂರಿಗರೆ, ಹುಡ್ ಹುಡ್ ಸೈಕ್ಲೋನ್ ಬರುತ್ತಿದೆ ಎಚ್ಚರ!]

cyclone

ಪಶ್ಚಿಮ ಗೋದಾವರಿ, ವಿಶಾಖಪಟ್ಟಣ, ವಿಜಯನಗರಂ ಮತ್ತು ಆಂಧ್ರ ಹಾಗೂ ಒರಿಸ್ಸಾದ ಕರಾವಳಿ ಭಾಗಗಳು ಚಂಡಮಾರುತದ ಹೊಡೆತಕ್ಕೆ ಸಿಲುಕಲಿವೆ. ಸುಮಾರು 155 ಕಿಮೀ ವೇಗದಲ್ಲಿ ಚಂಡಮಾರುತ ಸಮುದ್ರ ತೀರಕ್ಕೆ ಅಪ್ಪಳಿಸಲಿದೆ.

ಉತ್ತರ ಅಂಡಮಾನ್‌ ಸಮುದ್ರದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವೇ 'ಹುಡ್‌ಹುಡ್‌' ಚಂಡಮಾರುತವಾಗಿ ಪರಿವರ್ತನೆಗೊಂಡು ಪೂರ್ವ ಕರಾವಳಿಯತ್ತ ನುಗ್ಗುತ್ತಿದೆ. ಬಂಗಾಳ ಕೊಲ್ಲಿಯಿಂದ 67 ಕಿ.ಮೀ. ವೇಗದಲ್ಲಿ ಕರಾವಳಿಯತ್ತ ಬರುತ್ತಿರುವ ಈ ಚಂಡಮಾರುತ ನಿರ್ದಿಷ್ಟವಾಗಿ ಯಾವ ಭಾಗಕ್ಕೆ ಅಪ್ಪಳಿಸಲಿದೆ ಎಂಬುದನ್ನು ಹೇಳಲು ಸಾಧ್ಯವಾಗಿಲ್ಲ. ಆಂಧ್ರದ ವಿಶಾಖಪಟ್ಟಣ ಹಾಗೂ ಒಡಿಶಾದ ಗೋಪಾಲಪುರ ನಡುವೆ ಹಾದುಹೋಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.[ಬುಧವಾರದ ಮಳೆಗೆ ತತ್ತರಿಸಿದ ನಮ್ಮ ಬೆಂಗಳೂರು]

ಹುಡ್‌ಹುಡ್‌ ಶಕ್ತಿ ಬಗ್ಗೆ ಒಂದಿಷ್ಟು
ಚಂಡಮಾರುತ ವಿಸ್ತಾರ- 500 ಕಿ.ಮೀ
ಪ್ರತಿ ಗಂಟೆಗೆ ವೇಗ-155 ಕಿ.ಮೀ
ಮಳೆ ತರಿಸುವ ಶಕ್ತಿ- 12.4 ರಿಂದ 24 ಸೆ.ಮೀ

ಕರ್ನಾಟಕಕ್ಕೇನು ಏಫೆಕ್ಟ್‌?
ಒಂದು ವೇಳೆ ಹುಡ್‌ಹುಡ್‌ ನಿಗದಿತ ವೇಗದಲ್ಲೇ ಅಪ್ಪಳಿಸಿದರೆ ರಾಜ್ಯದಲ್ಲಿ ಬೀಳುತ್ತಿರುವ ಮಳೆ ಪ್ರಮಾಣ ಇನ್ನಷ್ಟು ಹೆಚ್ಚಾಗಬಹುದು. ವಾಯು ಭಾರದಲ್ಲಿ ಹೆಚ್ಚು ಕಡಿಮೆಯಾಗಿ ಅ.12 ರಿಂದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಚಾಮರಾಜನಗರದಲ್ಲಿ ನಿರಂತರ ಮಳೆ ಸುರಿದರೂ ಆಶ್ಚರ್ಯವಿಲ್ಲ.

English summary
Confirming the formation of Cyclonic storm 'Hud Hud' over north Andaman Sea, the Indian Meteorological Department (IMD) issued a cyclone alert for the north coastal Andhra Pradesh and south Odisha. The IMD has also said that the cyclone will make landfall between Gopalpur in Odisha and Vishakhapatnam in Andhra Pradesh on October 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X