ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಲಾಬ್ ಚಂಡಮಾರುತ: ಬೆಂಗಳೂರಿನ ಕಡೆಯ ರೈಲು ಸಂಚಾರ ಸ್ಥಗಿತ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 26: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂಧ್ರಪ್ರದೇಶ, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕರಾವಳಿ ತೀರದಲ್ಲಿ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ. ಗುಲಾಬ್ ಚಂಡಮಾರುತ ಭಾನುವಾರ ಮಧ್ಯರಾತ್ರಿಗೆ ತನ್ನ ಅಬ್ಬರವನ್ನು ತಣ್ಣಗಾಗಿಸಲಿದೆ.

ಗುಲಾಬ್ ಚಂಡಮಾರುತದ ದೆಸೆಯಿಂದ ದಕ್ಷಿಣ ಕೇಂದ್ರ ವಿಭಾಗದ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ಕರ್ನಾಟಕ, ಮಧ್ಯಪ್ರದೇಶ ರಾಜ್ಯಗಳ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮುಖ್ಯವಾಗಿ ಭುವನೇಶ್ವರ -ಬೆಂಗಳೂರು ಪ್ರಶಾಂತಿ ಸ್ಪೆಷಲ್, ವಿಶಾಖಪಟ್ಟಣಂ ಗುನಪುರ್ ಸ್ಪೆಷಲ್, ಚೆನ್ನೈ ಪುರಿ ವಿಶೇಷ ರೈಲುಗಳನ್ನು ಈಸ್ಟ್ ಕೋಸ್ಟ್ ರೈಲು(ECoR) ವಿಭಾಗ ರದ್ದುಗೊಳಿಸಿದೆ. ಸೋಮವಾರ ಸಂಜೆ ನಂತರ ರೈಲು ಸಂಚಾರದ ಬಗ್ಗೆ ಪ್ರಕಟಣೆ ಹೊರಡಿಸಲಾಗುತ್ತಿದೆ.

ನಾಲ್ಕು ತಿಂಗಳುಗಳ ಹಿಂದೆ ಯಾಸ್‌ ಚಂಡಮಾರುತವು ಒಡಿಶಾದಲ್ಲಿ ಭಾರೀ ನಷ್ಟ, ಪ್ರಾಣ ಹಾನಿಗೆ ಕಾರಣವಾಗಿದೆ. ಇದೀಗ ಒಡಿಶಾಕ್ಕೆ ಗುಲಾಬ್‌ ಚಂಡಮಾರುತವೂ ಕೂಡಾ ಅಪ್ಪಳಿಸಲಿದೆ. ಇನ್ನು ಈ ಗುಲಾಬ್‌ ಚಂಡಮಾರುತದ ತೀವ್ರತೆಯು 2018 ರಲ್ಲಿ ಕಾಣಿಸಿಕೊಂಡ ತಿತ್ಲಿ ಚಂಡಮಾರುತದಷ್ಟೇ ಇರಲಿದೆ ಎಂದು ಹೇಳಲಾಗಿದೆ.

ಬಂಗಾಳಕೊಲ್ಲಿಯ ಈಶಾನ್ಯ ಹಾಗೂ ಪೂರ್ವ ಮಧ್ಯಭಾಗದಲ್ಲಿ ವಾಯುಭಾರ ಕುಸಿತವಾಗಲಿದ್ದು, ಇದರ ಪ್ರಭಾವ ಒಡಿಶಾ ಹಾಗೂ ಆಂಧ್ರಪ್ರದೇಶದ ಮೇಲೆ ಹೆಚ್ಚಾಗಲಿದೆ. ಈ ಎರಡು ರಾಜ್ಯಗಳಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಒಟ್ಟಾರೆ, 28 ರೈಲುಗಳು ರದ್ದಾಗಿವೆ ಕೆಲವು ರೈಲುಗಳ ಮಾರ್ಗ ಬದಲಾವಣೆಯಾಗಿದೆ. ರೈಲುಗಳ ಪಟ್ಟಿ ಚಿತ್ರದಲ್ಲಿ ಕೊಡಲಾಗಿದೆ. ಗಂಜಾಮ್, ಗಜಪತಿ, ಕೋರಪುಟ್, ರಾಯಗಡ, ನಬರಂಗಪುರ, ಕಂದಮಾಲ್, ಮಾಲ್ಕಂಗಿರಿಯಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದ್ದು, ಒಡಿಶಾ ಸರ್ಕಾರ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ತಿಳಿಸಿದೆ.

Cyclone Gulab: 28 Trains Cancelled, Diverted, Here is the Full List

ಕೆಎಸ್‌ಆರ್ ಬೆಂಗಳೂರು ನಗರಕ್ಕೆ ತೆರಳುವ ಭುವನೇಶ್ವರ ರೈಲು (08463) ಸೆಪ್ಟೆಂಬರ್ 26ರಂದು ರದ್ದುಗೊಳಿಸಲಾಗಿದೆ. ಇದೇ ರೀತಿ ಬೆಂಗಳೂರಿನಿಂದ ಭುವನೇಶ್ವರಕ್ಕೆ ತೆರಳುವ 08464 ರೈಲು ಸೋಮವಾರ(ಸೆ. 27) ರದ್ದಾಗಿದೆ.

Cyclone Gulab: 28 Trains Cancelled, Diverted, Here is the Full List

ಭಾನುವಾರ ಸೆ.26ರಂದು ನಿಗದಿಯಾಗಿದ್ದ ಭುವನೇಶ್ವರ-ಯಶವಂತಪುರ ರೈಲು (02845) ಮತ್ತು ಸೆಪ್ಟೆಂಬರ್ 27 ಸೋಮವಾರದಂದು ನಿಗದಿಯಾಗಿದ್ದ ಯಶವಂತಪುರ-ಭುವನೇಶ್ವರ ರೈಲು (02846) ರದ್ದುಗೊಳಿಸಲಾಗಿದೆ.

Cyclone Gulab: 28 Trains Cancelled, Diverted, Here is the Full List

ಮಾರ್ಗ ಸಂಚಾರ ಬದಲು:
ಟಿನುಸುಕಿಯಾ-ಕೆಎಸ್‌ಆರ್ ಬೆಂಗಳೂರು ನಗರ ನಡುವಿನ ಹೊಸ ರೈಲು (02250) ಖರ್ಗಪಿಯೂರ್, ಜಾರ್ಸುಗುಡ ಮತ್ತು ಬಲ್ಹರ್ಷಾ ಮಾರ್ಗಕ್ಕೆ ಬದಲಾಯಿಸಲಾಗಿದೆ.

ಹೌರಾ-ಚೆನ್ನೈ ಸೆಂಟ್ರಲ್ (02821), ಭಾನುವಾರ ಮತ್ತು ಹೌರಾ-ಯಶವಂತಪುರ (02873) ಮತ್ತು ಹೌರಾ-ವಾಸ್ಕೋ-ಡ-ಗಾಮಾ (08047) ಅನ್ನು ಖರ್ಗಪಿಯೂರ್, ಜಾರ್ಸುಗುಡ ಮತ್ತು ಬಲ್ಹರ್ಷಾ ಮಾರ್ಗಕ್ಕೆ ಬದಲಾಯಿಸಲಾಗಿದೆ.

Recommended Video

ಪಾಕಿಸ್ತಾನದ ಹಳೆ ಚಾಳಿಗೆ ಭಾರತದ ಹೊಸ ಚಾಟಿ | Oneindia Kannada

ಭಾನುವಾರದಂದು ನಿಗದಿಯಾಗಿದ್ದ ಯಶವಂತಪುರ-ಬಡ್ಜ್ ಬಡ್ಜ್ (02253), ಕನ್ಯಾಕುಮಾರಿ-ಹೌರಾ (02666) ಮತ್ತು ಚೆನ್ನೈ ಸೆಂಟ್ರಲ್-ಹೌರಾ (02822) ರೈಲು ಮಾರ್ಗ ಬದಲಾಗಿದ್ದು, ವಿಳಿಯನಗರಂ, ತಿತ್ಲಾಗರ್-ಜರ್ಸುಗುಡ ಮತ್ತು ಖರಗಪುರ ಮಾರ್ಗಕ್ಕೆ ತಿರುಗಿಸಲಾಗಿದೆ.

English summary
Bhubaneswar-Bangalore Prashanti Special, Visakhapatnam-Gunupur Special, Chennai-Puri Special have been cancelled by the the East Coast Railway (ECoR) division due to cyclone ‘Gulab, Here is the Full List
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X