ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಥ ಬದಲಾಯಿಸಿದ ಫ್ಯಾನಿ, ತಮಿಳುನಾಡಿನಲ್ಲಿ ಕಡಿಮೆ, ಒಡಿಶಾದಲ್ಲಿ ಭಾರಿ ಮಳೆ ಸಾದ್ಯತೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 29: ಮುಂದಿನ 24 ಗಂಟೆಯೊಳಗೆ ತಮಿಳುನಾಡಿಗೆ ಫ್ಯಾನಿ ಚಂಡಮಾರುತ ಆಗಮನವಾಗಲಿದೆ ಆದರೆ ಅಪ್ಪಳಿಸುವ ಸಮಯ ನಿಖರವಾಗಿಲ್ಲ, ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಗಳಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ರವಾನಿಸಿದೆ.

ಮುಂದಿನ ಆರು ಗಂಟೆಗಳಲ್ಲಿ ಅಬ್ಬರಿಸಲಿದೆ ಸೈಕ್ಲೋನ್ 'ಫ್ಯಾನಿ' ಮುಂದಿನ ಆರು ಗಂಟೆಗಳಲ್ಲಿ ಅಬ್ಬರಿಸಲಿದೆ ಸೈಕ್ಲೋನ್ 'ಫ್ಯಾನಿ'

ಈ ಹಿಂದೆ ಏಪ್ರಿಲ್ 30ರಿಂದ ಮೇ 3ರವರೆಗೆ ಫ್ಯಾನಿ ಚಂಡಮಾರುತದಿಂದಾಗಿ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಪ್ರವಾಹವೇ ಸಂಭವಿಸಲಿದೆ ಎಂದು ಎಚ್ಚರಿಕೆ ನೀಡಲಾಗಿತ್ತು. ಆದರೆ ಫ್ಯಾನಿ ಚಂಡಮಾರುತ ತನ್ನ ದಿಕ್ಕನ್ನು ಬದಲಾಯಿಸಲಿದ್ದು ಒಡಿಶಾದ ಕಡೆಗೆ ತಿರುಗಿದೆ ಅಲ್ಲಿ ಭಾರಿ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.

ಫ್ಯಾನಿ ಸೈಕ್ಲೋನ್ ಕುರಿತು ಅಚ್ಚರಿಯ ಮಾಹಿತಿ ನೀಡಿದ ತಮಿಳುನಾಡು ವೆದರ್‌ಮ್ಯಾನ್ ಫ್ಯಾನಿ ಸೈಕ್ಲೋನ್ ಕುರಿತು ಅಚ್ಚರಿಯ ಮಾಹಿತಿ ನೀಡಿದ ತಮಿಳುನಾಡು ವೆದರ್‌ಮ್ಯಾನ್

ಭಾರತೀಯ ಹವಾಮಾನ ಇಲಾಖೆಯು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಪ್ರಕಾರ, ಸೋಮವಾರ ಫ್ಯಾನಿ ಚಂಡಮಾರುತವು ಚೆನ್ನೈನ 880 ಕಿ.ಮೀ ದೂರದಲ್ಲಿ ಆಗ್ನೇಯ ಭಾಗದಲ್ಲಿ ಗೋಚರಿಸಿದೆ.

Cyclone Fani May Turn extremely Severe In Chennai

ಏಪ್ರಿಲ್ 30ರ ವೇಳೆ ಚೆನ್ನೈ ಪ್ರವೇಶಿಸಲಿದೆ, ಮಳೆಯಾಗುವ ನಿರೀಕ್ಷೆಯೂ ಇದೆ. ಗಾಳಿಯು ವಾಯುವ್ಯ ಭಾಗದಲ್ಲಿ ಮುಂದುವರೆಯಲಿದ್ದು ಮೇ 1ರಂದು ಈಶಾನ್ಯ ದಿಕ್ಕಿಗೆ ಪಥ ಬದಲಾಯಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಎನ್‌ಸಿಎಂಸಿ ಕಮಿಟಿ ಜೊತೆಗೆ ಚರ್ಚೆ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

English summary
India Meteorological Department issued a notice that Cyclone Fani can be extremely severe in Chennai, however, it ruled out its earlier notice of landfall in Tamil Nadu and Andhra Pradesh. It stated that there is a possibility of landfall in Odisha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X