ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯಭಾರ ಕುಸಿತ; ಗುಜರಾತ್‌, ಮಹಾರಾಷ್ಟ್ರದಲ್ಲಿ ಹೈ ಅಲರ್ಟ್

|
Google Oneindia Kannada News

ಬೆಂಗಳೂರು, ಜೂನ್ 01 : ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಎರಡು ದಿನ ಮಳೆಯಾಗಲಿದೆ. ಮಹಾರಾಷ್ಟ್ರ, ಗುಜರಾತ್ ರಾಜ್ಯಕ್ಕೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಪೂರ್ವ ಮಧ್ಯ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಮುಂದಿನ 48 ಗಂಟೆಗಳಲ್ಲಿ ಇದು ತೀವ್ರತೆ ಪಡೆದುಕೊಳ್ಳಲಿದೆ.

ಎರಡು ದಿನ ಭಾರಿ ಗಾಳಿ, ಮಳೆ; ಕೊಡಗು ಜಿಲ್ಲೆಗೆ Orange ಅಲರ್ಟ್ ಎರಡು ದಿನ ಭಾರಿ ಗಾಳಿ, ಮಳೆ; ಕೊಡಗು ಜಿಲ್ಲೆಗೆ Orange ಅಲರ್ಟ್

ಜೂನ್ 3ರಂದು ಗುಜರಾತ್‌ ಮತ್ತು ಮಹಾರಾಷ್ಟ್ರದ ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸಲಿದೆ. ಅಲ್ಲಿಯ ತನಕ ಭಾರಿ ಗಾಳಿ, ಆಗಾಗ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಜೂನ್ 1 ಮತ್ತು 2ರಂದು ಮಳೆಯಾಗಲಿದೆ.

ಗುಡುಗು ಸಹಿತ ಮಳೆ; ರಾಜ್ಯದ 8 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ಗುಡುಗು ಸಹಿತ ಮಳೆ; ರಾಜ್ಯದ 8 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್

Cyclone Alert For Maharashtra And Gujarat

ಉತ್ತರ ಮತ್ತು ದಕ್ಷಿಣ ಗುಜರಾತ್‌ನಲ್ಲಿ ಸಮುದ್ರಕ್ಕೆ ಇಳಿದಿದ್ದ ಮೀನುಗಾರರನ್ನು ಭಾನುವಾರ ವಾಪಸ್ ಕರೆಸಿಕೊಳ್ಳಲಾಗಿದೆ. ಜೂನ್ 4ರ ತನಕ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಜೂನ್ 1ರ ಸಂಜೆಯಿಂದ ಗುಜರಾತ್‌ನಲ್ಲಿ ಗಂಟೆಗೆ 40 ರಿಂದ 50 ಕಿ. ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.

'ಅಂಫಾನ್' ಚಂಡಮಾರುತ ಎದುರು ಒಡಿಶಾ ದಿಟ್ಟ ಹೋರಾಟ, ಪಟ್ನಾಯಕ್ 'ಗ್ರೇಟ್''ಅಂಫಾನ್' ಚಂಡಮಾರುತ ಎದುರು ಒಡಿಶಾ ದಿಟ್ಟ ಹೋರಾಟ, ಪಟ್ನಾಯಕ್ 'ಗ್ರೇಟ್'

"2 ರಿಂದ 3 ದಿನದಲ್ಲಿ ರಾಜ್ಯಕ್ಕೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಮೀನಿಗಾರರು ನಾಲ್ಕು ದಿನಗಳ ಕಾಲ ಸಮುದ್ರಕ್ಕೆ ಇಳಿಯಬಾರದು" ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಮನವಿ ಮಾಡಿದ್ದಾರೆ.

ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಜೂನ್ 1ರಂದು ಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ಕೊಡಲಾಗಿದೆ.

ಜಿಲ್ಲೆಯಲ್ಲಿ 115.60 ಮಿ. ಮೀ. ನಿಂದ 204.4 ಮಿ. ಮೀ. ಮಳೆ ಬೀಳುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಕೊಡಗು ಜಿಲ್ಲಾಡಳಿತ ಸಹ ಸಾರ್ವಜನಿಕರಿಗೆ ಎಚ್ಚರದಿಂದ ಇರಲು ನಿರ್ದೇಶನ ನೀಡಿದೆ.

English summary
Low pressure area developing over the Arabian sea may intensify into a cyclone and will reach Maharashtra and Gujarat coasts on June 3 said India Meteorological Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X