ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಕೋವಿಡ್‌ ಅಲೆ ಫೆ.6ರ ವೇಳೆಗೆ ಉತ್ತುಂಗಕ್ಕೆ: ಐಐಟಿ ಮದ್ರಾಸ್ ಅಧ್ಯಯನ

|
Google Oneindia Kannada News

ನವದೆಹಲಿ, ಜನವರಿ 23: ಐಐಟಿ ಮದ್ರಾಸ್‌ನ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ದೇಶದಲ್ಲಿ ಪ್ರಸ್ತುತ ಕೋವಿಡ್-19 ಸೋಂಕಿನ ಮೂರನೇ ಅಲೆಯು ಮುಂದಿನ 14 ದಿನಗಳಲ್ಲಿ ಅಂದರೆ ಫೆಬ್ರವರಿ 6 ರೊಳಗೆ ಗರಿಷ್ಠ ಮಟ್ಟವನ್ನು ತಲುಪುವ ನಿರೀಕ್ಷೆಯಿದೆ. ಕೋವಿಡ್‌ ಸೋಂಕು ಎಷ್ಟು ವೇಗವಾಗಿ ಹರಡುತ್ತಿದೆ ಎಂಬುದನ್ನು ಸೂಚಿಸುವ ಭಾರತದ ಆರ್‌-ಮೌಲ್ಯವು ಜನವರಿ 14 ರಿಂದ 21 ರ ವಾರದಲ್ಲಿ 1.57 ಕ್ಕೆ ಮತ್ತಷ್ಟು ಇಳಿಕೆ ಕಂಡಿದೆ ಎಂದು ಅಧ್ಯಯನವು ಉಲ್ಲೇಖ ಮಾಡಿದೆ.

ಆರ್-ಮೌಲ್ಯವು ಸೋಂಕಿತ ವ್ಯಕ್ತಿಯು ಕೊರೊನಾ ವೈರಸ್‌ ಸೋಂಕನ್ನು ಹರಡುವ ಜನರ ಸಂಖ್ಯೆಯನ್ನು ಸೂಚಿಸುತ್ತದೆ. ಆರ್-ಮೌಲ್ಯವು ಜನವರಿ 14 ಮತ್ತು ಜನವರಿ 21 ರ ನಡುವೆ 1.57 ದಾಖಲಾಗಿದೆ. ಜನವರಿ 7-13 ರ ವಾರದಲ್ಲಿ ಈ ಸಂಖ್ಯೆಯನ್ನು 2.2 ಆಗಿದೆ. ಜನವರಿ 1-6 ರಿಂದ 4 ಆಗಿದೆ. ಕಳೆದ ವರ್ಷ ಡಿಸೆಂಬರ್ 25-31 ರಿಂದ 2.9ರಷ್ಟಿದೆ ಎಂದು ಐಐಟಿ ಮದ್ರಾಸ್‌ನ ಅಧ್ಯಯನವು ಹೇಳುತ್ತದೆ.

ಹೊಸ ಮೈಲಿಗಲ್ಲು: ಕರ್ನಾಟಕದಲ್ಲಿ 6 ಕೋಟಿ ಮಂದಿಗೆ ಕೊರೊನಾವೈರಸ್ ಪರೀಕ್ಷೆಹೊಸ ಮೈಲಿಗಲ್ಲು: ಕರ್ನಾಟಕದಲ್ಲಿ 6 ಕೋಟಿ ಮಂದಿಗೆ ಕೊರೊನಾವೈರಸ್ ಪರೀಕ್ಷೆ

ಚೆನ್ನೈನ ಆರ್-ಮೌಲ್ಯವು 1.2, ಮುಂಬೈ 0.67, ದೆಹಲಿ 0.98 ಮತ್ತು ಕೋಲ್ಕತ್ತಾ 0.56 ರಷ್ಟಿದೆ ಎಂದು ಡೇಟಾ ತೋರಿಸಿದೆ. ಈ ಮೌಲ್ಯವು 1 ಕ್ಕಿಂತ ಕಡಿಮೆಯಾದರೆ, ಸಾಂಕ್ರಾಮಿಕ ರೋಗವು ಕೊನೆಗೊಂಡಿದೆ ಎಂದು ಪರಿಗಣಿಸಲಾಗುತ್ತದೆ. ಮುಂಬೈ ಮತ್ತು ಕೋಲ್ಕತ್ತಾದ ಆರ್-ಮೌಲ್ಯವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವುದನ್ನು ಅಧ್ಯಯನವು ಉಲ್ಲೇಖ ಮಾಡಿದೆ.

 Current Covid wave likely to peak by February 6 says IIT Madras study

ಫೆಬ್ರವರಿ 6 ರವರೆಗೆ ಕೋವಿಡ್‌ ಅಲೆ ತೀವ್ರ ಏರಿಕೆ

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಐಐಟಿ ಮದ್ರಾಸ್‌ನ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಯಂತ್ ಝಾ, "ಮುಂಬೈ ಮತ್ತು ಕೋಲ್ಕತ್ತಾದ ಆರ್-ಮೌಲ್ಯವು ಹೆಚ್ಚಳವಾಗಿದೆ. ಆದರೆ ದೆಹಲಿ ಮತ್ತು ಚೆನ್ನೈನಲ್ಲಿ ಆರ್‌ ಮೌಲ್ಯ 1 ರ ಸಮೀಪದಲ್ಲಿದೆ," ಎಂದು ಮಾಹಿತಿ ನೀಡಿದ್ದಾರೆ. ಹಾಗೆಯೇ "ಮುಂದಿನ 14 ದಿನಗಳಲ್ಲಿ ಫೆಬ್ರವರಿ 6 ರವರೆಗೆ ಕೊರೊನಾ ವೈರಸ್‌ ಸೋಂಕು ಉತ್ತುಂಗಕ್ಕೇರುವ ಸಾಧ್ಯತೆ ಇದೆ," ಎಂದು ತಿಳಿಸಿದ್ದಾರೆ.

ಇನ್ನು "ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಕೋವಿಡ್‌ ಅಲೆ ಈಗಾಗಲೇ ಉತ್ತುಂಗಕ್ಕೇರಿದೆ, ಅಂದರೆ ಎರಡು ನಗರಗಳಲ್ಲಿ ಸಾಂಕ್ರಾಮಿಕ ರೋಗವು ಸ್ಥಳೀಯವಾಗಿ ಹರಡುತ್ತಿದೆ. ಆದ್ದರಿಂದ, ವಿಶ್ಲೇಷಣೆಯ ಪ್ರಕಾರ, ಪ್ರಸ್ತುತ ಕೊರೊನಾ ವೈರಸ್‌ ಸೋಂಕಿನ ಮೂರನೇ ತರಂಗದ ಉತ್ತುಂಗವು ಮುಂದಿನ 14 ದಿನಗಳಲ್ಲಿ ಇದ್ದು ಫೆಬ್ರವರಿ 6 ರವರೆಗೆ ಇರುವ ಸಾಧ್ಯತೆಯಿದೆ. ನಮ್ಮ ಹಿಂದಿನ ಅಂದಾಜಿನ ಪ್ರಕಾರ ಫೆಬ್ರವರಿ 1 ಮತ್ತು 15 ರ ನಡುವೆ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ," ಎಂದು ಅಂಕಿಅಂಶಗಳನ್ನು ವಿವರಿಸುತ್ತಾ ಮಾತನಾಡಿದ ಐಐಟಿ ಮದ್ರಾಸ್‌ನ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಯಂತ್ ಝಾ ಮಾಹಿತಿ ನೀಡಿದ್ದಾರೆ.

ಎರಡು-ಮೂರು ವಾರಗಳಲ್ಲಿ ಕೋವಿಡ್ 3ನೇ ಅಲೆ ತೀವ್ರತೆ ಕಡಿಮೆಯಾಗಲಿದೆ: ಡಾ.ಸುಧಾಕರ್ಎರಡು-ಮೂರು ವಾರಗಳಲ್ಲಿ ಕೋವಿಡ್ 3ನೇ ಅಲೆ ತೀವ್ರತೆ ಕಡಿಮೆಯಾಗಲಿದೆ: ಡಾ.ಸುಧಾಕರ್

Recommended Video

ನಿರ್ಗತಿಕ ವೃದ್ಧನಿಗೆ ನೆರವಾದ ಟ್ರಾಫಿಕ್ ಪೊಲೀಸ್ ವೀಡಿಯೋ ಫುಲ್ ವೈರಲ್ | Oneindia Kannada

ಐಐಟಿ ಮದ್ರಾಸ್‌ನಿಂದ ಈ ಪ್ರಾಥಮಿಕ ಅಧ್ಯಯನವನ್ನು ನಡೆಸಲಾಗಿದೆ. ಗಣಿತಶಾಸ್ತ್ರ ವಿಭಾಗ ಮತ್ತು ಕಂಪ್ಯೂಟೇಶನಲ್ ಗಣಿತ ಮತ್ತು ಡೇಟಾ ವಿಜ್ಞಾನದ ಶ್ರೇಷ್ಠತೆಯ ಕೇಂದ್ರವು ಪ್ರೊ.ನೀಲೇಶ್ ಎಸ್ ಉಪಾಧ್ಯೆ ಮತ್ತು ಪ್ರೊ ಎಸ್ ಸುಂದರ್ ನೇತೃತ್ವದಲ್ಲಿ ಈ ಅಧ್ಯಯನವನ್ನು ನಡೆಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
Current Covid wave likely to peak by February 6 says IIT Madras study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X