ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಂಕಿತನ ಸುತ್ತ ಗಾಳಿಯಲ್ಲಿ 10 ಅಡಿ ದೂರದವರೆಗೂ ಇರುತ್ತದೆ ಕೊರೊನಾ ಸೋಂಕು; ಅಧ್ಯಯನ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಜುಲೈ 24: ಕೊರೊನಾ ಸೋಂಕು ಗಾಳಿಯಲ್ಲಿ ಒಬ್ಬ ವ್ಯಕ್ತಿಯಿಂದ ಎಷ್ಟು ಅಂತರದವರೆಗೆ ಉಪಸ್ಥಿತವಿರಬಹುದು ಎಂಬ ಕುರಿತು ಈ ಹಿಂದೆ ಕೆಲವು ಅಧ್ಯಯನಗಳನ್ನು ನಡೆಸಲಾಗಿದೆ. ಇದೀಗ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಸಂಸ್ಥೆ ಇದೇ ವಿಷಯದ ಸಂಬಂಧ ಅಧ್ಯಯನ ನಡೆಸಿದ್ದು, ಕೊರೊನಾ ಸೋಂಕಿತ ವ್ಯಕ್ತಿಯ ಸುತ್ತ 10 ಅಡಿ ಅಥವಾ 3.048 ಮೀಟರ್ ಅಂತರದವರೆಗೂ ಗಾಳಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಬಹುದು ಎಂದು ತಿಳಿಸಿದೆ.

ಶುಕ್ರವಾರ ಕೊರೊನಾ ಸೋಂಕಿನ ಸಂಬಂಧ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಸಿಎಸ್‌ಐಆರ್‌ನ ಈ ಅಧ್ಯಯನವನ್ನು ಉಲ್ಲೇಖಿಸಿದ್ದಾರೆ. ಸೋಂಕಿನಿಂದ ದೂರವುಳಿಯಲು ಜನರು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದು ಅವಶ್ಯಕ ಎಂದಿದ್ದಾರೆ. ಅಧ್ಯಯನ ಏನು ಹೇಳುತ್ತಿದೆ? ಮುಂದೆ ಓದಿ...

 ಸೋಂಕಿತ ವ್ಯಕ್ತಿಯ ಸುತ್ತ 10 ಅಡಿ ಅಂತರದವರೆಗೂ ಸೋಂಕು

ಸೋಂಕಿತ ವ್ಯಕ್ತಿಯ ಸುತ್ತ 10 ಅಡಿ ಅಂತರದವರೆಗೂ ಸೋಂಕು

ಒಬ್ಬ ಸೋಂಕಿತ ವ್ಯಕ್ತಿಯ ಸುತ್ತ ಗಾಳಿಯಲ್ಲಿ ಹತ್ತು ಅಡಿ ಅಥವಾ 3.048 ಮೀಟರ್ ಅಂತರದಲ್ಲಿ ಕೊರೊನಾ ಸೋಂಕು ಉಪಸ್ಥಿತವಿರಬಹುದು ಎಂದು ಸಿಎಸ್‌ಐಆರ್ ಮಾಹಿತಿ ನೀಡಿದೆ. ಗಾಳಿಯ ವೇಗದೊಂದಿಗೆ ವೈರಸ್ ಇನ್ನಷ್ಟು ದೂರಕ್ಕೆ ಸಾಗಿ ಇನ್ನೊಬ್ಬರಿಗೆ ಹರಡುವ ಸಾಧ್ಯತೆಯನ್ನು ನಿರಾಕರಿಸುವಂತಿಲ್ಲ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸೋಂಕು ಗಾಳಿಯಲ್ಲಿ ಹರಡುವುದಷ್ಟೇ ಅಲ್ಲ, ಒಳಾಂಗಣದಲ್ಲಿ ಮಾಸ್ಕ್‌ ಧರಿಸದೇ ಮಾತನಾಡುವುದು ಬೇರೆಯವರಿಗೂ ಅಪಾಯ ಉಂಟು ಎಂದು ಜರ್ನಲ್ ಆಫ್ ಇಂಟರ್‌ನಲ್ ಮೆಡಿಸಿನ್‌ನಲ್ಲಿ ಪ್ರಕಟಗೊಂಡ ಅಧ್ಯಯನ ತಿಳಿಸಿತ್ತು. ಒಳಾಂಗಣದಲ್ಲಿ ಜನರು ಹತ್ತಿರ ಕುಳಿತು ಮಾತನಾಡುವುದು, ತಿನ್ನುವುದು, ಕುಡಿಯುವುದು ಸಾಮಾನ್ಯವಾಗಿರುತ್ತದೆ. ಹೋಟೆಲ್, ಬಾರ್, ರೆಸ್ಟೊರೆಂಟ್‌ಗಳು ಸಾಮಾನ್ಯವಾಗಿ ಒಳಾಂಗಣದಲ್ಲಿರುವುದರಿಂದ ವೈರಸ್‌ಗಳ ಹರುಡುವಿಕೆ ಅತಿ ವೇಗವಾಗಿರುತ್ತದೆ. ಜನರು ಹೆಚ್ಚಿರುವ ಕಡೆಗಳಿಂದ ದೂರವುಳಿಯುವುದು ಒಳಿತು ಎಂದು ಸಲಹೆ ನೀಡಲಾಗಿತ್ತು.ಸೋಂಕು ಗಾಳಿಯಲ್ಲಿ ಹರಡುವುದಷ್ಟೇ ಅಲ್ಲ, ಒಳಾಂಗಣದಲ್ಲಿ ಮಾಸ್ಕ್‌ ಧರಿಸದೇ ಮಾತನಾಡುವುದು ಬೇರೆಯವರಿಗೂ ಅಪಾಯ ಉಂಟು ಎಂದು ಜರ್ನಲ್ ಆಫ್ ಇಂಟರ್‌ನಲ್ ಮೆಡಿಸಿನ್‌ನಲ್ಲಿ ಪ್ರಕಟಗೊಂಡ ಅಧ್ಯಯನ ತಿಳಿಸಿತ್ತು. ಒಳಾಂಗಣದಲ್ಲಿ ಜನರು ಹತ್ತಿರ ಕುಳಿತು ಮಾತನಾಡುವುದು, ತಿನ್ನುವುದು, ಕುಡಿಯುವುದು ಸಾಮಾನ್ಯವಾಗಿರುತ್ತದೆ. ಹೋಟೆಲ್, ಬಾರ್, ರೆಸ್ಟೊರೆಂಟ್‌ಗಳು ಸಾಮಾನ್ಯವಾಗಿ ಒಳಾಂಗಣದಲ್ಲಿರುವುದರಿಂದ ವೈರಸ್‌ಗಳ ಹರುಡುವಿಕೆ ಅತಿ ವೇಗವಾಗಿರುತ್ತದೆ. ಜನರು ಹೆಚ್ಚಿರುವ ಕಡೆಗಳಿಂದ ದೂರವುಳಿಯುವುದು ಒಳಿತು ಎಂದು ಸಲಹೆ ನೀಡಲಾಗಿತ್ತು.

 ಸೋಂಕು ಹರಡುವಿಕೆ ತಡೆಯಲು ಮಾಸ್ಕ್‌ ಅವಶ್ಯಕ

ಸೋಂಕು ಹರಡುವಿಕೆ ತಡೆಯಲು ಮಾಸ್ಕ್‌ ಅವಶ್ಯಕ

ಗಾಳಿಯಲ್ಲಿ ಹರಡುವ ಸಾಧ್ಯತೆ ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ, ಮಾಸ್ಕ್‌ ಧರಿಸುವುದು ಅವಶ್ಯಕ. ಇದು ಗಾಳಿಯಿಂದ ಸೋಂಕು ಹರಡುವ ಅಪಾಯವನ್ನು ಗಮನಾರ್ಹವಾಗಿ ತಗ್ಗಿಸುವಲ್ಲಿ ನೆರವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಜೈವಿಕ ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಸಿಎಸ್‌ಐಆರ್, ಶಿಕ್ಷಣ ಸಚಿವಾಲಯ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಜ್ಯ ಸರ್ಕಾರದ 28 ಜೆನೋಮ್ ಪ್ರಯೋಗಾಲಯಗಳು ಕೊರೊನಾ ಸೋಂಕಿನ ಜೆನೋಮಿಕ್ ವ್ಯತ್ಯಾಸಗಳನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ ಎಂದು ಮಾಹಿತಿ ನೀಡಿದರು.

 ಒಳಾಂಗಣದಲ್ಲಿ ಸೋಂಕಿನ ಪ್ರಭಾವದ ಬಗ್ಗೆ ಉಲ್ಲೇಖಿಸಿದ್ದ ಮಾರ್ಗಸೂಚಿ

ಒಳಾಂಗಣದಲ್ಲಿ ಸೋಂಕಿನ ಪ್ರಭಾವದ ಬಗ್ಗೆ ಉಲ್ಲೇಖಿಸಿದ್ದ ಮಾರ್ಗಸೂಚಿ

ಒಳಾಂಗಣ ಪರಿಸರದಲ್ಲಿ ಉಗುಳಿನ ಹನಿಗಳು ಗಾಳಿಯಲ್ಲಿ ಅಧಿಕ ಮಟ್ಟದಲ್ಲಿ ಶೇಖರಣೆಯಾಗಬಲ್ಲವು. ಈ ಹನಿಯಲ್ಲಿನ ಕೊರೊನಾ ವೈರಸ್ ಗಂಭೀರ ಉಸಿರಾಟದ ಸಮಸ್ಯೆ ಹಾಗೂ ಶ್ವಾಸಕೋಶದ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು ಎಂದು ಈಚೆಗಿನ ಅಧ್ಯಯನ ತಿಳಿಸಿದೆ. ಸೋಂಕಿತರ ಎಂಜಲು ಅಥವಾ ಮೂಗಿನ ದ್ರವವು ಎರಡು ಮೀಟರ್ ಅಂತರದಲ್ಲಿ ನೆಲದ ಮೇಲೆ ಅಥವಾ ಇನ್ನಾವುದೇ ಮೇಲ್ಮೈಗೆ ಬಿದ್ದರೆ ಆ ಕಣಗಳು ಹತ್ತು ಮೀಟರ್‌ವರೆಗೂ ಗಾಳಿಯಲ್ಲಿ ಪಸರಿಸಬಲ್ಲವು ಎಂದು ಸರ್ಕಾರದ ಕೊರೊನಾ ಮಾರ್ಗಸೂಚಿಯಲ್ಲಿಯೂ ತಿಳಿಸಲಾಗಿತ್ತು.

ಕೊರೊನಾ 3ನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸುವುದಿಲ್ಲ ಆದರೆ... ಏಮ್ಸ್ ನಿರ್ದೇಶಕರು ಹೇಳುವುದೇನು?ಕೊರೊನಾ 3ನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸುವುದಿಲ್ಲ ಆದರೆ... ಏಮ್ಸ್ ನಿರ್ದೇಶಕರು ಹೇಳುವುದೇನು?

 ಜನ ಹೆಚ್ಚಿದ್ದ ಕಡೆ ಅಪಾಯ ಅಧಿಕ

ಜನ ಹೆಚ್ಚಿದ್ದ ಕಡೆ ಅಪಾಯ ಅಧಿಕ

ಸೋಂಕು ಗಾಳಿಯಲ್ಲಿ ಹರಡುವುದಷ್ಟೇ ಅಲ್ಲ, ಒಳಾಂಗಣದಲ್ಲಿ ಮಾಸ್ಕ್‌ ಧರಿಸದೇ ಮಾತನಾಡುವುದು ಬೇರೆಯವರಿಗೂ ಅಪಾಯ ಉಂಟು ಎಂದು ಜರ್ನಲ್ ಆಫ್ ಇಂಟರ್‌ನಲ್ ಮೆಡಿಸಿನ್‌ನಲ್ಲಿ ಪ್ರಕಟಗೊಂಡ ಅಧ್ಯಯನ ತಿಳಿಸಿತ್ತು. ಒಳಾಂಗಣದಲ್ಲಿ ಜನರು ಹತ್ತಿರ ಕುಳಿತು ಮಾತನಾಡುವುದು, ತಿನ್ನುವುದು, ಕುಡಿಯುವುದು ಸಾಮಾನ್ಯವಾಗಿರುತ್ತದೆ. ಹೋಟೆಲ್, ಬಾರ್, ರೆಸ್ಟೊರೆಂಟ್‌ಗಳು ಸಾಮಾನ್ಯವಾಗಿ ಒಳಾಂಗಣದಲ್ಲಿರುವುದರಿಂದ ವೈರಸ್‌ಗಳ ಹರುಡುವಿಕೆ ಅತಿ ವೇಗವಾಗಿರುತ್ತದೆ. ಜನರು ಹೆಚ್ಚಿರುವ ಕಡೆಗಳಿಂದ ದೂರವುಳಿಯುವುದು ಒಳಿತು ಎಂದು ಸಲಹೆ ನೀಡಲಾಗಿತ್ತು.

English summary
A study conducted by the Council of Scientific and Industrial Research (CSIR) indicates that coronavirus could be detected up to 10 feet or 3.048 metres in the air around an infected individual
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X