ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಾರುಕಟ್ಟೆ, ಗಿರಿಧಾಮದಲ್ಲಿ ಜನರು ಮಾಸ್ಕ್‌ ಧರಿಸದಿರುವುದು ಕಳವಳಕಾರಿ': ಮೋದಿ

|
Google Oneindia Kannada News

ನವದೆಹಲಿ, ಜು.13: ಗಿರಿಧಾಮಗಳು ಮತ್ತು ನಗರ ಮಾರುಕಟ್ಟೆಗಳಲ್ಲಿ ಜನರು ಮಾಸ್ಕ್‌ ಧರಿಸರೆ, ಸಾಮಾಜಿಕ ಅಂತರವಿಲ್ಲದೆ ಇದ್ದ ಇತ್ತೀಚಿನ ಚಿತ್ರಗಳು "ಕಳವಳಕ್ಕೆ ಕಾರಣವಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಹಾಗೆಯೇ ಕೋವಿಡ್‌ ಮೂರನೇ ಅಲೆಯ ಭೀತಿಯ ನಡುವೆ ಕೋವಿಡ್‌ ಮಾರ್ಗಸೂಚಿಯನ್ನು ಅನುಸರಿಸುವ ಅಗತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಒತ್ತಿಹೇಳಿದ್ದಾರೆ.

ಎಂಟು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಮೂಲಭೂತ ನಿಯಮಗಳನ್ನು ಪಾಲಿಸುವ ಮಹತ್ವವನ್ನು ಒತ್ತಿ ಹೇಳಿದರು. ಸಾರ್ವಜನಿಕವಾಗಿರುವಾಗ ಮುಖವಾಡಗಳನ್ನು ಧರಿಸುವುದು, ದೊಡ್ಡ ಸಮಾರಂಭವನ್ನು ತಪ್ಪಿಸುವುದು ಮತ್ತು ಲಸಿಕೆ ಪಡೆಯಯವುದು ಮೂರನೇ ಅಲೆಯ ಸಂದರ್ಭದಲ್ಲಿ ಅತ್ಯಗತ್ಯ ಎಂಬುದನ್ನು ಪ್ರಧಾನಿ ವಿವರಿಸಿದರು.

ಮೋದಿ ಹೊಸ ಸಂಪುಟದ ಶೇ. 42 ಸಚಿವರ ಮೇಲಿದೆ ಕ್ರಿಮಿನಲ್ ಕೇಸ್‌, ಶೇ.90 ಮಂದಿ ಕೋಟ್ಯಾಧೀಶರುಮೋದಿ ಹೊಸ ಸಂಪುಟದ ಶೇ. 42 ಸಚಿವರ ಮೇಲಿದೆ ಕ್ರಿಮಿನಲ್ ಕೇಸ್‌, ಶೇ.90 ಮಂದಿ ಕೋಟ್ಯಾಧೀಶರು

ಕೊರೊನಾವೈರಸ್ ಕಾರಣದಿಂದಾಗಿ ಪ್ರವಾಸೋದ್ಯಮ, ವ್ಯವಹಾರಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂಬುದು ನಿಜ. ಆದರೆ ಇಂದು ಹೆಚ್ಚಿನ ಜನಸಂದಣಿಯನ್ನು ಹೊಂದಿರುವ ಗಿರಿಧಾಮಗಳು ಮತ್ತು ಮಾರುಕಟ್ಟೆಗಳಿಗೆ ಮಾಸ್ಕ್‌ ಧರಿಸದೆ ಹೋಗುವುದು ಸರಿಯಲ್ಲ ಎಂದು ನಾನು ಬಹಳ ದೃಢವಾಗಿ ಹೇಳುತ್ತೇನೆ," ಎಂದು ಪ್ರಧಾನಿ ಮೋದಿ ಹೇಳಿದರು.

Crowds Without Masks In Hill Stations, Markets Cause For Concern says PM Modi

"ವೈರಸ್ ತಮಗೆ ಬೇಕಾದಂತೆ ಬರುವುದಿಲ್ಲ ಮತ್ತು ಹೋಗುವುದಿಲ್ಲ. ನಾವು ನಿಯಮಗಳನ್ನು ಪಾಲಿಸದಿದ್ದಾಗ ಅದು ನಮ್ಮೊಂದಿಗೆ ಬರುತ್ತದೆ. ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಜನದಟ್ಟಣೆಯಂತಹ ಅಜಾಗರೂಕತೆ ಕಾರಣವಾಗುತ್ತದೆ ತಜ್ಞರು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದಾರೆ. ನಾವು ಜನಸಂದಣಿಯನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೋವಿಡ್‌ ಸಾಂಕ್ರಾಮಿಕ ರೋಗದ ಮೂರನೇ ಅಲೆಯನ್ನು ತಡೆಯಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ," ಎಂದು ಮೋದಿ ತಿಳಿಸಿದರು.

ತ್ವರಿತ ಮತ್ತು ವ್ಯಾಪಕವಾಗಿ ಲಸಿಕೆ ಬಗ್ಗೆ ಖಾತರಿಪಡಿಸಿಕೊಳ್ಳುವ ಅಗತ್ಯತೆಯ ಬಗ್ಗೆಯೂ ಪ್ರಧಾನಿ ಒತ್ತಿಹೇಳಿದ್ದಾರೆ. ಲಸಿಕೆ ಕೊರತೆಯ ಬಗ್ಗೆ ರಾಜ್ಯಗಳು ಆರೋಪ ಮಾಡಿರುವ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಲಸಿಕೆ ಬಗೆಗಿನ ಹೇಳಿಕೆ ಮಹತ್ವ ಪಡೆದಿದೆ.

ಕೊರೊನಾ ಏರಿಕೆ; 8 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಂವಾದಕೊರೊನಾ ಏರಿಕೆ; 8 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಂವಾದ

ಈಶಾನ್ಯ ರಾಜ್ಯಗಳಲ್ಲಿ ಪ್ರಕರಣಗಳ ಹೆಚ್ಚಳವನ್ನೂ ಉಲ್ಲೇಖ ಮಾಡಿರುವ ಪ್ರಧಾನಿ, ಕಳೆದ ವಾರ ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ ಭಾರತದ 73 ಜಿಲ್ಲೆಗಳಲ್ಲಿ 47 ರಷ್ಟರಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿದ್ದು ಈ ಪೈಕಿ ಶೇ.10 ಕ್ಕಿಂತ ಹೆಚ್ಚು ಈಶಾನ್ಯದ್ದಾಗಿದೆ ಎಂಬುವುದನ್ನು ಕೂಡಾ ಉಲ್ಲೇಖಿಸಿದ್ದಾರೆ.
ಆ ಜಿಲ್ಲೆಗಳಲ್ಲಿ ವೈರಸ್ ಹರಡುವುದನ್ನು ಪರೀಕ್ಷಿಸಲು ಕಟ್ಟುನಿಟ್ಟಾದ "ಮೈಕ್ರೋ-ಲೆವೆಲ್" ಕ್ರಮಗಳು ಅಗತ್ಯವೆಂದು ಹೇಳಿದ ಪ್ರಧಾನಿ, ಸೂಕ್ಷ್ಮ ಧಾರಕ ವಲಯಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

ಹಿಮಾಚಲ ಪ್ರದೇಶದ ಮನಾಲಿಯಂತಹ ಗಿರಿಧಾಮಗಳಲ್ಲಿ ಭಾರಿ ಜನಸಂದಣಿಯನ್ನು ಹೊಂದಿರವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳು ಮತ್ತು ಚಿತ್ರಗಳ ಬಗ್ಗೆ ಪ್ರಧಾನಮಂತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರಗಳು "ಕಳವಳಕ್ಕೆ ಕಾರಣವಾಗಿದೆ" ಎಂದಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Crowds Without Masks In Hill Stations, Markets Cause For Concern says Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X