ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಜೈಲಿನಲ್ಲಿ ಲಕ್ಷಗಟ್ಟಲೆ ಸುರಿದರೆ ಮಾತ್ರ ಕೈದಿಗಳಿಗೆ ಐಶಾರಾಮಿ ಜೀವನ

ಅರ್ಥೂರ್ ರೋಡ್ ಜೈಲಿನಲ್ಲಿ ಕೈದಿಗಳ ವಿಲಾಸಿ ಜೀವನಕ್ಕಾಗಿಯೇ ಪ್ರತ್ಯೇಕ ಬರಾಕ್ ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ಕೈದಿಯೊಬ್ಬನ ವಾದ.

|
Google Oneindia Kannada News

ಮುಂಬೈ, ಏಪ್ರಿಲ್ 7: ಮುಂಬೈನ ಅತಿ ಹಳೆಯ ಜೈಲು ಎಂದೆನಿಸಿರುವ ಅರ್ಥೂರ್ ರೋಡ್ ಜೈಲಿನಲ್ಲಿ ಪೊಲೀಸರು ಕೈದಿಗಳಿಗೆ ಐಶಾರಾಮಿ ಜೀವನ ನಡೆಸಲು ಬೇಕಾದ ಸೌಕರ್ಯಗಳನ್ನು ನೀಡುತ್ತಾರಲ್ಲದೆ, ಈ ಸೌಕರ್ಯಗಳಿಗಾಗಿ ತಿಂಗಳಿಗೆ 5 ಲಕ್ಷ ರು. ಹಣ ದೋಚುತ್ತಿದ್ದಾರೆಂದು ವಿಲಾಸ್ ಭಾರತಿ ಎಂಬ ಭೂಗತ ಪಾತಕಿ ಬಾಂಬೆ ಹೈಕೋರ್ಟ್ ಗೆ ದೂರು ಸಲ್ಲಿಸಿದ್ದಾನೆ.

ಈ ವಿಲಾಸ್ ಭಾರತಿ, ಕುಖ್ಯಾತ ಭೂಗತ ಪಾತಕಿ ಛೋಟಾ ರಾಜನ್ ನ ಗುಂಪಿನವನು. ಸುಲಿಗೆ ಹಾಗೂ ಕೊಲೆ ಪ್ರಕರಣಗಳಲ್ಲಿ ಬಂಧಿತನಾಗಿ ವಿಚಾರಣೆ ಎದುರಿಸುತ್ತಿದ್ದಾನೆ.

Criminals Can Book 'Luxury Room' At Arthur Road Jail For Rs. 5 Lakhs, Alleges Gangster

ಈತ ಹೇಳುವುದೇನೆಂದರೆ, ಅರ್ಥೂರ್ ರೋಡ್ ಜೈಲಿನಲ್ಲಿ ಕೈದಿಗಳ ವಿಲಾಸಿ ಜೀವನಕ್ಕಾಗಿಯೇ ಪ್ರತ್ಯೇಕ ಬರಾಕ್ ಗಳನ್ನು ನಿರ್ಮಿಸಲಾಗಿದೆ. ಇವು ಮೊಟ್ಟೆಯಾಕಾರದಲ್ಲಿರುವುದರಿಂದ ಇವಕ್ಕೆ ಅಂಡಾ ಸೆಲ್ ಎಂದು ಕರೆಯಲಾಗುತ್ತದೆ.

ಈ ಸೆಲ್ ಗಳಿಗೆ ಭಾರೀ ಭದ್ರತೆ ಇರುವುದರ ಜತೆಗೆ, ವಿಲಾಸೀ ಜೀವನಕ್ಕೆ ಏನು ಬೇಕೋ ಅದೆಲ್ಲವನ್ನೂ ನಿಗದಿಗೊಳಿಸಲಾಗಿದೆ. ಉದಾಹರಣೆಗೆ, ಇಲ್ಲಿ ಮಾಸಿಕವಾಗಿ 2 ಲಕ್ಷ, 5 ಲಕ್ಷ ಹಾಗೂ 10 ಲಕ್ಷ ರು. ಬಾಡಿಗೆ ದರ ಇರುವ ಮೂರು ಬಗೆಯ ಸೆಲ್ ಗಳಿವೆ. ಇವುಗಳಲ್ಲಿ ಕೈದಿಗಳು ತಮ್ಮ ಆರ್ಥಿಕ ಶಕ್ತಿಗೆ ತಕ್ಕಂತೆ ಯಾವ ಸೆಲ್ ಗಳನ್ನು ಆರಿಸಿಕೊಳ್ಳುತ್ತಾರೋ ಅಂಥ ಸೆಲ್ ಗಳಲ್ಲಿ ವಾಸ್ತವ್ಯ ಹೂಡಲು ಅವಕಾಶ ಸಿಗುತ್ತದೆ. ಈ ಎಲ್ಲವೂ ನಿಗದಿತ ದರಕ್ಕಿಂತ ದುಬಾರಿಯಾಗಿದ್ದು ಇದನ್ನು ಜೈಲು ಸಿಬ್ಬಂದಿ ದಂಧೆಯಾಗಿ ಬಳಸಿಕೊಳ್ಳುತ್ತಿದ್ದಾರೆಂದು ಭಾರತಿ ಆರೋಪಿಸಿದ್ದಾರೆ.

ತಾನು 5 ಲಕ್ಷ ರು. ಬಾಡಿಗೆಯ ಅಂಡಾ ಸೆಲ್ ನಲ್ಲಿ ಕಳೆದ 38 ತಿಂಗಳಿಂದ ಇದ್ದಿದ್ದಾಗಿ ಹೇಳಿಕೊಂಡಿರುವ ಭಾರತಿ, ಮನೆಯಲ್ಲಿ ತಯಾರಾದ ಅಡುಗೆ, ವೇಳೆಗೆ ತಕ್ಕಂತೆ ತಿಂಡಿ, ಕಾಫಿ, ಟೀ ಸಿಗುತ್ತದೆ. ಓದಲು ಮ್ಯಾಗಜೀನ್, ಪತ್ರಿಕೆಗಳು, ಟಿವಿ ಸೌಕರ್ಯ, ಇಸ್ಪೀಟ್ ಕಾರ್ಡುಗಳು, ಕೇರಂ ಬೋರ್ಡ್, ಟಿವಿ, ರೇಡಿಯೋ ಹಾಗೂ ಇನ್ನಿತರ ಸೌಲಭ್ಯಗಳು ಸಿಗುತ್ತವೆ.

ಆದರೆ, ಕೆಲ ತಿಂಗಳುಗಳಿಂದ ತಮಗೆ 5 ಲಕ್ಷ ರು. ಹೊಂದಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನನ್ನನ್ನು ಅಂಡಾ ಸೆಲ್ ನಿಂದ ಹೊರಗೆ ಅಟ್ಟಿ, ನನ್ನನ್ನು ಸಾಧಾರಣ ಬರಾಕ್ ಗಳಲ್ಲಿ ಹಾಕಿದ್ದಾರೆ. ಇಲ್ಲಿ ನಡೆಯುವ ದಂಧೆಯನ್ನು ಈ ಹಿಂದೆ ಕೆಳ ನ್ಯಾಯಾಲಯದ ನ್ಯಾಯಾಧೀಶರೊಬ್ಬರ ಗಮನಕ್ಕೆ ತಂದಿದ್ದಾಗ, ಜೈಲಿನ ಸಿಬ್ಬಂದಿಯು ಖೋಟಾ ಪ್ರಮಾಣ ಪತ್ರಗಳನ್ನು ನೀಡಿ ನನ್ನ ವಾದಕ್ಕೆ ಸೋಲಾಗುವಂತೆ ನೋಡಿಕೊಂಡರೆಂದೂ ಆರೋಪಿಸಿದ್ದಾರೆ.

ಇದಲ್ಲದೆ, ಜೈಲಿನ ಕ್ಯಾಂಟೀನ್ ಗಳಲ್ಲಿ ಗುಟ್ಕಾ, ಗಾಂಜಾ ಮಾರಾಟ ಮಾಡಲೂ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

English summary
Mumbai's oldest and largest prison, Arthur Road jail is selling a day-night luxury package. The jail's anda cell (egg-shaped high security block) can be secured for a sum of R 5 lakh monthly, a gangster has said in an application made to the Bombay High Court recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X