ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಸಮಾಜ ಯಾವ ದಿಕ್ಕಿನತ್ತ ಸಾಗುತ್ತಿದೆ? ರಾಮನಾಥ್ ಕೋವಿಂದ್ ಪ್ರಶ್ನೆ

|
Google Oneindia Kannada News

ಜಮ್ಮು, ಏಪ್ರಿಲ್ 19: 'ಮಕ್ಕಳ ಮೇಲೆ ನಡೆಯುತ್ತಿರುವ ಅಪರಾಧ ಪ್ರಕರಣಗಳು ಮಾನವೀಯತೆಗೆ ಬಹುದೊಡ್ಡ ಹೊಡೆತ. ಇಂಥ ಅಪರಾಧಗಳು ಖಂಡನೀಯ' ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ಕತುವಾ ಅತ್ಯಾಚಾರ ಅವಮಾನಕರ ಘಟನೆ: ರಾಷ್ಟ್ರಪತಿ ಕೋವಿಂದ್ಕತುವಾ ಅತ್ಯಾಚಾರ ಅವಮಾನಕರ ಘಟನೆ: ರಾಷ್ಟ್ರಪತಿ ಕೋವಿಂದ್

ಜಮ್ಮುವಿನ ರಾಯ್ಸಿ ಜಿಲ್ಲೆಯ ಕಾಕ್ರಿಯಾಲ್ ನ ಶ್ರೀಮಾತಾ ವೈಷ್ಣೋ ದೇವಿ ವಿಶ್ವವಿದ್ಯಾಲಯದ ಘಟಿಕೋತ್ಸವದದಲ್ಲಿ ಮಾತನಾಡುತ್ತಿದ್ದ ಅವರು, 'ಕತುವಾ ಮತ್ತು ಉನ್ನಾವೋ' ಅತ್ಯಾಚಾರ ಪ್ರಕರಣಗಳನ್ನು ಕಟು ಮಾತುಗಳಿಂದ ಖಂಡಿಸಿದರು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

'ನಮ್ಮ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ನೆನೆದರೆ ಆತಂಕವಾಗುತ್ತದೆ. ಈ ಜಗತ್ತಿನಲ್ಲಿ ಮಕ್ಕಳ ನಗುವಿಗಿಂದ ಸುಂದರವಾದುದು ಇನ್ನೇನಿದೆ? ನಮ್ಮ ಸಮಾಜದ ಯಶಸ್ಸು ಅಡಗಿರುವುದು ನಾವು ನಮ್ಮ ಮಕ್ಕಳಿಗೆ ನೀಡುವ ಭದ್ರತೆಯಿಂದ' ಎಂದು ಅವರು ಹೇಳಿದರು.

Crimes against children, a deep concern: President Kovind

'ನಮ್ಮ ತಾಯಂದಿರು, ಸಹೋದರಿಯರು, ಹೆಣ್ಣು ಮಕ್ಕಳು ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಸ್ನೇಹವನ್ನು ಎಂದಿಗೂ ಅನುಭವಿಸಲಾಗದಂಥ ವಾತಾವರಣವನ್ನು ನಾವು ಸೃಷ್ಟಿಸುತ್ತಿದ್ದೇವೆಯೇ? ದೇಶದಾದ್ಯಂತ ನಮ್ಮ ಮಕ್ಕಳು ಅತ್ಯಂತ ಹೀನಾಯ ಹಿಂಸೆಗೆ ಒಳಗಾಗುತ್ತಿದ್ದಾರೆ. ಇತ್ತೀಚೆಗಷ್ಟೆ ಒಬ್ಬ ಮುಗ್ಧ ಮಗುವನ್ನು ಕಲ್ಪನೆಯನ್ನೂ ಮಾಡಲಾಗದ ರೀತಿಯಲ್ಲಿ ಕೊಲೆಗೈಯ್ಯಲಾಗಿದೆ. ಇದು ದುರಂತ' ಎಂದು ಕತುವಾ ಪ್ರಕರಣವನ್ನು ನೆನಪಿಸಿಕೊಂಡರು.

English summary
President Ram Nath Kovind on Wednesday termed the crimes against children were "a deep concern for the humanity" and underlined the need for a firm resolve to provide safety to children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X