ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದಲ್ಲಿ ಕ್ರಿಕೆಟ್ ಪಂದ್ಯಕ್ಕೂ ಮುನ್ನ ಪಾಕ್ ರಾಷ್ಟ್ರಗೀತೆ

ಜಮ್ಮು-ಕಾಶ್ಮೀರದಲ್ಲಿ ವಾರದ ಹಿಂದೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಟಗಾರರು ಪಾಕಿಸ್ತಾನದ ರಾಷ್ಟ್ರಗೀತೆ ಹಾಡಿದ್ದಾರೆ. ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ

By ಒನ್‍ಇಂಡಿಯಾ ಪ್ರತಿನಿಧಿ
|
Google Oneindia Kannada News

ಶ್ರೀನಗರ, ಏಪ್ರಿಲ್ 6: ಕಾಶ್ಮೀರದ ಗಂದರ್ ಬಾಲ್ ಜಿಲ್ಲೆಯ ಸ್ಥಳೀಯ ಕ್ರಿಕೆಟ್ ತಂಡದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ಪಾಕಿಸ್ತಾನದ ರಾಷ್ಟ್ರಗೀತೆ ಹಾಡಿದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ವಿಡಿಯೋವೊಂದು ದೊರಕಿದ್ದು, ಆಟಗಾರರು ಪಾಕಿಸ್ತಾನ ತಂಡದ ಜೆರ್ಸಿ ಕೂಡ ತೊಟ್ಟಿರುವುದು ಕಂಡುಬಂದಿದೆ. ಎರಡು ಹಳ್ಳಿಗಳ ಮಧ್ಯೆ ಕಳೆದ ವಾರ ಈ ಪಂದ್ಯ ನಡೆದಿದೆ. ಈ ಬಗ್ಗೆ ವಿಚಾರಣೆ ನಡೆಸಲು ಬುಧವಾರ ತಂಡದ ಆಟಗಾರರನ್ನು ಕರೆಸಿ, ಆ ನಂತರ ಪ್ರಕರಣ ದಾಖಲಿಸಲಾಗಿದೆ.

ಭಾರತವು ಪಾಕಿಸ್ತಾನದ ಜತೆಗೆ ಕ್ರಿಕೆಟ್ ನಲ್ಲಿ ಮುಖಾಮುಖಿ ಆದಾಗ ಪಾಕ್ ತಂಡವನ್ನು ಬೆಂಬಲಿಸಿದ ಕಾರಣಕ್ಕೆ ಹಲವು ಬಾರಿ ಸಂಘರ್ಷಕ್ಕೆ ಕಾರಣವಾಗಿದೆ. ಪಾಕಿಸ್ತಾನದ ರಾಷ್ಟ್ರಗೀತೆ ಹಾಡುವುದು ಮತ್ತು ರಾಷ್ಟ್ರ ಧ್ವಜ ಹಾರಿಸುವಂತಹ ಘಟನೆ ಕಣಿವೆ ರಾಜ್ಯದಲ್ಲಿ ಈ ಹಿಂದೆ ಹಲವು ಬಾರಿ ನಡೆದಿದೆ. ಇಂತಹ ಘಟನೆಗಳು ನಡೆದಾಗ ಪೊಲೀಸರು ಕೂಡ ಪ್ರಕರಣ ದಾಖಲಿಸಿದ್ದಾರೆ.[ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ 800 ಕೋಟಿ ರು ಸುಪಾರಿ!]

Cricket Team In Kashmir Played Pak Anthem Before Match, Police Case Filed

ಈ ಬಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಐಎಸ್ ಐಎಸ್ ಹಾಗೂ ಪಾಕಿಸ್ತಾನ ಧ್ವಜ ಹಾರಿಸುವಂಥ ಘಟನೆಗಳು ಮುಂದುವರಿದರೆ ನಾವು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕಳೆದ ಫೆಬ್ರವರಿಯಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸ್ಥಳೀಯ ಕಾಶ್ಮೀರಿಗಳಿಗೆ ಎಚ್ಚರಿಕೆ ನೀಡಿದ್ದರು.

"ನಾವು ಸ್ಥಳೀಯರಲ್ಲಿ ಮನವಿ ಮಾಡುತ್ತಿದ್ದೇವೆ. ಶಸ್ತ್ರಾಸ್ತ್ರ ಕೈಗೆತ್ತಿಕೊಂಡರೆ, ಸ್ಥಳೀಯ ಹುಡುಗರನ್ನು ಬಳಸಿಕೊಂಡರೆ, ಭಯೋತ್ಪಾದನೆ ಚಟುವಟಿಕೆ ಮುಂದುವರಿಸಿದರೆ, ಪಾಕಿಸ್ತಾನ-ಐಎಸ್ ಐಎಸ್ ಧ್ವಜಗಳನ್ನು ಪ್ರದರ್ಶಿಸಿದರೆ ಅಂಥವರನ್ನು ರಾಷ್ಟ್ರ ವಿರೋಧಿಗಳಾಗಿ ಪರಿಗಣಿಸುತ್ತೀವಿ" ಎಂದು ರಾವತ್ ಎಚ್ಚರಿಸಿದ್ದರು.[ಭಾರತದ ಅತಿ ದೊಡ್ಡ ರಸ್ತೆ ಸುರಂಗ ಮಾರ್ಗದ ಬಗ್ಗೆ ನಿಮಗೇನು ಗೊತ್ತು?]

ಭಾರತೀಯ ಸೇನೆಯಿಂದ ನಡೆಯುತ್ತಿರುವ ಜನಸ್ನೇಹಿ ಕಾರ್ಯಾಚರಣೆಗಳಿಗೆ ಸ್ಥಳೀಯರಿಂದ ಅಗತ್ಯ ಬೆಂಬಲ ಸಿಗುತ್ತಿಲ್ಲ ಎಂದು ರಾವತ್ ಹೇಳಿದ್ದರು.

English summary
A police case has been filed against a local cricket team in Kashmir's Ganderbal district for allegedly playing the Pakistani national anthem before a match. A video has also surfaced, which shows the players wearing the jersey of the Pakistani team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X