• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಇನ್ನೊಬ್ಬರ 'ಬಾಳು ಬೆಳಗಬೇಕಾದವರು', ಅವರಿಂದಲೇ 'ಕತ್ತಲೆಯಾದರೆ'!

|
   ಮೋದಿ ರಾಜ್ಯಕ್ಕೆ ಅನ್ಯಾಯ ಮಾಡಲ್ಲ: ಸಿ.ಟಿ ರವಿ

   ನರ್ಮದಾ ಬಚಾವ್ ಆಂದೋಲನದ ನೇತೃತ್ವವನ್ನು ವಹಿಸಿಕೊಂಡಿರುವ ಮೇಧಾ ಪಾಟ್ಕರ್, ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. "ಸಾವಿರಾರು ಜನರ ಬಾಳು ಹಾಳಾಗಿದೆ' ಎಂದು ಕಾಂಗ್ರೆಸ್ ಕೂಡಾ ಗುರುತರ ಆರೋಪ ಮಾಡುತ್ತಿದೆ.

   " ಗುಜರಾತ್ ಸರಕಾರ ಸರ್ದಾರ್ ಸರೋವರ್ ಅಣೆಕಟ್ಟಿನ ನೀರಿನ ಮಟ್ಟವನ್ನು 138.68 ಮೀಟರ್‌ಗೆ ಏರಿಸಿದೆ. ಇದರಿಂದ, ಮಧ್ಯಪ್ರದೇಶದ ಮೂರು ಜಿಲ್ಲೆಗಳಾದ, ಧಾರ್, ಬರ್ವಾನಿ ಮತ್ತು ಅಲಿರಾಜ್‌ಪುರದ 192 ಗ್ರಾಮಗಳ ಜನರು ನಿರಾಶ್ರಿತರಾಗಿದ್ದಾರೆ" ಎಂದು ಮೇಧಾ ಪಾಟ್ಕರ್ ಆರೋಪಿಸಿದ್ದಾರೆ.

   ಕಾಂಗ್ರೆಸ್ಸಿಗರ ಚುಚ್ಚು ಮಾತಿಗಾದರೂ ಪ್ರಧಾನಿ ಮೋದಿ ಒಮ್ಮೆ ರಾಜ್ಯಕ್ಕೆ ಬರಬಾರದೇ?

   " ನೀವು ಮಾನವೀಯತೆಗೆ ಮೊದಲು ಆದ್ಯತೆ ನೀಡಿದ್ದರೆ, ಇಂದು ನಿರಾಶ್ರಿತರು ಕಣ್ಣೀರು ಹಾಕುತ್ತಿರಲಿಲ್ಲ" ಎಂದು ಕಾಂಗ್ರೆಸ್ , ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ದ ಕಿಡಿಕಾರಿದೆ. ಪ್ರಧಾನಿ "ನಮ್ಮ ಬಾಳಿಗೆ ಬೆಳಕಾಗಬೇಕು, ಅವರಿಂದ ಕತ್ತಲಾಗಬಾರದು" ಎಂದು ನಿರಾಶ್ರಿತರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

   ರಾಜ್ಯ ಮತ್ತು ಕೇಂದ್ರ ಎರಡಲ್ಲೂ ಬಿಜೆಪಿ ಸರ್ಕಾರವಿದ್ದರೂ ಬೀದಿ ಪಾಲಾದ ಕನ್ನಡ ಜನ

   " ಈ ವಿಚಾರದಲ್ಲಿ, ಬಿಜೆಪಿಯನ್ನು ದೂಷಿಸುವ ಯಾವುದೇ ಹಕ್ಕು ಕಾಂಗ್ರೆಸ್ಸಿಗೆ ಇಲ್ಲ. ಗಾಂಧಿ ಸಾಗರದ ನೀರನ್ನು ಹೊರಬಿಟ್ಟಿದ್ದರೆ, ಈ ಪರಿಸ್ಥಿತಿ ಎದುರಾಗುತ್ತಿಲ್ಲ. ಮಧ್ಯಪ್ರದೇಶ ಸರಕಾರ ನಿದ್ರಾವಸ್ಥೆಯಲ್ಲಿ ಇರುವುದರಿಂದ, ಈ ಸಮಸ್ಯೆ ಎದುರಾಗಿದೆ" ಎಂದು ಮಧ್ಯಪ್ರದೇಶದ ಮಾಜಿ ಸಿಎಂ, ಶಿವರಾಜ್ ಸಿಂಗ್ ಚೌಹಾಣ್ ತಿರುಗೇಟು ನೀಡಿದ್ದಾರೆ. ಏನಿದು, ಮೋದಿ ಮೇಲಿನ ಆರೋಪ?

   ಪ್ರಧಾನಿ ಮೋದಿಯವರ 69ನೇ ಹುಟ್ಟುಹಬ್ಬ

   ಪ್ರಧಾನಿ ಮೋದಿಯವರ 69ನೇ ಹುಟ್ಟುಹಬ್ಬ

   ಪ್ರಧಾನಿ ಮೋದಿಯವರ 69ನೇ ಹುಟ್ಟುಹಬ್ಬವನ್ನು (ಸೆ 17) ಸರ್ದಾರ್ ಸರೋವರ ಅಣೆಕಟ್ಟಿನ ತಟದಲ್ಲಿರುವ ಕೇವಡಿಯಾದಲ್ಲಿ ಆಚರಿಸಲಾಗಿತ್ತು. ಮೋದಿಯವರ ಹುಟ್ಟುಹಬ್ಬಕ್ಕೆಂದೇ, ಅಣೆಕಟ್ಟಿಗೆ ನೀರು ಹರಿಸಲಾಗಿತ್ತು. ಇದರ ಹಿನ್ನೀರಿನಿಂದ ಹಲವು ಗ್ರಾಮಗಳಿಗೆ ಜಲಾವೃತಗೊಂಡಿದ್ದವು. ಇದರಿಂದ, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ ಎನ್ನುವುದು ವಾಸ್ತವತೆ ಎಂದು ಹೇಳಲಾಗುತ್ತಿದೆ.

   ಗುಜರಾತ್ ಸರ್ಕಾರ ಅಣೆಕಟ್ಟಿನ ನೀರಿನ ಮಟ್ಟವನ್ನು ಏರಿಸಿತ್ತು

   ಗುಜರಾತ್ ಸರ್ಕಾರ ಅಣೆಕಟ್ಟಿನ ನೀರಿನ ಮಟ್ಟವನ್ನು ಏರಿಸಿತ್ತು

   " ಪ್ರಧಾನಿಯವರ ಜನ್ಮದಿನ ಆಚರಿಸುವ ಸಲುವಾಗಿಯೇ ಗುಜರಾತ್ ಸರಕಾರ ಅಣೆಕಟ್ಟಿನ ನೀರಿನ ಮಟ್ಟವನ್ನು ಏರಿಸಿತ್ತು. ಅವರ, ಈ ಹುಟ್ಟುಹಬ್ಬದ ಆಚರಣೆಯನ್ನು ನಾವು ಹಾಳು ಮಾಡುತ್ತೇವೆ. ಅವರಿಗೆ ದೇವರು ಸುದೀರ್ಘ ಜೀವನವನ್ನು ನೀಡಲಿ. ದೇಶದ ಪ್ರಧಾನಮಂತ್ರಿಯಗಿ, ಇದರಿಂದಾಗುವ ತೊಂದರೆಯನ್ನು ಅವರು ಅರ್ಥಮಾಡಿಕೊಳ್ಳಬೇಕಿತ್ತು "ಎಂದು ಮೇಧಾ ಪಾಟ್ಕರ್ ಟೀಕಿಸಿದ್ದಾರೆ. (ಚಿತ್ರದಲ್ಲಿ: ಗುಜರಾತ್ ಸಿಎಂ ವಿಜಯ್ ರೂಪಾನಿ)

   ಅಣೆಕಟ್ಟಿನ ಹಿನ್ನೀರು

   ಅಣೆಕಟ್ಟಿನ ಹಿನ್ನೀರು

   " ಅಣೆಕಟ್ಟಿನ ಹಿನ್ನೀರು ಭಾಗಶಃ ಅಥವಾ ಸಂಪೂರ್ಣವಾಗಿ ಮಧ್ಯಪ್ರದೇಶದ ಬರ್ವಾನಿ, ಧಾರ್, ಅಲಿರಾಜ್‌ಪುರ ಮತ್ತು ಖಾರ್ಗೋನ್ ಜಿಲ್ಲೆಗಳ 192 ಗ್ರಾಮಗಳನ್ನು ಆವರಿಸಿಕೊಂಡಿದೆ. ಈ ಪ್ರದೇಶಗಳಲ್ಲಿ ವಾಸಿಸುವವರ ಸಂಪೂರ್ಣ ಪುನರ್ವಸತಿ ಕಲ್ಪಿಸಿದ ನಂತರವೇ ದ್ವಾರಗಳನ್ನು ಮುಚ್ಚಬೇಕೆನ್ನುವುದು ನಮ್ಮ ಕೋರಿಕೆ" ಎಂದು ಚಳವಳಿಯ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

   ಇದೇ ಮೊದಲ ಬಾರಿಗೆ ಸರ್ದಾರ್ ಸರೋವರ್ ಅಣೆಕಟ್ಟು ತುಂಬಿರುವುದನ್ನು ನೋಡುತ್ತಿದ್ದೇವೆ

   ಇದೇ ಮೊದಲ ಬಾರಿಗೆ ಸರ್ದಾರ್ ಸರೋವರ್ ಅಣೆಕಟ್ಟು ತುಂಬಿರುವುದನ್ನು ನೋಡುತ್ತಿದ್ದೇವೆ

   ಹುಟ್ಟುಹಬ್ಬದ ವೇಳೆ ಮಾತನಾಡುತ್ತಾ ಮೋದಿ, "ನಾವು ಇದೇ ಮೊದಲ ಬಾರಿಗೆ ಸರ್ದಾರ್ ಸರೋವರ್ ಅಣೆಕಟ್ಟು ತುಂಬಿರುವುದನ್ನು ನೋಡುತ್ತಿದ್ದೇವೆ. 122 ಮೀಟರ್ ತಲುಪುವುದೇ ಒಂದು ದೊಡ್ಡ ವಿಷಯವಾಗಿತ್ತು. ಆದರೆ, ಈ ಕಳೆದ 5 ವರ್ಷಗಳಲ್ಲಿ, ಸರ್ದಾರ್ ಸರೋವರ್ 138 ಮೀಟರ್ ರವರೆಗೆ ತುಂಬಿರುವುದನ್ನು ನೋಡುವುದು ಆಶ್ಚರ್ಯಕರ ಮತ್ತು ಮರೆಯಲಾಗದ ಸಂಗತಿ" ಎಂದು ಪ್ರಧಾನಿಗಳು ಹೇಳಿದ್ದರು.

    ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಆರೋಪ

   ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಆರೋಪ

   ಒಟ್ಟಾರೆಯಾಗಿ, ಮೋದಿಯವರ ಹುಟ್ಟುಹಬ್ಬದ ಆಚರಣೆಗಾಗಿ ಅಣೆಕಟ್ಟಿಗೆ ಹೆಚ್ಚಿನ ನೀರು ಬಿಡಲಾಗಿತ್ತು. ಹಿನ್ನೀರಿನ ಭಾಗದ ಜನರಿಗೆ ಪುನರ್ವಸತಿ ಕಲ್ಪಿಸದ ನಂತರವಷ್ಟೇ ಅಣೆಕಟ್ಟಿಗೆ ನೀರು ಬಿಡಬೇಕು ಎನ್ನುವ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಆರೋಪವೂ ಗುಜರಾತ್ ಸರಕಾರದ ವಿರುದ್ದ ಕೇಳಿಬರುತ್ತಿದೆ.

   ಪ್ರಧಾನಮಂತ್ರಿ ಕಾರ್ಯಾಲಯವೇ ಇದರ ಉಸ್ತುವಾರಿಯನ್ನು ನೋಡಲಿ

   ಪ್ರಧಾನಮಂತ್ರಿ ಕಾರ್ಯಾಲಯವೇ ಇದರ ಉಸ್ತುವಾರಿಯನ್ನು ನೋಡಲಿ

   ಸರಕಾರದ ತಪ್ಪು ನಿರ್ಧಾರದಿಂದ, ಸಾವಿರಾರು ಜನರ ಬಾಳು ಬೀದಿಗೆ ಬಂದಿದೆ. ತಪ್ಪು ಮಾಡಿಯಾಗಿದೆ, ಇನ್ನಾದರೂ, ರಾಜಕೀಯ ಕೆಸೆರೆರೆಚಾಟ ಮಾಡುವುದನ್ನು ನಿರಾಶ್ರಿತರಿಗೆ ದಾರಿದೀಪವಾಗುವ ಕೆಲಸವನ್ನು ಸರಕಾರ ಮಾಡಬೇಕಿದೆ. ಪ್ರಧಾನಮಂತ್ರಿ ಕಾರ್ಯಾಲಯವೇ ಇದರ ಉಸ್ತುವಾರಿಯನ್ನು ನೋಡಿಕೊಂಡರೆ, ಹುದ್ದೆಯ ಘನತೆ ಇನ್ನಷ್ಟು ಹೆಚ್ಚುತ್ತದೆ, ಎನ್ನುವುದು ಚಳುವಳಿಕಾರರ ಮತ್ತು ಮೇಧಾ ಪಾಟ್ಕರ್ ಅವರ ಅಭಿಪ್ರಾಯ. (ಚಿತ್ರ: ಎಎನ್ಐ)

   English summary
   Created Problems For Thousands Becase Of Prime Minsiter NarendraModi Birthday Celeberation At Sardar Sarovar Dam On Sep 17, Meda Pathkar and Congress.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more