ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಮ್ ಆದ್ಮಿ ಪಕ್ಷದೊಳಗಿನ ಭಿನ್ನಮತಕ್ಕೆ ಕಾರಣವೇನು?

|
Google Oneindia Kannada News

ನವದೆಹಲಿ, ಮಾ. 2: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲವು ಸಾಧಿಸಿ ಇತಿಹಾಸ ನಿರ್ಮಿಸಿದ್ದ ಆಮ್ ಆದ್ಮಿ ಪಕ್ಷದಲ್ಲೀಗ ಭಿನ್ನಮತ ಭುಗಿಲೆದ್ದಿದೆ. ದೆಹಲಿಯಲ್ಲಿ ಗೆದ್ದು ಸರ್ಕಾರ ರಚನೆ ಮಾಡಿದ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧವೇ ಅಸಮಾಧಾನ ವ್ಯಕ್ತವಾಗಿದೆ.

ಪಕ್ಷ ತೊರೆದ ನಾಯಕರು ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂದು ಹೇಳುತ್ತಿದ್ದರು. ಆದರೆ ಈಗ ಪಕ್ಷದೊಳಗಿರುವ ನಾಯಕರೇ ನಾಯಕತ್ವದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.[ದೆಹಲಿ ಚುನಾವಣೆಯಲ್ಲಿ ಸೋತ ಪ್ರಮುಖ ನಾಯಕರು]

app

ಆರಂಭವಾಗಿದ್ದು ಎಲ್ಲಿ?

ಯಾವಾಗ ಪ್ರಶಾಂತ್ ಭೂಷಣ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಗೆ ಪತ್ರ ಬರೆದು ಪಾರದರ್ಶಕತೆ ಮಾಯವಾಗಿದೆ ಎಂದು ಹೇಳಿದ್ದರೋ ಆಗಲೇ ಅಸಮಾಧಾನ ಆರಂಭವಾಗಿತ್ತು. ಆಮ್ ಆದ್ಮಿ ಪಕ್ಷ 'ಒಬ್ಬ ಮನುಷ್ಯ'ನ ಹಿಡಿತಕ್ಕೆ ಸಿಲುಕುತ್ತಿದೆ ಎಂದು ಭೂಷಣ್ ಆರೋಪಿಸಿದ್ದರು.

ಕಳೆದ ವಾರ ದೆಹಲಿಯಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಈ ಗೊಂದಲಗಳು ಸ್ಪಷ್ಟ ರೂಪ ಪಡೆದುಕೊಂಡವು. ಸೇನೆಯ ಮಾಜಿ ಅಧಿಕಾರಿ ಆಮ್ ಆದ್ಮಿ ಪಕ್ಷದ ಲೋಕಪಾಲ್ ಅಡ್ಮಿರಲ್ ರಾಮ್ ದಾಸ್, ಪಕ್ಷ ಹಾದಿ ತಪ್ಪುತ್ತಿದೆ, ಮಹಿಳೆಯರ ಭಾಗವಹಿಸುವಿಕೆ ಮಾಯವಾಗಿದೆ ಎಂದು ಎಚ್ಚರಿಸಿದ್ದರು.[ದೆಹಲಿ ಜನರಿಗೆ ಭರ್ಜರಿ ಕೊಡುಗೆ ನೀಡಿದ ಆಪ್ ಸರ್ಕಾರ]

aap 2

ಪಕ್ಷದ ಸ್ಥಳೀಯ ನಾಯಕರು ಮತ್ತು ಹಿರಿಯ ಮುಖಂಡರ ನಡುವಿನ ಸಂಬಂಧಗಳು ಸರಿಯಾಗಿಲ್ಲ. ಸಂವಹನ ಕೊರತೆ ಎದ್ದು ಕಾಣುತ್ತಿದೆ ಎಂದು ತಿಳಿಸಿದ್ದರು. ಈಗ ಪಕ್ಷದ ಪ್ರಮುಖ ನಾಯಕ ಯೋಗೇಂದ್ರ ಯಾದವ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ಆಂತರಿಕ ಅಸಮಾಧಾನ ಇದೇ ಮೊದಲಲ್ಲ
ಈ ಬಾರಿ ಬಿಜೆಪಿ ಸೇರಿರುವ ವಿನೋದ್ ಕುಮಾರ್ ಬಿನ್ನಿ ಆಮ್ ಆದ್ಮಿಯಿಂದ ಶಾಸಕರಾಗಿದ್ದಾಗ ಆಮ್ ಆದ್ಮಿ ಪಕ್ಷದಲ್ಲಿ ನಿರ್ಣಯಗಳನ್ನು ಕೆಲವೇ ಜನ ತೆಗೆದುಕೊಳ್ಳುತ್ತಿದ್ದಾರೆ. ಎಲ್ಲರ ಭಾಗವಹಿಸುವಿಕೆಗೆ ಅವಕಾಶವೇ ಇಲ್ಲವಾಗಿದೆ ಎಂದು ಆರೋಪಿಸಿದ್ದರು.

2014 ರಲ್ಲಿ ಪಕ್ಷ ತೊರೆದ ಶಾಜಿಯಾ ಇಲ್ಮಿ, ಪಕ್ಷದೊಳಗೆ ಪ್ರಜಾಪ್ರಭುತ್ವ ಮಾಯವಾಗಿದೆ. ನಾವು ಸರ್ವಾಧಿಕಾರವನ್ನು ವಿರೋಧಿಸಲು ಪಕ್ಷ ಕಟ್ಟಿಕೊಂಡೆವು ಆದರೆ ಈಗ ನಾವೇ ಸರ್ವಾಧಿಕಾರದಡಿ ಬಳಲುವಂತಾಗಿದೆ ಎಂದು ಆರೋಪಿಸಿದ್ದರು.[ಆಮ್ ಆದ್ಮಿ ನಾಯಕಿ ಶಾಜಿಯಾ ರಾಜೀನಾಮೆ]

ಈ ವರ್ಷದ ಆರಂಭದಲ್ಲಿ ಶಾಂತಿ ಭೂಷಣ್ ಹೇಳಿದ್ದ ಮಾತುಗಳು ಅರವಿಂದ್ ಕೇಜ್ರಿವಾಲ್ ವಿರುದ್ಧ ಕಿಡಿ ಹೊತ್ತಿಸಿದ್ದವು. ಪಕ್ಷ ಕಟ್ಟುವ ಹೆಸರಿನಲ್ಲಿ ನಿಜವಾದ ಪ್ರಾಮಾಣಿಕರು ಸ್ಥಾನ ಕಳೆದುಕೊಳ್ಳುತ್ತಿದ್ದಾರೆ ಎಂದು ಶಾಂತಿ ಭೂಷಣ್ ಆರೋಪಿಸಿದ್ದರು.

ಎಎಪಿಗೆ ಎಎಪಿನೇ ಶತ್ರು!

ಬಿಜೆಪಿಯಿಂದ ಆಮ್ ಆದ್ಮಿ ಪಕ್ಷಕ್ಕೆ ಗಂಡಾಂತರವಿದೆ ಎಂದು ಹೇಳಲಾಗಿತ್ತು. ಆದರೆ ಈಗ ಬದಲಾದ ಪರಿಸ್ಥಿತಿಯಲ್ಲಿ ಪಕ್ಷದ ಕೆಲ ಘಟನಾವಳಿಗಳೇ ಪಕ್ಷಕ್ಕೆ ಮುಳ್ಳಾಗಿ ಪರಿಣಮಿಸುತ್ತಿದೆ. ಆಂತರಿಕ ಕಲಹ ಪಕ್ಷದ ಇಮೇಜಿಗೂ ಧಕ್ಕೆ ತರುತ್ತಿದೆ.

ದೆಹಲಿ ಜನರು ಆಮ್ ಆದ್ಮಿ ಪಾರ್ಟಿಗೆ ಸಂಪೂರ್ಣ ಬಹುಮತ ನೀಡಿದ್ದಾರೆ. ಕಚ್ಚಾಟವನ್ನು ಪಕ್ಷ ಮೊದಲು ಬಗೆಹರಿಸಿಕೊಂಡು ಜನರ ಅಭಿವೃದ್ಧಿಯತ್ತ ಗಮನ ಹರಿಸಬೇಕಿದೆ.

English summary
After an unprecedented win over the BJP in the recent Delhi Assembly elections, AAP is now grappling with a rift that may affect its future prospects in Delhi. Just days after the party emerged victorius in the Delhi Assembly elections, AAP is on a shaky ground now with reports of rift within the party being exposed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X