ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಯಾಣದಲ್ಲಿ ಪ್ರತಿಭಟನಾನಿರತ 'ರೈತರ ತಲೆ ಒಡಿಯಿರಿ' ಎಂದ ಅಧಿಕಾರಿ ವಿರುದ್ಧ ಕ್ರಮ

|
Google Oneindia Kannada News

ನವದೆಹಲಿ, ಆಗಸ್ಟ್ 29: ಹರಿಯಾಣದಲ್ಲಿ ಪ್ರತಿಭಟನಾನಿರತ ರೈತರ ತಲೆಗಳನ್ನು ಒಡೆದು ಹಾಕಿರಿ ಎಂದು ಪೊಲೀಸರಿಗೆ ಆದೇಶಿಸಿದ ಸರ್ಕಾರಿ ಅಧಿಕಾರಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಉಪ ಮುಖ್ಯಮಂತ್ರಿ ದುಶ್ಯಂತ್ ಚೌತಾಲಾ ಎಚ್ಚರಿಸಿದ್ದಾರೆ.
"ಹರಿಯಾಣ ಕರ್ನಾಲ್ ಜಿಲ್ಲೆಯ ಘರೌದಾ ಟೋಲ್ ಪ್ಲಾಜಾದ ಬಳಿ ಪ್ರತಿಭಟನಾನಿರತ ರೈತರ ಮೇಲೆ ದಯೆದಾಕ್ಷಿಣ್ಯ ಇರದಂತೆ ಲಾಠಿ ಬೀಸಿರಿ. ನಿಯಮಗಳನ್ನು ಉಲ್ಲಂಘಿಸಿದವರ ತಲೆಗಳನ್ನು ಒಡೆದು ಹಾಕಿರಿ," ಎಂದು ಉಪ ವಿಭಾಗಾಧಿಕಾರಿ ಆಯುಷ್ ಸಿನ್ಹಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ಹರಿಯಾಣ ರೈತರ ಮೇಲೆ ಲಾಠಿ ಚಾರ್ಜ್: 'ಮತ್ತೆ ರಕ್ತ ಹರಿದಿದೆ' ಎಂದ ರಾಹುಲ್‌ ಗಾಂಧಿಹರಿಯಾಣ ರೈತರ ಮೇಲೆ ಲಾಠಿ ಚಾರ್ಜ್: 'ಮತ್ತೆ ರಕ್ತ ಹರಿದಿದೆ' ಎಂದ ರಾಹುಲ್‌ ಗಾಂಧಿ

ಕರ್ನಾಲ್ ಜಿಲ್ಲಾ ಉಪ ವಿಭಾಗಾಧಿಕಾರಿ ಅಯುಷ್ ಸಿನ್ಹಾ ನೀಡಿದ ಹೇಳಿಕೆಗೆ ಬಿಜೆಪಿ ಸಂಸದ ವರುಣ್ ಗಾಂಧಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಹಾಗೂ ರೈತರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಅಧಿಕಾರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು.

‘Crack their Heads; Strict Action will takes Against Ayush Sinha for his Statement on Farmers

ಆಯುಷ್ ಸಿನ್ಹಾ ವಿರುದ್ಧ ಕಠಿಣ ಕ್ರಮ:
"2018 ಬ್ಯಾಚ್ ಭಾರತೀಯ ಆಡಳಿತ ಸೇವೆ ಅಧಿಕಾರಿ ಆಯುಷ್ ಸಿನ್ಹಾ ನೀಡಿದ ಹೇಳಿಕೆಯ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಮಾತನಾಡಿರುವ ಅಧಿಕಾರಿಯು ತಾವು ಎರಡು ದಿನಗಳಿಂದ ನಿದ್ದೆ ಮಾಡಿರಲಿಲ್ಲ ಎಂದಿದ್ದಾರೆ. ಆದರೆ ರೈತರು ಕಳೆದ 365 ದಿನಗಳಿಂದ ನಿದ್ದೆಗೆಟ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಏಕೆಂದರೆ ತರಬೇತಿ ದಿನಗಳಲ್ಲೇ ಅವರು ಅಧಿಕಾರಿಗಳಲ್ಲಿನ ಸೂಕ್ಷ್ಮತೆ ಬಗ್ಗೆ ತಿಳಿದುಕೊಂಡಿರಬೇಕಿತ್ತು," ಸಚಿವ ದುಷ್ಯಂತ್ ಚೌತಾಲಾ ಹೇಳಿದ್ದಾರೆ.

ಹರಿಯಾಣದಲ್ಲಿ ನಡೆದ ಲಾಠಿಚಾರ್ಜ್ ಘಟನೆ:
ಕಳೆದ ಶನಿವಾರವಷ್ಟೇ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಬಿಜೆಪಿ ಮುಖ್ಯಸ್ಥ ಓಂಪ್ರಕಾಶ್ ಧಂಕಾರ್ ಮತ್ತು ಹಿರಿಯ ಮುಖಂಡರು ಭಾಗಿಯಾದ ಸಭೆಗೆ ರೈತರು ವಿರೋಧ ವ್ಯಕ್ತಪಡಿಸಿದರು. ಕರ್ನಾಲ್ ಜಿಲ್ಲೆಯ ಘರೌದಾ ಟೋಲ್ ಪ್ಲಾಜಾದ ಬಳಿ ರೈತರ ಪ್ರತಿಭಟಿಸಿ ರಸ್ತೆ ತಡೆಸಿದರು. ರೈತರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಈ ವೇಳೆ 10ಕ್ಕೂ ಹೆಚ್ಚು ಮಂದಿ ರೈತರು ಗಾಯಗೊಂಡಿದ್ದರು.

ವಿವಾದಾತ್ಮಕ ವಿಡಿಯೋದಲ್ಲಿ ಉಲ್ಲೇಖವಾಗಿದ್ದೇನು?:
ಪೊಲೀಸ್ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಲ್ ಉಪ ವಿಭಾಗಾಧಿಕಾರಿ ಆಯುಷ್ ಸಿನ್ಹಾ, "ಬ್ಯಾರಿಕೇಡ್ ಹಾಕಿರುವ ಪ್ರದೇಶದಿಂದ ಒಬ್ಬರೇ ಒಬ್ಬ ಪ್ರತಿಭಟನಾನಿರತ ರೈತರು ಒಳಗೆ ಬರುವಂತಿಲ್ಲ. ಇದು ತುಂಬಾ ಸರಳ ಮತ್ತು ಸ್ಪಷ್ಟವಾದ ಸಂದೇಶವಾಗಿದೆ. ಅಲ್ಲಿಗೆ ತಲುಪಲು ಯಾರೊಬ್ಬರಿಗೂ ಅನುಮತಿ ಅಥವಾ ಅವಕಾಶ ನೀಡಬಾರದು. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿ ಗಡಿಯನ್ನು ದಾಟಿ ಪ್ರವೇಶಿಸಿದರೆ ನಿಮ್ಮ ಲಾಠಿಗಳನ್ನು ಕೈಗೆತ್ತಿಕೊಳ್ಳಿ ಹಾಗೂ ಅವರಿಗೆ ಬಲವಾಗಿ ಹೊಡೆಯಿರಿ. ಇದು ಬಹಳ ಸ್ಪಷ್ಟವಾಗಿದ್ದು, ಯಾವುದೇ ನಿರ್ದೇಶನಕ್ಕಾಗಿ ಎದುರು ನೋಡುವ ಅಗತ್ಯವಿಲ್ಲ. ಅವರ ಮೇಲೆ ಬಲವಾಗಿ ಹೊಡೆಯಿರಿ. ಒಂದು ವೇಳೆ ನಾನು ಇಲ್ಲಿ ಪ್ರತಿಭಟನಾನಿರತರನ್ನು ನೋಡಿದರೆ, ಅವರ ತಲೆಯನ್ನು ಒಡೆದುಕೊಂಡಿರಬೇಕು. ಅವರ ತಲೆಯನ್ನು ಒಡೆಯುವಷ್ಟು ಬಲವಾಗಿ ನೀವು ಹೊಡೆಯಬೇಕು," ಎಂದು ಸಿನ್ಹಾ ಹೇಳಿಕೆ ನೀಡಿದರೆ ಪೊಲೀಸ್ ಸಿಬ್ಬಂದಿ ಅದಕ್ಕೆ ಸರಿ ಎಂದು ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಹರಿಯಾಣದಲ್ಲಿ ರೈತರ ಮೇಲಿನ ಲಾಠಿಚಾರ್ಜ್:
ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ನಿಯಂತ್ರಿಸಲು ಅತ್ಯಂತ ಕಡಿಮೆ ಪ್ರಮಾಣದ ಭದ್ರತಾ ಪಡೆ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿತ್ತು ಎಂದು ಕರ್ನಾಲ್ ಪೊಲೀಸ್ ಐಜಿ ಮಮತಾ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಘಟನೆ ನಂತರ ಆ ಪ್ರದೇಶದಲ್ಲಿನ ಚಿತ್ರಣ ಬೇರೆಯದ್ದೇ ಕಥೆಯನ್ನು ಹೇಳುತ್ತದೆ. ರೈತರ ಬಟ್ಟೆಗಳಿಗೆ ನೆತ್ತರು ಅಂಟಿಕೊಂಡಿದ್ದರೆ, ಹಲವು ಬ್ಯಾಂಡೆಜ್ ಹಾಕಿಕೊಂಡಿದ್ದಾರೆ. ಇನ್ನು ಕೆಲವು ಮಂದಿ ಗಂಭೀರವಾಗಿ ಗಾಯಗೊಂಡಿರುವುದರ ಬಗ್ಗೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರೈತರು ಹಾಗೂ ವಿರೋಧ ಪಕ್ಷಗಳ ಆಗ್ರಹದ ನಡುವೆಯೂ ಕರ್ನಾಲ್ ಉಪ ವಿಭಾಗಾಧಿಕಾರಿ ಆಯುಷ್ ಸಿನ್ಹಾ ವಿರುದ್ಧ ಯಾವುದೇ ರೀತಿ ಕಾನೂನು ಕ್ರಮ ತೆಗೆದುಕೊಂಡಿಲ್ಲ ಎಂದು ದೂಷಿಸಲಾಗುತ್ತಿದೆ.

English summary
‘Crack their Heads'; Strict Action will takes Against Govt Officer Ayush Sinha for his Statement on Protesting Farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X