• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಷ್ಟ್ರೀಯ ಪಕ್ಷ ಸ್ಥಾನಮಾನ ಕಳೆದುಕೊಳ್ಳುವ ಭೀತಿಯಲ್ಲಿ ಸಿಪಿಐ

|

ನವದೆಹಲಿ, ಜೂನ್ 07: ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆಯೋ ಸುನಾಮಿಯೋ ಎಡಪಕ್ಷಗಳಿಗೆ ಸರಿಯಾದ ಹೊಡೆತವಂತೂ ಬಿದ್ದಿದೆ. ಪುರಾತನ ಪಕ್ಷ ಕಾಂಗ್ರೆಸ್ಸಿಗೆ ವಿಪಕ್ಷ ಸ್ಥಾನ ಮಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಪ್ರಮುಖ ಪಕ್ಷಗಳಾದ ಸಿಪಿಐಗೆ ರಾಷ್ಟ್ರೀಯ ಪಕ್ಷ ಸ್ಥಾನಮಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ.

2014ರ ಲೋಕಸಭೆ ಚುನಾವಣೆ ಬಳಿಕ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಹಾಗೂ ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ ಸಿಪಿ) ಗಳಿಗೆ ರಾಷ್ಟ್ರೀಯ ಪಕ್ಷ ಸ್ಥಾನಮಾನ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಆದರೆ, 2016ರಲ್ಲಿ ಚುನಾವಣಾ ಆಯೋಗವು ತನ್ನ ನೀತಿ, ನಿಯಮದಲ್ಲಿ ಬದಲಾವಣೆ ಮಾಡಿದ್ದರಿಂದ ಎರಡು ಪಕ್ಷಗಳು ಬಚಾವಾಗಿದ್ದವು.

ಲೋಕಸಭೆ ಚುನಾವಣೆ ಫಲಿತಾಂಶ: ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

1968ರ ಚುನಾವಣಾ ಚಿನ್ಹೆ ಕಾಯ್ದಿರಿಸುವುದು ಹಾಗೂ ಹಂಚಿಕೆ ಆದೇಶದ ಅನ್ವಯ ರಾಷ್ಟ್ರೀಯ ಪಕ್ಷ ಎನಿಸಿಕೊಂಡ ಪಕ್ಷದ ಅಭ್ಯರ್ಥಿಗಳು ಶೇ 6ರಷ್ಟು ಮತಗಳಿಕೆ ಹೊಂದಿರಬೇಕು. ಕನಿಷ್ಠ ನಾಲ್ಕ ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಈ ಸಾಧನೆ ಮಾಡಿರಬೇಕು. ಕನಿಷ್ಠ 4 ಅಭ್ಯರ್ಥಿಗಳು ಗೆಲುವು ಸಾಧಿಸಿರಬೇಕು.

ಆದರೆ, ಸಿಪಿಐನ ಇಬ್ಬರು ಮಾತ್ರ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ, ರಾಜ್ಯದ ಪಕ್ಷವಾಗಿ ಕೇರಳದಲ್ಲಿ 2016ರಲ್ಲಿ 19ರಲ್ಲಿ ಹೊಂದುವ ಮೂಲಕ ಹಾಗೂ ಮಣಿಪುರದಲ್ಲಿ 8.3% ಮತಗಳಿಸಿದ್ದು ಬಿಟ್ಟರೆ ಮಿಕ್ಕ ಕಡೆಗಳಲ್ಲಿ ಸೋಲು ಕಂಡಿದೆ.

ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್, ಭಾರತೀಯ ಜನತಾ ಪಕ್ಷ, ಬಿ ಎಸ್ಪಿ, ಸಿಪಿಐ, ಸಿಪಿಐಎಂ, ಕಾಂಗ್ರೆಸ್, ಎನ್ ಸಿಪ್ ಪ್ರಮುಖ ರಾಷ್ಟ್ರೀಯ ಪಕ್ಷಗಳಾಗಿ ಏಪ್ರಿಲ್ 11 ರಿಂದ ಮೇ 19ರ ತನಕ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು.

'ಚುನಾವಣಾ ಆಯೋಗ ತೆಗೆದುಕೊಳ್ಳುವ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ, ರಾಷ್ಟ್ರೀಯ ಸ್ಥಾನಮಾನ ಸಿಗದಿದ್ದರೂ ನಮ್ಮ ಕಾರ್ಯ ಮುಂದುವರೆಸುತ್ತೇವೆ' ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಎಸ್ ಸುಧಾಕರ್ ರೆಡ್ಡಿ ಹೇಳಿದ್ದಾರೆ.

English summary
The Communist Party of India (CPI) is likely to lose its national party status following the debacle in the just-concluded Lok Sabha elections in which the party won just two seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X