ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಡುವೆ ಅಂತರವಿರಲಿ: ಕೊವಿಶೀಲ್ಡ್ ಲಸಿಕೆ 2 ಡೋಸ್ ಹಾಗೂ 84 ದಿನಗಳ ವ್ಯತ್ಯಾಸ

|
Google Oneindia Kannada News

ನವದೆಹಲಿ, ಮೇ 17: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಕೊರತೆ ಸೃಷ್ಟಿಯಾಗಿರುವುದರ ನಡುವೆ ಕೊವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಮತ್ತು ಎರಡನೇ ಡೋಸ್ ನಡುವಿನ ಅಂತರವನ್ನು 12 ರಿಂದ 16 ವಾರಗಳಿಗೆ ಹೆಚ್ಚಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್ ನಡುವಿನ ಅಂತರವನ್ನು ಹೆಚ್ಚಿಸುವ ಉದ್ದೇಶದಿಂದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕೃತ ಸಾಮಾಜಿಕ ಜಾಲತಾಣ Cowin ಅಪ್ಲಿಕೇಷನ್ ಅನ್ನು ಪುನಾರಚಿಸಲಾಗುತ್ತಿದೆ. ಈಗಾಗಲೇ ನಿಗದಿಯಾಗಿರುವ 2ನೇ ಡೋಸ್ ದಿನಾಂಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿದು ಬಂದಿದೆ.

ಕೊವಿಡ್-19 ಪಾಸಿಟಿವಿಟಿ: ಟಾಪ್-5 ಪಟ್ಟಿಯಲ್ಲಿ ಬಳ್ಳಾರಿ, ಉತ್ತರ ಕನ್ನಡ ಜಿಲ್ಲೆ!ಕೊವಿಡ್-19 ಪಾಸಿಟಿವಿಟಿ: ಟಾಪ್-5 ಪಟ್ಟಿಯಲ್ಲಿ ಬಳ್ಳಾರಿ, ಉತ್ತರ ಕನ್ನಡ ಜಿಲ್ಲೆ!

ಡಾ. ಎನ್ ಕೆ ಅರೋರಾ ನೇತೃತ್ವದ ಕೊವಿಡ್-19 ಕಾರ್ಯಪಡೆಯು ಕೊವಿಶೀಲ್ಡ್ ಲಸಿಕೆ ನೀಡುವ ಸಂದರ್ಭದಲ್ಲಿ ಎರಡು ಡೋಸ್ ನಡುವಿನ ಅಂತರವನ್ನು ಹೆಚ್ಚಿಸಬೇಕು ಎಂದು ಶಿಫಾರಸ್ಸು ಮಾಡಿತ್ತು. 12-16 ವಾರಗಳಿಗೆ ಅಂತರವನ್ನು ಹೆಚ್ಚಿಸುವ ಶಿಫಾರಸ್ಸಿಗೆ ಕಳೆದ ಮೇ 13ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅನುಮತಿ ನೀಡಿತ್ತು. ಅಲ್ಲದೇ ಈ ಸಂಬಂಧ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶವನ್ನು ರವಾನಿಸಲಾಗಿತ್ತು.

CoWin ಅಪ್ಲಿಕೇಶನ್ ಪರಿಷ್ಕರಣೆ

CoWin ಅಪ್ಲಿಕೇಶನ್ ಪರಿಷ್ಕರಣೆ

ಕೊವಿಡ್-19 ಕಾರ್ಯಪಡೆ ನೀಡಿರುವ ಶಿಫಾರಸ್ಸಿಗೆ ಪೂರಕವಾಗಿ CoWin ಅಪ್ಲಿಕೇಷನ್ ನಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್ ನಡುವಿನ ಅಂತರ ಕಡ್ಡಾಯವಾಗಿ 84 ದಿನಗಳಿರಬೇಕು. ಈ ಅಂತರಕ್ಕಿಂತ ಕಡಿಮೆಯಾಗಿದ್ದಲ್ಲಿ ಹೆಸರು ನೋಂದಣಿ ಅಥವಾ ಎರಡನೇ ಲಸಿಕೆ ಪಡೆಯಲು ದಿನಾಂಕ ನಿಗದಿಗೊಳಿಸಲು ಅವಕಾಶವೇ ಇರುವುದಿಲ್ಲ. ಮೊದಲ ಡೋಸ್ ಪಡೆದ ನಂತರದಲ್ಲಿ 84 ದಿನಗಳ ಅಂತರಕ್ಕೆ ಹೋಲಿಕೆಯಾಗುವ ರೀತಿಯಲ್ಲಿ ದಿನಾಂಕ ನಿಗದಿಗೊಳಿಸಲು ಸಾಧ್ಯವಾಗುತ್ತದೆ.

ಮಾಧ್ಯಮಗಳ ವರದಿ ಬಗ್ಗೆಯೂ ಉಲ್ಲೇಖ

ಮಾಧ್ಯಮಗಳ ವರದಿ ಬಗ್ಗೆಯೂ ಉಲ್ಲೇಖ

ಕೊವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಪಡೆಯುವುದಕ್ಕಾಗಿ ಈಗಾಗಲೇ ದಿನಾಂಕವನ್ನು ನಿಗದಿಗೊಳಿಸಿದವರಿಗೂ ಆತಂಕ ಎದುರಾಗಿದೆ. 84 ದಿನಗಳ ಅಂತರವಿಲ್ಲದೇ 2ನೇ ಡೋಸ್ ಪಡೆಯಲು ಲಸಿಕೆ ಕೇಂದ್ರಕ್ಕೆ ತೆರಳಿದವರನ್ನು ವಾಪಸ್ ಕಳುಹಿಸಲಾಗುತ್ತಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗುತ್ತಿದೆ. ಈ ವರದಿಗಳು ಸುಳ್ಳು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸ್ಪಷ್ಟನೆ ನೀಡಿದೆ.

ಕೊವಿಶೀಲ್ಡ್ 2ನೇ ಡೋಸ್ ಬಗ್ಗೆ ಬೇಕಿಲ್ಲ ಆತಂಕ

ಕೊವಿಶೀಲ್ಡ್ 2ನೇ ಡೋಸ್ ಬಗ್ಗೆ ಬೇಕಿಲ್ಲ ಆತಂಕ

ಕೊರೊನಾವೈರಸ್ ಸೋಂಕಿನ ಆತಂಕದ ನಡುವೆ ಕೊವಿಶೀಲ್ಡ್ ಲಸಿಕೆಯ 2ನೇ ಡೋಸ್ ಪಡೆಯಲು ತೆರಳಿದ ಫಲಾನುಭವಿಗಳಿಗೆ ಲಸಿಕೆಯನ್ನು ನೀಡದೇ ಯಾವುದೇ ಕಾರಣಕ್ಕೆ ಹಿಂತಿರುಗಿ ಕಳುಹಿಸುವಂತಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಖಡಕ್ ಸೂಚನೆ ನೀಡಿದೆ. ಮೊದಲೇ ದಿನಾಂಕ ನಿಗದಿ ಆಗಿದ್ದಲ್ಲಿ ಅಂಥವರಿಗೆ ಕಡ್ಡಾಯವಾಗಿ 2ನೇ ಡೋಸ್ ಲಸಿಕೆ ನೀಡಬೇಕು ಎಂದು ಸೂಚಿಸಲಾಗಿದೆ.

ದೇಶದಲ್ಲಿ ಮೂರನೇ ಹಂತದ ಲಸಿಕೆ ವಿತರಣೆ

ದೇಶದಲ್ಲಿ ಮೂರನೇ ಹಂತದ ಲಸಿಕೆ ವಿತರಣೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹರಡುವಿಕೆ ವೇಗಕ್ಕೆ ಕಡಿವಾಣ ಹಾಕಲು ಮೂರು ಹಂತಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರು, ಎರಡನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಹಾಗೂ ಮೂರನೇ ಹಂತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಕೊವಿಡ್-19 ಲಸಿಕೆ ಕೊರತೆ ಸೃಷ್ಟಿ ಆಗಿರುವ ಹಿನ್ನೆಲೆ ಹಲವು ರಾಜ್ಯಗಳಲ್ಲಿ 18-44 ವಯೋಮಾನದವರಿಗೆ ಲಸಿಕೆ ನೀಡುವುದನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

Recommended Video

ಸ್ಕೂಟಿಯಲ್ಲಿ ಆಮ್ಲಜನಕವನ್ನು ತಲುಪಿಸುವ ಉತ್ತರ ಪ್ರದೇಶದ ಮಹಿಳೆ | Oneindia Kannada

English summary
CoWin Portal For Vaccination Has Been Updated To Reflect The Increased Interval For Covishield, And, As A Result, Further Online Or On-site Appointments Will Not Be Possible If The Period After First Dose Date For A Beneficiary Is Less Than 84 Days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X