ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆಗೆ ಹೆಸರು ನೋಂದಾಯಿಸುವ CoWin ಹ್ಯಾಕ್ ಆಗಿದೆಯೇ?

|
Google Oneindia Kannada News

ನವದೆಹಲಿ, ಜೂನ್ 11: ಭಾರತದಲ್ಲಿ ಕೊರೊನಾವೈರಸ್ ಲಸಿಕೆಗೆ ಹೆಸರು ನೋಂದಾಯಿಸುವುದಕ್ಕೆ ರೂಪಿಸಿರುವ CoWin ಅಪ್ಲಿಕೇಷನ್ ಸುರಕ್ಷಿತವಾಗಿದ್ದು, ಹ್ಯಾಕ್ ಆಗಿದೆ ಎಂಬ ಸುದ್ದಿ ಸುಳ್ಳು ಎಂದು ಕೇಂದ್ರ ಸರ್ಕಾರವು ಗುರುವಾರ ಸ್ಪಷ್ಟಪಡಿಸಿದೆ.

ಕೊವಿನ್ಅಪ್ಲಿಕೇಷನ್ ಹ್ಯಾಕ್ ಆಗಿರುವ ಆರೋಪದ ಬೆನ್ನಲ್ಲೇ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಮೀಟಿವೈ) ಅಡಿಯಲ್ಲಿ ಸರ್ಕಾರದ ಅತ್ಯುತ್ತಮ ಪ್ರತಿ-ಹ್ಯಾಕಿಂಗ್ ತಂಡ ಎಂದು ಕರೆಯಲ್ಪಡುವ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡವು ಈ ವಿಷಯದ ಬಗ್ಗೆ ತನಿಖೆ ನಡೆಸಲಿದೆ.

ಕೊರೊನಾ ಲಸಿಕೆ ಪ್ರಮಾಣಪತ್ರ ತಿದ್ದುಪಡಿ ಮಾಡುವುದು ಹೇಗೆ?ಕೊರೊನಾ ಲಸಿಕೆ ಪ್ರಮಾಣಪತ್ರ ತಿದ್ದುಪಡಿ ಮಾಡುವುದು ಹೇಗೆ?

ಕೊವಿನ್ ಅಪ್ಲಿಕೇಷನ್ ಹ್ಯಾಕ್ ಆಗಿರುವ ವರದಿಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿರಾಕರಿಸಿದೆ. ಕೊವಿನ್ ಅಪ್ಲಿಕೇಷನ್ ನಲ್ಲಿರುವ ಎಲ್ಲಾ ಲಸಿಕೆ ವಿತರಣೆ ದತ್ತಾಂಶಗಳು ಸುರಕ್ಷಿತ ಮತ್ತು ಭದ್ರವಾಗಿ ಡಿಜಿಟಲ್ ಪರಿಸರದಲ್ಲಿ ಸಂಗ್ರಹಿಸಲಾಗಿದೆ ಎಂದು ಲಸಿಕೆ ಆಡಳಿತದ ಸಶಕ್ತ ತಂಡದ (ಇಜಿವಿಎಸಿ) ಅಧ್ಯಕ್ಷರು ಹೇಳಿದ್ದಾರೆ.

CoWIN Hacked Reports Are Fake Centre Health Ministry Clarification

"ಕೊವಿನ್ ಅಪ್ಲಿಕೇಷನ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಆಧಾರರಹಿತ ವರದಿಗಳು ಬಂದಿವೆ. "ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಇಜಿವಿಎಸಿ ಈ ವಿಷಯವನ್ನು ಮಿಯೆಟಿಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ ತನಿಖೆ ನಡೆಸುತ್ತಿದೆ" ಎಂದು ಸರ್ಕಾರ ಹೇಳಿಕೆಯಲ್ಲಿ ಹೇಳಿದೆ.

ಕೊವಿನ್ ದತ್ತಾಂಶವನ್ನು ವ್ಯವಸ್ಥೆಯ ಹೊರಗಿನ ಯಾವುದೇ ಘಟಕದೊಂದಿಗೆ ಹಂಚಿಕೊಂಡಿಲ್ಲ ಎಂದು ಇಜಿವಿಎಸಿ ಅಧ್ಯಕ್ಷ ಆರ್.ಎಸ್.ಶರ್ಮಾ ಹೇಳಿದ್ದಾರೆ. "ಕೋವಿನ್ ಸಿಸ್ಟಮ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುವ ಸುದ್ದಿಗಳ ಬಗ್ಗೆ ಲಕ್ಷ್ಯ ವಹಿಸಲಾಗಿದೆ. ಕೊವಿನ್ ಸಂಬಂಧಿತ ಎಲ್ಲ ಲಸಿಕೆ ವಿತರಣೆ ದತ್ತಾಂಶವನ್ನು ಸುರಕ್ಷಿತ ಮತ್ತು ಭದ್ರವಾಗಿ ಇರಿಸುವುದಕ್ಕೆ ನಾವು ಬಯಸುತ್ತೇವೆ.

"ಕೋವಿನ್ ಆಂತರಿಕ ವಲಯದ ಹೊರತಾಗಿ ಬೇರೆ ಯಾವುದೇ ಘಟಕದೊಂದಿಗೆ ದತ್ತಾಂಶವನ್ನು ವಿನಿಮಯ ಮಾಡಿಕೊಳ್ಳುವುದಿಲ್ಲ. ಬೇರೆ ಮೂಲಗಳಿಂದ ಸೋರಿಕೆ ಆಗಿದೆ ಎಂಬ ದತ್ತಾಂಶವನ್ನು ಕೊವಿನ್ ಕೂಡ ಸಂಗ್ರಹಿಸುವುದಿಲ್ಲ ಎಂದು ಶರ್ಮಾ ಹೇಳಿದ್ದಾರೆ.

ಭಾರತದಲ್ಲಿ ಆರೋಗ್ಯಾ ಸೇತು ಮತ್ತು ಉಮಾಂಗ್ ಆ್ಯಪ್ ಹೊರತುಪಡಿಸಿ ಕೊರೊನಾವೈರಸ್ ಲಸಿಕೆಗೆ ಹೆಸರು ನೋಂದಾಯಿಸಲು ಯಾವುದೇ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಇಲ್ಲ. ಎರಡೂ ಆ್ಯಪ್ ಮೂಲಕ ಕೊವಿಡ್-19 ಲಸಿಕೆ ಪಡೆಯಲು ಒಬ್ಬರು ಹೆಸರು ನೋಂದಾಯಿಸಬೇಕಿದ್ದಲ್ಲಿ ಕೊವಿನ್ ಅಪ್ಲಿಕೇಷನ್ ನಲ್ಲಿ ಲಾಗ್ ಇನ್ ಆಗಬೇಕು.

English summary
"CoWIN Hacked Reports Are Fake" Centre Health Ministry Clarification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X