ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1,000 ರೂ.ಗೆ ಒಂದು ಡೋಸ್ ಕೊರೊನಾವೈರಸ್ ಲಸಿಕೆ!

|
Google Oneindia Kannada News

ನವದೆಹಲಿ, ಜನವರಿ.12: ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಲಸಿಕೆ ದರವೆಷ್ಟು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸರ್ಕಾರದಿಂದ ಅನುಮೋದನೆ ಪಡೆದಿರುವ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಕೊವಿಶೀಲ್ಡ್ ಲಸಿಕೆ ದರವನ್ನು ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರಕ್ಕೆ ಮೊದಲ ಹಂತದಲ್ಲಿ 10 ಕೋಟಿ ಡೋಸ್ ಕೊವಿಶೀಲ್ಡ್ ಲಸಿಕೆಯನ್ನು 200 ರೂಪಾಯಿ ದರದಂತೆ ನೀಡಲಾಗುತ್ತದೆ ಎಂದು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದರ್ ಪೂನಾವಲ್ಲಾ ತಿಳಿಸಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ಈ ಬಗ್ಗೆ ಅದರ್ ಪೂನಾವಲ್ಲಾ ಅವರು ಮಾಹಿತಿ ನೀಡಿದ್ದಾರೆ. ಕೊವಿಡ್-19 ಲಸಿಕೆ ಉತ್ಪಾದನೆ ಹೊಣೆ ಹೊತ್ತುಕೊಂಡಿರುವುದು ಐತಿಹಾಸಿಕ ಬೆಳವಣಿಗೆ ಆಗಿದೆ. ಕೇಂದ್ರ ಸರ್ಕಾರದ ಮನವಿ ಮೇರೆಗೆ ವಿಶೇಷ ರಿಯಾಯಿತಿ ದರದಲ್ಲಿ ಲಸಿಕೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

1,000 ರೂಪಾಯಿಗೆ ಒಂದು ಡೋಸ್ ಲಸಿಕೆ ಲಭ್ಯ

1,000 ರೂಪಾಯಿಗೆ ಒಂದು ಡೋಸ್ ಲಸಿಕೆ ಲಭ್ಯ

ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಉತ್ಪಾಸಿರುತ್ತಿರುವ ಕೊವಿಶೀಲ್ಡ್ ಲಸಿಕೆಗೆ ಖಾಸಗಿ ಮಾರುಕಟ್ಟೆಯಲ್ಲಿ ಭಾರಿ ಬೆಲೆಯನ್ನೇ ನಿಗದಿಗೊಳಿಸಲಾಗಿದೆ. ಒಂದು ಡೋಸ್ ಲಸಿಕೆ ಪಡೆಯುವುದಕ್ಕೆ 1,000 ರೂಪಾಯಿ ನೀಡಬೇಕಾಗುತ್ತದೆ. ಒಬ್ಬ ಕೊವಿಡ್-19 ಸೋಂಕಿತರಿಗೆ ಕನಿಷ್ಠ ಎರಡು ಡೋಸ್ ಲಸಿಕೆಯು ಅತ್ಯವಶ್ಯವಾಗಿರುತ್ತದೆ. ಅಂದರೆ ಒಬ್ಬ ಕೊರೊನಾವೈರಸ್ ಸೋಂಕಿತನು ಕೊವಿಶೀಲ್ಡ್ ಲಸಿಕೆಯನ್ನು ಖಾಸಗಿ ಮಾರುಕಟ್ಟೆಯಲ್ಲಿ ಪಡೆಯಬೇಕಾದರೆ 2,000 ರೂಪಾಯಿ ನೀಡಬೇಕಾಗುತ್ತದೆ.

ಸೂಕ್ತ ದರದಲ್ಲಿ ಸರ್ಕಾರಕ್ಕೆ ಲಸಿಕೆ ನೀಡಲು ಒಪ್ಪಿಗೆ

ಸೂಕ್ತ ದರದಲ್ಲಿ ಸರ್ಕಾರಕ್ಕೆ ಲಸಿಕೆ ನೀಡಲು ಒಪ್ಪಿಗೆ

ಕೊರೊನಾವೈರಸ್ ಸೋಂಕಿತರಿಗಾಗಿ ಅಭಿವೃದ್ಧಿಪಡಿಸಿರುವ ಲಸಿಕೆಗೆ 200 ರೂಪಾಯಿಗಿಂತಲೂ ಹೆಚ್ಚ ಹಣ ಖರ್ಚು ಆಗಿರುತ್ತದೆ. ಆದರೆ ಸರ್ಕಾರದ ಮನವಿ ಮೇರೆಗೆ ಲಾಭದ ಉದ್ದೇಶವನ್ನು ಇಟ್ಟುಕೊಳ್ಳದೇ ಕೇವಲ 200 ರೂಪಾಯಿ ಒಂದು ಡೋಸ್ ನಂತೆ ಲಸಿಕೆಯನ್ನು ನೀಡುವುದಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಮೊದಲ ಹಂತದಲ್ಲಿ 10 ಕೋಟಿ ಡೋಸ್ ಲಸಿಕೆಯನ್ನು ನೀಡಲು ಸಂಸ್ಥೆಯು ಸಮ್ಮತಿಸಿದೆ ಎಂದು ಸಿಇಓ ಅದರ್ ಪೂನಾವಲ್ಲಾ ತಿಳಿಸಿದ್ದಾರೆ.

ಈ ಮೊದಲು ಒಂದು ಡೋಸ್ ಲಸಿಕೆಗೆ 250 ರೂ. ನಿಗದಿ

ಈ ಮೊದಲು ಒಂದು ಡೋಸ್ ಲಸಿಕೆಗೆ 250 ರೂ. ನಿಗದಿ

ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯ ಉತ್ಪಾದಿಸಿರುವ ಕೊವಿಶೀಲ್ಡ್ ಲಸಿಕೆಯನ್ನು ಈ ಮೊದಲು 500 ರೂಪಾಯಿಗೆ ನೀಡುವುದಾಗಿ ಸಂಸ್ಥೆಯು ಹೇಳಿತ್ತು. ಅಂದರೆ ಒಂದು ಡೋಸ್ ಲಸಿಕೆಗೆ 250 ರೂಪಾಯಿ ದರ ನಿಗದಿಗೊಳಿಸುವುದಾಗಿ ಸಂಸ್ಥೆಯ ಸಿಇಓ ಅದರ್ ಪೂನಾವಲ್ಲಾ ಹೇಳಿದ್ದರು. ಇದೀಗ ಒಂದು ಡೋಸ್ ಲಸಿಕೆಗೆ 200 ರೂಪಾಯಿ ಆಗುತ್ತದೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಕೊವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ

ಕೊವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ

ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಬ್ರಿಟಿಷ್-ಸ್ವಿಡಿಷ್ ಕಂಪನಿಯಾದ ಅಸ್ಟ್ರಾಜೆನಿಕಾ ಸಂಶೋಧಿಸಿರುವ ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದನೆ ಆಗುತ್ತಿರುವ ಕೊವಿಶೀಲ್ಡ್ ಲಸಿಕೆಗೆ ಜನವರಿ.03ರಂದು ಅನುಮೋದನೆ ನೀಡಲಾಯಿತು. ಕೊವಿಡ್-19 ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಸುವುದಕ್ಕೆ ಅನುಮತಿ ನೀಡಲಾಗಿತ್ತು. ಇದರ ಬೆನ್ನಲ್ಲೇ ಜನವರಿ.16ರಿಂದ ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಗ ಅಭಿಯಾನ ಆರಂಭಿಸುವುದಾಗಿ ಕೇಂದ್ರ ಸರ್ಕಾರವು ಈಗಾಗಲೇ ಘೋಷಿಸಿದೆ.

ಕೊವಿಡ್-19 ಲಸಿಕೆ ನೀಡುವಲ್ಲಿ ಆದ್ಯತೆ ಯಾರಿಗೆ?

ಕೊವಿಡ್-19 ಲಸಿಕೆ ನೀಡುವಲ್ಲಿ ಆದ್ಯತೆ ಯಾರಿಗೆ?

ದೇಶದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಜನರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. 3 ಕೋಟಿ ವೈದ್ಯಕೀಯ ಸಿಬ್ಬಂದಿ ಮತ್ತು ಕೊವಿಡ್-19 ವಾರಿಯರ್ಸ್ ಗೆ ಲಸಿಕೆ ನೀಡಲಾಗುತ್ತದೆ. 50 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ಸೋಂಕಿನಿಂದ ಹೆಚ್ಚು ಅಪಾಯವಿದೆ. ಹೀಗಾಗಿ ಎರಡನೇ ಹಂತದಲ್ಲಿ ವೃದ್ಧರಿಗೆ ಲಸಿಕೆ ನೀಡುವುದಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಕೊರೊನಾವೈರಸ್ ಲಸಿಕೆಯನ್ನು ಮೊದಲ ಹಂತದಲ್ಲಿ 3 ಕೋಟಿ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಒಟ್ಟು 30 ಕೋಟಿ ಜನರಿಗೆ ನೀಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಮೊದಲ ಹಂತದ ಲಸಿಕೆ ವಿತರಣೆಯ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

English summary
Covishield Vaccine Rate Is Minimum Rs.1000 Per Dose In Private Markets: SII CEO Adar Poonawalla.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X