ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಂಕಿನ ವಿರುದ್ಧ ಕೋವಿಶೀಲ್ಡ್‌ ಲಸಿಕೆಯಿಂದ ಶೇ 93ರಷ್ಟು ರಕ್ಷಣೆ; ಅಧ್ಯಯನ

|
Google Oneindia Kannada News

ನವದೆಹಲಿ, ಜುಲೈ 28: ಕೋವಿಶೀಲ್ಡ್ ಕೊರೊನಾ ಲಸಿಕೆಯು ಕೊರೊನಾ ಸೋಂಕಿನ ವಿರುದ್ಧ ಶೇ 93ರಷ್ಟು ರಕ್ಷಣೆ ನೀಡುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರಕ್ಷಣೆ ನೀಡುವುದರೊಂದಿಗೆ ಸೋಂಕಿನಿಂದ ಸಂಭವಿಸುವ ಮರಣ ಪ್ರಮಾಣವನ್ನು ಶೇ 98ರಷ್ಟು ತಗ್ಗಿಸುವುದು ಎಂದು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು (ಎಎಫ್‌ಎಂಸಿ) ನಡೆಸಿರುವ ಅಧ್ಯಯನ ತಿಳಿಸಿದೆ.

ಲಸಿಕೆ ಕುರಿತು ಮಾತನಾಡಿರುವ ಕೇಂದ್ರ ನೀತಿ ಆಯೋಗ ಸದಸ್ಯ ಡಾ. ವಿ.ಕೆ. ಪೌಲ್, "ಕೋವಿಶೀಲ್ಡ್ ಲಸಿಕೆಯಿಂದಾಗಿ ಮರಣ ಪ್ರಮಾಣದಲ್ಲಿ ಶೇ 98ರಷ್ಟು ಇಳಿಕೆ ಕಂಡುಬಂದಿದೆ" ಎಂದು ಅಧ್ಯಯನವನ್ನು ಉಲ್ಲೇಖಿಸಿ ಮಾತನಾಡಿದರು.

Covishield Vaccine Gives 93 Percent Protection Says Study

ಕೊರೊನಾ ಎರಡನೇ ಅಲೆ ಸಂದರ್ಭ ಎಎಫ್ಎಂಸಿ ಅಧ್ಯಯನ ಕೈಗೊಂಡಿತ್ತು. ಕೋವಿಶೀಲ್ಡ್‌ ಲಸಿಕೆ ನೀಡಲಾಗಿದ್ದ ವೈದ್ಯರು ಹಾಗೂ ಮುಂಚೂಣಿ ಆರೋಗ್ಯ ಕಾರ್ಯಕರ್ತರು ಸೇರಿ ಹದಿನೈದು ಲಕ್ಷ ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

"ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ಕೊರೊನಾ ಸೋಂಕಿನ ತೀವ್ರತೆಯನ್ನು ಲಸಿಕೆ ತಗ್ಗಿಸುತ್ತದೆ. ಆದರೆ ಲಸಿಕೆ ಹಾಕಿಸಿಕೊಂಡ ಮಾತ್ರಕ್ಕೆ ಸೋಂಕು ಸಂಪೂರ್ಣ ತಗುಲುವುದಿಲ್ಲ ಎನ್ನುವಂತಿಲ್ಲ. ಹೀಗಾಗಿ ಜಾಗರೂಕತೆಯಿಂದ ಇರುವುದು ಅವಶ್ಯಕ" ಎಂದಿದ್ದಾರೆ.

ಭಾರತದಲ್ಲಿ ಮತ್ತೊಂದು ಕೊರೊನಾ ಲಸಿಕೆ ಉತ್ಪಾದನೆ; ಶೀಘ್ರವೇ ಕೋರ್ಬೆವ್ಯಾಕ್ಸ್‌ ಬಿಡುಗಡೆಭಾರತದಲ್ಲಿ ಮತ್ತೊಂದು ಕೊರೊನಾ ಲಸಿಕೆ ಉತ್ಪಾದನೆ; ಶೀಘ್ರವೇ ಕೋರ್ಬೆವ್ಯಾಕ್ಸ್‌ ಬಿಡುಗಡೆ

ದೇಶದಲ್ಲಿ ಉತ್ಪಾದನೆಯಾಗಿರುವ ಲಸಿಕೆಗಳ ಮೇಲೆ ನಂಬಿಕೆ ಇಡಿ. ಮುಂಬರುವ ದಿನಗಳಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಇರಿ ಎಂದು ಜನರಿಗೆ ಮನವಿ ಮಾಡಿದ್ದಾರೆ.

ಭಾರತದಲ್ಲಿ ಜನವರಿ 16ರಿಂದ ಬೃಹತ್ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ಮೂರು ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ ವಿ ಲಸಿಕೆಗೆ ಅನುಮೋದನೆ ನೀಡಲಾಗಿದೆ. ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್ ಲಸಿಕೆ ಭಾರತದಲ್ಲಿಯೇ ಉತ್ಪಾದನೆಯಾಗುತ್ತಿದೆ. ಕೋವಿಶೀಲ್ಡ್ ಲಸಿಕೆಯನ್ನು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದನೆ ಮಾಡುತ್ತಿದೆ.

English summary
A study by Armed Forces Medical Services (AFMS) has found that Covishield vaccine gives 93% protection and reduces deaths by 98 percent
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X