ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ ಕೊರೊನಾ ರೂಪಾಂತರಿಗಳ ವಿರುದ್ಧ ಹೋರಾಡಲಿದೆ ಈ ಎರಡು ಲಸಿಕೆ

|
Google Oneindia Kannada News

ನವದೆಹಲಿ, ಜೂನ್ 26: ಕೊರೊನಾ ರೂಪಾಂತರಿಗಳ ವಿರುದ್ಧ ಈ ಎರಡು ಲಸಿಕೆ ಹೋರಾಡಲಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳು ಎಲ್ಲಾ ಕೊರೊನಾ ರೂಪಾಂತರಿಗಳ ವಿರುದ್ಧ ಕಾರ್ಯನಿರ್ವಹಿಸಲಿವೆ ಎಂದು ಐಸಿಎಂಆರ್‌ನ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 48 ಡೆಲ್ಟಾ ಕೇಸ್ ಗಳು ಪತ್ತೆಯಾಗಿವೆ. ಆದರೆ ಮುಖ್ಯವಾಗಿ, ಅವುಗಳನ್ನು ಬಹಳ ಸ್ಥಳೀಕರಿಸಲಾಗಿದೆ. ಈ ವೈರಸ್ ಅನ್ನು ಈಗ ಪ್ರತ್ಯೇಕಿಸಲಾಗಿದೆ ಎಂದು ಅವರು ತಿಳಿಸಿದರು.

Corona Vaccines

ಆಲ್ಫಾ, ಬೀಟಾ, ಗಾಮಾ ಮತ್ತು ಡೆಲ್ಟಾಕ್ಕಾಗಿ ಅದೇ ಪರೀಕ್ಷೆಯನ್ನು ಮಾಡುತ್ತಿದ್ದೇವೆ. ಲಸಿಕೆ ಪರಿಣಾಮವನ್ನು ಪರೀಕ್ಷಿಸಲು ಪ್ರಯೋಗಾಲಯ ಪರೀಕ್ಷೆಯನ್ನು ಎದುರು ನೋಡುತ್ತಿದ್ದೇವೆ ಮತ್ತು ಸುಮಾರು 7 ರಿಂದ 10 ದಿನಗಳ ಅವಧಿಯಲ್ಲಿ ನಾವು ಫಲಿತಾಂಶಗಳನ್ನು ತಿಳಿಯಬೇಕಾಗಿದೆ ಎಂದು ಅವರು ಹೇಳಿದರು.

ಪ್ರಸ್ತುತ 12 ರಾಷ್ಟ್ರಗಳಿರುವ ಡೆಲ್ಟಾ ಪ್ಲಸ್, ಸಾರ್ಸ್ ಕೋವ್ 2 ರೂಪಾಂತರಗಳಾದ ಅಲ್ಫಾ,ಬೀಟಾ, ಗಾಮ ಸೇರಿದಂತೆ ಎಲ್ಲಾ ನಾಲ್ಕು ಕೊರೊನಾ ರೂಪಾಂತರ ವಿರುದ್ಧ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳು ಕಾರ್ಯನಿರ್ವಹಸಲಿವೆ ಎಂದರು.

ಭಾರತದಲ್ಲಿ ಮೊದಲು ಡೆಲ್ಟಾ (B.1.617.2) ರೂಪಾಂತರ ಪತ್ತೆಯಾಗಿ, ದೇಶದಲ್ಲಿ ಕಳವಳಕಾರಿ ಪರಿಸ್ಥಿತಿಗೆ ಕಾರಣವಾಯಿತು. ಕೊರೊನಾ ಎರಡನೇ ಅಲೆಯಲ್ಲಿ ಏರಿದ ಸಾವು ನೋವಿಗೂ ಈ ರೂಪಾಂತರವೇ ಕಾರಣವಾಗಿತ್ತು.

ದೇಶದಲ್ಲಿ ದೇಶದಲ್ಲಿ "ಡೆಲ್ಟಾ ಪ್ಲಸ್" ಪ್ರಕರಣಗಳ ಸಂಖ್ಯೆ ಏರಿಕೆ

ಇದೀಗ ಇದೇ ರೂಪಾಂತರದಿಂದ ಮತ್ತೊಂದು ರೂಪಾಂತರ ಸೃಷ್ಟಿಯಾಗಿದೆ. ಅದೇ ಡೆಲ್ಟಾ ಪ್ಲಸ್ (B.1.617.2.1/(AY.1). ಈ ಸೋಂಕು ಪತ್ತೆಯಾದ ಆರಂಭಿಕ ದಿನಗಳಲ್ಲಿ ಇದು ಕಳವಳಕಾರಿ ಸೋಂಕು ಎಂದು ಪರಿಗಣಿಸಿರಲಿಲ್ಲ. ಆದರೆ ಕೆಲವೇ ದಿನಗಳ ಅಂತರದಲ್ಲಿ ದೇಶದಲ್ಲಿ 52 ಪ್ರಕರಣಗಳು ಪತ್ತೆಯಾಗಿವೆ.

ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ, ಕರ್ನಾಟಕ, ತಮಿಳುನಾಡು, ಜಮ್ಮು, ಪಂಜಾಬ್, ಆಂಧ್ರಪ್ರದೇಶದಲ್ಲಿ ಈ ಪ್ರಕರಣ ಪತ್ತೆಯಾಗಿದೆ.

Recommended Video

Sputnik V ಲಸಿಕೆ ನಮ್ಮ Covishieldಗಿಂತಲೂ ಸುರಕ್ಷಿತವೇ | Oneindia Kannada

"ದೇಶದ 28 ಕಡೆಗಳಲ್ಲಿ INSACOG ಪ್ರಯೋಗಾಲಯಗಳಿದ್ದು, ಹೊಸ ರೂಪಾಂತರ ಸೋಂಕಿನ ಹರಡುವಿಕೆ ವೇಗ, ಶ್ವಾಸಕೋಶದ ಮೇಲೆ ಬೀರುವ ಪ್ರಭಾವ, ಮೊನೊಕ್ಲೋನಲ್ ಪ್ರತಿಕಾಯ ವ್ಯವಸ್ಥೆ ಇಳಿಮುಖಗೊಳಿಸುವಲ್ಲಿ ಹೊಸ ವೈರಸ್ ಪಾತ್ರದ ಬಗ್ಗೆ ಪರಿಶೋಧನೆ ನಡೆಸಲಾಗುತ್ತದೆ," ಎಂದು ಕೇಂದ್ರ ಆರೋಗ್ಯ ಸಚಿವಾಲಯ ಘೋಷಿಸಿದೆ.

English summary
Vaccines Covishield and Covaxin work against SARS-CoV-2 variants Alpha, Beta, Gamma and Delta, while effectiveness tests against the Delta Plus variant is ongoing, the government said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X