ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿಗೆ ‘ರಾಮಬಾಣ’: ಡೆಡ್ಲಿ ಸೋಂಕಿಗೆ ‘ಕೋವಿಶೀಲ್ಡ್‌’ ಫಿಕ್ಸ್..?

|
Google Oneindia Kannada News

ಆಕ್ಸ್‌ಫರ್ಡ್‌ ಸಂಶೋಧಿಸಿರುವ 'ಕೋವಿಶೀಲ್ಡ್‌' ಲಸಿಕೆಯ 2ನೇ ಹಂತದ ಪ್ರಯೋಗ ಭಾರತೀಯ ವಿದ್ಯಾಪೀಠದ ವೈದ್ಯಕೀಯ ಕಾಲೇಜಿನಲ್ಲಿ ಆರಂಭವಾಗಿದ್ದು, ಸಿಹಿ ಸುದ್ದಿ ಹೊರಬಿದ್ದಿದೆ. ನಿನ್ನೆ 'ಕೋವಿಶೀಲ್ಡ್‌' ಲಸಿಕೆ ಪ್ರಯೋಗದಲ್ಲಿ ಪಾಲ್ಗೊಂಡಿದ್ದ ಇಬ್ಬರು ಸ್ವಯಂ ಸೇವಕರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಲಸಿಕೆ ಪಡೆದ ನಂತರ ಅವರಲ್ಲಿ ಯಾವುದೇ ರೀತಿ ಆರೋಗ್ಯ ಸಮಸ್ಯೆ ಎದುರಾಗಿಲ್ಲ. ಅಥವಾ ರಿಯಾಕ್ಷನ್ ಕೂಡ ಆಗಿಲ್ಲ, ಹೀಗಾಗಿ ಲಸಿಕೆ ಒಂದು ಹಂತದ ಸಕ್ಸಸ್ ಕಂಡಿದೆ ಎನ್ನಬಹುದು. ಇನ್ನು ಲಸಿಕೆ ಪಡೆದಿರುವ ಇಬ್ಬರು ಸ್ವಯಂ ಸೇವಕರ ಆರೋಗ್ಯ ಸ್ಥಿರವಾಗಿರುವ ಹಿನ್ನೆಲೆ ಅವರನ್ನು ಮನೆಗೆ ಕಳುಹಿಸಲಾಗಿದೆ.

ಆಕ್ಸ್‌ಫರ್ಡ್ ವಿವಿಯ 'ಕೋವಿಶೀಲ್ಡ್' ಲಸಿಕೆಯ ಮಾನವ ಪ್ರಯೋಗ ಶೀಘ್ರದಲ್ಲೇ ಶುರು ಆಕ್ಸ್‌ಫರ್ಡ್ ವಿವಿಯ 'ಕೋವಿಶೀಲ್ಡ್' ಲಸಿಕೆಯ ಮಾನವ ಪ್ರಯೋಗ ಶೀಘ್ರದಲ್ಲೇ ಶುರು

ಆದರೂ ಅವರ ಮೇಲೆ ಸಂಪೂರ್ಣ ನಿಗಾ ಇಡಲಾಗಿದ್ದು, ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ಭಾರತೀಯ ವಿದ್ಯಾಪೀಠದ ವೈದ್ಯಕೀಯ ಕಾಲೇಜಿನ ವೈದ್ಯರು ಮಾಹಿತಿ ನೀಡಿದ್ದಾರೆ. ಆಕ್ಸ್‌ಫರ್ಡ್‌ ಸಂಶೋಧಿಸಿರುವ ಕೋವಿಶೀಲ್ಡ್ ಉತ್ಪಾದನೆಗಾಗಿ ಪುಣೆ ಮೂಲದ ಸೇರಮ್ ಇನ್ಸ್ಟಿಟ್ಯೂಟ್ ಒಪ್ಪಂದ ಮಾಡಿಕೊಂಡಿದೆ. ಭಾರತದಲ್ಲಿ 'ಕೋವಿಶೀಲ್ಡ್‌'ನ 2ನೇ ಹಂತದ ಪ್ರಯೋಗ ನಡೆಯುತ್ತಿದೆ. ನಿನ್ನೆ ಇಬ್ಬರ ಮೇಲೆ ಮಾತ್ರ ಲಸಿಕೆ ಪ್ರಯೋಗ ನಡೆದಿದ್ದು, ಇನ್ನೂ 7 ಜನರ ಮೇಲೆ 'ಕೋವಿಶೀಲ್ಡ್‌' ಪ್ರಯೋಗಿಸುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.

ಲಸಿಕೆ ಕಂಡುಹಿಡಿಯುವುದು ಅಷ್ಟು ಸುಲಭವಲ್ಲ..!

ಲಸಿಕೆ ಕಂಡುಹಿಡಿಯುವುದು ಅಷ್ಟು ಸುಲಭವಲ್ಲ..!

ಹೌದು, ಒಂದು ಲಸಿಕೆ ಅಥವಾ ವ್ಯಾಕ್ಸಿನ್ ಸಂಶೋಧನೆ ಅಷ್ಟು ಸುಲಭದ ವಿಷಯವಲ್ಲ. ಇವು ಔಷಧಗಳಂತೆ ಅತೀ ಸುಲಭಕ್ಕೆ ಸಂಶೋಧನೆ ಮಾಡಲು ಆಗುವುದಿಲ್ಲ. ಏಕೆಂದರೆ ಮಾನವನ ದೇಹಕ್ಕೆ ಲಸಿಕೆ ಒಗ್ಗಿಕೊಳ್ಳಬೇಕಾಗುತ್ತದೆ. ಅಕಸ್ಮಾತ್ ಅವಸರದಲ್ಲಿ ಲಸಿಕೆಯ ಪ್ರಯೋಗವನ್ನು ಸರಿಯಾಗಿ ಮುಗಿಸದೆ, ಬಳಕೆ ಶುರುಮಾಡಿದರೆ ಇಡೀ ಮನುಕುಲವೇ ನಾಶವಾಗುವ ಸಾಧ್ಯತೆ ಹೆಚ್ಚು.

ಡೆಡ್ಲಿ ಸೋಂಕಿಗೆ ‘ಕೋವಿಶೀಲ್ಡ್‌’ ಫಿಕ್ಸ್..?

ಡೆಡ್ಲಿ ಸೋಂಕಿಗೆ ‘ಕೋವಿಶೀಲ್ಡ್‌’ ಫಿಕ್ಸ್..?

ಕೆಲವೊಮ್ಮೆ ವ್ಯಾಕ್ಸಿನ್‌ಗಳು ರಿಯಾಕ್ಷನ್ ಮಾಡಿದರೆ, ಮಾನವನ ದೇಹದಲ್ಲಿ ಊಹೆಗೂ ಮೀರಿದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿಯೇ ಲಸಿಕೆ ಸಂಶೋಧನೆಗೆ ಸಾಕಷ್ಟು ಕಾಲಾವಧಿ ಅಗತ್ಯವಾಗಿರುತ್ತದೆ. ದೆಹಲಿಯ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಕೋವಿಶೀಲ್ಡ್ ಲಸಿಕೆಯ 2 ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ದೇಶದಾದ್ಯಂತ ಒಟ್ಟು 17 ಸಂಸ್ಥೆಗಳಿಗೆ ಅನುಮತಿ ನೀಡಿದೆ.

'ಕೋವಿಶೀಲ್ಡ್‌' ಲಸಿಕೆ ಮೇಲೆ ಯಾಕೆ ನಂಬಿಕೆ..?

'ಕೋವಿಶೀಲ್ಡ್‌' ಲಸಿಕೆ ಮೇಲೆ ಯಾಕೆ ನಂಬಿಕೆ..?

ಆಕ್ಸ್‌ಫರ್ಡ್‌ ವಿವಿಯ 'ಕೋವಿಶೀಲ್ಡ್' (Covishield) ವ್ಯಾಕ್ಸಿನ್ ಈವರೆಗೂ ಕೊರಾನಾ ವಿರುದ್ಧ ಸಂಶೋಧಿಸಿರುವ ವ್ಯಾಕ್ಸಿನ್‌ಗಳಲ್ಲೇ ಭಾಗಶಃ ಸಕ್ಸಸ್ ಕಂಡಿರುವ ಲಸಿಕೆಯಾಗಿದೆ. ಈ ಹಿಂದೆ ಅಮೆರಿಕದಲ್ಲೂ ವ್ಯಾಕ್ಸಿನ್ ಕಂಡುಹಿಡಿಯುವ ಪ್ರಯತ್ನ ಮೊದಲ ಯತ್ನದಲ್ಲೇ ಫ್ಲಾಪ್ ಆಗಿತ್ತು. ಹೀಗೆ ಸಾಕಷ್ಟು ಕಡೆ ಲಸಿಕೆ ಉಲ್ಟಾ ಹೊಡೆದಿದ್ದವು. ಅದರಲ್ಲೂ ರಷ್ಯಾ ತನ್ನ ಲಸಿಕೆ ಸಕ್ಸಸ್ ಆಗಿದೆ ಅಂತಾ ಉತ್ಪಾದನೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರೂ, ರಷ್ಯಾ ಲಸಿಕೆ ಮೇಲೆ ನಂಬಿಕೆ ಇಲ್ಲ.

ಡೆಡ್ಲಿ ಸೋಂಕಿಗೆ ‘ಕೋವಿಶೀಲ್ಡ್‌’ ಫಿಕ್ಸ್..?

ಡೆಡ್ಲಿ ಸೋಂಕಿಗೆ ‘ಕೋವಿಶೀಲ್ಡ್‌’ ಫಿಕ್ಸ್..?

ಏಕೆಂದರೆ ರಷ್ಯಾ ಲಸಿಕೆ ಸರಿಯಾದ ಪ್ರಯೋಗ ನಡೆಸಿರುವ ಬಗ್ಗೆಯೇ ನೂರಾರು ಅನುಮಾನಗಳು ಎದುರಾಗಿವೆ. ಆದರೆ ಆಕ್ಸ್‌ಫರ್ಡ್‌ ವಿವಿಯ 'ಕೋವಿಶೀಲ್ಡ್' ಪ್ರಯೋಗಗಳ ಪ್ರತಿ ಹಂತವನ್ನು ಅಚ್ಚುಕಟ್ಟಾಗಿ ಮುಗಿಸುತ್ತಿದೆ. ಹಾಗೇ ಮಾನವರ ದೇಹಕ್ಕೆ ಈ ಲಸಿಕೆ ಹೊಂದಿಕೊಳ್ಳುತ್ತಿದೆ. ಕೊರೊನಾ ವಿರುದ್ಧ ರಾಮಬಾಣದಂತೆ ಕೆಲಸ ಮಾಡುವ ಮುನ್ಸೂಚನೆ ನೀಡಿದೆ. ಹೀಗಾಗಿ ಇಡೀ ಜಗತ್ತಿನ ನಿರೀಕ್ಷೆಯ ಭಾರ ‘ಕೋವಿಶೀಲ್ಡ್‌' ಮೇಲೆ ಬಿದ್ದಿದೆ.

English summary
The Oxford university vaccine Covishield 2nd trial has begun in Pune. There is no reaction in health of volunteers after taking the vaccine. Doctors said that volunteer’s health is stable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X