ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ತಿಂಗಳ ಅಂತರದಲ್ಲಿ 2ನೇ ಡೋಸ್ ಲಸಿಕೆ ಪಡೆದರೂ ತೊಂದರೆಯಿಲ್ಲ; ತಜ್ಞರು

|
Google Oneindia Kannada News

ನವದೆಹಲಿ, ಮೇ 18: ಕಳೆದ ವಾರವಷ್ಟೆ ಸರ್ಕಾರ ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು 12-16 ವಾರಗಳಿಗೆ ವಿಸ್ತರಿಸಿತ್ತು. ಇದೀಗ ಆರು ತಿಂಗಳ ಒಳಗೆ ಕೋವಿಶೀಲ್ಡ್‌ನ ಎರಡನೇ ಡೋಸ್ ಲಸಿಕೆ ಪಡೆದುಕೊಂಡರೂ ಅದು ಪರಿಣಾಮಕಾರಿಯಾಗಿರುತ್ತದೆ ಎಂದು ಕೆಲವು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ಹಿಂದೆ ಎರಡು ಡೋಸ್ ಲಸಿಕೆಯ ನಡುವೆ ಎಂಟು ವಾರಗಳ ಅಂತರವಿರಬೇಕೆಂದು ತಿಳಿಸಲಾಗಿತ್ತು. ನಂತರ ರಾಷ್ಟ್ರೀಯ ತಾಂತ್ರಿಕ ಸಮಿತಿ ತಂಡದ ಶಿಫಾರಸಿನ ಮೇರೆಗೆ ಈ ಅಂತರವನ್ನು 12-16 ವಾರಗಳಿಗೆ ವಿಸ್ತರಿಸಲಾಯಿತು.

ಕೊರೊನಾ ಲಸಿಕೆ ಸರಬರಾಜು ಹೆಚ್ಚಿಸಲು ನಿರಂತರ ಪ್ರಯತ್ನ: ಮೋದಿಕೊರೊನಾ ಲಸಿಕೆ ಸರಬರಾಜು ಹೆಚ್ಚಿಸಲು ನಿರಂತರ ಪ್ರಯತ್ನ: ಮೋದಿ

ಆದರೆ ಬ್ರಿಟನ್‌ನಲ್ಲಿ B.1.617 ಕೊರೊನಾ ರೂಪಾಂತರ ಸೋಂಕಿನ ಪ್ರಮಾಣ ಹೆಚ್ಚಾದಂತೆ ಬ್ರಿಟನ್ ಸರ್ಕಾರ ಎರಡು ಡೋಸ್‌ಗಳ ನಡುವಿನ ಅಂತರವನ್ನು 12 ರಿಂದ 8 ವಾರಗಳಿಗೆ ಸೋಮವಾರವಷ್ಟೆ ಇಳಿಸಿದೆ.

Covishield 2nd Dose Booster Effect Even At 6 Months Says Experts

ಈ ನಡುವೆ ಭಾರತದಲ್ಲಿ ಲಸಿಕೆಗಳ ಅಭಾವವೂ ತೀವ್ರವಾಗಿದ್ದು, ಈ ಕಾರಣಕ್ಕೆ ಲಸಿಕೆಯ ಡೋಸ್‌ಗಳ ನಡುವಿನ ಅಂತರವನ್ನು ಹೆಚ್ಚಿಸಲಾಗಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಆದರೆ ಮೊದಲ ಡೋಸ್ ಲಸಿಕೆ ಪಡೆದು ನಾಲ್ಕು ವಾರದ ನಂತರ, ಆರು ತಿಂಗಳ ಒಳಗೆ ಯಾವಾಗ ಬೇಕಾದರೂ ಲಸಿಕೆ ಪಡೆದುಕೊಳ್ಳಬಹುದು ಎಂದು ಕೆಲವು ತಜ್ಞರು ಹೇಳಿದ್ದಾರೆ.

ಲಸಿಕೆಗಳನ್ನು ಯಾವಾಗ ಪಡೆದುಕೊಂಡರೂ ತೊಂದರೆಯಿಲ್ಲ. ಆದರೆ ಮೊದಲ ಡೋಸ್ ಪಡೆದ ತಿಂಗಳ ಒಳಗೆ ಎರಡನೇ ಡೋಸ್ ಪಡೆದುಕೊಂಡರೆ ಅದರ ಪರಿಣಾಮ ಕಡಿಮೆಯಿರುತ್ತದೆ ಎಂದು ಅವರು ಹೇಳಿದ್ದಾರೆ.

Recommended Video

ನಿಮ್ಮ ಖಾಸಗಿ ಅಂಗಾಂಗಗಳ ಮೇಲೆ ಟಾರ್ಗೆಟ್ ಮಾಡುತ್ತೆ White Fungus!! | Oneindia Kannada

12-16 ವಾರಗಳ ಅಂತರದಲ್ಲಿ ಲಸಿಕೆ ನೀಡಿದರೂ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಯಾವುದೇ ಅನುಮಾನವಿಲ್ಲ ಎಂದಾದರೆ ಆಗಲೇ ಲಸಿಕೆ ನೀಡುವುದರಲ್ಲಿಯೂ ತೊಂದರೆಯಿಲ್ಲ ಎಂದು ಹೇಳಿದ್ದಾರೆ.

English summary
Covishield vaccine Booster effect even at six months gap of 2nd dose say experts
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X