• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೂರು ಆರೋಗ್ಯವಂತ ಶಿಶುಗಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ

|

ರಾಯ್‌ಪುರ, ಅಕ್ಟೋಬರ್ 29: ಕೊರೊನಾ ಸೋಂಕಿತೆಯೊಬ್ಬಳು ಮೂರು ಆರೋಗ್ಯವಂತ ಶಿಶುಗಳಿಗೆ ಜನ್ಮ ನೀಡಿರುವ ಘಟನೆ ಛತ್ತೀಸ್‌ಗಢದ ರಾಯ್‌ಪುರದಲ್ಲಿ ಗುರುವಾರ ನಡೆದಿದೆ.

28 ವರ್ಷದ ಕೊರೊನಾ ಸೋಂಕಿತೆ ಮೂರು ಮೂರು ಮುದ್ದಾದ ಶಿಶುಗಳಿಗೆ ಜನ್ಮ ನೀಡಿದ್ದಾಳೆ. ಏಮ್ಸ್ ಆಸ್ಪತ್ರೆ ವೈದ್ಯರ ಮಾಹಿತಿ ಪ್ರಕಾರ ಮೊದಲ ವರದಿಯಲ್ಲಿ ಮೂವರು ಶಿಶುಗಳಿಗೂ ಕೊರೊನಾ ನೆಗೆಟಿವ್ ಬಂದಿದೆ.

ಭಾರತದಲ್ಲಿ 8 ಲಕ್ಷದ ಗಡಿ ದಾಟಿದ ಕೊರೊನಾವೈರಸ್ ಒಟ್ಟು ಪ್ರಕರಣ

ಒಂದೊಮ್ಮೆ ಗರ್ಭಿಣಿಯಾಗಿದ್ದಾಗ ಕೊರೊನಾ ತಗುಲಿದರೆ ಗರ್ಭದಲ್ಲಿರುವ ಮಗುವಿಗೂ ತಗುಲಬಹುದು ಎಂಬ ಭಯವಿರುತ್ತದೆ. ಆದರೆ ಅದು ಸುಳ್ಳಾಗಿದೆ.

ಸಾಕಷ್ಟು ಪ್ರಕರಣಗಳಲ್ಲಿ ಮಗುವಿಗೆ ಕೊರೊನಾ ಬರುವುದಿಲ್ಲ ಎಂದೂ ಸಾಬೀತಾಗಿದೆ. ಹಾಗೆಯೇ ಎದೆಹಾಲಿನ ಮೂಲಕವೂ ಕೊರೊನಾ ಬರುವುದಿಲ್ಲ ಎಂದುಬು ಸಾಬೀತಾಗಿದೆ. ಇದೀಗ ಮೂರು ಮಕ್ಕಳನ್ನು ನಿಗಾದಲ್ಲಿಡಲಾಗಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಹರಡುವಿಕೆ ಪ್ರಮಾಣ ಕೊಂಚ ತಗ್ಗಿದಂತೆ ತೋರುತ್ತಿದೆ. ಕಳೆದ 24 ಗಂಟೆಗಳಲ್ಲಿ 49881 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

ಕಳೆದೊಂದು ದಿನಗಳಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳಿಗಿಂತ ಗುಣಮುಖ ಪ್ರಕರಣಗಳ ಸಂಖ್ಯೆಯೇ ಹೆಚ್ಚಾಗಿದೆ. ಒಂದು ದಿನದಲ್ಲಿ 56,480 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, 517 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶಾದ್ಯಂತ ಕೊವಿಡ್-19 ಸೋಂಕಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

English summary
COVID19 Positive Woman Gave Birth To Three Babies at AIIMS Raipur, All three babies found COVID negative in the first report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X