ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನ ಶೋ ಮ್ಯಾನ್ ಮೋದಿ ದೀಪ ಹಚ್ಚಿ ಹೇಳಿಕೆಗೆ ಶಶಿ ಗೇಲಿ

|
Google Oneindia Kannada News

ತಿರುವನಂತಪುರ, ಏಪ್ರಿಲ್ 2: ಕೊರೊನಾವೈರಸ್ ಲಾಕ್ಡೌನ್ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಬೆಳಗ್ಗೆ ವಿಡಿಯೊ ಸಂದೇಶ ನೀಡಿದ್ದಾರೆ. ಏಪ್ರಿಲ್ 5ರಂದು ರಾತ್ರಿ 9 ಗಂಟೆಯಿಂದ 9 ನಿಮಿಷ ದೀಪ, ಮೊಂಬತ್ತಿ, ಮೊಬೈಲ್ ಫ್ಲಾಷ್ ಲೈಟ್ ಆನ್ ಮಾಡಿ ಮನೆ ಮುಂದೆ ನಿಲ್ಲಿ ಎಂಬ ಕರೆ ನೀಡಿದ್ದಾರೆ. ಮೋದಿ ಮನವಿಯನ್ನು ಆಲಿಸಿದ ಬಳಿಕ ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

Recommended Video

ದೇಶದ ಜನತೆಗೆ ಕರೆ ಕೊಟ್ಟ ಮೋದಿ..! | ಈ ಕರೆಯ ಹಿಂದಿನ ಉದ್ದೇಶ ಏನು..? | Narendra Modi

''ಇಂದು ಬೆಳಗ್ಗೆ 9 ಗಂಟೆಗೆ ಪ್ರಧಾನ್ ಶೋ ಮ್ಯಾನ್ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಇದರಲ್ಲಿ ಜನರ ನೋವು, ಸಂಕಟ, ಆರ್ಥಿಕ ಸಮಸ್ಯೆಗೆ ಪರಿಹಾರ ನೀಡುವಂಥದ್ದು ಏನಿರಲಿಲ್ಲ"

ಲಾಕ್ ಡೌನ್ ಸಂದರ್ಭದಲ್ಲಿ ಜನರು ಅನುಭವಿಸುತ್ತಿರುವ ನೋವು, ಆರ್ಥಿಕ ಸಂಕಷ್ಟದಿಂದ ಹೊರಬರುವ ವಿಧಾನ, ಜೀವನವನ್ನು ಸುಲಭವಾಗಿಸುವ ಪರಿಹಾರಗಳ ಬಗ್ಗೆ ಪ್ರಧಾನಿ ಮಾತನಾಡಿಲ್ಲ. ಲಾಕ್ ಡೌನ್ ನಂತರದ ದಿನಗಳ ಬಗ್ಗೆ ದೂರದೃಷ್ಟಿಯೂ ಇರಲಿಲ್ಲ. ಭಾರತದ ಫೋಟೋ-ಆಪ್ ಪ್ರಧಾನ ಮಂತ್ರಿಯವರು ಸೃಷ್ಟಿಸಿದ ಉತ್ತಮ ಕ್ಷಣದಂತೆ ಅನ್ನಿಸಿತು ಎಂದು ತರೂರ್ ಟ್ವೀಟ್ ಮಾಡಿದ್ದಾರೆ.

ಏ.5ರಂದು ದೀಪ ಹಚ್ಚಿ ಲಕ್ಷ್ಮಣ ರೇಖೆ ದಾಟಬೇಡಿ, ಇದೇ ರಾಮಬಾಣ: ಮೋದಿ ಏ.5ರಂದು ದೀಪ ಹಚ್ಚಿ ಲಕ್ಷ್ಮಣ ರೇಖೆ ದಾಟಬೇಡಿ, ಇದೇ ರಾಮಬಾಣ: ಮೋದಿ

Covid19: MP Shashi Throor calls PM Modi as Pradhan Showman

ಮಾಜಿ ವಿತ್ತ ಸಚಿವ ಪಿ ಚಿದಂಬರಂ ಪ್ರತಿಕ್ರಿಯಿಸಿ, ಮೋದಿ ಅವರೇ ನಿಮ್ಮ ಮಾತು ಕೇಳಿ ದೀಪ ಹಚ್ಚುತ್ತೇವೆ. ನೀವು ಸಾಂಕ್ರಾಮಿಕ ಪಿಡುಗೆ ನಿರ್ವಹಣೆ ಬಗ್ಗೆ ಸಂಶೋಧಕರಿಂದ ಆರ್ಥಿಕ ಪರಿಸ್ಥಿತಿ ಬಗ್ಗೆ ತಜ್ಞರಿಂದ ಸಲಹೆ ಪಡೆದುಕೊಳ್ಳಿ, ನಿರ್ಮಲಾ ಅವರು ನಿರ್ಲಕ್ಷಿಸಿರುವ ಕೆಲವು ಕೆಟಗರಿಯ ಜನ ಸಮುದಾಯಕ್ಕೆ ನಿಮ್ಮ ನೆರವು ಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ.

English summary
MP Shashi Tharoor criticised Prime Minister Narendra Modi's latest address to the nation on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X