ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೂ ಕೊರೊನಾ ಲಸಿಕೆ: ರಣದೀಪ್ ಗುಲೇರಿಯಾ

|
Google Oneindia Kannada News

ನವದೆಹಲಿ, ಜುಲೈ 24: ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೂ ಕೊರೊನಾ ಲಸಿಕೆ ನೀಡಲಾಗುವುದು ಎಂದು ಏಮ್ಸ್ ನಿರ್ದೇಶಕ ರಣದೀಪ್​ ಗುಲೇರಿಯಾ ತಿಳಿಸಿದ್ದಾರೆ.

ಕೊರೊನಾ ಹರಡುವಿಕೆ ಚೈನ್ ಕತ್ತರಿಸಲು ಇದೇ ಉತ್ತಮ ಉಪಾಯ, ಮಕ್ಕಳಿಗೂ ಲಸಿಕೆ ನೀಡಿದರೆ ಕೊರೊನಾ ಸೋಂಕು ಹರಡುವುದನ್ನು ಬಹುತೇಕ ತಪ್ಪಿಸಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.

ಕೋವಿಡ್ ಲಸಿಕೆ ಗುರಿ, ಹೊಸ ವಿವಾದ ಸೃಷ್ಟಿಸಿದ ಕೇಂದ್ರದ ಹೇಳಿಕೆಕೋವಿಡ್ ಲಸಿಕೆ ಗುರಿ, ಹೊಸ ವಿವಾದ ಸೃಷ್ಟಿಸಿದ ಕೇಂದ್ರದ ಹೇಳಿಕೆ

ಝೈಡಸ್ ಈಗಾಗಲೇ ಪ್ರಯೋಗ ನಡೆಸಿದ್ದು, ಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿದೆ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಪ್ರಯೋಗ ಆಗಸ್ಟ್‌ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

Covid Vaccines For Children Likely By September: AIIMS Chief

ಆ ಸಂದರ್ಭದಲ್ಲಿ ಸರ್ಕಾರದಿಂದ ಅನುಮತಿ ಸಿಗಬಹುದು ಎಂದು ಅಂದಾಜಿಸಲಾಗಿದೆ. ''ಫೈಜರ್ ಲಸಿಕೆಗೆ ಈಗಾಗಲೇ ಎಫ್‌ಡಿಎ ಅನುಮತಿ ನೀಡಿದೆ. ಸೆಪ್ಟೆಂಬರ್ ತಿಂಗಳಿನಿಂದ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಆರಂಭಿಸುತ್ತೇವೆ'' ಎಂದು ರಣದೀಪ್ ಹೇಳಿದ್ದಾರೆ.

ದೇಶದಲ್ಲಿ ಸದ್ಯ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಉಚಿತವಾಗಿ ನೀಡಲಾಗುತ್ತಿದೆ. ಮಕ್ಕಳ ಮೇಲೆ ಲಸಿಕೆಯ ಕ್ಲಿನಿಕಲ್​ ಟ್ರಯಲ್​ ನಡೆಯುತ್ತಿದೆ. ಸೆಪ್ಟೆಂಬರ್​ ಹೊತ್ತಿಗೆ ಕ್ಲಿನಕಲ್​ ಟ್ರಯಲ್​​ನ ಎರಡು ಹಾಗೂ ಮೂರನೇ ಹಂತಗಳು ಮುಕ್ತಾಯವಾಗಲಿದ್ದು, ಅದೇ ತಿಂಗಳಿಂದಲೇ ಮಕ್ಕಳಿಗೂ ಕೊರೊನಾ ಲಸಿಕೆ ನೀಡಲು ಶುರು ಮಾಡಬಹುದು ಎಂದು ಕೇಂದ್ರ ಸರ್ಕಾರದ ಕೊವಿಡ್ 19 ಟಾಸ್ಕ್​ ಫೋರ್ಸ್​​ನಲ್ಲಿರುವ ಪ್ರಮುಖ ಸದಸ್ಯರು ಈಗಾಗಲೇ ತಿಳಿಸಿದ್ದಾರೆ.

ಇದರ ಬೆನ್ನಲ್ಲೇ ಡಾ. ಗುಲೇರಿಯಾ ಕೂಡ, 2ವರ್ಷಕ್ಕಿಂತ ಹೆಚ್ಚಾಗಿರುವ ಮಕ್ಕಳಿಗೆ ಸೆಪ್ಟೆಂಬರ್​​ ಹೊತ್ತಿಗೆ ಕೊವ್ಯಾಕ್ಸಿನ್​ ಲಸಿಕೆ ಲಭ್ಯವಾಗುತ್ತದೆ ಎಂದು ತಿಳಿಸಿದ್ದಾರೆ. ಫೈಜರ್​-ಬಯೋಟೆಕ್​​ನ ಲಸಿಕೆಗೆ ಭಾರತದಲ್ಲಿ ಗ್ರೀನ್​ ಸಿಗ್ನಲ್​ ಸಿಕ್ಕರೆ ಅದೂ ಕೂಡ ಮಕ್ಕಳಿಗೆ ಒಂದು ಆಯ್ಕೆಯಾಗಬಹುದು ಎಂದು ಹೇಳಿದ್ದಾರೆ.

ಮಕ್ಕಳ ಮೇಲೆ ಟ್ರಯಲ್​: ಇನ್ನು ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಈಗಾಗಲೇ ದೆಹಲಿಯ ಏಮ್ಸ್​ ಕ್ಲಿನಿಕಲ್​ ಟ್ರಯಲ್​ ಶುರು ಮಾಡಿದೆ. 2-17ವರ್ಷದವರ ಮೇಲೆ ಜೂ.7ರಿಂದಲೇ ಪ್ರಯೋಗ ನಡೆಯುತ್ತಿದ್ದು, ಮೂರನೇ ಹಂತ ಮುಗಿಯುತ್ತಿದ್ದಂತೆ ಅವರಿಗೆ ಕೊವಿಡ್​ 19 ಲಸಿಕೆ ನೀಡುವ ಅಭಿಯಾನ ಪ್ರಾರಂಭವಾಗಲಿದೆ. ಮಕ್ಕಳ ಮೇಲೆ ಕೊವ್ಯಾಕ್ಸಿನ್​ ಕೊರೊನಾ ಲಸಿಕೆ 2 ಮತ್ತು 3ನೇ ಹಂತದ ಪ್ರಯೋಗಕ್ಕೆ ಮೇ 12ರಂದು ಡಿಸಿಜಿಐ ಅನುಮೋದನೆ ನೀಡಿತ್ತು.

ಮಕ್ಕಳಿಗೆ ಲಸಿಕೆ ಹಾಕಿ, ನಂತರ ಶಾಲೆಗಳನ್ನು ತೆರೆಯುವುರಿಂದ ಶಿಕ್ಷಣ ಸಂಸ್ಥೆಗಳು ಕೊರೊನಾ ಸೂಪರ್​ ಸ್ಪ್ರೆಡರ್ ಆಗುವುದು ತಪ್ಪುತ್ತದೆ. ನೀತಿ ನಿರೂಪಕರು ಶಾಲೆಗಳನ್ನು ತೆರೆಯುವತ್ತ ಗಮನಹರಿಸಬೇಕು.

ಹಾಗೇ ಅದನ್ನು ತೆಗೆಯುವ ಮುನ್ನ ಕೊರೊನಾ ನಿಯಂತ್ರಕ ಸಮಗ್ರ ವಿಧಾನವನ್ನೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಹಾಗೇ, ಕಂಟೈನ್​ಮೆಂಟ್​ ಝೋನ್​ಗಳಲ್ಲದ ಪ್ರದೇಶದಲ್ಲಿ ಶಾಲೆಗಳನ್ನು ತೆರೆಯುವತ್ತ ಗಮನಹರಿಸಬಹುದು.

ಆದರೆ ಸಮ-ಬೆಸ ಮಾದರಿಯಲ್ಲಿ ಶಾಲೆ ನಡೆಸಬೇಕು. ಅದರಲ್ಲೂ ಯಾವುದೇ ಕೋಣೆಯಲ್ಲಿ ಶಾಲೆ ನಡೆಸದೆ, ತೆರೆದ ಪ್ರದೇಶದಲ್ಲಿ ಶಾಲೆ ನಡೆಸಬೇಕು ಎಂದು ಡಾ. ಗುಲೇರಿಯಾ ತಿಳಿಸಿದ್ದಾರೆ.

English summary
India is likely to start vaccinating children by September, AIIMS chief Dr Randeep Guleria told NDTV this morning as he underlined that it will be an important move to break the chain of transmission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X