ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಕೋವಿಡ್ ಲಸಿಕೆಗಳು ಶೇ 110ರಷ್ಟು ಸುರಕ್ಷಿತ: ಡಿಸಿಜಿಐ

|
Google Oneindia Kannada News

ನವದೆಹಲಿ, ಜನವರಿ 4: ಭಾರತವು ಅನುಮೋದನೆ ನೀಡಿರುವ ಎರಡು ಕೊರೊನಾ ವೈರಸ್ ಲಸಿಕೆಗಳು ಶೇ 110ರಷ್ಟು ಸುರಕ್ಷಿತ ಎಂದು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ವಿ.ಜಿ. ಸೋಮಾನಿ ಹೇಳಿದ್ದಾರೆ.

Recommended Video

ಭಾರತದ Covid Vaccine ಸುರಕ್ಷತೆ ಬಗ್ಗೆ ಜನರಲ್ಲಿ ಗೊಂದಲ | Oneindia Kannada

ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಮತ್ತು ಸೆರಮ್ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಿದ ಬಳಿಕ ಅವರು ಲಸಿಕೆಗಳ ಸುರಕ್ಷತೆಯ ಕುರಿತಾದ ಕಳವಳಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.

ಕೊವಿಶೀಲ್ಡ್, ಕೋವ್ಯಾಕ್ಸಿನ್ ಕೊರೊನಾ ಲಸಿಕೆ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್ಕೊವಿಶೀಲ್ಡ್, ಕೋವ್ಯಾಕ್ಸಿನ್ ಕೊರೊನಾ ಲಸಿಕೆ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್

'ಸುರಕ್ಷತೆಯ ಬಗ್ಗೆ ಸಣ್ಣ ಆತಂಕವಿದ್ದರೂ ನಾವು ಯಾವುದಕ್ಕೂ ಅನುಮೋದನೆ ನೀಡುವುದಿಲ್ಲ. ಲಸಿಕೆಗಳು ಶೇ 110ರಷ್ಟು ಸುರಕ್ಷಿತ' ಎಂದು ತಿಳಿಸಿದ್ದಾರೆ. ಕೋವಿಶೀಲ್ಡ್ ಶೇ 70.42ರಷ್ಟು ಪರಿಣಾಮಕಾರಿ ಎಂದು ಕಂಡುಬಂದಿದೆ. ಕೋವ್ಯಾಕ್ಸಿನ್ 'ಸುರಕ್ಷಿತ ಮತ್ತು ಪ್ರತಿರಕ್ಷಣಾ ಸ್ಪಂದನೆಯನ್ನು ವೃದ್ಧಿಸುತ್ತದೆ' ಎಂದು ಹೇಳಿದ್ದಾರೆ.

Covid Vaccines Are 110 Precent Safe With Some Common Side Effects: DCGI

ಲಸಿಕೆ ಪಡೆದುಕೊಂಡ ಬಳಿಕ ಸಣ್ಣ ಜ್ವರ, ತೋಳಿನಲ್ಲಿ ನೋವು ಮತ್ತು ಅಲರ್ಜಿಯಂತಹ ಸಾಮಾನ್ಯ ಸಮಸ್ಯೆಗಳು ಕಂಡುಬರಬಹುದು. ಇದು ಎಲ್ಲ ಲಸಿಕೆಗಳಿಂದಲೂ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಎರಡೂ ಲಸಿಕೆಗಳನ್ನು ಎರಡು ಡೋಸ್‌ನಂತೆ ನೀಡಬೇಕಿದ್ದು, 2-8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಸಂಗ್ರಹಿಸಿಡಬೇಕಾಗುತ್ತದೆ. ಲಸಿಕೆ ಕಾರ್ಯಕ್ರಮ ಶುರುವಾದ ಬಳಿಕ 1 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು 2 ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

ಕೊರೊನಾ ಲಸಿಕೆಯಿಂದ ನಪುಂಸಕತೆ ಬರುತ್ತದೆ ಎಂದ ಮುಖಂಡ: ಬಿಜೆಪಿ ತಿರುಗೇಟುಕೊರೊನಾ ಲಸಿಕೆಯಿಂದ ನಪುಂಸಕತೆ ಬರುತ್ತದೆ ಎಂದ ಮುಖಂಡ: ಬಿಜೆಪಿ ತಿರುಗೇಟು

ಪುಣೆ ಮೂಲದ ಸೆರಮ್ ಇನ್‌ಸ್ಟಿಟ್ಯೂಟ್ ಭಾರತದಲ್ಲಿ 1,600 ಜನರ ಮೇಲೆ ಎರಡು ಮತ್ತು ಮೂರನೇ ಹಂತದ ಪ್ರಯೋಗಗಳನ್ನು ನಡೆಸಿದೆ. ಲಸಿಕೆಯ ನಿರ್ಬಂಧಿತ ಬಳಕೆಗೆ ಶಿಫಾರಸು ಮಾಡಲಾಗಿದ್ದು, ಪ್ರಯೋಗಗಳು ಕೂಡ ಮುಂದುವರಿಯಲಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಅಭಿವೃದ್ಧಿಪಡಿಸಿದ ಈ ಲಸಿಕೆಯು ವಿದೇಶಗಳಲ್ಲಿ ಈಗಾಗಲೇ ಬಳಕೆಗೆ ಅನುಮೋದನೆ ಪಡೆದುಕೊಂಡಿದೆ.

English summary
DCGI VG Somani said Indian covid vaccines are 110% safe. We will never approve anything if there is slightest of safety concern.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X