ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಲಸಿಕೆಗಳು ಡೆಲ್ಟಾ ರೂಪಾಂತರಿ ವಿರುದ್ಧ 8 ಪಟ್ಟು ಕಡಿಮೆ ಪರಿಣಾಮಕಾರಿ

|
Google Oneindia Kannada News

ಕೊರೊನಾ ಲಸಿಕೆಗಳು ಡೆಲ್ಟಾ ರೂಪಾಂತರಿ ವಿರುದ್ಧ 8 ಪಟ್ಟು ಕಡಿಮೆ ಪರಿಣಾಮಕಾರಿ ಎಂಬುದು ತಿಳಿದುಬಂದಿದೆ.

ಮುಂಬೈನ ಗಂಗಾರಾಮ್ ಆಸ್ಪತ್ರೆ ನಡೆಸಿದ ಅಧ್ಯಯನದಲ್ಲಿ ಇದು ಬಹಿರಂಗಗೊಂಡಿದೆ. ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರಿಯ ಬಗ್ಗೆ ಆತಂಕಕಾರಿ ಅಧ್ಯಯನ ವರದಿಯೊಂದು ಪ್ರಕಟಗೊಂಡಿದೆ.

ಕೊರೊನಾದ ಬೇರೆ ರೂಪಾಂತರಿಗಳಿಗೆ ಹೋಲಿಕೆ ಮಾಡಿದಲ್ಲಿ ಡೆಲ್ಟಾ ರೂಪಾಂತರಿ ಲಸಿಕೆಗಳಿಗೂ ಜಗ್ಗುವುದಿಲ್ಲ, ಪ್ರತಿಕಾಯಗಳಿಗೆ 8 ಪಟ್ಟು ಕಡಿಮೆ ಸೂಕ್ಷ್ಮವಾಗಿವೆ ಎಂದು ಭಾರತದಲ್ಲಿ ಗಂಗಾ ರಾಮ್ ಆಸ್ಪತ್ರೆಯೂ ಸೇರಿ 3 ಕೇಂದ್ರಗಳಲ್ಲಿ 100 ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರ ಮೇಲೆ ನಡೆಸಿದ ಅಧ್ಯಯನದಿಂದ ಈ ಮಾಹಿತಿ ಬಹಿರಂಗಗೊಂಡಿದೆ.

Covid Vaccines 8 Times Less Effective Against Delta Variant: Sir Ganga Ram Hospital Study

B.1.617.2 ಡೆಲ್ಟಾ ರೂಪಾಂತರಿ ಲಸಿಕೆ ನಂತರದ ಸೋಂಕುಗಳನ್ನು ಮಾತ್ರವೇ ಪ್ರಾಬಲ್ಯ ಸಾಧಿಸುತ್ತದೆಯಷ್ಟೇ ಅಲ್ಲದೇ ಪೂರ್ಣವಾಗಿ ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರಲ್ಲಿ ವೇಗವಾಗಿಯೂ ಹರಡುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ.

"ನಾವು ಸುರಕ್ಷತಾ ಕ್ರಮಗಳನ್ನು ಕಡಿಮೆ ಮಾಡುತ್ತಾ, ವೈರಾಣುವಿಗೆ ಹೆಚ್ಚು ತುತ್ತಾಗುತ್ತಾ ಹೋದಲ್ಲಿ ಅದಕ್ಕೆ ಹೆಚ್ಚಾಗುತ್ತಾ ಹೋಗುವುದಕ್ಕೆ ಅವಕಾಶ ನೀಡಿದರೆ ರೂಪಾಂತರಗಳು ಆಗುತ್ತಲೇ ಇರುತ್ತವೆ ಎಂದು ಡಾ. ಚಂದ್ ವಟ್ಟಲ್ ಎಚ್ಚರಿಸಿದ್ದಾರೆ.

ಲಸಿಕೆ ಪಡೆದವರು ಸುರಕ್ಷತಾ ಕ್ರಮಗಳಲ್ಲಿ ರಾಜಿ ಮಾಡಿಕೊಳ್ಳುವಂತಿಲ್ಲ ಎಂಬುದಕ್ಕೆ ಇದೇ ಅತ್ಯುತ್ತಮ ಉದಾಹರಣೆ ಎಂದು ಡಾ. ಚಂದ್ ವಟ್ಟಲ್ ಹೇಳಿದ್ದಾರೆ.
"ಸಾರ್ಸ್-Cov-2 B.1.617.2 ದೆಲ್ಟಾ ವೇರಿಯಂಟ್ ಎಮರ್ಜೆನ್ಸ್ ಆಂಡ್ ವ್ಯಾಕ್ಸಿನ್ ಬ್ರೇಕ್‌ಥ್ರೂ: ಕೊಲ್ಯಾಬೊರೇಟಿವ್ ಸ್ಟಡಿ'' ಯನ್ನು ಭಾರತ ಹಾಗೂ ಕೇಂಬ್ರಿಡ್ಜ್‌ನ ಚಿಕಿತ್ಸಕ ರೋಗನಿರೋಧಕ ಶಕ್ತಿ ಮತ್ತು ಸಾಂಕ್ರಾಮಿಕ ರೋಗದ ಸಂಸ್ಥೆ ನಡೆಸಿದೆ.

ಡೆಲ್ಟಾ ಹಾಗೂ ವಿಟ್ರೊ ರೂಪಾಂತರಿಗಳು ವುಹಾನ್-1 ಗೆ ಹೋಲಿಕೆ ಮಾಡಿದರೆ ಪ್ರತಿಕಾಯಗಳಿಗೆ 8 ಪಟ್ಟು ಕಡಿಮೆ ಸೂಕ್ಷ್ಮವಾಗಿವೆ ಎಂದು ಎಸ್ ಜಿಆರ್ ಹೆಚ್ ನ ಕ್ಲಿನಿಕಲ್ ಮೈಕ್ರೋಬಯಾಲಜಿ ಹಾಗೂ ಇಮ್ಯುನಾಲಜಿ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ ವಟ್ಟಲ್ ತಿಳಿಸಿದ್ದಾರೆ.

Recommended Video

ಹಿಡಿತ ತಪ್ಪಿದ ಕುಮಾರಸ್ವಾಮಿ ಮಾತು, ರೊಚ್ಚಿಗೆದ್ದ ಸುಮಲತಾ | Oneindia Kannada

English summary
Delta variant of coronavirus is eight times less sensitive to antibodies generated by vaccines, a new study claims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X