ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಲಸಿಕೆ ಪೂರೈಕೆ; ಜೂನ್‌ನಿಂದ ಸುಧಾರಿಸಲಿದೆ ಪರಿಸ್ಥಿತಿ

|
Google Oneindia Kannada News

ನವದೆಹಲಿ, ಮೇ 14; ಭಾರತದಲ್ಲಿ ಕೋವಿಡ್ 2ನೇ ಅಲೆ ಆತಂಕ ಮೂಡಿಸಿದೆ. ಸೋಂಕಿನ ವಿರುದ್ಧದ ಲಸಿಕೆ ಪಡೆಯಲು ಜನರು ತಯಾರಾಗಿದ್ದಾರೆ. ಆದರೆ ವಿವಿಧ ರಾಜ್ಯಗಳಲ್ಲಿ ಲಸಿಕೆಯ ಲಭ್ಯತೆಯೇ ಇಲ್ಲ.

ಮೇ ತಿಂಗಳಿನಲ್ಲಿ 8.8 ಕೋಟಿ ಡೋಸ್ ಲಸಿಕೆ ದೇಶದಲ್ಲಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಜೂನ್ ತಿಂಗಳ ಬಳಿಕ ಲಸಿಕೆ ಉತ್ಪಾದನೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಅಂಕಿ ಅಂಶಗಳ ಪ್ರಕಾರ ಜೂನ್‌ನಲ್ಲಿ 15.81 ಕೋಟಿ ಡೋಸ್, ಆಗಸ್ಟ್‌ನಲ್ಲಿ 36.6 ಕೋಟಿ ಡೋಸ್, ಡಿಸೆಂಬರ್ ವೇಳೆಗೆ 65 ಕೋಟಿ ಡೋಸ್ ಲಸಿಕೆ ಲಭ್ಯವಾಗಲಿದೆ.

ಕೊರೊನಾ ಲಸಿಕೆ ನೇರ ಖರೀದಿಗೆ 100 ಕೋಟಿ ರೂ. ಘೋಷಿಸಿದ ಕಾಂಗ್ರೆಸ್ಕೊರೊನಾ ಲಸಿಕೆ ನೇರ ಖರೀದಿಗೆ 100 ಕೋಟಿ ರೂ. ಘೋಷಿಸಿದ ಕಾಂಗ್ರೆಸ್

ಆಗಸ್ಟ್‌ನಿಂದ ಡಿಸೆಂಬರ್‌ ತನಕ 268 ಕೋಟಿ ಡೋಸ್ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಜೂನ್‌ನಿಂದಲೇ ದೇಶದಲ್ಲಿ ಲಸಿಕೆ ಕೊರತೆಯ ಸಮಸ್ಯೆ ಕಡಿಮೆಯಾಗುವ ಭರವಸೆ ಇದೆ. ಕೊವ್ಯಾಕ್ಸಿನ್, ಕೋವಿಶೀಲ್ಡ್ ಹೊರತುಪಡಿಸಿ ಬೇರೆ ಕಂಪನಿಗಳ ಲಸಿಕೆ ಸಹ ದೇಶಕ್ಕೆ ಆಗಮಿಸಲಿದೆ.

ಸ್ಪುಟ್ನಿಕ್ ವಿ ಲಸಿಕೆ ಭಾರತಕ್ಕೆ ಬಂದು 2 ವಾರಗಳಾದರೂ, ಬಳಕೆಗೆ ಲಭ್ಯವಿಲ್ಲ ಯಾಕೆ?ಸ್ಪುಟ್ನಿಕ್ ವಿ ಲಸಿಕೆ ಭಾರತಕ್ಕೆ ಬಂದು 2 ವಾರಗಳಾದರೂ, ಬಳಕೆಗೆ ಲಭ್ಯವಿಲ್ಲ ಯಾಕೆ?

COVID Vaccine news

ಕೋವಿಡ್ ಲಸಿಕೆ ವಿಚಾರದಲ್ಲಿ ಕೆಲಸ ಮಾಡುತ್ತಿರುವ ಡಾ. ಎನ್‌. ಕೆ. ಆರೋರಾ ಈ ಕುರಿತು ಮಾತನಾಡಿದ್ದಾರೆ. "ಮುಂದಿನ 2 ಅಥವ ಎರಡೂವರೆ ತಿಂಗಳು ಲಸಿಕೆ ಕೊರತೆ ಕಾಡಬಹುದು. ನಂತರ ನಾವು 18-44 ವಯೋಮಿತಿಯವರಿಗೆ ಲಸಿಕೆ ನೀಡುವ ಕಾರ್ಯ ಚುರುಕುಗೊಳಿಸಬಹುದು" ಎಂದು ಹೇಳಿದ್ದಾರೆ.

ಭಾರತದಲ್ಲಿ ಡಿಸೆಂಬರ್ ವೇಳೆಗೆ 216 ಕೋಟಿ ಕೊರೊನಾ ಲಸಿಕೆ ಲಭ್ಯಭಾರತದಲ್ಲಿ ಡಿಸೆಂಬರ್ ವೇಳೆಗೆ 216 ಕೋಟಿ ಕೊರೊನಾ ಲಸಿಕೆ ಲಭ್ಯ

ಕೋವಿಡ್ ಲಸಿಕೆ ರಾಷ್ಟ್ರೀಯ ಟಾಸ್ಕ್ ಫೋರ್ಸ್‌ ಮುಖ್ಯಸ್ಥ ಡಾ. ವಿನೋದ್ ಕುಮಾರ್ ಪೌಲ್ ಮಾತನಾಡಿದ್ದು, "ಆಗಸ್ಟ್‌ನಿಂದ ಡಿಸೆಂಬರ್ ಅಂತ್ಯದ ತನಕ 216 ಕೋಟಿ ಡೋಸ್ ಲಭ್ಯವಾಗುವ ನಿರೀಕ್ಷೆ ಇದೆ. ಇನ್ನೂ 8 ಹೊಸ ಲಸಿಕೆ ಬರಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲಸಿಕೆ ಹಂಚಿಕೆ ಬಗ್ಗೆ ಸರಿಯಾದ ಕ್ರಮದಲ್ಲಿ ಯೋಜನೆ ರೂಪಿಸಿದರೆ ಹೊಸ ವರ್ಷದಲ್ಲಿ ದೇಶದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ತಗ್ಗುವ ನಿರೀಕ್ಷೆ ಇದೆ. ಬೇರೆ ಲಸಿಕೆಗಳ ಕ್ಲಿನಿಕಲ್ ಪ್ರಯೋಗಳು ಈಗಾಗಲೇ ಅಂತಿಮ ಹಂತಕ್ಕೆ ಬಂದಿದ್ದು, ಅವುಗಳು ಮಾರುಕಟ್ಟೆಗೆ ಬಂದರೆ ಸಹಾಯಕವಾಗಲಿದೆ.

English summary
Supply of Covid-19 vaccines is likely to increase gradually from June. India may get 15.81 crore doses in June it is almost double compare to May month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X