ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊರೊನಾ ವೈರಸ್ ಲಸಿಕೆಗಳ ಪ್ರಗತಿ ಯಾವ ಹಂತದಲ್ಲಿದೆ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 8: ಹೆಚ್ಚುತ್ತಿರುವ ಕೊರೊನಾ ವೈರಸ್ ಸಂಕಷ್ಟಕ್ಕೆ ಶೀಘ್ರವೇ ಔಷಧೀಯ ಪರಿಹಾರ ಕಂಡುಕೊಳ್ಳಲು ಭಾರತ ಶತಪ್ರಯತ್ನ ನಡೆಸುತ್ತಿದೆ. ಜಗತ್ತಿನ ವಿವಿಧೆಡೆಗಳಿಂದ ಪ್ರಮುಖ ಕೋವಿಡ್ ಲಸಿಕೆಗಳನ್ನು ಪ್ರಯೋಗಿಸುವ ಉನ್ನತ ಮಟ್ಟಕ್ಕೆ ಭಾರತ ಉತ್ಸಾಹದಿಂದ ಮುನ್ನುಗ್ಗುತ್ತಿದೆ.

ಆಕ್ಸ್‌ಫರ್ಡ್ ಮತ್ತು ಭಾರತ್ ಬಯೋಟೆಕ್‌ನ ಲಸಿಕೆ ಮಾದರಿಗಳ 2-3 ಹಂತದ ಪ್ರಯೋಗಗಳನ್ನು ಮುಂದಿನ ವಾರದ ಆರಂಭದಲ್ಲಿ ಶುರುಮಾಡಲಿದೆ. ಅಷ್ಟೇ ಅಲ್ಲದೆ, ರಷ್ಯಾದ ಸ್ಪುಟ್ನಿಕ್ ಲಸಿಕೆಯ ಪ್ರಯೋಗಗಳನ್ನೂ ಭಾರತದಲ್ಲಿ ನಡೆಸಲಾಗುವುದು ಎಂದು ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ರಷ್ಯಾ ಲಸಿಕೆ ತರಿಸಿಕೊಳ್ಳಲು ಭಾರತ ಆತುರಪಡುವುದು ಬೇಡರಷ್ಯಾ ಲಸಿಕೆ ತರಿಸಿಕೊಳ್ಳಲು ಭಾರತ ಆತುರಪಡುವುದು ಬೇಡ

ಪ್ರಸ್ತುತ ಭಾರತದಲ್ಲಿ ಮೂರು ಕಂಪೆನಿಗಳು ಕೋವಿಡ್ ಲಸಿಕೆಯ 2-3 ಹಂತದ ಮಾನವ ಪ್ರಯೋಗಗಳನ್ನು ನಡೆಸುತ್ತಿವೆ. ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ವಿವಿಧ ಹಂತದ ಲಸಿಕೆಗಳ ಪ್ರಯೋಗ ನಡೆಯುತ್ತಿವೆ. ಕೆಲವು ಲಸಿಕೆಗಳು ಪ್ರಾಥಮಿಕ ಪ್ರಯೋಗಗಳಲ್ಲಿ ಜನರಲ್ಲಿ ಪ್ರತಿರಕ್ಷಕ ಸಾಮರ್ಥ್ಯ ಹೆಚ್ಚಿಸಿರುವುದು ಕಂಡುಬಂದಿದೆ. ಆದರೆ ಇವು ಕೊರೊನಾ ವೈರಸ್‌ಗೆ ಪರಿಣಾಮಕಾರಿ ಮದ್ದಾಗುತ್ತವೆ ಎಂದು ಇನ್ನೂ ಹೇಳಲು ಸಾಧ್ಯವಿಲ್ಲ. ರಷ್ಯಾ ಸರ್ಕಾರವು ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದು, ತನ್ನ ಲಸಿಕೆಯನ್ನು ಭಾರತದಲ್ಲಿ ಪ್ರಯೋಗಿಸಲು ಉತ್ಸಾಹ ತೋರಿಸಿದೆ. ಆದರೆ ರಷ್ಯಾ ನೀಡಿರುವ ಅಂಕಿ ಅಂಶಗಳು ಅಪೂರ್ಣವಾಗಿವೆ. ಮುಂದೆ ಓದಿ.

ಆಕ್ಸ್‌ಫರ್ಡ್ ಲಸಿಕೆ

ಆಕ್ಸ್‌ಫರ್ಡ್ ಲಸಿಕೆ

ಆಕ್ಸ್‌ಫರ್ಡ್ ಯುನಿವರ್ಸಿಟಿಸಿಯ ಜೆನ್ನರ್ ಸಂಸ್ಥೆಯು ಬ್ರಿಟಿಷ್-ಸ್ವೀಡಿಷ್ ಔಷಧ ತಯಾರಕ ಕಂಪೆನಿ ಆಸ್ಟ್ರಾಜೆನಿಕಾ ಸಹಯೋಗದಲ್ಲಿ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಲಸಿಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಆಕ್ಸ್‌ಫರ್ಡ್‌ ಲಸಿಕೆಯನ್ನು ಭಾರತೀಯ ಸೆರಮ್ ಸಂಸ್ಥೆಯು ಉತ್ಪಾದಿಸುತ್ತಿದೆ, ಇದು ಮುಂದಿನ ವಾರದಲ್ಲಿ ಮೂರನೇ ಹಂತದ ಮಾನವ ಪ್ರಯೋಗವನ್ನು ಆರಂಭಿಸಲಿದೆ. 'ಕೋವಿಶೀಲ್ಡ್' ಎಂದು ಕರೆಯಿಸಿಕೊಂಡಿರುವ ಈ ಲಸಿಕೆಯು ಭಾರತದಾದ್ಯಂತ ವಿವಿಧ ವೈದ್ಯಕೀಯ ಸಂಸ್ಥೆಗಳಲ್ಲಿ ಎರಡನೆಯ ಹಂತದ ಪ್ರಯೋಗ ನಡೆಸುತ್ತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಮೂರನೇ ಹಂತದ ಪ್ರಯೋಗ ಆರಂಭಿಸುವುದಾಗಿ ಹೇಳಲಾಗಿತ್ತು. ಆದರೆ ಮುಂದೂಡಲಾಗಿದೆ.

ಭಾರತ್ ಕೋವ್ಯಾಕ್ಸಿನ್

ಭಾರತ್ ಕೋವ್ಯಾಕ್ಸಿನ್

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯು ಮಂಗಳವಾರದಿಂದ ಎರಡನೆಯ ಹಂತದ ಪ್ರಯೋಗಕ್ಕೆ ಮೊದಲ ಹೆಜ್ಜೆ ಇರಿಸಿದೆ. ಇದು ಸಂಪೂರ್ಣ ಸ್ವದೇಶಿ ಲಸಿಕೆ. ಮೊದಲ ಹಂತದ ಪ್ರಯೋಗ ಇನ್ನೂ ನಡೆಯುತ್ತಿದೆ. ಅದರ ನಡುವೆಯೇ ಎರಡನೆಯ ಹಂತದ ಪ್ರಯೋಗ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದು ಎಸ್‌ಯುಎಂ ಆಸ್ಪತ್ರೆ ಮತ್ತು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ. ಇ. ವೆಂಕಟ ರಾವ್ ತಿಳಿಸಿದ್ದರು.

ರಷ್ಯಾದ ಸ್ಪುಟ್ನಿಕ್ 5 ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಬಿಡುಗಡೆರಷ್ಯಾದ ಸ್ಪುಟ್ನಿಕ್ 5 ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಬಿಡುಗಡೆ

ರಷ್ಯಾದ ಸ್ಪುಟ್ನಿಕ್

ರಷ್ಯಾದ ಸ್ಪುಟ್ನಿಕ್

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿರುವ ರಷ್ಯಾದ ಸ್ಪುಟ್ನಿಕ್ 5 ಲಸಿಕೆಯು ಇನ್ನೂ ಕ್ಲಿನಿಕಲ್ ಪ್ರಯೋಗ ಪೂರ್ಣಗೊಳಿಸುವ ಮುನ್ನವೇ ಸರ್ಕಾರ ಅನುಮೋದನೆ ನೀಡಿದೆ. ಮುಂದಿನ ತಿಂಗಳು ಭಾರತದಲ್ಲಿಯೂ ಮಾನವ ಪ್ರಯೋಗಗಳನ್ನು ನಡೆಸಲಿದೆ. ಭಾರತ ಸರ್ಕಾರವನ್ನು ಸಂಪರ್ಕಿಸಿದ್ದ ರಷ್ಯಾ ಸರ್ಕಾರವು ಲಸಿಕೆ ಉತ್ಪಾದನೆಗೆ ಸಹಾಯ ಮಾಡುವಂತೆ ಕೇಳಿದೆ. ಜತೆಗೆ ಭಾರತದಲ್ಲಿಯೇ ಅದರ ಮೂರನೇ ಹಂತದ ಅಧ್ಯಯನ ನಡೆಸಬಹುದೇ ಎಂದು ಕೋರಿದೆ. ರಷ್ಯಾ ನಮ್ಮ ಸ್ನೇಹಿತ. ಹೀಗಾಗಿ ಮಹತ್ವದ ವಿಚಾರವಾಗಿ ಎರಡೂ ದೇಶಗಳು ಸಾಗುತ್ತಿವೆ ಎಂದು ಭಾರತದ ಲಸಿಕೆ ತಜ್ಞರ ಸಮೂಹದ ಮುಖ್ಯಸ್ಥ ವಿಕೆ ಪೌಲ್ ತಿಳಿಸಿದ್ದಾರೆ.

ತುರ್ತು ಬಳಕೆಗೆ ಅನುಮತಿ?

ತುರ್ತು ಬಳಕೆಗೆ ಅನುಮತಿ?

ಬ್ರಿಟನ್ ಮತ್ತು ಚೀನಾದಂತಹ ಕೋವಿಡ್ ಲಸಿಕೆಗಳ ತುರ್ತು ಸಂದರ್ಭದ ಬಳಕೆಗೆ ಈಗಾಗಲೇ ಅನುಮತಿ ನೀಡಿದೆ. ಅದನ್ನು ಭಾರತವೂ ಅನುಸರಿಸುವುದೇ ಎಂಬ ಪ್ರಶ್ನೆ ಮೂಡಿದೆ. ಲಸಿಕೆಯೊಂದನ್ನು ತುರ್ತಾಗಿ ಬಳಸುವ ಅಧಿಕಾರ ಎಲ್ಲ ದೇಶದಲ್ಲಿಯೂ ಇದೆ. ಈಗ ಅದರ ಕುರಿತು ಮಾತಾಡುವುದು ಸೂಕ್ತವಲ್ಲ ಎಂದು ತಜ್ಞರು ಹೇಳಿದ್ದಾರೆ. ಒಂದು ವೇಳೆ ತುರ್ತು ಬಳಕೆಯ ಅಧಿಕಾರ ನೀಡಿದರೆ ಮೂರನೇ ಹಂತದ ಪ್ರಯೋಗವನ್ನು ಬಿಡುವ ಅಥವಾ ದೊಡ್ಡ ಗುಂಪುಗಳಲ್ಲಿ ಲಸಿಕೆಯ ಪ್ರಯೋಗವನ್ನು ಮಾಡುವ ಅವಕಾಶ ಸಿಗುತ್ತದೆ.

English summary
India to continue the trials of Oxford and Bharat Biotech vaccines for Covid and may start trials for Russia's Sputnik V vaccine in next month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X