ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 196 ಕೋಟಿ ದಾಟಿದ ಕೋವಿಡ್ ಲಸಿಕಾ ಅಭಿಯಾನ

|
Google Oneindia Kannada News

ನವದೆಹಲಿ, ಜೂ.25: ಭಾರತದ ಕೋವಿಡ್‌ 19 ವಿರುದ್ಧ ಹೋರಾಟದಲ್ಲಿ ಲಸಿಕಾ ಅಭಿಯಾನ ಶನಿವಾರದ ವೇಳೆಗೆ 196.94 ಕೋಟಿ (1,96,94,40,932) ಗುರಿಯನ್ನು ದಾಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ತಾತ್ಕಾಲಿಕ ವರದಿಗಳ ಪ್ರಕಾರ ಶನಿವಾರ ಬೆಳಿಗ್ಗೆ 7 ಗಂಟೆಯವರೆಗೆ ಭಾರತವು 196 ಕೋಟಿ ಲಸಿಕಾ ಗುರಿಯನ್ನು ಮುಟ್ಟಿದೆ ಎಂದು ತಿಳಿಸಿದೆ. 12-14 ವರ್ಷ ವಯಸ್ಸಿನವರಿಗೆ ಕೋವಿಡ್ ಲಸಿಕೆಯನ್ನು ಮಾರ್ಚ್ 16, 2022ರಂದು ಪ್ರಾರಂಭಿಸಲಾಯಿತು. ಇಲ್ಲಿಯವರೆಗೆ 3.62 ಕೋಟಿಗೂ ಹೆಚ್ಚು (3,62,20,781) ಹದಿಹರೆಯದವರಿಗೆ ಮೊದಲ ಡೋಸ್ ಮತ್ತು 2,23,36,175 ಕೋವಿಡ್ ಲಸಿಕೆಯನ್ನು ಎರಡನೇ ಡೋಸ್‌ ನೀಡಲಾಗಿದೆ.

ಅಬ್ಬಾ.. ಭಾರತದಲ್ಲಿ 42 ಲಕ್ಷ ಜನರ ಜೀವ ಉಳಿಸಿತು ಕೊರೊನಾ ವೈರಸ್ ಲಸಿಕೆ!?ಅಬ್ಬಾ.. ಭಾರತದಲ್ಲಿ 42 ಲಕ್ಷ ಜನರ ಜೀವ ಉಳಿಸಿತು ಕೊರೊನಾ ವೈರಸ್ ಲಸಿಕೆ!?

15-18 ವರ್ಷ ವಯಸ್ಸಿನವರಿಗೆ ಮೊದಲ ಡೋಸ್ ಆಗಿ 6,02,72,529 ಲಸಿಕೆ ಮತ್ತು ಎರಡನೇ ಡೋಸ್ ಆಗಿ 4,82,78,560 ಡೋಸ್‌ಗಳನ್ನು ನೀಡಲಾಗಿದೆ. ಸಚಿವಾಲಯದ ಪ್ರಕಾರ, ಆರೋಗ್ಯ ಕಾರ್ಯಕರ್ತರಿಗೆ (ಎಚ್‌ಎಲ್‌ಡಬ್ಲ್ಯು) ಇದುವರೆಗೆ ನೀಡಲಾದ ಒಟ್ಟು ಡೋಸ್‌ಗಳಲ್ಲಿ, 1,04,08,628 ಮೊದಲ ಡೋಸ್ ಅನ್ನು ನೀಡಲಾಗಿದೆ. 1,00,60,891 ಮಂದಿ ಎರಡನೇ ಲಸಿಕೆ ಡೋಸ್ ಅನ್ನು ಸ್ವೀಕರಿಸಿದ್ದಾರೆ ಮತ್ತು 56,11,589 ಬೂಸ್ಟರ್‌ ಡೋಸ್‌ ನೀಡಲಾಗಿದೆ.

ಅಲ್ಲದೆ, 1,84,22,906 ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್, 1,76,19,383 ಎರಡನೇ ಡೋಸ್ ಮತ್ತು 99,40,140 ಮುನ್ನೆಚ್ಚರಿಕೆ ಡೋಸ್‌ (ಬೂಸ್ಟರ್‌ ಡೋಸ್‌)ಗಳನ್ನು ನೀಡಲಾಗಿದೆ. ಒಟ್ಟು 55,80,69,125 ಲಸಿಕೆಯನ್ನು ಮೊದಲ ಡೋಸ್‌ನಂತೆ ನೀಡಲಾಯಿತು. 49,98,02,380 ಲಸಿಕೆ ಡೋಸ್‌ಗಳನ್ನು ಎರಡನೇ ಡೋಸ್‌ನಂತೆ ಮತ್ತು 24,07,273 ಲಸಿಕೆ ಡೋಸ್‌ಗಳನ್ನು 18-44 ವರ್ಷ ವಯಸ್ಸಿನವರಿಗೆ ಮುನ್ನೆಚ್ಚರಿಕೆ ಡೋಸ್‌ಗಳಾಗಿ ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

22,93,280 ಮುನ್ನೆಚ್ಚರಿಕೆ(ಬೂಸ್ಟರ್‌) ಡೋಸ್‌

22,93,280 ಮುನ್ನೆಚ್ಚರಿಕೆ(ಬೂಸ್ಟರ್‌) ಡೋಸ್‌

ಅದೇ ರೀತಿ 45ರಿಂದ 59 ವರ್ಷ ವಯಸ್ಸಿನವರು 20,34,14,801 ಮೊದಲ ಡೋಸ್ ಪಡೆದಿದ್ದಾರೆ. 19,30,99,268 ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಹಾಗೂ 22,93,280 ಮುನ್ನೆಚ್ಚರಿಕೆ ಡೋಸ್‌ಗಳನ್ನು ಪಡೆದಿದ್ದಾರೆ. ಆದರೆ, 12,72,28,781 ಲಸಿಕೆ ಡೋಸ್‌ಗಳನ್ನು ಮೊದಲ ಡೋಸ್‌ನಂತೆ, 12,05,89,141 ಎರಡನೇ ಡೋಸ್‌ ಮತ್ತು 2,33,65,301 ಡೋಸ್‌ಗಳನ್ನು ಮುನ್ನೆಚ್ಚರಿಕೆ ಡೋಸ್‌ಗಳಾಗಿ 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗಿದೆ.

ಕೊರೊನಾವೈರಸ್ 2ನೇ ಡೋಸ್ ಮತ್ತು ಬೂಸ್ಟರ್ ಡೋಸ್ ನಡುವಿನ ಅಂತರ ತಗ್ಗಿಸುವ ಸಾಧ್ಯತೆಕೊರೊನಾವೈರಸ್ 2ನೇ ಡೋಸ್ ಮತ್ತು ಬೂಸ್ಟರ್ ಡೋಸ್ ನಡುವಿನ ಅಂತರ ತಗ್ಗಿಸುವ ಸಾಧ್ಯತೆ

ಸಕ್ರಿಯ ಪ್ರಕರಣಗಳು 91,779ಕ್ಕೆ ಏರಿಕೆ

ಸಕ್ರಿಯ ಪ್ರಕರಣಗಳು 91,779ಕ್ಕೆ ಏರಿಕೆ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 15,940 ಹೊಸ ಕೋವಿಡ್ ಪ್ರಕರಣಗಳು ಮತ್ತು 20 ಸಾವುಗಳು ವರದಿಯಾಗಿವೆ. ಇದರೊಂದಿಗೆ, ಭಾರತದ ಸಕ್ರಿಯ ಪ್ರಕರಣಗಳು 91,779ಕ್ಕೆ ಏರಿದೆ ಮತ್ತು ದೈನಂದಿನ ಪಾಸಿಟಿವಿಟಿ ಪ್ರಮಾಣವು ಪ್ರಸ್ತುತ ಶೇಕಡಾ 4.39 ರಷ್ಟಿದೆ. ಈ ತಿಂಗಳ ಆರಂಭದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವಿಯಾ ಅವರು ರಾಜ್ಯ ಆರೋಗ್ಯ ಮಂತ್ರಿಗಳು ಮತ್ತು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳೊಂದಿಗೆ ವೀಡಿಯೊ ಸಂವಾದದ ಮೂಲಕ ಸಭೆ ನಡೆಸಿ ಲಸಿಕೆ ಹರ್‌ಘರ್‌ದಸ್ತಾಕ್‌ 2.0 ಅಭಿಯಾನದ ಪ್ರಗತಿಯನ್ನು ಪರಿಶೀಲಿಸಿದ್ದರು.

ಸಮುದಾಯದಲ್ಲಿ ಸೋಂಕಿನ ಹರಡುವಿಕೆ ತಡೆಯಿರಿ

ಸಮುದಾಯದಲ್ಲಿ ಸೋಂಕಿನ ಹರಡುವಿಕೆ ತಡೆಯಿರಿ

ಕೆಲವು ಜಿಲ್ಲೆಗಳು ಮತ್ತು ರಾಜ್ಯಗಳಲ್ಲಿ ಹೊಸ ಪ್ರಕರಣ ಮತ್ತು ಪಾಸಿಟಿವಿಟಿ ದರ ಏರಿಕೆಯಾಗುತ್ತಿದೆ. ಕಡಿಮೆಯಾದ ಕೋವಿಡ್‌ 19 ಪರೀಕ್ಷೆಯನ್ನು ಉಲ್ಲೇಖಿಸಿ, ಸಚಿವರು ಹೆಚ್ಚಿದ ಮತ್ತು ಸಮಯೋಚಿತ ಪರೀಕ್ಷೆಯು ಕೋವಿಡ್ ಪ್ರಕರಣಗಳನ್ನು ಮೊದಲೇ ಗುರುತಿಸಲು ಮತ್ತು ಸಮುದಾಯದಲ್ಲಿ ಸೋಂಕಿನ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ.

ಜೀನೋಮ್ ಅನುಕ್ರಮದ ಮೇಲೆ ಗಮನಹರಿಸಿ

ಜೀನೋಮ್ ಅನುಕ್ರಮದ ಮೇಲೆ ಗಮನಹರಿಸಿ

ಸಚಿವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಣ್ಗಾವಲು ಮುಂದುವರಿಸಲು ಮತ್ತು ಆರೋಗ್ಯ ವ್ಯವಸ್ಥೆ ಬಲಪಡಿಸಲು ಮತ್ತು ದೇಶದಲ್ಲಿ ಹೊಸ ರೂಪಾಂತರಿತ/ ರೂಪಾಂತರಗಳನ್ನು ಗುರುತಿಸಲು ಜೀನೋಮ್ ಅನುಕ್ರಮದ ಮೇಲೆ ಗಮನಹರಿಸಲು ಮಾಂಡವಿಯಾ ನಿರ್ದೇಶಿಸಿದರು.

ಕೋವಿಡ್‌ ಪರೀಕ್ಷೆ, ಟ್ರ್ಯಾಕ್, ಚಿಕಿತ್ಸೆ, ವ್ಯಾಕ್ಸಿನೇಷನ್ ಮತ್ತು ಕೋವಿಡ್ ಸೂಕ್ತ ನಡವಳಿಕೆ (ಸಿಎಬಿ) ಯ ಐದು ಪಟ್ಟು ತಂತ್ರವನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮುಂದುವರಿಸುವ ಮತ್ತು ಮೇಲ್ವಿಚಾರಣೆ ಮಾಡುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

English summary
The Covid Vaccination campaign has crossed the target of Rs 196.94 crore (1,96,94,40,932) on Saturday in the fight against India's covid 19, the Ministry of Health and Family Welfare said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X