ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಲಸಿಕೆ ಸಂಶೋಧನೆಯಲ್ಲಿ ಭಾರತವೇ ಬೆಸ್ಟ್!

|
Google Oneindia Kannada News

ನವದೆಹಲಿ, ಅಕ್ಟೋಬರ್.07: ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾವೈರಸ್ ಮಹಾಮಾರಿ 10 ತಿಂಗಳಿನಿಂದ ಜಗತ್ತಿನಾದ್ಯಂತ ಲಕ್ಷಾಂತರ ಜೀವಗಳನ್ನು ಬಲಿ ಪಡೆದುಕೊಂಡಿದೆ. 35 ಲಕ್ಷಕ್ಕೂ ಅಧಿಕ ಮಂದಿಗೆ ಕೊವಿಡ್-19 ಸೋಂಕು ಅಂಟಿಕೊಂಡಿದೆ.

ಕೊರೊನಾವೈರಸ್ ಸೋಂಕಿಗೆ ಲಸಿಕೆ ಯಾವಾಗ ಬರುತ್ತದೆಯೋ ಎಂಬ ನಿರೀಕ್ಷೆಯಲ್ಲಿ ಇಡೀ ಜಗತ್ತು ಎದುರು ನೋಡುತ್ತಿದೆ. ಭಾರತದಲ್ಲಿ ಸ್ಥಳೀಯವಾಗಿ ಎರಡು ಕೊವಿಡ್-19 ಲಸಿಕೆ ಮಾದರಿಗಳ ಮೇಲೆ ವೈದ್ಯಕೀಯ ಪ್ರಯೋಗವನ್ನು ನಡೆಸಲಾಗುತ್ತಿದೆ. ವಿಶ್ವದಲ್ಲಿ ಒಟ್ಟು ಮೂರು ಲಸಿಕೆ ಮಾದರಿಗಳು ವೈದ್ಯಕೀಯ ಪ್ರಯೋಗ ಹಂತವನ್ನು ತಲುಪಿವೆ.

20 ರಿಂದ 25 ಕೋಟಿ ಭಾರತೀಯರಿಗೆ ಕೊರೊನಾವೈರಸ್ ಲಸಿಕೆ 20 ರಿಂದ 25 ಕೋಟಿ ಭಾರತೀಯರಿಗೆ ಕೊರೊನಾವೈರಸ್ ಲಸಿಕೆ

ಪುಣೆ ಮೂಲದ ಔಷಧಿ ಸಂಶೋಧನೆ ಮತ್ತು ಉತ್ಪಾದನಾ ಸಂಸ್ಥೆಯಾಗಿರುವ ಸೆರಂ ಇನ್ಸ್ಟಿಟ್ಯೂಟ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಬ್ರಿಟಿಷ್-ಸ್ವೀಡಿಷ್ ಫಾರ್ಮಾ ಸಂಸ್ಥೆ ಅಸ್ಟ್ರಾಜೆನೆಕಾ ತಯಾರಿಸಿದ ಮೂರನೇ ಲಸಿಕೆಯ 20 ಕೋಟಿ ಪ್ರಮಾಣವನ್ನು ಉತ್ಪಾದಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಇಂದು ಭಾರತದಲ್ಲಿ ಲಸಿಕೆ ಸಂಶೋಧನೆ ಮತ್ತು ಉತ್ಪಾದನೆ ಶೈಲಿಯು 19ನೇ ಶತಮಾನಕ್ಕೆ ಹೋಲುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹಾಗಿದ್ದಲ್ಲಿ ಲಸಿಕೆ ಮತ್ತು ಔಷಧಿ ಉತ್ಪಾದನೆ ವಲಯದಲ್ಲಿ ಭಾರತದ ಇತಿಹಾಸ ಹೇಗಿದೆ ಎನ್ನುವುದರ ಬಗ್ಗೆ ಒಂದು ವರದಿ ನಿಮಗಾಗಿ.

ಕೊರೊನಾವೈರಸ್ ಲಸಿಕೆ ಸಿದ್ಧಪಡಿಸುವಲ್ಲಿ ಭಾರತದ ಪಾತ್ರ

ಕೊರೊನಾವೈರಸ್ ಲಸಿಕೆ ಸಿದ್ಧಪಡಿಸುವಲ್ಲಿ ಭಾರತದ ಪಾತ್ರ

ಇದರ ಅರ್ಥ ಜಗತ್ತಿನಾದ್ಯಂತ 150 ಕೊವಿಡ್-19 ಲಸಿಕೆ ಮಾದರಿಗಳ ಮೇಲೆ ಪ್ರಯೋಗಗಳನ್ನು ನಡೆಸಲಾಗಿದ್ದು, ಯಶಸ್ವಿಯಾಗಿರುವ ಮೂರು ಲಸಿಕೆ ಮಾದರಿಗಳ ವೈದ್ಯಕೀಯ ಪ್ರಯೋಗಗಳಲ್ಲೂ ಭಾರತವು ಪಾಲುದಾರಿಕೆಯನ್ನು ಹೊಂದಿದೆ. ಭಾರತದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಇಮಾಕ್ ಅಂದಾಜಿನ ಪ್ರಕಾರ, 2019ರಲ್ಲಿ ದೇಶದ ಲಸಿಕೆ ಸಂಶೋಧನಾ ಮಾರುಕಟ್ಟೆಯಲ್ಲಿ 9400 ಕೋಟಿ ರೂಪಾಯಿ ಹೂಡಿಕೆಯಾಗಿದೆ ಎಂದು ತಿಳಿದು ಬಂದಿದೆ.

ಭಾರತದಲ್ಲಿ 19ನೇ ಶತಮಾನದಲ್ಲಿ ಕಾಲರಾ ರೋಗಕ್ಕೆ ಔಷಧಿ

ಭಾರತದಲ್ಲಿ 19ನೇ ಶತಮಾನದಲ್ಲಿ ಕಾಲರಾ ರೋಗಕ್ಕೆ ಔಷಧಿ

ಕೊರೊನಾವೈರಸ್ ಸೋಂಕಿಗೆ ಲಸಿಕೆ ಕಂಡು ಹಿಡಿಯುವುದಕ್ಕೆ ಔಷಧಿ ಮತ್ತು ಲಸಿಕೆ ಸಂಶೋಧನಾ ಸಂಸ್ಥೆಗಳು ಪೈಪೋಟಿಗೆ ಬಿದ್ದು ಸಂಶೋಧನೆ ಮತ್ತು ವೈದ್ಯಕೀಯ ಪ್ರಯೋಗಗಳನ್ನು ನಡೆಸುತ್ತಿವೆ. ಆದರೆ ಭಾರತವು 19ನೇ ಶತಮಾನದಲ್ಲಿ ಔಷಧಿ ಮತ್ತು ಲಸಿಕೆ ಸಂಶೋಧನೆಯಲ್ಲಿ ಜಗತ್ತಿನ ಗಮನ ಸೆಳೆದಿತ್ತು. ಉಕ್ರೇನ್ ರಾಷ್ಟ್ರದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಕಾಲರಾ ಎಂಬ ಸಾಂಕ್ರಾಮಿಕ ಪಿಡುಗಿಗೆ ಲಸಿಕೆಯನ್ನು ಕಂಡು ಹಿಡಿಯುವುದಕ್ಕಾಗಿ ಭಾರತಕ್ಕೆ ಬಂದಿದ್ದರು ಎನ್ನಲಾಗಿದೆ. ಅದರ ಇತಿಹಾಸ ಮತ್ತು ಭಾರತದಲ್ಲಿ ಲಸಿಕೆ ಸಂಶೋಧನಾ ವಲಯದ ಬೆಳವಣಿಗೆ ರೀತಿ ಬಲು ರೋಚಕವಾಗಿದೆ.

ಭಾಗ-1: ಕೊವಿಡ್-19 ಔಷಧಿ ಪತ್ತೆಯಾದರೂ ಸೋಂಕಿತರಿಗೆ ಸಿಗುವುದೇ ಅನುಮಾನಭಾಗ-1: ಕೊವಿಡ್-19 ಔಷಧಿ ಪತ್ತೆಯಾದರೂ ಸೋಂಕಿತರಿಗೆ ಸಿಗುವುದೇ ಅನುಮಾನ

ಲಸಿಕೆ ಸಂಶೋಧನೆಯಲ್ಲಿ ಭಾರತದ ಉದಾರೀಕರಣ

ಲಸಿಕೆ ಸಂಶೋಧನೆಯಲ್ಲಿ ಭಾರತದ ಉದಾರೀಕರಣ

19ನೇ ಶತಮಾನದ ಆರಂಭದಲ್ಲೇ ಔಷಧಿ ಸಂಶೋಧನಾ ರಂಗದಲ್ಲಿ ಭಾರತವು ಒಂದು ವ್ಯವಸ್ಥಿತ ರೂಪವನ್ನು ಪಡೆದುಕೊಂಡಿತ್ತು. 1990ರ ಉದಾರೀಕರಣ ನೀತಿಗೂ ಮೊದಲೇ ಭಾರತದಲ್ಲಿ ಲಸಿಕೆ ಸಂಶೋಧನೆ ಮತ್ತು ಉತ್ಪಾದನಾ ವಲಯದಲ್ಲಿ ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ಪಾಲುದಾರಿಕೆಗೆ ಅವಕಾಶ ಕಲ್ಪಿಸಿ ಕೊಡಲಾಗಿತ್ತು. ಖಾಸಗಿ ಹೂಡಿಕೆದಾರರಿಗೆ ಮತ್ತು ಹೂಡಿಕೆದಾರ ಸಂಸ್ಥೆಗಳಿಗೆ ಸರ್ಕಾರದಿಂದ ಅಗತ್ಯ ಬೆಂಬಲವನ್ನು ಸಹ ನೀಡಲಾಗುತ್ತಿತ್ತು.

ಭಾರತದಲ್ಲಿ ಲಸಿಕೆ ಸಂಶೋಧನೆ ಹಿಂದಿನ ಇತಿಹಾಸ

ಭಾರತದಲ್ಲಿ ಲಸಿಕೆ ಸಂಶೋಧನೆ ಹಿಂದಿನ ಇತಿಹಾಸ

"ಕಾಲರಾ ಲಸಿಕೆಯ ಅಭಿವೃದ್ಧಿಪಡಿಸುವ ಪ್ರಕ್ರಿಯೆ ಬಗ್ಗೆ ಹಾಫ್ ಕಿನ್ ತಿಳಿದಿದ್ದರೂ, ಭಾರತದಲ್ಲಿ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ" ಎಂದು ಸಾರ್ವಜನಿಕ ಆರೋಗ್ಯ ತಜ್ಞ ಚಂದ್ರಕಾಂತ್ ಲಹರಿಯಾ ತಮ್ಮ 2014ರ ಪತ್ರಿಕೆಯಲ್ಲಿ ಪ್ರಕಟವಾದ "ಭಾರತದಲ್ಲಿ ಲಸಿಕೆಗಳು ಮತ್ತು ವ್ಯಾಕ್ಸಿನೇಷನ್ ಬಗ್ಗೆ ಸಂಕ್ಷಿಪ್ತ ಇತಿಹಾಸ"ದಲ್ಲಿ ಉಲ್ಲೇಖಿಸಿದ್ದಾರೆ. 1896ರ ಸಂದರ್ಭದಲ್ಲಿ ದೇಶಾದ್ಯಂತ ಪ್ಲೇಗ್ ರೋಗವು ಹರಡುತ್ತಿತ್ತು. ಅಂದು ಪ್ಲೇಗ್ ಲಸಿಕೆ ಸಂಶೋಧಿಸಿದ ಹಾಫ್ ಕಿನ್, ಮಾರಕ ರೋಗಕ್ಕೆ ಪರಿಣಾಮಕಾರಿ ಲಸಿಕೆಯನ್ನು ಕಂಡು ಹಿಡಿದಿರುವ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿತು. ಅಂದಿನ ಬ್ರಿಟಿಷ್ ಸಾಮ್ರಾಜ್ಯದ ಅಡಿಯಲ್ಲಿದ್ದ ಭಾರತೀಯ ಸರ್ಕಾರದ ಅನುಮತಿ ಪಡೆದುಕೊಂಡಿತು.

ದೇಶದಲ್ಲೇ ಮೊದಲು ಪ್ಲೇಗ್ ಲಸಿಕೆ ಸಂಶೋಧನೆ

ದೇಶದಲ್ಲೇ ಮೊದಲು ಪ್ಲೇಗ್ ಲಸಿಕೆ ಸಂಶೋಧನೆ

ಬ್ರಿಟಿಷ್ ಸಾಮ್ರಾಜ್ಯದ ಅಧೀನದಲ್ಲಿದ್ದ ಭಾರತೀಯ ಸರ್ಕಾರವು ಅಂದು ಬಾಂಬೆಯಲ್ಲಿ ಎರಡು ಕೊಠಡಿಗಳುಳ್ಳ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮತಿ ನೀಡಿತು. ಅನಂತರ 1897ರಲ್ಲಿ ಪ್ಲೇಗ್ ರೋಗಕ್ಕೆ ಹಾಫ್ ಕಿನ್ ಸಂಸ್ಥೆಯ ಲಸಿಕೆಯನ್ನು ಸಂಶೋಧಿಸಿತ್ತು. 1899ರವರೆಗೂ ಈ ಪ್ರಯೋಗಾಲಯವನ್ನು ಪ್ಲೇಗ್ ಲ್ಯಾಬೋರೇಟರಿ ಎಂತಲೇ ಕರೆಯಲಾಗುತ್ತಿತ್ತು. 1905ರಲ್ಲಿ ಈ ಪ್ರಯೋಗಾಲಯಕ್ಕೆ ಬಾಂಬೆ ಸಾಂಕ್ರಾಮಿಕ ರೋಗದ ಪ್ರಯೋಗಾಲಯ ಎನ್ನಲಾಗುತ್ತಿತ್ತು. ಅಂತಿಮವಾಗಿ 1925ರಲ್ಲಿ ಹಾಫ್ ಕಿನ್ ಇನ್ಸ್ ಟಿಟ್ಯೂಟ್ ಎಂದು ನಾಮಕರಣ ಮಾಡಲಾಗಿದೆ ಎಂದು ಲಹರಿಯಾ ತಮ್ಮ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಕೊರೊನಾ ಲಸಿಕೆ ಲಭ್ಯತೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಪುನರುಚ್ಚಾರಕೊರೊನಾ ಲಸಿಕೆ ಲಭ್ಯತೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಪುನರುಚ್ಚಾರ

20ನೇ ಶತಮಾನದಲ್ಲಿ ಭಾರತದ ನಾಲ್ಕು ಲಸಿಕೆ ಸಿದ್ಧ

20ನೇ ಶತಮಾನದಲ್ಲಿ ಭಾರತದ ನಾಲ್ಕು ಲಸಿಕೆ ಸಿದ್ಧ

ಭಾರತದಲ್ಲಿ 20ನೇ ಶತಮಾನದ ಆರಂಭದಲ್ಲೇ ನಾಲ್ಕು ಮಾರಕ ರೋಗಗಳಿಗೆ ಲಸಿಕೆ ಮತ್ತು ಔಷಧಿಗಳನ್ನು ಕಂಡು ಹಿಡಿಯಲಾಗಿತ್ತು. ಕಾಲರಾ, ಸಿಡುಬು, ಪ್ಲೇಗ್ ಮತ್ತು ಟೈಫಡ್ ರೋಗಕ್ಕೆ ದೇಶದಲ್ಲೇ ಔಷಧಿಯನ್ನು ಕಂಡುಕೊಳ್ಳಲಾಗಿತ್ತು. ಇದಕ್ಕೂ ಮೊದಲು ಭಾರತವು 1802ರವರೆಗೂ ಸಿಡುಬು ರೋಗಕ್ಕೆ ಇಂಗ್ಲೆಂಡ್ ನಿಂದ ಲಸಿಕೆಯನ್ನು ಆಮದು ಮಾಡಿಕೊಳ್ಳುತ್ತಿತ್ತು. ನಂತರದಲ್ಲಿ ಸಿಡುಬು ರೋಗಕ್ಕೆ ಲಸಿಕೆಯನ್ನು ಉತ್ಪಾದಿಸುವ ಕೇಂದ್ರವನ್ನು ದೇಶದಲ್ಲಿಯೇ ಸ್ಥಾಪಿಸಲಾಯಿತು. 1904-1905ರಲ್ಲಿ ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಕೇಂದ್ರ ಸಂಶೋಧನಾ ಸಂಸ್ಥೆ ತೆರೆಯಲಾಗಿತ್ತು. 1907ರಲ್ಲಿ ದಕ್ಷಿಣ ಭಾರತದ ತಮಿಳುನಾಡು ಜಿಲ್ಲೆಯ ಕೂನೂರ್ ನಲ್ಲಿ ಪಾಸ್ತೆಯೂರ್ ಇನ್ಸ್ ಟಿಟ್ಯೂಟ್ ಸ್ಥಾಪಿಸಲಾಗಿತ್ತು ಎಂದು ಲಹರಿಯಾ ತಿಳಿಸಿದ್ದಾರೆ. ಇದಾದ ಬಳಿಕ ದೇಶದ ಪ್ರತಿಯೊಂದು ಪ್ರಾದೇಶಿಕ ಮಟ್ಟದಲ್ಲಿಯೂ ಸಿಡುಬು ರೋಗಕ್ಕೆ ಲಸಿಕೆಯನ್ನು ತಲುಪಿಸುವುದಕ್ಕಾಗಿ ಕೇಂದ್ರಗಳನ್ನು ಆರಂಭಿಸಲಪಾಗಿತ್ತು.

ಲಸಿಕೆ ಸಂಶೋಧನೆಗೆ ಮೂಲಸೌಕರ್ಯಗಳದ್ದೇ ಕೊರತೆ

ಲಸಿಕೆ ಸಂಶೋಧನೆಗೆ ಮೂಲಸೌಕರ್ಯಗಳದ್ದೇ ಕೊರತೆ

1947ರಲ್ಲಿ ಭಾರತವು ಸ್ವಾತಂತ್ರ್ಯ ಪಡೆದುಕೊಂಡಿತು. ಅಷ್ಟರ ವೇಳೆಗೆ ಸಿಡುಬು ಲಸಿಕೆ ಉತ್ಪಾದನೆಯಲ್ಲಿ ದೇಶವು ಸ್ವಾವಲಂಬಿಯಾಗಿತ್ತು. ಆದರೆ ಇತರ ಅಂಶಗಳನ್ನು ಕಳೆದುಕೊಂಡಿತು ಎಂದು ನವದೆಹಲಿ ಮೂಲದ ರಾಷ್ಟ್ರೀಯ ವಿಜ್ಞಾನ ತಂತ್ರಜ್ಞಾನ ಮತ್ತು ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ಮಾಧವಿ ಯೆನಪ್ಪು ತಿಳಿಸಿದ್ದಾರೆ. ಲಸಿಕೆ ಸಂಶೋಧನೆ ಮತ್ತು ಉತ್ಪಾದನೆ ವಲಯದಲ್ಲಿ 1930ರವರೆಗೆ ಅವಧಿಯನ್ನು ಭಾರತದ ಪಾಲಿಗೆ "ಸುವರ್ಣ ಯುಗ" ಎನ್ನಲಾಗುತ್ತಿತ್ತು. ಆದರೆ ಎರಡು ಮಹಾಯುದ್ಧಗಳ ನಂತರ, ಈ ಸಂಸ್ಥೆಗಳು ಪರಿಣತಿಯನ್ನು ಹೊಂದಿದ್ದರೂ ಸಹ ಅಸಮರ್ಪಕ ಸಂಪನ್ಮೂಲಗಳು ಮತ್ತು ಮೂಲಸೌಕರ್ಯಗಳ ಕೊರತೆಯನ್ನು ಎದುರಿಸುವಂತಾ ಪರಿಸ್ಥಿತಿ ನಿರ್ಮಾಣವಾಯಿತು.

ಲಸಿಕೆ ಸಂಶೋಧನೆ ಉತ್ಪಾದನೆಯಲ್ಲಿ ಹೊಡೆತ

ಲಸಿಕೆ ಸಂಶೋಧನೆ ಉತ್ಪಾದನೆಯಲ್ಲಿ ಹೊಡೆತ

ಜಗತ್ತಿನಾದ್ಯಂತ ಲಸಿಕೆ ಸಂಶೋಧನೆ ಮತ್ತು ಉತ್ಪಾದನಾ ವಲಯವು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿತ್ತು. ಇಂಥ ಸಂದರ್ಭದಲ್ಲಿ ಭಾರತದಲ್ಲಿ ಲಸಿಕೆ ಮತ್ತು ಔಷಧಿಗಳ ಸಂಶೋಧನೆ ಮತ್ತು ಉತ್ಪಾದನೆ ವಲಯಕ್ಕೆ ಮೂಲಸೌಕರ್ಯ ಮತ್ತು ಅಗತ್ಯ ಪರಿಕರಗಳ ಕೊರತೆ ಎದ್ದು ಕಾಣುತ್ತಿತ್ತು. ರೋಗ ನಿರೋಧಕ ಶಕ್ತಿ ಅಭಿವೃದ್ಧಿಪಡಿಸುವ ಕಾರ್ಯಕ್ರಮಗಳ ಮೂಲಕ ಈ ವಲಯವನ್ನು ಪುನಶ್ಚೇತನಗೊಳಿಸುವುದ ದೊಡ್ಡ ಸವಾಲಾಗಿತ್ತು. ಈ ಹಿನ್ನೆಲೆ ಖಾಸಗಿ ಸಹಭಾಗಿತ್ವ ಮತ್ತು ಹೂಡಿಕೆಗೆ ಸರ್ಕಾರವು ಹೆಚ್ಚಿನ ಅವಕಾಶ ಮತ್ತು ಆದ್ಯತೆಯನ್ನು ನೀಡುವುದಕ್ಕೆ ಆರಂಭಿಸಿತು.

ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ಹೂಡಿಕೆಗೆ ಅವಕಾಶ

ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ಹೂಡಿಕೆಗೆ ಅವಕಾಶ

ಭಾರತದ ಸ್ವಾತಂತ್ರ್ಯಾನಂತರದಲ್ಲಿ ಸರ್ಕಾರವು ಲಸಿಕೆ ಮತ್ತು ಔಷಧಿ ಸಂಶೋಧನೆ ಮತ್ತು ಉತ್ಪಾದನೆ ವಲಯಕ್ಕೆ ಶಕ್ತಿ ತುಂಬುವ ಉದ್ದೇಶದಿಂದ ಉದಾರೀಕರಣಕ್ಕೆ ತೆರೆದುಕೊಂಡಿತು. ಖಾಸಗಿ ವ್ಯಕ್ತಿಗಳು ಮತ್ತು ಕಂಪನಿಗಳು ಸಂಶೋಧನೆ ಮತ್ತು ಲಸಿಕೆ ಹಾಗೂ ಔಷಧಿ ಉತ್ಪಾದನೆ ವಲಯದಲ್ಲಿ ಹೂಡಿಕೆ ಮಾಡುವುದಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿತ್ತು. ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ, ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುತ್ತದೆ.

ಭಾರತದಲ್ಲಿ ಮೊದಲ ರೋಗ ನಿರೋಧಕ ಕಾರ್ಯಕ್ರಮ

ಭಾರತದಲ್ಲಿ ಮೊದಲ ರೋಗ ನಿರೋಧಕ ಕಾರ್ಯಕ್ರಮ

ಭಾರತದಲ್ಲಿ 1978ರಲ್ಲಿ ಮೊದಲ ಬಾರಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ವಿಸ್ತರಿತ ಪ್ರತಿರಕ್ಷಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಅಂದು ಕ್ಷಯ, ಫೋಲಿಯೋ, ಟೆಟಸನ್ ಸೇರಿದಂತೆ ಹಲವು ಕಾಯಿಲೆಗಳಿಗೆ ಲಸಿಕೆಗಳನ್ನು ನೀಡಲಾಯಿತು. ಈ ಪೈಕಿ ಕೆಲವು ಲಸಿಕೆಗಳನ್ನು ವಿದೇಶಗಳಿಂದ ಆಮದು ಮಾಡಿಕೊಂಡು ವಿಸ್ತರಿತ ಪ್ರತಿರಕ್ಷಣಾ ಕಾರ್ಯಕ್ರಮದ ಅಡಿ ಉಚಿತವಾಗಿ ವಿತರಣೆ ಮಾಡಲಾಗುತ್ತಿತ್ತು. 1985ರವರೆಗೂ ವಿಸ್ತರಿತ ಪ್ರತಿರಕ್ಷಣಾ ಕಾರ್ಯಕ್ರಮವನ್ನು ಸಾರ್ವತ್ರಿಕ ಪ್ರತಿರಕ್ಷಣಾ ಕಾರ್ಯಕ್ರಮ ಎಂತಲೇ ಕರೆಯಲಾಗುತ್ತಿತ್ತು.

ಭಾರತದಲ್ಲಿ ಉದಾರೀಕರಣದ ಬಳಿಕ ಬದಲಾದ ಚಿತ್ರಣ

ಭಾರತದಲ್ಲಿ ಉದಾರೀಕರಣದ ಬಳಿಕ ಬದಲಾದ ಚಿತ್ರಣ

ದೇಶದಲ್ಲಿ 1990ರ ಉದಾರೀಕರಣದ ಬಳಿ ಸಂಪೂರ್ಣ ಚಿತ್ರಣವೇ ಬದಲಾಯಿತು. ಖಾಸಗಿ ವಲಯಗಳು ಲಸಿಕೆ ಮತ್ತು ಔಷಧಿಗಳ ಉತ್ಪಾದನೆಗೆ ಹೆಚ್ಚಿನ ಕೊಡುಗೆಯನ್ನು ನೀಡಿದವು ಎಂದು ರಾಷ್ಟ್ರೀಯ ವಿಜ್ಞಾನ ತಂತ್ರಜ್ಞಾನ ಮತ್ತು ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ಮಾಧವಿ ಯೆನಪ್ಪು ಹೇಳಿದ್ದಾರೆ. ಇದರ ಜೊತೆಗೆ ಹೊಸ ಮತ್ತು ದುಬಾರಿ ಲಸಿಕೆ ಮತ್ತು ಔಷಧಿಗಳನ್ನು ಉತ್ಪಾದಿಸಲಾಗುತ್ತಿದ್ದು, ಅದರಿಂದ ಕಡಿಮೆ ಲಾಭವು ಸಿಗುತ್ತದೆ. ಇನ್ನು ಸಾಕಷ್ಟು ಪ್ರಮಾಣದ ಸಾಂಪ್ರದಾಯಿಕ ಲಸಿಕೆಗಳನ್ನು ಸರ್ಕಾರವೇ ಉತ್ಪಾದಿಸಲಿದ್ದು, ಅದು ಸಾಕಷ್ಟು ಲಾಭದಾಯಕವಾಗಿ ಇರುವುದಿಲ್ಲ ಎಂದಿದ್ದಾರೆ.

ದೇಶದಲ್ಲಿ ಉದಾರೀಕರಣದ ನಂತರ ಮೊದಲ ಸಂಸ್ಥೆ

ದೇಶದಲ್ಲಿ ಉದಾರೀಕರಣದ ನಂತರ ಮೊದಲ ಸಂಸ್ಥೆ

ಕೊರೊನಾವೈರಸ್ ಸೋಂಕಿಗೆ ಲಸಿಕೆಯ ಮಾದರಿಗಳ ವೈದ್ಯಕೀಯ ಪ್ರಯೋಗಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಸೆರಂ ಸಂಸ್ಥೆಯು ಭಾರತದ ಉದಾರೀಕರಣದ ನಂತರ ದೇಶದಲ್ಲಿ ಸ್ಥಾಪನೆಯಾದ ಮೊದಲ ಖಾಸಗಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ವಿಶ್ವದಲ್ಲಿ ಕೊರೊನಾವೈರಸ್ ಲಸಿಕೆ ಸಂಶೋಧನೆಗೆ ಸ್ಪರ್ಧೆ

ವಿಶ್ವದಲ್ಲಿ ಕೊರೊನಾವೈರಸ್ ಲಸಿಕೆ ಸಂಶೋಧನೆಗೆ ಸ್ಪರ್ಧೆ

ಕೊರೊನಾವೈರಸ್ ಲಸಿಕೆ ಸಂಶೋಧನೆಯ ಮಾದರಿಗಳಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಅಸ್ಟ್ರಾ ಜೆನಿಕಾ ಲಸಿಕೆಯು ಮೊದಲ ರೇಸ್ ನಲ್ಲಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಮತ್ತು ಭಾರತ್ ಬಯೋಟೆಕ್ ಸಂಶೋಧನೆಯ COVAXIN ಮತ್ತು ಜಿಡಿಸ್ ಕ್ಯಾಡಿಲಾ ಸಂಸ್ಥೆಯ ZyCoV-D ಮಾದರಿಯನ್ನು 2ನೇ ಹಂತದ ವೈದ್ಯಕೀಯ ಪ್ರಯೋಗಗಳಿಗೆ ಒಳಪಡಿಸಲಾಗಿದೆ. ಆದರೆ ಭಾರತದ ಪಾಲಿಗೆ ಹಂಚಿಕೆ ದೊಡ್ಡ ಸವಾಲಾಗಲಿದೆ ಎಂದು ಪದ್ಮಭೂಷಣ ಪುರಸ್ಕೃತ ಐಸಿಎಂಆರ್ ಮಾಜಿ ನಿರ್ದೇಶಕ ಡಾ. ಎನ್.ಕೆ. ಗಂಗೂಲಿ ಎಂದಿದ್ದಾರೆ. ಆರಂಭದಲ್ಲಿ ನಾವು ಅಪ್ರಾಪ್ತ ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ದೃಷ್ಟಿಯನ್ನು ಮಾತ್ರ ಇಟ್ಟುಕೊಂಡಿದ್ದೆವು. ಇದೀಗ ಪರಿಸ್ಥಿತಿ ಬದಲಾಗಿದೆ. ವಯಸ್ಕರಲ್ಲೂ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಂತಾ ಲಸಿಕೆ ಅಭಿವೃದ್ಧಿಪಡಿಸುವ ಸವಾಲು ಇದೇ ಮೊದಲ ಬಾರಿಗೆ ಎದುರಾಗಿದೆ ಎಂದು ಅವರು ತಿಳಿಸಿದ್ದಾರೆ.

2021ರ ಮಧ್ಯಭಾಗದಲ್ಲಿ ಕೊರೊನಾವೈರಸ್ ಲಸಿಕೆ

2021ರ ಮಧ್ಯಭಾಗದಲ್ಲಿ ಕೊರೊನಾವೈರಸ್ ಲಸಿಕೆ

ವಿಶ್ವವನ್ನು ಕಾಡುತ್ತಿರುವ ಕೊರೊನಾವೈರಸ್ ಸೋಂಕಿಗೆ 2021ರ ಮಧ್ಯಭಾಗದಲ್ಲಿ ಲಸಿಕೆಯು ಸಿದ್ಧಗೊಳ್ಳಲಿದೆ. ವಿಶ್ವಕ್ಕೆ ಲಸಿಕೆಯನ್ನು ಸರಬರಾಜು ಮಾಡುವ ಸವಾಲನ್ನು ಸಮರ್ಪಕ ರೀತಿಯಲ್ಲಿ ಎದುರಿಸಬೇಕಿದೆ. ಕೋಲ್ಡ್ ಸ್ಟೋರೇಜ್ ನಲ್ಲಿ ಇರಿಸುವ ಮೂಲಕ ಪ್ರತಿಯೊಬ್ಬರಿಗೂ ಲಸಿಕೆ ತಲುಪುವಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಮೇ ಮತ್ತು ಜೂನ್ ತಿಂಗಳ ವೇಳೆಗೆ ಕೊವಿಡ್-19 ಲಸಿಕೆ ಹೊರ ಬಂದರೂ ಅದು ಎಲ್ಲ ಜನರನ್ನು ತಲುಪುವುದಕ್ಕೆ ಮತ್ತಷ್ಟು ದಿನ ತೆಗೆದುಕೊಳ್ಳಲಿದೆ ಎಂದು ಡಾ. ಎನ್.ಕೆ.ಗಂಗೂಲಿ ತಿಳಿಸಿದ್ದಾರೆ.

English summary
Covid-19 Medical Trials Are Only The Latest, India Sends To 19th Century In Vaccine Development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X