ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಆ. 3 ನೇ ಕೋವಿಡ್‌ ಅಲೆ ಅಪ್ಪಳಿಸುವ ಸಾಧ್ಯತೆ, ಸೆ. ನಲ್ಲಿ ಗರಿಷ್ಠಕ್ಕೆ': ಎಸ್‌ಬಿಐ ಸಂಶೋಧನಾ ವರದಿ

|
Google Oneindia Kannada News

ನವದೆಹಲಿ, ಜು.05: ದೇಶಾದ್ಯಂತ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡ ಕೋವಿಡ್ -19 ನ ಎರಡನೇ ಅಲೆಯ ಬಳಿಕ ಕೆಲವೇ ತಿಂಗಳುಗಳ ನಂತರ, ಮೂರನೇ ಅಲೆ ಮುಂದಿನ ತಿಂಗಳು ಅಂದರೆ 2021 ರ ಆಗಸ್ಟ್‌ನಲ್ಲಿ ಭಾರತವನ್ನು ಅಪ್ಪಳಿಸಬಹುದು ಎಂದು ಎಸ್‌ಬಿಐ ಸಂಶೋಧನಾ ವರದಿ ಹೇಳಿದೆ.

''ಕೋವಿಡ್ -19: ಅಂತಿಮ ಗೆರೆಯತ್ತ ಓಟ'' (Covid-19: The race to finishing line) ಎಂಬ ತಲೆ ಬರಹದಲ್ಲಿ ಈ ವರದಿಯನ್ನು ಪ್ರಕಟಿಸಲಾಗಿದೆ. ಈ ವರದಿಯಲ್ಲಿ ಸೆಪ್ಟೆಂಬರ್ 2021 ರಲ್ಲಿ ಮೂರನೇ ಅಲೆ ತೀವ್ರ ಹೆಚ್ಚಾಗಲಿದೆ ಎಂದು ಕೂಡಾ ಉಲ್ಲೇಖಿಸಿರುವುದಾಗಿ ಲೈವ್ ಮಿಂಟ್ ವರದಿ ಮಾಡಿದೆ.

ಭಾರತದಲ್ಲಿ ಹೊಸದಾಗಿ 39,796 ಕೊರೊನಾ ಸೋಂಕಿತರು ಪತ್ತೆಭಾರತದಲ್ಲಿ ಹೊಸದಾಗಿ 39,796 ಕೊರೊನಾ ಸೋಂಕಿತರು ಪತ್ತೆ

ಇನ್ನು ಎಸ್‌ಬಿಐ ವರದಿಯಲ್ಲಿ ಭಾರತದ ಎರಡನೇ ಕೋವಿಡ್‌ ವರದಿಯ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ. ಮೇ 7 ರಂದು ಈ ಅಲೆ ಉತ್ತುಂಗಕ್ಕೇರಿತು ಎಂದು ಹೇಳಿದೆ. ಎರಡನೇ ತರಂಗವು ಏಪ್ರಿಲ್‌ನಲ್ಲಿ ಭಾರತವನ್ನು ಅಪ್ಪಳಿಸಿದೆ. ಮೇ ತಿಂಗಳಲ್ಲಿ ಉತ್ತುಂಗಕ್ಕೇರಿದೆ. ಇದು ದೆಹಲಿ, ಮಹಾರಾಷ್ಟ್ರ, ಕೇರಳ ಮತ್ತು ಇತರ ರಾಜ್ಯಗಳ ಸಾವಿರಾರು ಕುಟುಂಬಗಳ ಮೇಲೆ ಪರಿಣಾಮ ಬೀರಿದೆ ಎಂದು ಈ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

Covid third wave may hit India in August, peak in September says SBI Research report

"ಪ್ರಸ್ತುತ ಮಾಹಿತಿಯ ಪ್ರಕಾರ, ಜುಲೈ ಎರಡನೇ ಎರಡನೇ ವಾರದಲ್ಲಿ ಭಾರತದಲ್ಲಿ 10,000 ದಷ್ಟು ಕೊರೊನಾ ಪ್ರಕರಣಗಳು ದಾಖಲಾಗಬಹುದು. ಆದ ಆದಾಗ್ಯೂ, ಆಗಸ್ಟ್‌ನಲ್ಲಿ ಅರ್ಧ ತಿಂಗಳು ಕಳೆಯುತ್ತಿದ್ದಂತೆ ಪ್ರಕರಣಗಳು ಹೆಚ್ಚಾಗಬಹುದು," ಎಂದು ಎಸ್‌ಬಿಐ ವರದಿ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 39,796 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ. ಹಾಗೆಯೇ ಕಳೆದ 24 ಗಂಟೆಗಳಲ್ಲಿ 42,352 ಮಂದಿ ಗುಣಮುಖರಾಗಿದ್ದಾರೆ. ಒಂದು ದಿನದಲ್ಲಿ 723 ಸಾವುಗಳು ಸಂಭವಿಸಿದೆ. ಭಾರತದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳು ಈಗ 3,05,85,229 ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 4 ಲಕ್ಷಕ್ಕೂ ಹೆಚ್ಚಾಗಿದೆ.

ಎರಡು ಕೊರೊನಾ ಲಸಿಕೆ ಪಡೆದರೂ ಡೆಲ್ಟಾ ಡೇಂಜರಸ್!ಎರಡು ಕೊರೊನಾ ಲಸಿಕೆ ಪಡೆದರೂ ಡೆಲ್ಟಾ ಡೇಂಜರಸ್!

ಭಾರತದಲ್ಲಿ ಈಗ 4.82 ಲಕ್ಷ ಸಕ್ರಿಯ ಕೋವಿಡ್ -19 ಪ್ರಕರಣಗಳಿವೆ. ಆದರೆ ದೇಶವು ಇದುವರೆಗೆ 35 ಕೋಟಿ ಲಸಿಕೆ ಪ್ರಮಾಣವನ್ನು ನೀಡುವಲ್ಲಿ ಯಶಸ್ವಿಯಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Third wave may hit India in August, peak in September says SBI Research report. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X