ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಮೊದಲ ಹಾಗೂ 2ನೇ ಅಲೆ ಲಕ್ಷಣಗಳ ನಡುವಿನ ವ್ಯತ್ಯಾಸ ಹೀಗಿದೆ!

|
Google Oneindia Kannada News

ನವದೆಹಲಿ, ಏಪ್ರಿಲ್ 20: ಕೊರೊನಾ ಸೋಂಕಿನ ಮೊದಲ ಅಲೆ ಹಾಗೂ ಎರಡನೇ ಅಲೆಯಲ್ಲಿ ಸೋಂಕಿನ ಲಕ್ಷಣಗಳ ವ್ಯತ್ಯಾಸ ಕುರಿತು ಐಸಿಎಂಆರ್ ಮಾಹಿತಿ ನೀಡಿದೆ.

ದೇಶದಲ್ಲಿ ನಿತ್ಯ ಕೊರೊನಾ ಸೋಂಕಿತ ಪ್ರಕರಣಗಳು ಏರಿಕೆಯಾಗುತ್ತಿವೆ, ಜನರಿಗೆ ಕೊರೊನಾ ಸೋಂಕಿನ ಲಕ್ಷಣಗಳ ಕುರಿತು ಹೆಚ್ಚು ಕುತೂಹಲವಿದೆ. ಮೊದಲ ಕೊರೊನಾ ಅಲೆಯಲ್ಲಿನ ಲಕ್ಷಣಗಳು ಈಗಿನ ಎರಡನೇ ಅಲೆಯಲ್ಲಿನ ಲಕ್ಷಣಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ.

ಕೊರೊನಾ ಕಥೆ: ಭಾರತದಲ್ಲಿ ಒಂದೇ ದಿನ 259170 ಮಂದಿಗೆ ಸೋಂಕು!ಕೊರೊನಾ ಕಥೆ: ಭಾರತದಲ್ಲಿ ಒಂದೇ ದಿನ 259170 ಮಂದಿಗೆ ಸೋಂಕು!

ಯಾವುದೇ ಲಕ್ಷಣಗಳಿಲ್ಲದಿದ್ದರೂ ವರದಿ ಪಾಸಿಟಿವ್ ಬಂದಿದ್ದರೆ, ಸಣ್ಣ ಪ್ರಮಾಣದ ಲಕ್ಷಣಗಳಿದ್ದರೆ ಗೃಹ ಬಂಧನದಲ್ಲಿರಿ, ಒಂದೊಮ್ಮೆ ಉಸಿರಾಟದ ತೊಂದರೆ ಹೆಚ್ಚಾಗಿ ಕಾಣಿಸಿಕೊಂಡರೆ ಮಾತ್ರ ಆಸ್ಪತ್ರೆಗೆ ತೆರಳಿ ಎಂದು ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ 259170 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ದೇಶದಲ್ಲಿ ಒಂದೇ ದಿನ 1,761 ಮಂದಿ ಪ್ರಾಣ ಬಿಟ್ಟಿದ್ದು, 1,54,761 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಈ ಕುರಿತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಡೈರೆಕ್ಟರ್ ಜನರಲ್ ಬಲರಾಂ ಭಾರ್ಗವ್ ಮಾಹಿತಿ ನೀಡಿದ್ದು, ಎರಡನೇ ಅಲೆಯ ಲಕ್ಷಣಗಳು ಮೊದಲ ಅಲೆಯ ಲಕ್ಷಣಗಳಿಗಿಂತ ಕಡಿಮೆ ಇದೆ ಎಂದು ಹೇಳಿದ್ದಾರೆ. ಕೊರೊನಾ ಎರಡನೇ ಅಲೆಯ ಲಕ್ಷಣಗಳ ಕುರಿತು ಮಾಹಿತಿ ಪಡೆಯಲು ಮುಂದೆ ಓದಿ...

ಕೊರೊನಾ ಮೊದಲ ಅಲೆಯ ಲಕ್ಷಣಗಳು

ಕೊರೊನಾ ಮೊದಲ ಅಲೆಯ ಲಕ್ಷಣಗಳು

ಮೊದಲ ಅಲೆಯಲ್ಲಿ ತಲೆ ನೋವು, ಕೀಲು ನೋವು, ತಲೆ ನೋವು, ಒಣ ಕಫ ರೀತಿಯ ಹಲವು ಲಕ್ಷಣಗಳನ್ನು ಮಂದಿ ಎದುರಿಸಿದ್ದರು.

ಎರಡನೇ ಅಲೆಯ ಲಕ್ಷಣಗಳೇನು?

ಎರಡನೇ ಅಲೆಯ ಲಕ್ಷಣಗಳೇನು?

ಕೊರೊನಾ ಎರಡನೇ ಅಲೆಯಲ್ಲಿ ತೀವ್ರ ಜ್ವರ, ಮೈಕೈ ನೋವು ಬಿಟ್ಟರೆ ಉಸಿರಾಟದ ತೊಂದರೆಯನ್ನೇ ಜನರು ಹೆಚ್ಚಾಗಿ ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಐಸಿಯು ಅಷ್ಟಾಗಿ ಅಗತ್ಯವಿರಲಿಲ್ಲ ಆದರೆ ಈ ಬಾರಿ ಆಕ್ಸಿಜನ್ ಮತ್ತು ಐಸಿಯು ಅಗತ್ಯತೆ ಹೆಚ್ಚಾಗಿದೆ ಎಂದು ಭಾರ್ಗವ್ ವಿವರಿಸಿದ್ದಾರೆ.

ಆರ್‌ಟಿ ಪಿಸಿಆರ್ ಪರೀಕ್ಷೆ ಮಾಡಿಸಿ

ಆರ್‌ಟಿ ಪಿಸಿಆರ್ ಪರೀಕ್ಷೆ ಮಾಡಿಸಿ

ಆರ್‌ಟಿಪಿಸಿಆರ್ ಪರೀಕ್ಷೆ ಉತ್ತಮವಾಗಿದ್ದು, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಜೀನ್ ಇದ್ದರೆ ಪತ್ತೆ ಹಚ್ಚಬಹುದು, ಹಾಗೆಯೇ ರೂಪಾಂತರಿ ಕೊರೊನಾ ಸೋಂಕು ಪತ್ತೆಗೂ ಅನುಕೂಲವಾಗಲಿದೆ. ಕೊರೊನಾ ಸೋಂಕಿತರ ಸಾವಿನ ಪ್ರಮಾಣದಲ್ಲಿ ಮೊದಲ ಹಾಗೂ ಎರಡನೇ ಅಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದಿದ್ದಾರೆ.

Recommended Video

ಕೊರೊನಾ ವ್ಯಾಕ್ಸಿನ್ ಪಡೆದ್ರೇ 2 ಕೆ ಜಿ ಟೊಮೇಟೋ ಫ್ರೀ..! ಹೇಗಿದೆ ಅಧಿಕಾರಿಗಳ ಐಡಿಯಾ? | Oneindia Kannada
ಯುವಕರಿಗೂ ಕೊರೊನಾ

ಯುವಕರಿಗೂ ಕೊರೊನಾ

ಕಳೆದ ಬಾರಿ 60 ವರ್ಷ ಮೇಲ್ಪಟ್ಟವರು ಜಾಗೃತೆಯಿಂದಿರಿ ಅವರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿತ್ತು, ಆದರೆ ಈ ಬಾರಿ ಯುವಕರಿಗೂ ಕೊರೊನಾ ಸೋಂಕು ತಗುಲಿದ್ದು, ಕಡಿಮೆ ವಯಸ್ಸಿನಲ್ಲೇ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟ ಬಹಳ ಮಂದಿಗೆ ಯಾವುದೇ ಅನ್ಯ ಕಾಯಿಲೆಗಳು ಇರಲಿಲ್ಲ ಎಂಬುದೇ ಆತಂಕವನ್ನುಂಟು ಮಾಡುತ್ತದೆ.

English summary
Amid a massive surge in novel coronavirus cases in the country, there's a lot of concern over the symptoms of Covid-19 and its severity in the second wave of the pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X