ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಚೆ ಮತಗಳ ಚಲಾವಣೆ; ವಯೋಮಿತಿ ಸಡಿಲಿಕೆ

|
Google Oneindia Kannada News

ನವದೆಹಲಿ, ಜೂನ್ 26 : ಅಂಚೆ ಮತಗಳನ್ನು ಚಲಾವಣೆ ಮಾಡುವವರ ವಯೋಮಿತಿಯನ್ನು ಸಡಿಲಗೊಳಿಸಲಾಗಿದೆ. ಕೊರೊನಾ ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದ್ದು, ಚುನಾವಣಾ ಆಯೋಗ ವಯೋಮಿತಿ ಸಡಿಲಿಕೆಗೆ ಶಿಫಾರಸು ಮಾಡಿತ್ತು.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಅಂಚೆ ಮತಗಳನ್ನು ಹಾಕುವವರ ವಯೋಮಿತಿ ಸಡಿಲಗೊಳಿಸಿ ಕೇಂದ್ರ ಕಾನೂನು ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ. ಹಿರಿಯ ನಾಗರಿಕರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಜಾತಿ, ಮತ, ಧರ್ಮ, ಬಣ್ಣ, ಭಾಷೆ ನೋಡಿ ಕೊರೊನಾ ಬರಲ್ಲ: ಮೋದಿ ಜಾತಿ, ಮತ, ಧರ್ಮ, ಬಣ್ಣ, ಭಾಷೆ ನೋಡಿ ಕೊರೊನಾ ಬರಲ್ಲ: ಮೋದಿ

ಇದುವರೆಗೂ 80 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟವರು ಮಾತ್ರ ಅಂಚೆ ಮತಗಳನ್ನು ಹಾಕಲು ಅವಕಾಶವಿತ್ತು. ಪರಿಷ್ಕೃತ ಆದೇಶದಂತೆ 65 ವರ್ಷ ಅಥವ ಅದಕ್ಕೂ ಮೇಲ್ಪಟ್ಟವರು ಚುನಾವಣೆಗಳಲ್ಲಿ ಅಂಚೆ ಮತಗಳನ್ನು ಚಲಾವಣೆ ಮಾಡಬಹುದು.

ಲಗೇಜ್ ಹೊತ್ತ 80ರ ವೃದ್ಧ ಸೋಷಿಯಲ್ ಮೀಡಿಯಾದ ಹೀರೋ! ಲಗೇಜ್ ಹೊತ್ತ 80ರ ವೃದ್ಧ ಸೋಷಿಯಲ್ ಮೀಡಿಯಾದ ಹೀರೋ!

Postal Ballot Voters Age Limit Reduced

ದೇಶಾದ್ಯಂತ ಕೊರೊನಾ ವೈರಸ್ ಸೋಂಕಿನ ಭೀತಿ ಇದ್ದು ವಯೋವೃದ್ಧರಿಗೆ ಸೋಂಕು ಬೇಗ ಹರಡುತ್ತದೆ. ಆದ್ದರಿಂದ, ಅವರು ಮತಗಟ್ಟೆಗೆ ಬರುವುದನ್ನು ತಪ್ಪಿಸಲು ಚುನಾವಣಾ ಆಯೋಗ ವಯೋಮಿತಿ ಸಡಿಲಗೊಳಿಸಲು ಶಿಫಾರಸು ಮಾಡಿತ್ತು.

ಕೊರೊನಾಗೆ 4ನೇ ಬಲಿ; ಬಾಗಲಕೋಟೆಯಲ್ಲಿ ವೃದ್ಧ ಸಾವು ಕೊರೊನಾಗೆ 4ನೇ ಬಲಿ; ಬಾಗಲಕೋಟೆಯಲ್ಲಿ ವೃದ್ಧ ಸಾವು

ಶೀಘ್ರದಲ್ಲಿಯೇ ಬಿಹಾರ ವಿಧಾನಸಭೆ ಚುನಾವಣೆ ಬರಲಿದ್ದು ಆ ಚುನಾವಣೆಯಲ್ಲಿ 65 ಮತ್ತು ಅದಕ್ಕೂ ಮೇಲ್ಪಟ್ಟ ವಯೋವೃದ್ಧರು ಅಂಚೆ ಮತಗಳನ್ನು ದಾಖಲಿಸಬಹುದಾಗಿದೆ.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಸಮಯದಲ್ಲಿ ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿ, ಗಡಿಯಲ್ಲಿರುವ ಸೈನಿಕರು, ವಯೋವೃದ್ಧರು ಅಂಚೆ ಮತಗಳನ್ನು ಹಾಕಬಹುದು. ಮತ ಎಣಿಗೆ ದಿನ ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡಿ ಬಳಿಕ ಇವಿಎಂನ ಮತಗಳನ್ನು ಎಣಿಸಲಾಗುತ್ತದೆ.

English summary
Union government approved the suggestions of the Election Commission and age limit of the postal voters reduced. 65 and above age people now can cast their vote through postal ballot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X