ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಆರ್ಥಿಕತೆ ಕುಸಿತ ಪರಿಣಾಮ ವರ್ಷದಲ್ಲಿ 1 ಲಕ್ಷ ಶಿಶುಗಳು ಸಾವು

|
Google Oneindia Kannada News

ನವದೆಹಲಿ, ಆಗಸ್ಟ್ 24: ಕೊರೊನಾ ಸಂದರ್ಭದಲ್ಲಿ ಕೂಲಿ ಮಾಡುವವರಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮಿಗಳೇ ಆರ್ಥಿಕ ಪರಿಸ್ಥಿತಿ ಎದುರಿಸುವಂತಾಗಿದೆ.

ಭಾರತದಲ್ಲಿ ಕೋವಿಡ್-19 ಆರ್ಥಿಕ ಕುಸಿತದ ಪರಿಣಾಮ 1 ಲಕ್ಷ ಶಿಶುಗಳ ಸಾವು ಸಂಭವಿಸಿರುವ ಸಾಧ್ಯತೆ ಇದೆ ಎಂದು ವಿಶ್ವ ಬ್ಯಾಂಕ್‌ನ ಸಂಶೋಧಕರು ಅಂದಾಜಿಸಿದ್ದಾರೆ.

128 ರಾಷ್ಟ್ರಗಳಲ್ಲಿ 267,208 ಹೆಚ್ಚು ಮಕ್ಕಳ ಸಾವನ್ನು ಸಂಶೋಧಕರು ಅಂದಾಜಿಸಿದ್ದು, 2020 ರಲ್ಲಿ ಸಂಭವಿಸಿದ ಒಟ್ಟಾರೆ ಸಂಭವಿಸಿದ ಶಿಶುಗಳ ಸಾವಿನ ಪ್ರಮಾಣಕ್ಕಿಂತ ಶೇ.6.8 ರಷ್ಟು ಕೋವಿಡ್-19 ಆರ್ಥಿಕ ಕುಸಿತದಿಂದ ಸಂಭವಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಆರೋಗ್ಯ ಸಮಸ್ಯೆಗಳುಳ್ಳ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮೊದಲು ಕೊರೊನಾ ಲಸಿಕೆಆರೋಗ್ಯ ಸಮಸ್ಯೆಗಳುಳ್ಳ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮೊದಲು ಕೊರೊನಾ ಲಸಿಕೆ

ಕಡಿಮೆ ಹಾಗೂ ಮಧ್ಯಮ ಆದಾಯವಿರುವ ರಾಷ್ಟ್ರಗಳಲ್ಲಿ ಕಳೆದ ವರ್ಷ 267,000 ಶಿಶುಗಳು ಸಾವನ್ನಪ್ಪಿದ್ದು, ಭಾರತದಲ್ಲಿನ ಮೂರನೇ ಒಂದರಷ್ಟು ಸಾವಿನ ಸಂಖ್ಯೆ ಇದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ನೆಗೆಟಿವ್ ಆದಾಯದ ಪರಿಣಾಮ ಶಿಶುಗಳ ಮೇಲೆ ಉಂಟಾಗಲಿದೆ. ಭಾರತದಲ್ಲಿ ಕೊರೊನಾ ಪತ್ತೆಯಾಗುವುದಕ್ಕಿಂಲೂ ಮೊದಲೇ ದೇಶದ ಆರ್ಥಿಕತೆಯೂ ಇಳಿಕೆಯ ಹಾದಿಯಲ್ಲೇ ಇದ್ದವು. ಇದರ ಜೊತೆಗೆ ಯಾವುದೇ ಮುನ್ಸೂಚನೆ ಇಲ್ಲದೆ ಬಿಜೆಪಿಯ ಮೋದಿ ನೇತೃತ್ವದ ಸರ್ಕಾರವು ಕಳೆದ ವರ್ಷ ದೇಶದಾದ್ಯಂತ ಏಕಾಏಕಿ ಲಾಕ್‌ಡೌನ್‌ ಘೋಷಿಸಿತ್ತು. ಇದು ದೇಶದ ಆರ್ಥಿಕತೆಗೆ ಭಾರಿ ಹೊಡೆತ ನೀಡಿದವು.

ಕೊರೊನಾ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಕಡೆಗೆ ಪ್ರಯತ್ನಗಳು ಅತ್ಯುನ್ನತವಾ ಗಿದ್ದರೂ, ಜಾಗತಿಕ ಸಮುದಾಯವು ಸಾಮಾಜಿಕ ಸುರಕ್ಷತಾ ಜಾಲಗಳನ್ನು ಬಲಪಡಿಸಬೇಕು. ಅಗತ್ಯ ಆರೋಗ್ಯ ಸೇವೆಯ ನಿರಂತರತೆಯನ್ನು ಖಾತರಿಪಡಿಸಬೇಕು ಎಂದು ಸಂಶೋಧಕರು ಹೇಳಿದ್ದಾರೆ.

ಭಾರತವು ಹೆಚ್ಚಿನ ಸಂಖ್ಯೆಯ ವಾರ್ಷಿಕ ಜನನವನ್ನು ಹೊಂದಿದೆ (2,42,38,000) ಹಾಗೂ ನಿರ್ದಿಷ್ಟವಾಗಿ ದೊಡ್ಡ ಯೋಜಿತ ಆರ್ಥಿಕ ಕೊರತೆ (ಶೇ.17.3)ಯನ್ನೂ ಎದುರಿಸಿದೆ ಎಂದು ಸಂಶೋಧನೆ ತಿಳಿಸಿದೆ.

ಇದರಿಂದಾಘಿ ದಕ್ಷಿಣ ಏಷ್ಯಾವು ಅತಿ ಹೆಚ್ಚು ಶಿಶು ಮರಣವನ್ನು ನಿರೀಕ್ಷಿಸಿದ ಪ್ರದೇಶವಾಗಿದೆ. ಆದರೂ ಎಂಟು ದೇಶಗಳು ಮಾತ್ರ ಈ ವಿಶ್ಲೇಷಣೆಯಲ್ಲಿ ಒಳಗೊಂಡಿವೆ ಎಂದು ಸಂಶೋಧನಾ ಲೇಖನವು ತಿಳಿಸಿದೆ.

ಕೊರೊನಾ ಸಾಂಕ್ರಾಮಿಕದ ಪ್ರಾರಂಭದ ಮೊದಲ ಆರು ತಿಂಗಳಲ್ಲಿ ಪ್ರಪಂಚವು 2.5 ಲಕ್ಷದಿಂದ 11.5 ಲಕ್ಷ ಚಿಕ್ಕ ಮಕ್ಕಳ ಸಾವುಗಳಾಗುತ್ತದೆ ಎಂದು ಊಹಿಸಲಾಗಿತ್ತು.

ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ವಿಶ್ಲೇಷಣೆಯು ಅಧಿಕ ಶಿಶು ಮರಣದ ಮೂರನೇ ಒಂದು ಭಾಗಕ್ಕಿಂತ ಹೆಚ್ಚು (99, 642) ಭಾರತದಲ್ಲಿ ಆಗಿದೆ ಎಂದು ಅಂದಾಜಿಸಿದೆ.

 ಕೋವಿಡ್ ತಡೆಗಟ್ಟುವಿಕೆ ಆದ್ಯತೆಯ ವಿಷಯ

ಕೋವಿಡ್ ತಡೆಗಟ್ಟುವಿಕೆ ಆದ್ಯತೆಯ ವಿಷಯ

ಕೋವಿಡ್-19 ಚಿಕಿತ್ಸೆ ಹಾಗೂ ತಡೆಗಟ್ಟುವಿಕೆ ಆದ್ಯತೆಯ ವಿಷಯವಾಗಿದ್ದು, ಜಾಗತಿಕ ಸಮುದಾಯ ಸಾಮಾಜಿಕ ಭದ್ರತೆಯತ್ತಲೂ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

 ಕೋವಿಡ್ ಆರಂಭವಾಗಿ 6 ತಿಂಗಳಲ್ಲಿ 99,642 ಸಾವು

ಕೋವಿಡ್ ಆರಂಭವಾಗಿ 6 ತಿಂಗಳಲ್ಲಿ 99,642 ಸಾವು

ಕೋವಿಡ್-19 ಪ್ರಾರಂಭವಾದಗಲೇ ಸಂಶೋಧಕರು ಸಾಂಕ್ರಾಮಿಕದ ಮೊದಲ ಆರು ತಿಂಗಳಲ್ಲಿ 250000 ರಿಂದ 1.15 ಮಿಲಿಯನ್ ಮಕ್ಕಳ ಸಾವು ಸಂಭವಿಸಲಿದೆ ಎಂದು ಸಂಶೋಧಕರು ಅಂದಾಜಿಸಿದ್ದರು. ಬ್ರಿಟೀಷ್ ವೈದ್ಯಕೀಯ ಜರ್ನಲ್ ನಲ್ಲಿ ಸಂಶೋಧನೆಯ ವರದಿ ಪ್ರಕಟಗೊಂಡಿದ್ದು ಭಾರತದಲ್ಲಿ ಮೂರನೇ ಒಂದರಷ್ಟು ಹೆಚ್ಚು ಶಿಶುಗಳ ಮರಣ-99,642 ಅಂದಾಜಿಸಲಾಗಿದೆ ಎಂದು ಹೇಳಿದೆ.

 ಪಾತಾಳಕ್ಕೆ ಕುಸಿದ ಆರ್ಥಿಕ ವ್ಯವಸ್ಥೆ

ಪಾತಾಳಕ್ಕೆ ಕುಸಿದ ಆರ್ಥಿಕ ವ್ಯವಸ್ಥೆ

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಪರಿಣಾಮ ಅನೇಕ ಉದ್ಯಮಗಳು ಬಾಗಿಲು ಮುಚ್ಚಿಕೊಂಡಿದ್ದು, ಲಕ್ಷಾಂತರ ಜನ ಕೆಲಸ ಕಳೆದುಕೊಂಡಿದ್ದಾರೆ. ಬಡವರ ಬದುಕಂತೂ ಹೇಳತೀರದಷ್ಟು ಶೋಚನೀ ಯವಾಗಿದೆ.

 2.67 ಲಕ್ಷ ಶಿಶುಗಳ ಸಾವು

2.67 ಲಕ್ಷ ಶಿಶುಗಳ ಸಾವು

ಇಲ್ಲದೆ, ಕೊರೊನಾ ಪ್ರೇರಿತ ಆರ್ಥಿಕ ಕುಸಿತದಿಂದಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ, ಕಳೆದೊಂದು ವರ್ಷದಲ್ಲಿ 2.67 ಲಕ್ಷ ಶಿಶುಗಳ ಸಾವಿಗೀಡಾಗಿದ್ದಾರೆ ಎಂದು ವಿಶ್ವ ಬ್ಯಾಂಕ್ ಸಂಶೋಧಕರು ಅಂದಾಜಿಸಿದ್ದಾರೆ. ಅದರಲ್ಲಿ ಮೂರನೇ ಒಂದು ಭಾಗದಷ್ಟು ಅಂದರೆ ಸುಮಾರು 1 ಲಕ್ಷದಷ್ಟು ಮಕ್ಕಳು ಭಾರತದಲ್ಲಿ ಸಾವಿಗೀಡಾಗಿದ್ದಾರೆ ಎಂದು ವಿಶ್ವಬ್ಯಾಂಕ್ ಸಂಶೋಧನಾ ವರದಿ ತಿಳಿಸಿದೆ.

 ಶಿಶುಗಳ ಸಾವಿಗೆ ಕಾರಣ

ಶಿಶುಗಳ ಸಾವಿಗೆ ಕಾರಣ

ವಿಶ್ವಬ್ಯಾಂಕ್ ನೇಮಕ ಮಾಡಿದ್ದ ಸಂಶೋಧಕರು 128 ದೇಶಗಳಲ್ಲಿ 2,67,208 ಅಧಿಕ ಶಿಶು ಸಾವುಗಳಿಗೆ ಕಾರಣವನ್ನು ಸಂಶೋಧನೆ ಮಾಡಿದ್ದಾರೆ. ಇದು 2020 ರಲ್ಲಿ ನಿರೀಕ್ಷಿತ ಒಟ್ಟು ಶಿಶು ಸಾವಿನ ಸಂಖ್ಯೆಯಲ್ಲಿ ಶೇ.6.8 ರಷ್ಟು ಹೆಚ್ಚಳವಾಗಿದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಕೊರೊನಾ ಸಾಂಕ್ರಾಮಿಕ ವೈರಸ್​ ಕಾರಣಕ್ಕೆ ಬಡ ಮತ್ತು ಮಧ್ಯಮ ಕುಟುಂಬಗಳ ಆದಾಯದ ಮೇಲೆ ಉಂಟಾದ ನಕಾರಾತ್ಮಕ ಪರಿಣಾಮದಿಂದಾಗಿ ಇಷ್ಟು ಪ್ರಮಾಣದ ಶಿಶುಗಳ ಸಾವು ಸಂಭವಿಸಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.

English summary
An estimate by World Bank researchers has shown that the economic decline accompanying Covid-19 may have caused over 267,000 infant deaths in low- and middle-income countries last year, more than a third of which occurred in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X