ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್‌ಗೆ ಕೊರೊನಾ ಸೋಂಕಿಗೆ ಕೊಟ್ಟಿದ್ದ ಕಾಕ್ ಟೇಲ್ ಈಗ ಭಾರತದಲ್ಲೂ ಲಭ್ಯ

|
Google Oneindia Kannada News

ನವದೆಹಲಿ, ಮೇ 25: ಕೊರೊನಾ ಸೋಂಕಿನ ನಿವಾರಣೆಗೆ ಹಲವು ಔಷಧ ತಯಾರಿಕಾ ಕಂಪನಿಗಳು ದಿನನಿತ್ಯ ಸಾಕಷ್ಟು ಪ್ರಯೋಗಗಳನ್ನು ನಡೆಸುತ್ತಿವೆ. ಪ್ರಪಂಚದಾದ್ಯಂತ ವಿವಿಧ ಔಷಧಗಳು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿವೆ. ಇದೀಗ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾ ಸೋಂಕು ತಗುಲಿದ್ದ ವೇಳೆ ಪಡೆದುಕೊಂಡಿದ್ದ ಆ್ಯಂಟಿಬಾಡಿ ಕಾಕ್‌ಟೇಲ್ ಲಸಿಕೆಯನ್ನು ಭಾರತಕ್ಕೂ ಪರಿಚಯಿಸಲಾಗಿದೆ.

ಔಷಧ ತಯಾರಿಕಾ ಕಂಪನಿ ರೋಚೆ ಇಂಡಿಯಾ, ಈ ಲಸಿಕೆಗಳ ಮೊದಲ ಬ್ಯಾಚ್ ಭಾರತಕ್ಕೆ ಬಂದಿರುವುದಾಗಿ ಸೋಮವಾರ ಘೋಷಣೆ ಮಾಡಿದೆ. ಇದರ ಬೆಲೆ ಪ್ರತಿ ಡೋಸ್‌ಗೆ 59,750 ರೂಪಾಯಿ ನಿಗದಿಪಡಿಸಲಾಗಿದೆ. ಮುಂದೆ ಓದಿ...

ಟ್ರಂಪ್ ಶ್ವೇತಭವನದಲ್ಲಿರುವಾಗಲೇ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರು:ಸಲಹೆಗಾರಟ್ರಂಪ್ ಶ್ವೇತಭವನದಲ್ಲಿರುವಾಗಲೇ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರು:ಸಲಹೆಗಾರ

 ಡೊನಾಲ್ಡ್‌ ಟ್ರಂಪ್‌ಗೆ ನೀಡಿದ್ದು ಇದೇ ಲಸಿಕೆ

ಡೊನಾಲ್ಡ್‌ ಟ್ರಂಪ್‌ಗೆ ನೀಡಿದ್ದು ಇದೇ ಲಸಿಕೆ

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕೊರೊನಾ ಸೋಂಕು ತಗುಲಿದ್ದು, ಈ ಆ್ಯಂಟಿಬಾಡಿ ಕಾಕ್‌ಟೇಲ್ (ಕ್ಯಾಸಿರಿವಿಮ್ಯಾಬ್ ಹಾಗೂ ಇಂಡೆವಿಮ್ಯಾಬ್) ಲಸಿಕೆಯನ್ನು ನೀಡಲಾಗಿತ್ತು. ಇದೀಗ ಭಾರತದಲ್ಲಿ ಈ ಲಸಿಕೆಯ ಬಿಡುಗಡೆ ಮಾಡಲಾಗಿದೆ. ಅಮೆರಿಕ ಮೂಲದ ರೋಚೀಸ್ ಲಸಿಕೆ ಅಭಿವೃದ್ಧಿಪಡಿಸಿದ್ದು, ಭಾರತದಲ್ಲಿ ಸಿಪ್ಲಾ ಕಂಪನಿ ಈ ಔಷಧವನ್ನು ಬಿಡುಗಡೆ ಮಾಡಿದೆ.

 ಪ್ರತಿ ಪ್ಯಾಕ್‌ ಬೆಲೆ 59,750 ರೂ

ಪ್ರತಿ ಪ್ಯಾಕ್‌ ಬೆಲೆ 59,750 ರೂ

ಪ್ರತಿ ಪ್ಯಾಕ್ 1200 ಎಂಜಿ ಡೋಸ್‌ನದ್ದಾಗಿರುತ್ತದೆ. ಇದರಲ್ಲಿ 600 ಎಂಜಿ ಕ್ಯಾಸಿರಿವಿಮ್ಯಾಬ್ ಮತ್ತು 600 ಎಂಜಿ ಇಂಡೆವಿಮ್ಯಾಬ್ ಇರುತ್ತದೆ. ಪ್ರತಿ ಒಂದು ಡೋಸ್ ಬೆಲೆ 59,750 ರೂ ಆಗಿದ್ದು, ಮಲ್ಟಿ ಡೋಸ್ ಪ್ಯಾಕ್ 1,19,500 ರ ದರದಲ್ಲಿ ದೊರೆಯುತ್ತದೆ. ಒಂದು ಪ್ಯಾಕ್‌ ಔಷಧವನ್ನು ಇಬ್ಬರಿಗೆ ಬಳಸಬಹುದಾಗಿದೆ ಎಂದು ರೋಚೀಸ್ ತಿಳಿಸಿದೆ. ಭಾರತಕ್ಕೆ ಮೊದಲ ಬ್ಯಾಚ್‌ನಲ್ಲಿ ಒಂದು ಲಕ್ಷ ಪ್ಯಾಕ್ ಬಿಡುಗಡೆ ಮಾಡಿದ್ದೇವೆ. ಇದು ಎರಡು ಲಕ್ಷ ಸೋಂಕಿತರಿಗೆ ಬಳಸಬಹುದಾಗಿದೆ ಎಂದು ಮಾಹಿತಿ ನೀಡಲಾಗಿದೆ.

 48 ಗಂಟೆಯೊಳಗೆ ಖಾಲಿ ಮಾಡಬೇಕು

48 ಗಂಟೆಯೊಳಗೆ ಖಾಲಿ ಮಾಡಬೇಕು

ಒಂದು ಪ್ಯಾಕ್ ತೆರೆದ ಬಳಿಕ ಅದನ್ನು 48 ಗಂಟೆಯೊಳಗೆ ಖಾಲಿ ಮಾಡಬೇಕಾಗುತ್ತದೆ ಎಂದು ತಿಳಿಸಿದೆ. ಒಂದನೇ ಬ್ಯಾಚ್ ಪೂರೈಕೆಯಾಗಿದ್ದು, ಜೂನ್ ಮಧ್ಯದಲ್ಲಿ ಮತ್ತೊಂದು ಬ್ಯಾಚ್ ಲಸಿಕೆ ಭಾರತ ತಲುಪಲಿದೆ. ಪ್ರತಿಷ್ಠಿತ ಆಸ್ಪತ್ರೆಗಳು ಹಾಗೂ ಕೊರೊನಾ ಚಿಕಿತ್ಸಾ ಕೇಂದ್ರಗಳಲ್ಲಿ ಮಾಹಿತಿ ಪಡೆದು ಈ ಔಷಧ ಪಡೆದುಕೊಳ್ಳಬಹುದಾಗಿದೆ.

Recommended Video

ಬೆಡ್ ಸಿಗದ ಕಾರಣ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ Dr Pushpa Amarnath!! | Oneindia Kannada
 ಸಾವನ್ನಪ್ಪುವ ಪ್ರಮಾಣ ಶೇ 70ರಷ್ಟು ತಗ್ಗುತ್ತದೆ

ಸಾವನ್ನಪ್ಪುವ ಪ್ರಮಾಣ ಶೇ 70ರಷ್ಟು ತಗ್ಗುತ್ತದೆ

ಈಚೆಗಷ್ಟೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಕ ಸಂಸ್ಥೆ ಭಾರತದಲ್ಲಿ ಆ್ಯಂಟಿಬಾಡಿ ಕಾಕ್‌ಟೇಲ್ ತುರ್ತು ಬಳಕೆಗೆ ಅವಕಾಶ ನೀಡಿತ್ತು. ಸೋಂಕಿನಿಂದ ವ್ಯಕ್ತಿಯ ಪರಿಸ್ಥಿತಿ ಗಂಭೀರವಾಗುವ ಮೊದಲೇ ನೀಡಿದರೆ ಅವರು ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವನ್ನಪ್ಪುವ ಪ್ರಮಾಣ ಶೇ. 70ರಷ್ಟು ಇಳಿಯುತ್ತದೆ. ಅವರು ಚೇತರಿಸಿಕೊಳ್ಳುವ ಸಮಯ 4 ದಿನಗಳಷ್ಟು ತಗ್ಗುತ್ತದೆ. 12 ವರ್ಷ ಮೇಲ್ಪಟ್ಟವರಿಗೆ ಇದನ್ನು ನೀಡಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

English summary
Roches antibody cocktail which was used to treat america former president Donald trump launched in india,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X