ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸವಾಲು ನೀಡಿ ಹಲವು ಪಾಠಗಳನ್ನೂ ಕಲಿಸಿದೆ ಕೊರೊನಾ; ಆರೋಗ್ಯ ಸಚಿವ

|
Google Oneindia Kannada News

ನವದೆಹಲಿ, ಮೇ 20: ಇಡೀ ದೇಶ ಕೊರೊನಾ ಎರಡನೇ ಅಲೆಯ ಮುಷ್ಟಿಯಲ್ಲಿದ್ದು, ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇದರ ನಡುವೆ ಬ್ಲ್ಯಾಕ್‌ ಫಂಗಸ್ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಎಲ್ಲಾ ಸವಾಲುಗಳೊಂದಿಗೆ ಕೊರೊನಾ ಹಲವು ಪಾಠಗಳನ್ನು ನಮಗೆ ಕಲಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಕೊರೊನಾ ಸೋಂಕು ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಇದಾಗ್ಯೂ ಹಲವು ಪಾಠಗಳನ್ನು ನಮಗೆ ಕಲಿಸಿದೆ ಎಂದಿದ್ದಾರೆ.

ವಿಶ್ವಕ್ಕೆ ಲಸಿಕೆ ನೀಡಿ ಬೀಗಿದ್ದ ಪ್ರಧಾನಿ ಮೋದಿ, 2ನೇ ಅಲೆಯ ಮುಂದೆ ಶರಣಾಗತಿ!ವಿಶ್ವಕ್ಕೆ ಲಸಿಕೆ ನೀಡಿ ಬೀಗಿದ್ದ ಪ್ರಧಾನಿ ಮೋದಿ, 2ನೇ ಅಲೆಯ ಮುಂದೆ ಶರಣಾಗತಿ!

ಸನ್ನದ್ಧತೆ ಎಂಬುದು ಎಷ್ಟು ಪ್ರಯೋಜನ ನೀಡುತ್ತದೆ ಎಂಬ ಬಹುಮುಖ್ಯ ಪಾಠವನ್ನು ಕೊರೊನಾ ಕಲಿಸಿದೆ. ಈ ಸೋಂಕು ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಹಾಗೆಯೇ ಅದರಿಂದ ಚೇತರಿಸಿಕೊಳ್ಳುವುದನ್ನು ಹಾಗೂ ಭವಿಷ್ಯದಲ್ಲಿ ಬರುವ ಎಲ್ಲವನ್ನೂ ಎದುರಿಸುವುದನ್ನು ಕಲಿಸಿದೆ ಎಂದು ಹೇಳಿದ್ದಾರೆ.

Covid Also Thought Us To Better Prepared For Future

"ಕೊರೊನಾ ಸಾಂಕ್ರಾಮಿಕ; ವಿಶ್ವ ಆರೋಗ್ಯ ಸಂಸ್ಥೆ ಪೂರ್ವ ಮೆಡಿಟರೇನಿಯನ್ ಪ್ರದೇಶದಲ್ಲಿ ಆರೋಗ್ಯ ಭದ್ರತೆ ಹಾಗೂ ಶಾಂತಿಗಾಗಿ ಕರೆ" ಸಮಾವೇಶದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಆರೋಗ್ಯದ ವಿಷಯದಲ್ಲಿ ಎಲ್ಲಾ ದೇಶಗಳ ನಡುವೆಯೂ ಸಹಭಾಗಿತ್ವದ ಅವಶ್ಯಕತೆ ಇದೆ ಎಂಬುದನ್ನು ಒತ್ತಿ ಹೇಳಿದ ಅವರು, ಇಂಥ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ನಿರ್ವಹಣೆ ತುಂಬಾ ಮುಖ್ಯ. ಈ ವಿಷಯದಲ್ಲಿ ಜಾಗತಿಕ ಸಹಭಾಗಿತ್ವ ಹೆಚ್ಚಿನ ಪಾತ್ರ ವಹಿಸುತ್ತದೆ. ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದು ಅವಶ್ಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂಥ ತುರ್ತು ಸಂದರ್ಭದಲ್ಲಿ ಎಲ್ಲಾ ದೇಶಗಳೂ ತಮ್ಮ ತಮ್ಮ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಹಂಚಿಕೊಳ್ಳಬೇಕಿದೆ. ಕೊರೊನಾ ಒಡ್ಡಿರುವ ಈ ಎಲ್ಲಾ ಸವಾಲುಗಳನ್ನು ಅರ್ಥ ಮಾಡಿಕೊಂಡು, ಒಪ್ಪಿಕೊಂಡು ಸವಾಲುಗಳನ್ನು ಹಂಚಿಕೊಂಡು ಹೋರಾಡಬೇಕಿದೆ ಎಂದಿದ್ದಾರೆ.

ಕೊರೊನಾ ವಿಚಾರದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಏಕೀಕೃತ ತರಬೇತಿ ನೀಡುವುದು ಹಾಗೂ ಕೊರೊನಾ ಕುರಿತ ತಪ್ಪು ತಿಳಿವಳಿಕೆಗಳನ್ನು ಓಡಿಸಿ ಜಾಗೃತಿ ಮೂಡಿಸುವುದು ಭಾರತದಲ್ಲಿ ಸವಾಲಿನ ಕೆಲಸವಾಗಿತ್ತು ಎಂದು ಹೇಳಿದ್ದಾರೆ.

English summary
Covid-19 pandemic disrupted life, but also provided a steep learning curve says union minister Harsh Vardhan,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X