• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಶೇ.90 ರಷ್ಟು ಜಿಲ್ಲೆಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣ ಕುಸಿತ

|
Google Oneindia Kannada News

ನವದೆಹಲಿ, ಜೂ.21: ದೇಶಾದ್ಯಂತ ಪ್ರತಿದಿನ 50,000 ಕ್ಕೂ ಹೆಚ್ಚು ಹೊಸ ಕೊರೊನಾ ವೈರಸ್‌ ಸೋಂಕು ಪತ್ತೆಯಾದರೂ, ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ 650 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುಮಾರು 90 ಪ್ರತಿಶತದಷ್ಟು ಜಿಲ್ಲೆಗಳಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು ಕುಸಿತದ ಹಂತದಲ್ಲಿದೆ.

ಜೂನ್ 12 ರಿಂದ ಜೂನ್ 19 ರ ವಾರದಲ್ಲಿ, ದೇಶದ 70 ಜಿಲ್ಲೆಗಳಲ್ಲಿ ಮಾತ್ರ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಈ 27 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಹೆಚ್ಚಳ 100 ಕ್ಕಿಂತ ಹೆಚ್ಚಾಗಿದೆ. 18 ಜಿಲ್ಲೆಗಳಲ್ಲಿ ಏರಿಕೆ ಒಂದೇ ಅಂಕೆಗಳಲ್ಲಿತ್ತು.

ಕರ್ನಾಟಕದಲ್ಲಿ 5,000ಕ್ಕಿಂತ ಕಡಿಮೆ ಕೊರೊನಾವೈರಸ್ ಪ್ರಕರಣ! ಕರ್ನಾಟಕದಲ್ಲಿ 5,000ಕ್ಕಿಂತ ಕಡಿಮೆ ಕೊರೊನಾವೈರಸ್ ಪ್ರಕರಣ!

ಆದಾಗ್ಯೂ, ಈ 70 ಜಿಲ್ಲೆಗಳಲ್ಲಿ 23 ಜಿಲ್ಲೆಗಳು ಪಶ್ಚಿಮ ಬಂಗಾಳದ್ದು ಆಗಿದೆ. ಕಳೆದ ಒಂದು ವಾರದಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚಾದ ಏಕೈಕ ಪ್ರಮುಖ ರಾಜ್ಯ ಇದಾಗಿದೆ. ಇದಕ್ಕೂ ಮೊದಲು ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳಲ್ಲಿ ತೀವ್ರ ಕುಸಿತ ಕಂಡಿದೆ. ಸಕ್ರಿಯ ಪ್ರಕರಣಗಳು ಕೇವಲ 20 ದಿನಗಳಲ್ಲಿ 1.32 ಲಕ್ಷದಿಂದ 15,000 ಕ್ಕಿಂತ ಕಡಿಮೆಯಾಗಿದೆ. ಆದರೆ ಆ ಬಳಿಕ ಸಕ್ರಿಯ ಪ್ರಕರಣಗಳು ಏರಿಕೆಯಾಗಿದೆ. ಜೂನ್ 19 ರ ಶನಿವಾರದ ವೇಳೆಗೆ, ರಾಜ್ಯವು 23,000 ಸಕ್ರಿಯ ಪ್ರಕರಣಗಳನ್ನು ಹೊಂದಿತ್ತು.

ಆದಾಗ್ಯೂ, ಪಶ್ಚಿಮ ಬಂಗಾಳದಲ್ಲಿ ಸಕ್ರಿಯ ಪ್ರಕರಣಗಳ ಹೆಚ್ಚಳವು ಹೆಚ್ಚಿನ ಪ್ರಕರಣಗಳ ಪತ್ತೆಯಿಂದಾಗಿಲ್ಲ. ಹೊಸ ಕೊರೊನಾ ಪ್ರಕರಣಗಳು ಸತತವಾಗಿ ಕುಸಿಯುತ್ತಿವೆ. ರಾಜ್ಯದಲ್ಲಿ ದಿನಕ್ಕೆ 3,000 ಕ್ಕಿಂತ ಕಡಿಮೆ ಸೋಂಕುಗಳು ವರದಿಯಾಗುತ್ತಿದೆ.

ಆದರೆ ಕಳೆದ ಒಂದು ವಾರದಲ್ಲಿ, ಚೇತರಿಸಿಕೊಂಡವರ ಸಂಖ್ಯೆ ತೀವ್ರವಾಗಿ ಇಳಿದಿದೆ. ಇದು ಸಕ್ರಿಯ ಪ್ರಕರಣಗಳ ಏರಿಕೆಗೆ ಕಾರಣವಾಗಿದೆ. ಉದಾಹರಣೆಗೆ, ಶನಿವಾರ, ರಾಜ್ಯದಲ್ಲಿ 2,486 ಹೊಸ ಸೋಂಕುಗಳು ವರದಿಯಾಗಿದ್ದರೆ, ಕೇವಲ 2,100 ಜನರು ಮಾತ್ರ ಚೇತರಿಸಿಕೊಂಡಿದ್ದಾರೆ.

ಕಳೆದ ಒಂದು ವಾರದಲ್ಲಿ ಸಕ್ರಿಯ ಪ್ರಕರಣಗಳ ಹೆಚ್ಚಳ ಕಂಡ ಇತರ ರಾಜ್ಯಗಳು ಮಣಿಪುರ ಮತ್ತು ಮಿಜೋರಾಂ. ಆದರೆ ಈ ಎರಡೂ ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1 ಸಾವಿರದಷ್ಟಿದೆ. ಪಶ್ಚಿಮ ಬಂಗಾಳದ ಕೋಲ್ಕತಾ, ಪೂರ್ವ ಮೇದಿನಪುರ ಮತ್ತು ಉತ್ತರ 24 ಪರಗಣದಲ್ಲಿ ಸಕ್ರಿಯ ಪ್ರಕರಣಗಳಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ದಾಖಲಾಗಿದೆ.

ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದಲ್ಲಿ ಆರು ಜಿಲ್ಲೆಗಳು ಸಕ್ರಿಯ ಪ್ರಕರಣಗಳ ಹೆಚ್ಚಳ ಕಂಡು ಬಂದಿದೆ. ಮುಂಬೈ, ಪಾಲ್ಘರ್, ಬುಲ್ಖಾನಾ, ಸಾಂಗ್ಲಿ, ಔರಂಗಾಬಾದ್ ಮತ್ತು ಪರಭಾನಿ ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಏರಿಕೆ ಕಂಡುಬಂದಿದೆ. ಇದೀಗ 21,000 ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಮುಂಬೈ, ಕಳೆದ ಒಂದು ವಾರದಲ್ಲಿ 777 ಸಕ್ರಿಯ ಪ್ರಕರಣಗಳ ಹೆಚ್ಚಳ ಕಂಡಿದೆ.

(ಒನ್‌ಇಂಡಿಯಾ ಸುದ್ದಿ)

English summary
While more than 50,000 new cases of coronavirus infections are still being detected across the country every day, almost 90 per cent of the over 650 districts for which data are available, are now in a phase of steady decline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X