• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿವಿಧ ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣದಲ್ಲಿ ಭಾರೀ ಏರಿಕೆ!

|

ನವದೆಹಲಿ, ಏಪ್ರಿಲ್ 13; ಭಾರತದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ವಿವಿಧ ರಾಜ್ಯಗಳಲ್ಲಿ ಹೊಸ ಪ್ರಕರಣಗಳು ಹೆಚ್ಚಾಗುತ್ತಿವೆ. ದೇಶದಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1,36,89,453ಕ್ಕೆ ಏರಿಕೆಯಾಗಿದೆ.

ಕೋವಿಡ್ 2ನೇ ಅಲೆ ದೇಶದ ವಿವಿಧ ರಾಜ್ಯಗಳಲ್ಲಿ ಹೊಸ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ. ಅದರಲ್ಲೂ ಏಪ್ರಿಲ್ 5ರಿಂದ 11ರ ತನಕ ಹೊಸ ಪ್ರಕರಣಗಳ ಸಂಖ್ಯೆ ಶೇ 70ರಷ್ಟು ಹೆಚ್ಚಾಗಿದೆ.

ಕೋವಿಡ್ ಪರಿಸ್ಥಿತಿ; ಸರ್ವಪಕ್ಷಗಳ ಸಭೆ ಕರೆದ ಯಡಿಯೂರಪ್ಪ ಕೋವಿಡ್ ಪರಿಸ್ಥಿತಿ; ಸರ್ವಪಕ್ಷಗಳ ಸಭೆ ಕರೆದ ಯಡಿಯೂರಪ್ಪ

ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ಉತ್ತರಾಖಂಡ್, ಅಸ್ಸಾಂನಲ್ಲಿ ಹೆಚ್ಚಿನ ಹೊಸ ಪ್ರಕರಣ ದಾಖಲಾಗುತ್ತಿದೆ. ಮಹಾರಾಷ್ಟ್ರ, ಛತ್ತೀಸ್‌ಗಢ್, ಪಂಜಾಬ್‌, ಕರ್ನಾಟಕದಲ್ಲಿ ಒಂದು ವಾರದಲ್ಲಿ ಅವಧಿಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂಬ ಅಂಕಿ-ಸಂಖ್ಯೆಗಳು ಹೇಳುತ್ತಿವೆ.

ಭಾರತದಲ್ಲಿ 24 ಗಂಟೆಯಲ್ಲಿ 1,61,736 ಹೊಸ ಕೋವಿಡ್ ಪ್ರಕರಣ ಭಾರತದಲ್ಲಿ 24 ಗಂಟೆಯಲ್ಲಿ 1,61,736 ಹೊಸ ಕೋವಿಡ್ ಪ್ರಕರಣ

ಅಸ್ಸಾಂನಲ್ಲಿ ಕೆಲವು ದಿನಗಳ ಹಿಂದೆ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದೆ. ಈಗ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಏ. 5ರಿಂದ 11ರ ಅವಧಿಯಲ್ಲಿ 1,689 ಹೊಸ ಪ್ರಕರಣ ಪತ್ತೆಯಾಗಿದ್ದು, ಅದರ ಹಿಂದಿನ ವಾರ 407 ಪ್ರಕರಣ ದಾಖಲಾಗಿತ್ತು.

ಘಾಸಿಗೊಳಿಸುವ, ಊಹಿಸಲಾಧ್ಯ ಕಥೆಗಳು: ಕೋವಿಡ್ ಪರಿಸ್ಥಿತಿ ಬಗ್ಗೆ ಹೈಕೋರ್ಟ್ ಕಳವಳಘಾಸಿಗೊಳಿಸುವ, ಊಹಿಸಲಾಧ್ಯ ಕಥೆಗಳು: ಕೋವಿಡ್ ಪರಿಸ್ಥಿತಿ ಬಗ್ಗೆ ಹೈಕೋರ್ಟ್ ಕಳವಳ

ಬಿಹಾರದಲ್ಲಿ ಅಧಿಕ ಕೇಸ್

ಬಿಹಾರದಲ್ಲಿ ಅಧಿಕ ಕೇಸ್

ಬಿಹಾರ ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಶೇ 334ರಷ್ಟು ಹೆಚ್ಚಾಗಿದೆ. ಏಪ್ರಿಲ್ 5 ರಿಂದ 11ರ ತನಕ ರಾಜ್ಯದಲ್ಲಿ 14,852 ಪ್ರಕರಣ ದಾಖಲಾಗಿದೆ. ಹಿಂದಿನ ವಾರ 3,422 ಪ್ರಕರಣಗಳು ದಾಖಲಾಗಿದ್ದವು.

ಉತ್ತರ ಪ್ರದೇಶ ರಾಜ್ಯ

ಉತ್ತರ ಪ್ರದೇಶ ರಾಜ್ಯ

ಉತ್ತರ ಪ್ರದೇಶ ರಾಜ್ಯದಲ್ಲಿ ಶೇ 281ರಷ್ಟು ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಏಪ್ರಿಲ್ 5 ರಿಂದ 11ರ ತನಕ 62,005 ಹೊಸ ಪ್ರಕರಣ ದಾಖಲಾಗಿದೆ. ಅದಕ್ಕೂ ಹಿಂದಿನ ವಾರ 16,269 ಪ್ರಕರಣಗಳು ಪತ್ತೆಯಾಗಿದ್ದವು.

ಹಲವು ರಾಜ್ಯಗಳಲ್ಲಿ ಏರಿಕೆ

ಹಲವು ರಾಜ್ಯಗಳಲ್ಲಿ ಏರಿಕೆ

ಹಿಂದಿ ಮಾತನಾಡುವ ರಾಜ್ಯಗಳಲ್ಲಿಯೂ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ರಾಜಸ್ಥಾನದಲ್ಲಿ ಶೇ 183, ಜಾರ್ಖಂಡ್‌ನಲ್ಲಿ ಶೇ 182, ಕುಂಭಮೇಳ ನಡೆಯುತ್ತಿರುವ ಉತ್ತರಾಖಂಡ್‌ನಲ್ಲಿ ಶೇ 175ರಷ್ಟು ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.

ಮಹಾರಾಷ್ಟ್ರದಲ್ಲಿ ಅಧಿಕ ಕೇಸು

ಮಹಾರಾಷ್ಟ್ರದಲ್ಲಿ ಅಧಿಕ ಕೇಸು

ಏ. 5 ರಿಂದ 11ರ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಅಧಿಕ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ 3,96,648 ಪ್ರಕರಣ ದಾಖಲಾಗಿದೆ. ಛತ್ತೀಸ್‌ಗಢ್‌ನಲ್ಲಿ 74,251, ಉತ್ತರ ಪ್ರದೇಶದಲ್ಲಿ 62,005, ಕರ್ನಾಟಕದಲ್ಲಿ 50,135 ಮತ್ತು ದೆಹಲಿಯಲ್ಲಿ 48,783 ಪ್ರಕರಣ ದಾಖಲಾಗಿದೆ.

English summary
In a COVID 2nd wave Bihar, Uttar Pradesh and other state recorded biggest increase in new cases during April 5 to 11, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X