ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ; ಒಂದು ವಾರದಲ್ಲಿ ಹೊಸ ಪ್ರಕರಣ ಇಳಿಕೆ, ಸಾವು ಹೆಚ್ಚಳ

|
Google Oneindia Kannada News

ನವದೆಹಲಿ, ಮೇ 17; ಕೋವಿಡ್ 2ನೇ ಅಲೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಒಂದು ವಾರದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಒಂದು ವಾರದಲ್ಲಿ 28 ಸಾವಿರ ಜನರು ಮೃತಪಟ್ಟಿದ್ದಾರೆ.

ಭಾನುವಾರದ ತನಕ ದೇಶದಲ್ಲಿ 24 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಹೊಸ ಪ್ರಕರಣಗಳಲ್ಲಿ ಶೇ 16ರಷ್ಟು ಕಡಿಮೆಯಾಗಿದೆ. ಕಳೆದ ವಾರ ಹೊಸ ಪ್ರಕರಣಗಳ ಸಂಖ್ಯೆ 27.4 ಲಕ್ಷ ಆಗಿತ್ತು.

ಕೋವಿಡ್; ಕರ್ನಾಟಕದ 17 ಡಿಸಿಗಳ ಜೊತೆ ಮೋದಿ ಸಂವಾದ ಕೋವಿಡ್; ಕರ್ನಾಟಕದ 17 ಡಿಸಿಗಳ ಜೊತೆ ಮೋದಿ ಸಂವಾದ

ಆದರೆ ಪ್ರತಿದಿನ ಸುಮಾರು 4048 ಜನರು ಮೃತಪಟ್ಟಿದ್ದು ಒಂದು ವಾರದಲ್ಲಿ 28,334 ಜನರು ಸಾವನ್ನಪ್ಪಿದ್ದಾರೆ. ಕಳೆದ ವಾರ 27,243 ಜನರು ಮೃತಪಟ್ಟಿದ್ದರು. ಇದಕ್ಕೆ ಹೋಲಿಕೆ ಮಾಡಿದರೆ ಸಾವಿನ ಸಂಖ್ಯೆ ಹೆಚ್ಚಳವಾಗಿದೆ.

ಕೋವಿಡ್ ಪರೀಕ್ಷೆ ಹೆಚ್ಚಿಸಿ; ಯಡಿಯೂರಪ್ಪಗೆ ಸಿದ್ದರಾಮಯ್ಯ ಪತ್ರ ಕೋವಿಡ್ ಪರೀಕ್ಷೆ ಹೆಚ್ಚಿಸಿ; ಯಡಿಯೂರಪ್ಪಗೆ ಸಿದ್ದರಾಮಯ್ಯ ಪತ್ರ

death

ಅಮೆರಿಕದಲ್ಲಿ ಈ ವರ್ಷದ ಜನವರಿ 11 ರಿಂದ 17ರ ತನಕ 24,282 ಜನರು ಮೃತಪಟ್ಟಿದ್ದರು. ಭಾರತದಲ್ಲಿ ಒಂದು ವಾರದಲ್ಲಿ ಸಾವಿನ ಸಂಖ್ಯೆ ಈ ಇದಕ್ಕಿಂತ ಹೆಚ್ಚಾಗಿದೆ. ಆದರೆ ಹಲವು ರಾಜ್ಯಗಳಲ್ಲಿ ಸರ್ಕಾರ ಕೊಡುತ್ತಿರುವ ಸಾವಿನ ಸಂಖ್ಯೆಗೂ ನಿಖರವಾದ ಸಂಖ್ಯೆಗೂ ಭಾರೀ ವ್ಯತ್ಯಾಸವಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿವೆ.

ಕೋವಿಡ್ 2ನೇ ಅಲೆ; ಪ್ಲಾಸ್ಲಾ ಥೆರಪಿ ಪರಿಣಾಮಕಾರಿಯಲ್ಲ ಕೋವಿಡ್ 2ನೇ ಅಲೆ; ಪ್ಲಾಸ್ಲಾ ಥೆರಪಿ ಪರಿಣಾಮಕಾರಿಯಲ್ಲ

ಹೊಸ ಪ್ರಕರಣ ಇಳಿಕೆ; ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಏಪ್ರಿಲ್ 20ರ ಬಳಿಕ ಇದೇ ಮೊದಲ ಬಾರಿಗೆ ಹೊಸ ಪ್ರಕರಣಗಳ ಸಂಖ್ಯೆ 3 ಲಕ್ಷಕ್ಕಿಂತ ಕಡಿಮೆಯಾಗಿದ್ದು, 2,82,086 ಪ್ರಕರಣ ದಾಖಲಾಗಿದೆ. ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಿರುವುದು ಇದಕ್ಕೆ ಕಾರಣವೇ? ಎಂದು ಕಾದು ನೋಡಬೇಕಿದೆ.

ದೇಶದಲ್ಲಿ ಮೇ 6ರಂದು 4.14 ಲಕ್ಷ ಹೊಸ ಪ್ರಕರಣ ದಾಖಲಾಗಿತ್ತು. ಇದಕ್ಕೆ ಹೋಲಿಕೆ ಮಾಡಿದರೆ ಈ ವಾರ ಹೊಸ ಪ್ರಕರಣಗಳ ಸಂಖ್ಯೆ ಶೇ 30ರಷ್ಟು ಕಡಿಮೆಯಾಗಿದೆ. ಭಾನುವಾರ ದೇಶದಲ್ಲಿ 4,100 ಜನರು ಮೃತಪಟ್ಟಿದ್ದಾರೆ.

ಈ ವಾರದಲ್ಲಿ 4ನೇ ಬಾರಿಗೆ ಸಾವಿನ ಸಂಖ್ಯೆ 4000ದ ಗಡಿ ದಾಟಿದೆ. 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 974, ತಮಿಳುನಾಡು 311, ಪಶ್ಚಿಮ ಬಂಗಾಳ 147, ಹಿಮಾಚಲ ಪ್ರದೇಶ 70 ಮತ್ತು ಪುದುಚೇರಿಯಲ್ಲಿ 32 ಹೊಸ ಪ್ರಕರಣಗಳು ದಾಖಲಾಗಿವೆ.

English summary
India registered fall in new cases week ended Sunday. 24 lakh fresh cases reported 16 per cent drop compare to last week. But death number crossed 28,000 in seven days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X