ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 2ನೇ ಅಲೆ; ಭಾರತದಲ್ಲಿ 9 ದಿನದಲ್ಲಿ 20 ಸಾವಿರ ಸಾವು

|
Google Oneindia Kannada News

ನವದೆಹಲಿ, ಏಪ್ರಿಲ್ 28; ಕೋವಿಡ್ 2ನೇ ಅಲೆ ಭಾರತದಲ್ಲಿ ಭಾರೀ ಆತಂಕವನ್ನು ಉಂಟು ಮಾಡಿದೆ. ಏಪ್ರಿಲ್ 20 ರಿಂದ 28ರ ಅವಧಿಯಲ್ಲಿ ದೇಶದಲ್ಲಿ 20 ಸಾವಿರ ಜನರು ಮೃತಪಟ್ಟಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಭಾರತದಲ್ಲಿ ಏಪ್ರಿಲ್ 1 ರಿಂದ 28ರ ತನಕ 38,260 ಜನರು ಮೃತಪಟ್ಟಿದ್ದಾರೆ. ಆದರೆ, ಕಳೆದ 9 ದಿನಗಳಲ್ಲಿ ಮೃತಪಟ್ಟವರ ಸಂಖ್ಯೆ 20,657.

ಕೋವಿಡ್ ಕೇರ್ ಸೆಂಟರ್ ಬೇಡ; ಆದಿವಾಸಿಗಳಿಂದ ರಸ್ತೆ ಬಂದ್ ಕೋವಿಡ್ ಕೇರ್ ಸೆಂಟರ್ ಬೇಡ; ಆದಿವಾಸಿಗಳಿಂದ ರಸ್ತೆ ಬಂದ್

ಕಳೆದ ಒಂದು ವಾರದಲ್ಲಿ ದೇಶದಲ್ಲಿ ಹೊಸ ಕೋವಿಡ್ ಪ್ರಕರಣ ಮತ್ತು ಸಾವಿನ ಸಂಖ್ಯೆ ಹೊಸ ದಾಖಲೆಯನ್ನು ಬರೆದಿದೆ. ಬುಧವಾರ ಒಂದೇ ದಿನ 3,60,960 ಹೊಸ ಕೋವಿಡ್ ಪ್ರಕರಣ ದೇಶದಲ್ಲಿ ದಾಖಲಾಗಿದೆ.

ಕರ್ನಾಟಕ; 39047 ಹೊಸ ಕೋವಿಡ್ ಪ್ರಕರಣ ಪತ್ತೆ ಕರ್ನಾಟಕ; 39047 ಹೊಸ ಕೋವಿಡ್ ಪ್ರಕರಣ ಪತ್ತೆ

ದೇಶದ ಒಟ್ಟು ಸೋಂಕಿತರ ಸಂಖ್ಯೆ 1,79,97,267ಕ್ಕೆ ಏರಿಕೆಯಾಗಿದೆ. ಪ್ರತಿ ದಿನದ ಸಾವಿನ ಸಂಖ್ಯೆ 3 ಸಾವಿರದ ಗಡಿ ದಾಟಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3,293 ಜನರು ಸಾವನ್ನಪ್ಪಿದ್ದಾರೆ.

ಹೃದಯ ಚಿಕಿತ್ಸೆಗೊಳಗಾದ ತಂದೆ ಬಿಟ್ಟು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಂದ ವೈದ್ಯ!ಹೃದಯ ಚಿಕಿತ್ಸೆಗೊಳಗಾದ ತಂದೆ ಬಿಟ್ಟು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಂದ ವೈದ್ಯ!

ಯಾವ ರಾಜ್ಯದಲ್ಲಿ ಎಷ್ಟು?

ಯಾವ ರಾಜ್ಯದಲ್ಲಿ ಎಷ್ಟು?

ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಅತಿ ಹೆಚ್ಚು ಸಾವಿನ ಪ್ರಕರಣ ದಾಖಲಾಗಿದೆ. ಮಂಗಳವಾರ ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಅತಿ ಜನರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರ 895, ದೆಹಲಿ 381, ಉತ್ತರ ಪ್ರದೇಶದಲ್ಲಿ 264, ಛತ್ತೀಸ್‌ಗಢ್‌ನಲ್ಲಿ 246 ಜನರು ಮೃತಪಟ್ಟಿದ್ದಾರೆ.

ಕೋವಿಡ್ 2ನೇ ಅಲೆ ಸಾವುಗಳು

ಕೋವಿಡ್ 2ನೇ ಅಲೆ ಸಾವುಗಳು

ಕರ್ನಾಟಕ 180, ಗುಜರಾತ್ 170, ಜಾರ್ಖಂಡ್‌ 131, ರಾಜಸ್ಥಾನ 121, ಪಂಜಾಬ್ 100, ಮಧ್ಯ ಪ್ರದೇಶ 98 ಜನರು ಮೃತಪಟ್ಟಿದ್ದಾರೆ. 10 ರಾಜ್ಯಗಳಿಂದ ಒಟ್ಟು 78.53 ಶೇ ಸಾವಿನ ಪ್ರಕರಣಗಳು ದಾಖಲಾಗಿವೆ.

1 ಸಾವಿರದ ಗಡಿ ದಾಟಿದ ಸಾವು

1 ಸಾವಿರದ ಗಡಿ ದಾಟಿದ ಸಾವು

ಭಾರತದಲ್ಲಿ ಏಪ್ರಿಲ್ 1 ರಿಂದ 13ರ ತನಕ ಪ್ರತಿದಿನ 1000 ಜನರು ಸಾವನ್ನಪ್ಪುತ್ತಿದ್ದರು. ಏಪ್ರಿಲ್ 18ರಂದು 1500 ಜನರು ಸಾವನ್ನಪ್ಪಿದರು. ಏಪ್ರಿಲ್ 14 ರಿಂದ 17ರ ತನಕ ಪ್ರತಿ ದಿನ 1500ಕ್ಕಿಂತ ಕಡಿಮೆ ಜನರು ಮರಣ ಹೊಂದಿದ್ದಾರೆ.

ಪ್ರತಿ ನಿಮಿಷಕ್ಕೆ ಇಬ್ಬರ ಸಾವು

ಪ್ರತಿ ನಿಮಿಷಕ್ಕೆ ಇಬ್ಬರ ಸಾವು

ಏಪ್ರಿಲ್ 21ರಂದು ಭಾರತದಲ್ಲಿ 2023 ಜನರು ಸಾವನ್ನಪ್ಪಿದರು. ಬಳಿಕ ಪ್ರತಿದಿನ 2000ಕ್ಕೂ ಅಧಿಕ ಸಾವುಗಳು ವರದಿಯಾಗುತ್ತಿದೆ. 2020ರ ಜೂನ್‌ನಲ್ಲಿ ದೇಶದಲ್ಲಿ ಪ್ರತಿದಿನ 2 ಸಾವಿರ ಜನರು ಸಾವನ್ನಪ್ಪುತ್ತಿದ್ದರು. ಆದರೆ, ಅದು ಮಹಾರಾಷ್ಟ್ರ ಮತ್ತು ದೆಹಲಿಗೆ ಮಾತ್ರ ಸೀಮಿತವಾಗಿತ್ತು. ಏಪ್ರಿಲ್‌ನಲ್ಲಿ ಭಾರತದಲ್ಲಿ 57.75 ಲಕ್ಷ ಪ್ರಕರಣ ದಾಖಲಾಗಿದೆ. ಏಪ್ರಿಲ್ 20ರ ತನಕ 26.76 ಲಕ್ಷ ಪ್ರಕರಣಗಳು ಇತ್ತು.

English summary
In the 2nd wave of COVID India reported over 20,000 deaths across the country between April 20 and 28. Union health ministry says. between April 1 and 28 India reported 38,260 deaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X